ಹಾಲು ಅಮೃತ ಎಂಬುದು ಪ್ರಾಚೀನರ ಮಾತು. ಆದರೆ ಈ ಮಾತು ಎಲ್ಲ ಕಾಲಕ್ಕೂ ಅನ್ವಯಿಸದು. ಆದರೆ ಕಲುಷಿತಗೊಂಡ ವಾತಾವರಣದಲ್ಲಿ ಹಾಲು ಪೂರ್ಣಪ್ರಮಾಣದಲ್ಲಿ ವಿಷವಾಗಿಲ್ಲ ಎಂಬುದೇ ಸಮಾಧಾನದ ಸಂಗತಿ.
ಕೆನಡಾದಲ್ಲಿ ವಿಜ್ಞಾನಿಗಳು ನಡೆಸಿದ ಅಧ್ಯಯನವೂ ಹಾಲು ಪೂರ್ಣ ವಿಷವಲ್ಲ ಎಂಬುದನ್ನು ದೃಢಪಡಿಸಿದೆ. ಆದರೆ ಹಾಲಿನ ವಿಚಾರದಲ್ಲಿ ಕೆಲ ಆತಂಕಕಾರಿ ವಿಚಾರಗಳನ್ನೂ ತಿಳಿಸಿದೆ.
8 ವರ್ಷದವರೆಗೆ ಕೆನೆ ಹಾಲನ್ನೇ ಕೊಡಿ:
ಚಿಕ್ಕ ಮಕ್ಕಳು, ಬೆಳವಣಿಗೆ ಹೊಂದುತ್ತಿರುವ ಮಕ್ಕಳಿಗೆ ಕೆನೆಭರಿತ ಹಾಲೇ ಉತ್ತಮ. 8 ವರ್ಷಗಳ ನಂತರ ಮಾತ್ರ ಕೊಬ್ಬಿನಂಶ ಕಡಿಮೆ ಇರುವ ಟೋನ್ಡ್ ಮಿಲ್ಕನ್ನು ಮಕ್ಕಳಿಗೆ ನೀಡಬೇಕೆಂದು ಅಧ್ಯಯನ ಸಲಹೆ ನೀಡಿದೆ. ಹಾಲಿನಲ್ಲಿರುವ ಬೀಟಾ-ಕ್ಯಾರೋಟಿನ್, ವಿಟಮಿನ್-ಡಿ ಜೀರ್ಣಿಸಿಕೊಳ್ಳಲು ಮತ್ತು ಮಕ್ಕಳ ಬೆಳವಣಿಗೆಗೆ ಸಹಾಯ ಮಾಡುತ್ತದೆ. 8 ವರ್ಷಗಳ ನಂತರ ಹಾಲಿನಲ್ಲಿರುವ ಕೊಬ್ಬು ಮಕ್ಕಳ ತೂಕವನ್ನು ಜಾಸ್ತಿ ಮಾಡುತ್ತದೆ. ಹಾಗಾಗಿ ಕನಿಷ್ಠ 8 ವರ್ಷಗಳವರೆಗಾದರೂ ಕೆನೆ ಹಾಲನ್ನು ನೀಡಿ.
ಮಕ್ಕಳಲ್ಲಿ ಬೊಜ್ಜು!:
ಕೆನೆ ಹಾಲು ಕುಡಿಯುವ ಮಕ್ಕಳಿಗಿಂತ ಟೋನ್ಡ್ ಹಾಲು ಕುಡಿಯುವ ಮಕ್ಕಳಲ್ಲೇ ಹೆಚ್ಚಿನ ಬೊಜ್ಜು ಕಂಡುಬಂದಿದೆ. ಕೆನೆ ಹಾಲು ಕುಡಿಯುವ ಮಕ್ಕಳಲ್ಲಿ ಶೇ.40 ರಷ್ಟು ಕಡಿಮೆ ಬೊಜ್ಜು ಕಂಡುಬಂದಿದೆ.
ಅಷ್ಟಕ್ಕೂ ಟೋನ್ಡ್ ಹಾಲು ಮತ್ತು ಕೆನೆ ಹಾಲಿನ ನಡುವಿನ ವ್ಯತ್ಯಾಸವೇನು ಎಂಬುದೇ ಹಲವರಿಗೆ ತಿಳಿದಿಲ್ಲವಂತೆ. ಟೋನ್ಡ್ ಹಾಲಿನಲ್ಲಿ ಕೊಬ್ಬಿನಂಶ ತುಂಬ ಕಡಿಮೆಯಿದ್ದು, ಜೀರ್ಣಕ್ರಿಯೆ ತೊಂದರೆ ಇರುವವರು ಮಾತ್ರ ಈ ಬಗೆಯ ಹಾಲನ್ನು ಸೇವಿಸಿದರೆ ಉತ್ತಮವಂತೆ.