newsics.com
ಮುಂಬೈ : 50,907 ವಜ್ರಗಳನ್ನು ಹೊಂದಿರುವ ಭಾರತೀಯ ಆಭರಣದ ಉಂಗುರವು ವಿಶ್ವ ದಾಖಲೆಯನ್ನು ಮಾಡಿದೆ.
ಒಂದು ಉಂಗುರದಲ್ಲಿ 50,907 ವಜ್ರಗಳನ್ನು ಹೊಂದಿಸಿ ತಯಾರಿಸಲಾಗಿದೆ. ಈ ಉಂಗುರವನ್ನು ಮಾರ್ಚ್ 11, 2023 ರಂದು ಮುಂಬೈನ HK ಡಿಸೈನ್ಸ್ ಮತ್ತು ಹರಿ ಕೃಷ್ಣ ಎಕ್ಸ್‌ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ ಡಿಸೈನ್ ಮಾಡಿ, ಗಿನ್ನಿಸ್ ರೆಕಾರ್ಡನ್ನು ಸಾಧಿಸಿದೆ ಎಂದು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಹೇಳಿದೆ.
ಈ ಉಂಗುರವನ್ನು ಸಂಪೂರ್ಣವಾಗಿ ಮರುಬಳಕೆ ಮಾಡಲಾದ ಚಿನ್ನ ಮತ್ತು ವಜ್ರಗಳು, ಹಾಗೂ ಗ್ರಾಹಕರಿಂದ ಹಿಂತಿರುಗಿಸಲ್ಪಟ್ಟ ಚಿನ್ನ, ವಜ್ರಗಳಿಂದ ಮರು ತಯಾರಿಸಲಾಗಿದೆ. HK ಡಿಸೈನ್ಸ್ ಪ್ರಕಾರ, ಈ ಉಂಗುರವು ಸರಿ ಸುಮಾರು $7,85,645 (6.4 ಕೋಟಿ) ಮೌಲ್ಯವನ್ನು ಹೊಂದಿದೆ.