Thursday, November 26, 2020

ಶಬರಿಮಲೆ ಇಂದು ಅಯ್ಯಪ್ಪ ದರ್ಶನ ಆರಂಭ

ಮಂಡಲಪೂಜೆ ಮಹೋತ್ಸವಕ್ಕೆ ಶಬರಿಮಲೆ ಸಜ್ಜಾಗಿದ್ದು, ಇಂದು ಸಂಜೆ ದೇವಸ್ಥಾನದ ಬಾಗಿಲು ತೆರೆಯಲಿದೆ. ಸುಮಾರು ಒಂದು ತಿಂಗಳ ಕಾಲ ಮಂಡಲ ಅವಧಿಯಲ್ಲಿ ಲಕ್ಷಾಂತರ ಭಕ್ತರು ಭೇಟಿ ನೀಡಲಿದ್ದಾರೆ. ಈ ಮಧ್ಯೆ ಕೇರಳ ಸರ್ಕಾರ ಎಚ್ಚರಿಕೆಯ ಹೆಜ್ಜೆ ಇಟ್ಟಿದೆ. ಮಹಿಳೆಯರು ದೇವಸ್ಥಾನ ಪ್ರವೇಶಿಸಲು ಇಚ್ಚಿಸುವುದಾದರೆ ನ್ಯಾಯಾಲಯದಿಂದ ಮೊದಲು ಆದೇಶ ಪತ್ರ ತರಬೇಕು. ಬಳಿಕವಷ್ಟೇ ಅವರ ಬೇಡಿಕೆ ಪರಿಗಣಿಸುವುದಾಗಿ ಹೇಳಿದೆ. ಶಬರಿಮಲೆಯಲ್ಲಿ ಕಾನೂನು ಮತ್ತು ಶಿಸ್ತು ಪಾಲನೆಗೆ ಮೊದಲ ಆದ್ಯತೆ ಎಂದು ಸರ್ಕಾರ ಹೇಳಿದೆ. ಯಾವುದೇ ಪ್ರಚಾರ ಅಭಿಯಾನಕ್ಕೆ ಶಬರಿಮಲೆ ಸೂಕ್ತ ಸ್ಥಳವಲ್ಲ. ಅದು ಭಕ್ತಿಯ ತಾಣ. ಭಕ್ತರು   ಯಾವುದೇ ಆತಂಕಕ್ಕೆ ಒಳಗಾಗಬಾರದು ಎಂಬ ನಿರ್ಧಾರಕ್ಕೆ ರಾಜ್ಯ ಸರ್ಕಾರ ಬಂದಿದೆ.

ಮತ್ತಷ್ಟು ಸುದ್ದಿಗಳು

Latest News

ಮಾರಾಟದಲ್ಲಿ ದಾಖಲೆ ಬರೆದ ಒಬಾಮಾ ಆತ್ಮಚರಿತ್ರೆ

NEWSICS.COM ಯುಎಸ್: ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಓಬಾಮಾ ಆತ್ಮಚರಿತ್ರೆ 'ಎ ಪ್ರಾಮಿಸ್ಡ್ ಲ್ಯಾಂಡ್' ಬಿಡುಗಡೆಯಾದ ಒಂದು ವಾರದಲ್ಲಿ 17ಲಕ್ಷ ಪ್ರತಿ ಮಾರಾಟವಾಗಿದೆ. ಈ ಮೂಲಕ ಒಂದೇ...

ಪಾಕ್’ಗೆ ವೀಸಾ ನೀಡುವುದನ್ನು ನಿಲ್ಲಿಸಿದ ಯುಎಇ

NEWSICS.COM ಯುಎಇ: ಪಾಕಿಸ್ತಾನ, ಅಫ್ಘಾನಿಸ್ತಾನ, ಇರಾನ್, ಟರ್ಕಿ, ಸಿರಿಯಾ ಮತ್ತು ಸೊಮಾಲಿಯಾ ಸೇರಿದಂತೆ 13 ಹೆಚ್ಚಿನ ಮುಸ್ಲಿಂ ಬಹುಸಂಖ್ಯಾತ ದೇಶಗಳ ನಾಗರಿಕರಿಗೆ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಹೊಸ ವೀಸಾಗಳನ್ನು ನೀಡುವುದನ್ನು ನಿಲ್ಲಿಸಿದೆ ಎನ್ನಲಾಗಿದೆ. ಭದ್ರತಾ...

ಮುಂದಿನ ಶೈಕ್ಷಣಿಕ ವರ್ಷದಿಂದ ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ಹೆಸರು ಬದಲು

NEWSICS.COM ಬೆಂಗಳೂರು: ಮುಂದಿನ ಶೈಕ್ಷಣಿಕ ವರ್ಷದಿಂದ ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯವನ್ನು 'ಬೆಂಗಳೂರು ನಗರ ವಿಶ್ವವಿದ್ಯಾಲಯ' ಎಂದು ನಾಮಕರಣಗೊಳ್ಳಲಿದೆ. ವಿಶ್ವವಿದ್ಯಾನಿಲಯಗಳ ಪೈಕಿ ಕೋಲ್ಕತಾ ವಿಶ್ವವಿದ್ಯಾಲಯ ಮತ್ತು ದೆಹಲಿ ವಿಶ್ವವಿದ್ಯಾಲಯದಂತಹ ಪ್ರದೇಶ ಅಥವಾ ನಗರದ ಹೆಸರನ್ನು ಬಳಸುತ್ತವೆ. ಆದರೂ...
- Advertisement -
error: Content is protected !!