ಬೆಂಗಳೂರು: ಆನ್ ಲೈನ್ ನಲ್ಲಿ ಬಟ್ಟೆ ಖರೀದಿಯಲ್ಲಿ ಪುರುಷರು ಮಹಿಳೆಯರಿಗಿಂತ ಮುಂದೆ ಇದ್ದಾರೆ. ನೆಲ್ಸನ್ ಸಿದ್ದಪಡಿಸಿರುವ ವರದಿಯಲ್ಲಿ ಇದು ಸಾಬೀತಾಗಿದೆ. ದೇಶದ ಎಲ್ಲ ಮೆಟ್ರೋ ನಗರಗಳು ಮತ್ತು ಟಯರ್ 1 ನಗರಗಳಲ್ಲಿ ಮಾಡಲಾದ ಸಮೀಕ್ಷೆಯಲ್ಲಿ ಈ ಅಂಶ ಪತ್ತೆಯಾಗಿದೆ. ಇನ್ನು ಆನ್ ಲೈನ್ ಶಾಪಿಂಗ್ ಹೆಚ್ಚಾಗಿ ರಾತ್ರಿ 8 ಗಂಟೆಯಿಂದ 11 ಗಂಟೆ ಅವಧಿಯಲ್ಲಿ ಮಾಡಲಾಗುವ ಅಂಶ ಕೂಡ ಬೆಳಕಿಗೆ ಬಂದಿದೆ. ಹಬ್ಬದ ಸಂದರ್ಭದಲ್ಲಿ ಮಾತ್ರ ಜನರು ಹೆಚ್ಚಾಗಿ ಗೃಹಪಯೋಗಿ ವಸ್ತುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸುತ್ತಾರೆ. ಉಳಿದ ಸಂದರ್ಭಗಳಲ್ಲಿ ಇದು ಕೇವಲ ಉಡುಪಿಗೆ ಮಾತ್ರ ಸಿಮೀತ ಎಂಬುದೂ ಕೂಡ ಸಮೀಕ್ಷೆಯಲ್ಲಿ ಸಾಬೀತಾಗಿದೆ.