Monday, May 23, 2022

ಫ್ಯಾಮಿಲಿ ಡ್ರೆಸ್

Follow Us

ಪ್ರಭಾ ಭಟ್ ಹೊಸ್ಮನೆ

ಮೊದಲೆಲ್ಲ ಶಾಲೆಗಳಲ್ಲಿ, ಪೋಲಿಸ್ ಇಲಾಖೆ, ರೈಲ್ವೆ ಇಲಾಖೆ, ಅಂಚೆ ಇಲಾಖೆ ಇನ್ನಿತರ ಆಯ್ದ ಇಲಾಖೆಗಳಲ್ಲಿ ಮಾತ್ರ ಸಮವಸ್ತ್ರಗಳನ್ನು (ಯೂನಿಫಾರ್ಮ್) ನೋಡುತ್ತಿದ್ದೆವು. ಆದರೆ ಇಂದು ಹಾಗಲ್ಲ. ಸಾಮಾಜಿಕ ಮತ್ತು ಆರ್ಥಕ ಸಮಾನತೆಯನ್ನು ಸೃಷ್ಟಿಸುವ ಸಲುವಾಗಿ ಎಲ್ಲಾ ಕ್ಷೇತ್ರಗಳಲ್ಲಿಯೂ ಸಮವಸ್ತ್ರಗಳನ್ನು ಕಡ್ದಾಯವಾಗಿ ಬಳಸಲಾಗುತ್ತಿದೆ. ಬಟ್ಟೆ ಅಂಗಡಿಗಳಿಂದ ಆರಂಭಿಸಿ ಕಾಲೇಜುಗಳು, ಖಾಸಗಿ ಸಂಸ್ಥೆಗಳೂ ಕೂಡ ಸಮವಸ್ತ್ರವನ್ನು ಧರಿಸುವ ಕ್ರಮವನ್ನು ರೂಢಿಸಿಕೊಂಡಿದೆ. ಮಕ್ಕಳು ಸಮವಸ್ತ್ರ ಧರಿಸುತ್ತಿದ್ದುದು ಆ ಕಾಲದಲ್ಲಿ ಮಾತ್ರ. ಇಂದು ಮಕ್ಕಳೊಂದಿಗೆ ಶಿಕ್ಷಕರೂ ಕೂಡ ಸಮವಸ್ತ್ರ ಧರಿಸಬೇಕಿದೆ!
ಒಂದರ್ಥದಲ್ಲಿ ಒಳಿತೇ. “ ನಾವೆಲ್ಲಾ ಒಂದೇ, ನಮ್ಮಲ್ಲಿ ಬೇಧ ಭಾವಗಳಿಲ್ಲ, ಎಲ್ಲರೂ ಸಮಾನರು” ಎಂಬಿತ್ಯಾದಿ ತತ್ತ್ವಗಳನ್ನು ಸಾರುವ ಸಮವಸ್ತ್ರ ಪದ್ಧತಿ ಸಮಾಜದ ಸ್ವಾಸ್ಥ್ಯವನ್ನೂ ಕಾಪಾಡಬಲ್ಲದು. ಧನಿಕ ದುಬಾರಿಯ ದಿರಿಸು ಧರಿಸಿದಾಗ ಬಡವನಿಗೆ ಕೀಳರಿಮೆ ಬರುವುದು ಸಹಜವೇ ಸರಿ. ಸಾಮಾಜಿಕ ಕ್ಷೇತ್ರಗಳಲ್ಲಿ ಸಮವಸ್ತ್ರವನ್ನು ಧರಿಸುವುದರ ಮೂಲ ಉದ್ದೇಶ ಸಮಾನತೆಯನ್ನು ಸಾಧಿಸುವುದಾದರೆ, ಮನೆ ಮಂದಿಯೆಲ್ಲಾ ಸಮವಸ್ತ್ರ ಧರಿಸಿದರೆ ಹೇಗಿರಬಹುದು? ಈ ಮಾತನ್ನು ಕೇಳಿ ನಗು ಬರುತ್ತಿರಬಹುದಲ್ಲವೇ?
ಆದರೆ ನಮ್ಮ ಫ್ಯಾಷನ್ ಜಗತ್ತು ಇದನ್ನೂ ಈ ಸಮವಸ್ತ್ರದ ಕಲ್ಪನೆಯನ್ನೂ ಪ್ರೇರಣೆಯನ್ನಾಗಿಸಿಕೊಂಡು “ಫ್ಯಾಮಿಲಿ ಡ್ರೆಸ್ಸಸ್” ಎನ್ನುವ ಪರಿಕಲ್ಪನೆಯನ್ನು ಜಗತ್ತಿಗೆ ಪರಿಚಯಿಸಿತು. ಏನಿದು ಫ್ಯಾಮಿಲಿ ಡ್ರೆಸ್?
ಯಾವುದೋ ಸಮಾರಂಭಕ್ಕೆ ಬಂದ ಐಶ್ವರ್ಯ ರೈ ಬಚ್ಚನ್ ಮತ್ತು ಮಗಳು ಆರಾಧ್ಯ ಒಂದೇ ಬಗೆಯ ಡ್ರೆಸ್ಸನ್ನು ಹಾಕಿದ್ದರು, ಇನ್ಯಾವುದೋ ನಾಯಕ ನಟ ಮತ್ತು ಅವನ ಮಗ ಒಂದೇ ಬಗೆಯ ಡ್ರೆಸ್ಸನ್ನು ಹಾಕಿದ್ದರು ಎಂಬುದನ್ನು ನೋಡಿ ಹುಬ್ಬೇರಿಸುವ ಕಾಲ ಇಂದಿಲ್ಲ. ಸಾಮನ್ಯರೂ ಕೂಡ ಈ ಬಗೆಯ ವಿಶೇಷ ಲುಕ್ ಅನ್ನು ಪಡೆಯಬಹುದು.
ಹೆಚ್ಚಾಗಿ ವಿಭಕ್ತ ಕುಟುಂಬವಿರುವ ಇಂದಿನ ಕಾಲದಲ್ಲಿ ಏನಾದರೊಂದು ಭಿನ್ನತೆಯನ್ನು ಇಚ್ಚಿಸುವ ಜನರಿಗೆ ಅಥವಾ ಕುಟುಂಬಕ್ಕೆಂದೇ ಮಾದರಿಗೊಳಿಸಲಾದ ಪರಿಕಲ್ಪನೆ ಈ ಫ್ಯಾಮಿಲಿ ಡ್ರೆಸ್ಸಸ್. ಕ್ಯಾಷುವಲ್ ಮತ್ತು ವಿಶೇಷ ಎರಡೂ ಸಂದರ್ಭಗಳಲ್ಲಿಯೂ ಈ ಥೀಮನ್ನು ಬಳಸಿ ಸುತ್ತಲಿನವರಿಂದ ತಮ್ಮನ್ನು ಭಿನ್ನವಾಗಿ ಕಾಣಿಸಿಕೊಂಡು ಹೊಸ ಬಗೆಯ ಸ್ಟೈಲ್ ಸ್ಟೇಟ್ಮೆಂಟನ್ನು ಸೃಷ್ಟಿಸುವುದು ಕೇವಲ ಸೆಲೆಬ್ರಿಟಿಗಳು ಅಥವ ಸಿನಿತಾರೆಗಳಿಗಷ್ಟೆ ಸೀಮಿತವಾಗಿರದೆ ಸಾಮಾನ್ಯ ಕುಟುಂಬಗಳೂ ಕೂಡ ಇಂತಹ ಸ್ಟೈಲನ್ನು ತಮ್ಮದಾಗಿಸಿಕೊಳ್ಳಬಹುದು.
ಈ ಫ್ಯಾಮಿಲಿ ಡ್ರೆಸ್ಸುಗಳಲ್ಲಿ ಮುಖ್ಯವಾಗಿ ಕ್ಯಾಷುವಲ್ ಲುಕ್ ನೀಡುವಂತಹ ಫ್ಯಾಮಿಲಿ ಡ್ರೆಸ್ ಗಳು, ಸಮಾರಂಭಗಳಿಗೆ ಮತ್ತು ಪಾರ್ಟಿ ಲುಕ್ ಕೊಡುವ ದಿರಿಸುಗಳು, ಕಸ್ಟಮೈಸ್ಡ್ ಫ್ಯಾಮಿಲಿ ದಿರಿಸುಗಳು ಹೀಗೆ ಮೂರು ವಿಧಗಳನ್ನು ಕಾಣಬಹುದು. ಈ ಮೂರು ಬಗೆಗಳು ನಿಮಗೆ ವಿವಿಧ ಆಯ್ಕೆಗಳಲ್ಲಿ ಲಭ್ಯ. ಉದಾಹರಣೆಗೆ- ತಾಯಿ ಮತ್ತು ಮಗಳಿಗಾಗಿ ಒಂದೇ ಮಾದರಿಯ ಕುರ್ತಾಗಳು, ಸ್ಕರ್ಟುಗಳು, ಸೀರೆ-ಮಿನಿ ಸೀರೆಯ ಆಯ್ಕೆಗಳು, ಒಂದೇ ಬಗೆಯ ಅನಾರ್ಕಲಿ ಸೂಟುಗಳು, ಲೆಹೆಂಗಾಗಳು ಇತ್ಯಾದಿಗಳು. ಅಂತೆಯೇ ತಂದೆ ಮತ್ತು ಮಗನಿಗೆ ಒಂದೇ ಬಗೆಯ ಕೋಟುಗಳು, ಶೆರ್ವಾಣಿಗಳು, ಶರ್ಟುಗಳು, ಜುಬ್ಬಾ ಸೆಟ್ ಗಳು ಇತ್ಯಾದಿಗಳು. ಇನ್ನು ಕಸ್ಟಮೈಸ್ಡ್ ನಲ್ಲಿ ಇಡೀ ಫ್ಯಾಮಿಲಿಗೆ ಒಂದೇ ಡಿಸೈನಿನ ಟಿ-ಶರ್ಟುಗಳು, ಸೂಪರ್ ಮಾಮ್, ಸೂಪರ್ ಡ್ಯಾಡ್, ಸೂಪರ್ ಸನ್, ಸೂಪರ್ ಡಾಟರ್ ಎಂದು ಬರೆದಿರುವ ಅಥವಾ ಇಂತದ್ದೇ ಐಡೆಂಟಿಕಲ್ ಸ್ಟೇಟ್ಮೆಂಟುಗಳಿರುವ ಟಿ-ಶರ್ಟುಗಳೂ ದೊರೆಯುತ್ತವೆ. ಅಷ್ಟೇ ಅಲ್ಲದೆ ಫ್ಯಾಮಿಲಿ ಚಿತ್ರಗಳನ್ನು ಪ್ರಿಂಟ್ ಮಾಡಿಸಿಯೂ ಕೂಡ ಬಳಸಬಹುದು.
ಇಷ್ಟೆಲ್ಲಾ ಆಯ್ಕೆಗಳಲ್ಲಿ ಲಭಿಸುವ ಈ ಫ್ಯಾಮಿಲಿ ಡ್ರೆಸ್ ಗಳನ್ನು ನೀವೂ ಒಮ್ಮೆ ಪ್ರಯತ್ನಿಸಿ. ಇಲ್ಲಿ ಒಂದೇ ಬಗೆಯ ದಿರಿಸನ್ನು ದರಿಸುವುದು ಕೇವಲ ತೋರಿಕೆಗಾಗಷ್ಟೇ ಅಲ್ಲದೆ ಅದು ನಿಮ್ಮ ಕುಟುಂಬದ ಬಾಂಧವ್ಯವನ್ನು ಸುಮಧುರಗೊಳಿಸುವ ಮತ್ತು ಅಪರೂಪದ ಕ್ಷಣಗಳನ್ನು ಅನುಭವಿಸುವ ಮಾರ್ಗವೂ ಆಗಿರುತ್ತದೆ.
“Clothes mean nothing until someone lives in them. You can feel unity and style by using ‘family dress code ……”

ಮತ್ತಷ್ಟು ಸುದ್ದಿಗಳು

Latest News

ಆಣೆಕಟ್ಟಿನಲ್ಲಿ ಹುಚ್ಚು ಸಾಹಸ ಪ್ರದರ್ಶಿಸಲು ಹೋಗಿ ಆಯ ತಪ್ಪಿ ಬಿದ್ದ ವ್ಯಕ್ತಿ!

newsics.com ಯಾವುದೇ ಆಧಾರವಿಲ್ಲದೇ ಆಣೆಕಟ್ಟಿನ ಗೋಡೆಯನ್ನು ಹತ್ತಲು ಹೋದ ವ್ಯಕ್ತಿಯು ಆಯತಪ್ಪಿ ಬಿದ್ದು ಗಾಯಗೊಂಡ ಘಟನೆಯು ಚಿಕ್ಕಬಳ್ಳಾಪುರದ ಶ್ರೀನಿವಾಸಸಾಗರ ಆಣೆಕಟ್ಟಿನಲ್ಲಿ ನಡೆದಿದೆ. ಆಣೆಕಟ್ಟಿನಲ್ಲಿ ನೆರೆದಿದ್ದ ಪ್ರವಾಸಿಗರ ಎದುರು ಹುಚ್ಚು...

ಬೋನಿನಲ್ಲಿದ್ದ ಸಿಂಹದ ಜೊತೆ ಚೆಲ್ಲಾಟವಾಡುತ್ತಿದ್ದವನ ಬೆರಳುಗಳೇ ಕಟ್!

newsics.com ಹುಲಿ, ಸಿಂಹ ಹಾಗೂ ಚಿರತೆಗಳಂತಹ ಪ್ರಾಣಿಗಳ ಜೊತೆ ನಾವು ಎಷ್ಟು ಎಚ್ಚರಿಕೆಯಿಂದ ಇದ್ದರೂ ಸಹ ಕಡಿಮೆಯೇ. ಆದರೆ ಇಲ್ಲೊಬ್ಬ ವ್ಯಕ್ತಿ ಸಿಂಹದ ಬೋನಿನಲ್ಲಿ ಕೈ ಹಾಕುವ ಹುಚ್ಚು ಸಾಹಸ ಪ್ರದರ್ಶಿಸಲು ಹೋಗಿ ತನ್ನ...

ಬಾಡಿಗೆಗೆ ವಾಸವಿದ್ದ ಯುವತಿ ಮೇಲೆ ಮನೆ ಮಾಲೀಕನಿಂದ ಅತ್ಯಾಚಾರ

newsics.com ಬೆಂಗಳೂರು : ಬಾಡಿಗೆಗೆ ವಾಸವಿದ್ದ ಯುವತಿಗೆ ಬೆದರಿಸಿ ಆಕೆಯ ಮೇಲೆ ಅತ್ಯಾಚಾರ ಎಸಗಿದ ಅಮಾನವೀಯ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ. ತಲೆಗೆ ಪಿಸ್ತೂಲಿಟ್ಟು ಬೆದರಿಕೆಯೊಡ್ಡಿದ್ದ ಮನೆ ಮಾಲೀಕನನ್ನು ಅಶೋಕ ನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತ...
- Advertisement -
error: Content is protected !!