ನವದೆಹಲಿ: ಪಾಳಿ ಮಾದರಿಯಲ್ಲಿ ಕೆಲಸ ನಿಯೋಜಿಸಿ ತನ್ನ ಕಾಯಂ ಸಿಬ್ಬಂದಿಗೆ ಇನ್ನೊಂದು ವರ್ಷ ಶೇ.60ರಷ್ಟು ಮಾತ್ರ ವೇತನ ನೀಡಲು ಏರ್ ಇಂಡಿಯಾ ನಿರ್ಧರಿಸಿದೆ.
ಕಂಪನಿ ಈಗಾಗಲೇ ಸಾಕಷ್ಟು ನಷ್ಟದಲಿದ್ದು, ಕೊರೋನಾ ಲಾಕ್’ಡೌನ್ ಹಿನ್ನೆಲೆಯಲ್ಲಿ ಇಂತಹ ಕ್ರಮ ಅನಿವಾರ್ಯವಾಗಿದೆ. ಅನಗತ್ಯ ವೆಚ್ಚ ಕಡಿತಗೊಳಿಸಲು ಮತ್ತು ಹಣಕಾಸು ಪರಿಸ್ಥಿತಿ ಸುಧಾರಿಸುವ ಸಲುವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕಂಪನಿ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದೆ.
ಉದ್ಯಮ ನಷ್ಟದ ಸುಳಿಯಲ್ಲಿ ಸಿಲುಕುವುದರೊಂದಿಗೆ ಏರ್‌ಇಂಡಿಯಾ ಸುಮಾರು 60,000 ಕೋಟಿ ರೂ. ಸಾಲ ಮಾಡಿದೆ ಎಂದು ತಿಳಿದುಬಂದಿದೆ.
ಏರ್ ಇಂಡಿಯಾದಲ್ಲಿ ಪಾಳಿ ಮಾದರಿ ಕೆಲಸ, ಶೇ.60 ಮಾತ್ರ ವೇತನ!
Follow Us