ದಾಸವಾಳ ಹೂವಿನಿಂದ ಸೌಂದರ್ಯ ಹೆಚ್ಚಿಸಿಕೊಳ್ಳಬಹುದು. ದಾಸವಾಳದ ಟೀ ಕುಡಿಯುವುದರಿಂದ ಚರ್ಮದ ಕಾಂತಿ ಹೆಚ್ಚುತ್ತದೆ. ಅಧಿಕ ರಕ್ತದೊತ್ತಡದ ನಿಯಂತ್ರಣ, ತೂಕ ಇಳಿಕೆಗೆ ಹಾಗೂ ಕೂದಲಿನ ಬೆಳವಣಿಗೆಗೆ ಸಹಕಾರಿ.
• ಡಾ. ಅಹಲ್ಯಾ
newsics.com@gmail.com
ಇಂದಿನ ಆಧುನಿಕ ಯುಗದಲ್ಲಿ ಸೌಂದರ್ಯವಂತರಾಗಿ ಕಾಣಿಸಿಕೊಳ್ಳಬೇಕೆಂಬುದು ಎಲ್ಲರ ಬಯಕೆ. ಇದಕ್ಕಾಗಿ ಹಲವು ಮಾರ್ಗಗಳನ್ನು ಅನುಸರಿಸುತ್ತಾರೆ. ನಮ್ಮ ಪ್ರಕೃತಿ ನೀಡಿರುವ ಗಿಡಮೂಲಿಕೆಗಳನ್ನೇ ಬಳಸಿ ಸೌಂದರ್ಯ ವೃದ್ದಿಸಿಕೊಳ್ಳಬಹುದಾಗಿದೆ.
ದಾಸವಾಳ ಹೂವಿನಿಂದ ಸೌಂದರ್ಯ ಹೆಚ್ಚಿಸಿಕೊಳ್ಳಬಹುದು. ದಾಸವಾಳದ ಟೀ ಕುಡಿಯುವುದರಿಂದ ಚರ್ಮದ ಕಾಂತಿ ಹೆಚ್ಚುತ್ತದೆ. ಅಧಿಕ ರಕ್ತದೊತ್ತಡದ ನಿಯಂತ್ರಣ, ತೂಕ ಇಳಿಕೆಗೆ ಹಾಗೂ ಕೂದಲಿನ ಬೆಳವಣಿಗೆಗೆ ಸಹಕಾರಿ.
ದಾಸವಾಳದಲ್ಲಿ ವಿಟಮಿನ್ ಸಿ ಹೇರಳವಾಗಿದ್ದು ದೇಹದಲ್ಲಿ ಹಾಳಾದ ಚರ್ಮದ ಬೆಳವಣಿಗೆಗೆ ಸಹಾಯಕವಾಗುತ್ತದೆ. ಚರ್ಮದ ಆರೋಗ್ಯ ಹಾಗೂ ಹೊಳಪನ್ನು ಕಾಪಾಡಿಕೊಳ್ಳಲು ನೆರವಾಗುತ್ತದೆ. ಚರ್ಮವನ್ನು ಹೈಡ್ರೇಟ್ ಮಾಡುತ್ತದೆ.
ಚರ್ಮದ ಮೇಲಿನ ಕಪ್ಪು ಕಲೆಗಳು ಹಾಗೂ ಚರ್ಮದ ಸುಕ್ಕನ್ನು ಕಡಿಮೆ ಮಾಡುತ್ತದೆ. ಉರಿಯೂತವನ್ನು ಸರಾಗಗೊಳಿಸಲು ಸಹಕಾರಿ.
ಕೂದಲಿನ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಪರಿಹರಿಸುತ್ತದೆ. ದಾಸವಾಳದ ಟೀಯಲ್ಲಿ ಅಧಿಕವಾಗಿರುವ ಅಮೈನೋ ಆಮ್ಲಗಳು ಕೂದಲಿನ ಬೆಳವಣಿಗೆಗೆ ಬೇಕಾದ ಪೋಷಕಾಂಶಗಳಾಗಿವೆ. ಆದ್ದರಿಂದ ಕೂದಲು ಬೆಳೆಯಲು ಹಾಗೂ ಬೇರುಗಳನ್ನು ಬಲಪಡಿಸುವಲ್ಲಿ ಇದು ಸಹಾಯಕವಾಗಿದೆ. ಎಲ್ಲರನ್ನೂ ಕಾಡುವ ತಲೆಹೊಟ್ಟನ್ನು ನಿವಾರಿಸಲು ದಾಸವಾಳ ಚಹಾವನ್ನು ಕ್ಲೆನ್ಸರ್ ಆಗಿ ಬಳಸಬಹುದು.