newsics.com
ಬೆಂಗಳೂರು: ನಗರದ ಲಲಿತ್ ಅಶೋಕ್ ಹೋಟೆಲ್ ನಲ್ಲಿ ನಡೆದ ಮಿಸೆಸ್ ಸೌತ್ ಇಂಡಿಯಾ ಐ ಆಮ್ ಪವರ್ಫುಲ್ ಸ್ಪರ್ಧೆಯಲ್ಲಿ ಪ್ರಿಯಾಂಕ್, ಸುವನ, ಸಿಂಧು, ಜನನಿ, ಬಬಿತಾ ಮಿಸೆಸ್ ಸೌತ್ ಇಂಡಿಯಾ ವಿಜೇತರಾಗಿ ಕಿರೀಟ ಧರಿಸಿದರು.
ಜೊತೆಗೆ ಇದೇ ಮೊದಲ ಬಾರಿಗೆ ಪರಿಚಯಿಸಲಾದ ಕರ್ವಿ ವಿಭಾಗದಲ್ಲಿ ಸುಚಿತ್ರ ವೇಣುಗೋಪಾಲ್, ವರ್ಷ, ಶ್ವೇತಾ ಪ್ರಶಸ್ತಿ ಗೆದ್ದರೆ, ಮಿಸ್ಟರ್ ವಿಭಾಗದಲ್ಲಿ ಸಂಜಯ್, ಅಭಿಷೇಕ್ ನಾಯರ್, ನವೀನ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.
ಫ್ಯಾಷನ್ ಶೋದಲ್ಲಿ ವಿವಿಧ ರಾಜ್ಯ, ಕರ್ನಾಟಕದ ವಿವಿಧ ಜಿಲ್ಲೆಗಳಿಂದ 70 ರೂಪದರ್ಶಿಯರು ಹಾಗೂ 50 ಮಕ್ಕಳು ರ್ಯಾಂಪ್ ಮೇಲೆ ಹೆಜ್ಜೆಹಾಕಿದರು ಎಂದು ಕಾರ್ಯಕ್ರಮದ ಆಯೋಜಕಿ ನಂದಿನಿ ನಾಗರಾಜ್ ತಿಳಿಸಿದ್ದಾರೆ.