ನವದೆಹಲಿ: ಗಣರಾಜೋತ್ಸವ ಸಂದರ್ಭದಲ್ಲಿನ ಪರೇಡ್ ನಲ್ಲಿ ಕೇರಳದ ಸ್ತಬ್ಧ ಚಿತ್ರಕ್ಕೆ ಕೂಡ ಅನುಮತಿ ನಿರಾಕರಿಸಲಾಗಿದೆ. ಈ ಮೊದಲು ಮಹಾರಾಷ್ಟ್ರ ಮತ್ತು ಪಶ್ಚಿಮ ಬಂಗಾಳದ ಸ್ತಬ್ಧ ಚಿತ್ರವನ್ನು ಕೂಡ ನಿರಾಕರಿಸಲಾಗಿತ್ತು. ಇದು ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿತ್ತು. ಪಶ್ಚಿಮ ಬಂಗಾಳ ಕೇಂದ್ರದ ರಾಷ್ಟ್ರೀಯ ಪೌರತ್ವ ಕಾನೂನು ತಿದ್ಪುಪಡಿಯನ್ನು ವಿರೋಧಿಸಿದೆ. ಇದಕ್ಕಾಗಿ ರಾಜಕೀಯ ದ್ವೇಷ ಸಾಧನೆಗೆ ಸ್ತಬ್ಧ ಚಿತ್ರಕ್ಕೆ ಅನುಮತಿ ನೀಡಿಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟೀಕಿಸಿದ್ದರು.