Friday, July 1, 2022

ಫ್ಯಾಷನ್ ದುನಿಯಾದಲ್ಲೊಂದು ಲೆಹೆಂಗಾ ಸೀರೆ

Follow Us

ಬದಲಾವಣೆ ಜಗದ ನಿಯಮ ಎನ್ನುವಂತೆ ಫ್ಯಾಷನ್ ಕೂಡ. ಒಂದೊಮ್ಮೆ ಜಗತ್ತು ಬದಲಾಗದಿದ್ದರೂ ಫ್ಯಾಷನ್ ಬದಲಾಗದೆ ಇರದು ಎನ್ನುವಷ್ಟರಮಟ್ಟಿಗೆ ಫ್ಯಾಷನ್ ದುನಿಯಾ ಬದಲಾಗುತ್ತದೆ. ಅಷ್ಟೇ ಅಲ್ಲ, ಇದು ವೇಗದ ಲೋಕ. ಇಂದಿರುವ ಫ್ಯಾಷನ್ ನಾಳೆ ಇಲ್ಲ. ಆದರೆ, ಹೊಸ ಹೆಸರಿನಲ್ಲಿ ಹಳೆಯ ಫ್ಯಾಷನ್ ರಾರಾಜಿಸುವುದೂ ಇದೆ. ಲೆಹೆಂಗಾ ಸೀರೆ ಕೂಡ ಹಾಗೆಯೇ…

      ಫ್ಯಾಷನ್     


♦ ಪವಿತ್ರಾ ಜಿಗಳೆಮನೆ

ಪತ್ರಿಕೋದ್ಯಮ ವಿದ್ಯಾರ್ಥಿನಿ
ವಿವೇಕಾನಂದ ಕಾಲೇಜು, ಪುತ್ತೂರು
newsics.com@gmail.com


 ಸೀ ರೆ ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ? ಸಾಂಪ್ರದಾಯಿಕ ಉಡುಗೆಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿರುವುದೇ ಸೀರೆ. ಎಲ್ಲಾ ಕಾಲಘಟ್ಟದಲ್ಲೂ ಎಲ್ಲಾ ವಯಸ್ಸಿನ ಮಹಿಳೆಯರಿಗೆ ಒಪ್ಪುವ ಉಡುಗೆ. ಕಚ್ಚೆ ಸೀರೆಯಿಂದ ಹಿಡಿದು ಮಾರುಕಟ್ಟೆಯಲ್ಲಿ ದೊರೆಯುವ ಟ್ರೆಂಡೀ ಸೀರೆಯವರೆಗೂ ಹೆಂಗಳೆಯರು ನೆಚ್ಚಿಕೊಂಡಿದ್ದಾರೆ. ಅದನ್ನು ಉಡುವ ರೀತಿಗೆ ಹೊಸ ಮಾದರಿ ಸೇರಿಕೊಂಡಿದೆಯಷ್ಟೇ.
ಹೆಣ್ಣುಮಕ್ಕಳ ಫೇವರೇಟ್…
ವಿಪರ್ಯಾಸ ಎಂದರೆ, ಇಂದಿನ ಫ್ಯಾಷನ್ ಲೋಕದಲ್ಲಿ ನಟ-ನಟಿಯರು ಅದೇನೇ ಮಾಡಿದರೂ ಅದೊಂದು ಟ್ರೆಂಡ್ ಆಗಿ ಸ್ವೀಕರಿಸುತ್ತಾರೆ. ಅದಕ್ಕೆ ಅವರುಡುವ ಸೀರೆಯೂ ಹೊರತಾಗಿಲ್ಲ. ಸದ್ಯ ಫ್ಯಾಶನ್ ಲೋಕದಲ್ಲಿ ಸೀರೆ ಎನ್ನುವುದು ಇನ್ನೊಂದು ಆಯಾಮದಲ್ಲಿ ಹೆಣ್ಣುಮಕ್ಕಳ ಫೇವರೇಟ್ ಲಿಸ್ಟ್’ಗೆ ಸೇರಿಕೊಂಡಿದೆ. ಅದುವೇ ‘ಲೆಹೆಂಗಾ ಶೈಲಿಯ ಸೀರೆ.’ ಸಾಮಾನ್ಯವಾಗಿ ಲೆಹೆಂಗಾದೊಂದಿಗೆ ಕುರ್ತಾ ಧರಿಸುತ್ತಾರೆ. ಈಗ ಅದೇ ಲೆಹೆಂಗಾ ಸೀರೆಯೊಂದಿಗೆ ಹೊಂದಿಕೊಂಡಿದೆ. ಲಂಗ-ದಾವಣಿಯುಟ್ಟು ನೆರಿಗೆ ಮಾಡಿ ಸಂಭ್ರಮಿಸೋದು ಭಾರತೀಯರಿಗೆ ಹೊಸತೇನೂ ಅಲ್ಲ.
ಸೀರೆ ಕಂ ಲೆಹೆಂಗಾ…
ಕೆಲವೊಮ್ಮೆ ಹಳೆ ಫ್ಯಾಷನ್‍ಗಳೇ ಹೊಸ ರೂಪದಲ್ಲಿ ಹೆಸರು ಬದಲಿಸಿಕೊಂಡು ಹೆಂಗಳೆಯರ ಮನಸ್ಸು ಹೊಕ್ಕುತ್ತವೆ. ಅಂತಹುದರ ಪಟ್ಟಿಗೆ ಈಗ ಲೆಹೆಂಗಾ ಸ್ಟೈಲ್ ಸಾರೀ ಕೂಡ ಸೇರಿಕೊಂಡಿದೆ. ಇದರ ವಿಶೇಷತೆ ಎಂದರೆ, ಸಾಮಾನ್ಯ ಸೀರೆಯ ನೆರಿಗೆಗಳು ಎದುರು ಇರುತ್ತವೆ. ಆದರೆ ಲೆಹೆಂಗಾ ಶೈಲಿಯ ಸೀರೆಯಲ್ಲಿ ಬೆನ್ನಿನ ಬಳಿ ನೆರಿಗೆಗಳು ಇದ್ದು ಎದುರು ಲೆಹೆಂಗಾ ಧರಿಸಿದಂತೆ ಕಾಣುತ್ತದೆ. ಮದುವೆ, ಸಮಾರಂಭಗಳಿಗೆ ಈ ಸಾಂಪ್ರದಾಯಿಕ ಉಡುಗೆ ಉತ್ತಮವಾಗಿ ಈ ಸ್ಟೈಲ್ ಒಪ್ಪುತ್ತದೆ. ಕಸೂತಿಯಿಂದ ಕೂಡಿದ ಲೆಹೆಂಗಾಗಳಿಗೆ ಒಪ್ಪುವಂತೆ ಬ್ಲೌಸ್‍ನೊಂದಿಗೆ ಸೀರೆಯನ್ನು ಸೆಟ್ ಮಾಡಿ, ಅದಕ್ಕೊಂದು ಅಂದದ ಕಿವಿಯೋಲೆ ಧರಿಸಿದರೆ ನಿಮ್ಮ ಅಂದ ದುಪ್ಪಟ್ಟಾಗುವುದರಲ್ಲಿ ಸಂಶಯವಿಲ್ಲ.

ಮತ್ತಷ್ಟು ಸುದ್ದಿಗಳು

vertical

Latest News

ಹೊಸದಾಗಿ 17,070 ಕೊರೋನಾ ಸೋಂಕು ಪ್ರಕರಣ, 23 ಜನರ ಸಾವು

newsics.com ನವದೆಹಲಿ: ದೇಶದಲ್ಲಿ ಕೊರೋನಾ ಸೋಂಕಿನ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕಳೆದ 24 ಗಂಟೆ ಅವಧಿಯಲ್ಲಿ ಹೊಸದಾಗಿ 17,070 ಕೊರೋನಾ ಪ್ರಕರಣ ವರದಿಯಾಗಿದೆ. ಕೊರೋನಾ ಸೋಂಕಿತರಾಗಿದ್ದ...

ವಾಣಿಜ್ಯ ಬಳಕೆಯ ಸಿಲಿಂಡರ್ ದರ 198 ರೂಪಾಯಿ ಇಳಿಕೆ

newsics.com ನವದೆಹಲಿ: ಹೋಟೆಲ್ ಮಾಲಿಕರಿಗೆ ಸಿಹಿ ಸುದ್ದಿ. ಇದು ಬಳಕೆದಾರರಿಗೂ ಸ್ವೀಟ್  ನ್ಯೂಸ್. ವಾಣಿಜ್ಯ ಬಳಕೆಯ ಎಲ್ ಪಿ ಜಿ ಸಿಲಿಂಡರ್ ದರದಲ್ಲಿ ಇಳಿಕೆಯಾಗಿದೆ. ತೈಲ ಸಂಸ್ಥೆಗಳು 198 ರೂಪಾಯಿ ಕಡಿತ ಮಾಡಿವೆ. ಇಂದಿನಿಂದ...

ಶನಿವಾರ ಏಕನಾಥ್ ಶಿಂಧೆ ವಿಶ್ವಾಸ ಮತ ಯಾಚನೆ

newsics.com ಮುಂಬೈ: ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿ ಏಕನಾಥ್ ಶಿಂಧೆ ಶನಿವಾರ ರಾಜ್ಯ ವಿಧಾನಸಭೆಯಲ್ಲಿ ವಿಶ್ವಾಸ ಮತಯಾಚಿಸಲಿದ್ದಾರೆ. ಬಿಜೆಪಿ ಬೆಂಬಲಪಡೆದು ಏಕನಾಥ್ ಶಿಂಧೆ ಸರ್ಕಾರ ರಚಿಸಿದ್ದಾರೆ. ಶಿಂಧೆ ಬಣದಲ್ಲಿ 40ಕ್ಕೂ ಹೆಚ್ಚು ಶಾಸಕರು ಗುರುತಿಸಿಕೊಂಡಿರುವ ಹಿನ್ನೆಲೆಯಲ್ಲಿ...
- Advertisement -
error: Content is protected !!