Thursday, May 26, 2022

ಧೋತಿ ಧರಿಸಿ, ಎತ್ತರದ ಲುಕ್ ಪಡೆದುಕೊಳ್ಳಿ!

Follow Us

ಉದ್ದ ಇರಲಿ, ಗಿಡ್ಡ ಇರಲಿ, ಹೆಣ್ಣುಮಕ್ಕಳನ್ನು ಆಕರ್ಷಕವಾಗಿ ಕಾಣುವ ಹಾಗೆ ಮಾಡುವ ಸಮರ್ಥ್ಯ ಧೋತಿ ಉಡುಪಿಗಿದೆ. ಆದರೆ ಧೋತಿ ಪ್ಯಾಂಟ್‌ಗಳ ಜತೆ ಟಾಪ್ ಕಾಂಬಿನೇಷನ್ ಕಡೆಗೂ ಸ್ವಲ್ಪ ಗಮನಹರಿಸಬೇಕು ಅಷ್ಟೇ!

• ಸೀಮಾ
newsics.com@gmail.com

ಭಾರತೀಯ ಸಾಂಪ್ರದಾಯಿಕ ಉಡುಪುಗಳ ಪಟ್ಟಿಗೆ ಸೇರುವ ಧೋತಿ ಈಗ ಟ್ರೆಂಡಿಂಗ್‌ನಲ್ಲಿರುವ ಫ್ಯಾಷನ್ ವೇರ್ ಕೂಡ ಹೌದು. ಮದುವೆ, ಪೂಜೆ ಮೊದಲಾದ ಸಾಂಪ್ರದಾಯಿಕ ಕಾರ್ಯಕ್ರಮಗಳಿಂದ ಹಿಡಿದು ಪಾರ್ಟಿ, ಫನ್ ಎಲ್ಲದಕ್ಕೂ ಸಲ್ಲುವ ಅಪ್ಪಟ ದೇಸಿ ಉಡುಗೆ ಧೋತಿ. ಅದರಲ್ಲೂ ಈಗಿನ ಹೆಣ್ಣುಮಕ್ಕಳ ಫೇವರೆಟ್ ತೊಡುಗೆ ಧೋತಿ ಪ್ಯಾಂಟ್ಸ್ ಅಂದರೆ ತಪ್ಪಿಲ್ಲ. ಅದರಲ್ಲೂ ಬೇಸಿಗೆ ಸಮಯದಲ್ಲಿ ಮೋಸ್ಟ್ ಕಂಫರ್ಟಬಲ್ ವೇರ್ ಧೋತಿ.

ಉದ್ದ ಇರಲಿ, ಗಿಡ್ಡ ಇರಲಿ, ಹೆಣ್ಣುಮಕ್ಕಳನ್ನು ಆಕರ್ಷಕವಾಗಿ ಕಾಣೋ ಹಾಗೆ ಮಾಡುವ ಸಮರ್ಥ್ಯ ಈ ಉಡುಪಿಗಿದೆ. ಆದರೆ ಧೋತಿ ಪ್ಯಾಂಟ್‌ಗಳ ಜತೆ ಟಾಪ್ ಕಾಂಬಿನೇಷನ್ ಕಡೆಗೂ ಸ್ವಲ್ಪ ಗಮನ ಹರಿಸಬೇಕು ಅಷ್ಟೇ!
ಸಾಮಾನ್ಯವಾಗಿ ಗಿಡ್ಡ ಇರುವ ಹುಡುಗಿಯರಿಗೆ ಎತ್ತರ ಕಾಣಿಸಿಕೊಳ್ಳಬೇಕು ಎನ್ನುವ ಆಸೆ ಇರತ್ತೆ. ಹಾಗಂತ ಪ್ರತಿ ಬಾರಿ ಹೀಲ್ಸ್ ಬಳಸಲು ಸಾಧ್ಯವಿಲ್ಲ. ಕೆಲವು ಮಹಿಳೆಯರು ಹೀಲ್ಸ್ ಇಷ್ಟಪಡದೆ ಇರಬಹುದು. ಅಂಥವರು ಲಂಬವಾದ ಪಟ್ಟಿಗಳಿರುವ (Verticle strip) ಇರುವ ಧೋತಿ ಪ್ಯಾಂಟ್ ಗಳನ್ನು ಬಳಸುವುದರಿಂದ ಕೊಂಚ ಎತ್ತರದ ಜತೆ ಸ್ವಲ್ಪ ತೆಳ್ಳಗೆ ಇರುವಂತೆ ಕಾಣಿಸಿಕೊಳ್ಳಬಹುದು. ಹಾಗೆಯೇ ಎತ್ತರ ಇರುವಂತೆ ಕಾಣಬೇಕಾದರೆ ಈ ತೆರನಾದ ಧೋತಿಗಳಿಗೆ ಮೊಣಕಾಲಿಗಿಂತ ಗಿಡ್ಡ ಇರುವ ಟಾಪ್ ಗಳನ್ನೂ ಧರಿಸಬೇಕು. ಉದ್ದ ಟಾಪ್‌ಗಳು ಸೂಕ್ತವಲ್ಲ. ಎತ್ತರದ ಲುಕ್ ನೀಡಲು ಧೋತಿ+ಗಿಡ್ಡ ಟಾಪ್‌ಗಳು, ಕ್ರಾಪ್ ಟಾಪ್‌ಗಳು ಬೆಸ್ಟ್ ಚಾಯ್ಸ್! ಜತೆಗೆ ಸ್ನೀಕರ್ಸ್ ಅಥವಾ ಶೂಸ್ ಬಳಸಿದರೆ ಇನ್ನೂ ಫ್ಯಾಷನೇಬಲ್ ಲುಕ್ ನಿಮ್ಮದಾಗಿಸಿಕೊಳ್ಳಬಹುದು.

ಧೋತಿಯನ್ನು ಆರಿಸಿಕೊಳ್ಳುವಾಗಲೂ ಬಟ್ಟೆಯ ಕ್ವಾಲಿಟಿ, ಕಲರ್ ಮತ್ತು ಡಿಸೈನ್ ಬಗ್ಗೆ ಸಲ್ಪ ಗಮನ ವಹಿಸಬೇಕು. ಅದ್ಧೂರಿ ಡಿಸೈನ್ ಇರುವ ಧೋತಿಗಳಿಗಿಂತ, ಸಿಂಪಲ್ ಡಿಸೈನ್ ಇರುವ ಲೈಟ್ ಮೆಟೀರಿಯಲ್ ಗಳಿಂದ ಮಾಡಿದ ಧೋತಿಗಳು ನಿಮಗೆ ಎತ್ತರದ ಲುಕ್ ಕೊಡುತ್ತದೆ. ಅದರಲ್ಲೂ ಲಿನೆನ್ ಹಾಗೂ ಶಿಫಾನ್ ಬಟ್ಟೆಗಳು, ಸ್ಲಿಮ್ ಹಾಗೂ ಟಾಲ್ ಲುಕ್ ನೀಡಲು ಸಹಕಾರಿ.
ಎತ್ತರ ಲುಕ್ ಪಡೆಯಲು ಹೀಲ್ಸ್ ಬಳಸಲು ಇಚ್ಚಿಸದವರಿಗೆ ಈ ಕಾಂಬಿನೇಷನ್ ಬೆಸ್ಟ್ ಚಾಯ್ಸ್ ಎನ್ನಬಹುದು.

ಮತ್ತಷ್ಟು ಸುದ್ದಿಗಳು

Latest News

ಪಾಟಿದಾರ್ ಶತಕದಾಟ: ಕ್ವಾಲಿಫೈಯರ್ 2 ತಲುಪಿದ ಫಾಫ್ ಪಡೆ

newsics.com ಕೋಲ್ಕತ್ತಾ: ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಐಪಿಎಲ್ 2022 ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 14ರನ್‌ಗಳ ಗೆಲುವು ಸಾಧಿಸಿದೆ. ಮಳೆಯ ಕಾರಣದಿಂದಾಗಿ ಕೊಂಚ ತಡವಾಗಿ...

ಉಗ್ರರ ಗುಂಡಿಗೆ ಟಿವಿ‌ ಕಲಾವಿದೆ ಬಲಿ

newsics.com ಶ್ರೀನಗರ: ಉಗ್ರರ ಗುಂಡಿಗೆ ಟಿವಿ ಕಲಾವಿದೆಯೊಬ್ಬರು ಬಲಿಯಾಗಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಬದ್ಗಾಮ್‌ ಜಿಲ್ಲೆಯಲ್ಲಿ ಬುಧವಾರ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತ ಮಹಿಳೆಯನ್ನು ಕಲಾವಿದೆ ಅಮ್ರೀನ್‌ ಭಟ್‌ ಎಂದು ಗುರುತಿಸಲಾಗಿದೆ. ಅಮ್ರೀನ್...

ಪೆಟ್ರೋಲಿಲ್ಲ, ಎಟಿಎಂನಲ್ಲಿ ಹಣವಿಲ್ಲ: ಪಾಕ್ ಸರ್ಕಾರದ ವಿರುದ್ಧ ಹಫೀಜ್ ವಾಗ್ದಾಳಿ

newsics.com ಇಸ್ಲಾಮಾಬಾದ್: ಪಾಕಿಸ್ತಾನದ ಸ್ಥಿತಿಗತಿಗಳ ಬಗೆಗೆ ಮಾಜಿ ಕ್ರಿಕೆಟಿಗ ಮೊಹಮ್ಮದ್ ಹಫೀಜ್ ಅವರು ಕಿಡಿಕಾರಿದ್ದಾರೆ. ಲಾಹೋರ್ ನಲ್ಲಿ ಜನ ಸಾಮಾನ್ಯರಿಗೆ ಪೆಟ್ರೋಲ್ ಸಿಗುತ್ತಿಲ್ಲ. ಎಟಿಎಂನಲ್ಲಿ ಹಣವಿಲ್ಲ ಎಂದು ಹೇಳಿದ್ದಾರೆ. ಯಾವುದೇ ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್...
- Advertisement -
error: Content is protected !!