Monday, October 2, 2023

ಡಯಟ್‍ನಲ್ಲಿದ್ದೀರಾ? ಹಣ್ಣು ತಿಂದರೆ ಓಕೆನಾ?

Follow Us

ಡಯಟ್‍ನಲ್ಲಿದ್ದೀರಾ? ಹಣ್ಣು ತಿಂದರೆ ಓಕೆನಾ? ಹಣ್ಣು ಆರೋಗ್ಯಕ್ಕೆ ಉತ್ತಮ ಎಂಬುದು ದಿಟ. ಆದರೆ, ಕೆಲವರಿಗೆ ಕೆಲವು ಹಣ್ಣುಗಳು ಅನಾರೋಗ್ಯವನ್ನೇ ತರಬಹುದು. ಹೀಗಾಗಿ ಹಣ್ಣು ತಿನ್ನುವ ಮುನ್ನ ಯೋಚಿಸುವುದೊಳಿತು. – ಅನುಷಾ ಶೆಟ್ಟಿ ಉತ್ತಮ ಆರೋಗ್ಯಕ್ಕಾಗಿ ದಿನಕ್ಕೆ ಕನಿಷ್ಠ ಒಂದು ಹಣ್ಣನ್ನಾದರೂ ತಿನ್ನಬೇಕು ಎನ್ನುವುದು ನಮಗೆಲ್ಲ ತಿಳಿದಿರುವ ಸಂಗತಿಯೇ. ಆದರೆ, ಕಡಿಮೆ ಕಾರ್ಬೋಹೈಡ್ರೇಟ್ ಆಹಾರ ಸೇವಿಸುವ ಅನಿವಾರ್ಯತೆಗೆ ಸಿಕ್ಕವರು ಕೆಲವು ಹಣ್ಣುಗಳ ಪಥ್ಯ ಮಾಡುವುದು ಅಗತ್ಯ ಎಂದರೆ ನಂಬುತ್ತೀರಾ? ನಿಜ, ಕೆಲವೊಂದು ಹಣ್ಣುಗಳು ಆರೋಗ್ಯಕ್ಕೆ ಅತ್ಯುತ್ತಮವಾಗಿದ್ದರೂ ಅವುಗಳಲ್ಲಿ ಕಾಬೋಹೈಡ್ರೇಟ್ ಪ್ರಮಾಣ ಹೆಚ್ಚಿರುತ್ತದೆ. ಸಕ್ಕರೆ, ಗ್ಲುಕೋಸ್ ಹಾಗೂ ಫ್ರುಕ್ಟೋಸ್ ಪ್ರಮಾಣ ಕೆಲವು ಹಣ್ಣುಗಳಲ್ಲಿ ಹೆಚ್ಚಿದ್ದು, ಇವು ಕಾರ್ಬೋಹೈಡ್ರೇಟ್ ಕಡಿಮೆ ಪ್ರಮಾಣದಲ್ಲಿ ಸೇವಿಸುವ ಅನಿವಾರ್ಯತೆ ಇರುವವರಿಗೆ ಹಿತಕರವಲ್ಲ ಎಂಬುದು ತಜ್ಞರ ಅಭಿಪ್ರಾಯ.

ಬಾಳೆಹಣ್ಣು, ದ್ರಾಕ್ಷಿ, ಸೇಬು, ಅನಾನಸ್ ಮುಂತಾದ ಹಣ್ಣುಗಳಲ್ಲಿ ಕಾರ್ಬೋಹೈಡ್ರೇಟ್ ಪ್ರಮಾಣ ಹೆಚ್ಚಿದೆ. ಕೆಲವೊಂದು ತರಕಾರಿಗಳಿಗೆ ಹೋಲಿಸಿದಾಗ ಈ ಹಣ್ಣುಗಳಲ್ಲಿ ಕಾರ್ಬೋಹೈಡ್ರೇಟ್ ಪ್ರಮಾಣ ಹೆಚ್ಚಿದೆ. ಆದರೆ, ಬ್ರೆಡ್ ಅಥವಾ ಪಾಸ್ತಾಕ್ಕೆ ಹೋಲಿಸಿದರೆ ಇವುಗಳಲ್ಲಿ ಕಾರ್ಬೋಹೈಡ್ರೇಟ್ ಪ್ರಮಾಣ ಕಡಿಮೆ. ಅಂದಹಾಗೆ, ಕಡಿಮೆ ಪ್ರಮಾಣದಲ್ಲಿ ಕಾರ್ಬೋಹೈಡ್ರೇಟ್ ಹೊಂದಿರುವ ಡಯಟ್ ಎಂದರೆ ಏನು ಎಂಬುದನ್ನು ಸ್ಪಷ್ಟವಾಗಿ ವಿವರಿಸಲು ಸಾಧ್ಯವಿಲ್ಲ. ಇದು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ. ಅಂದರೆ ಆತ/ ಆಕೆಯ ಚಟುವಟಿಕೆಯ ಪ್ರಮಾಣ, ಜೀರ್ಣಕ್ರಿಯೆ, ವೈಯಕ್ತಿಕ ಆಯ್ಕೆ, ಜೀವನಶೈಲಿ ಮುಂತಾದ ಅಂಶಗಳನ್ನು ಪರಿಗಣಿಸಿ ಈ ಡಯಟ್‍ನ್ನು ಯೋಜಿಸಲಾಗುತ್ತದೆ. ದಿನಕ್ಕೆ 100- 150 ಗ್ರಾಂ ಕಾರ್ಬೋಹೈಡ್ರೇಟ್‍ಯುಕ್ತ ಆಹಾರ ಸೇವಿಸಬಹುದು ಎಂದಾದರೆ ಅಂಥವರು ಕೆಲವು ತುಂಡು ಹಣ್ಣುಗಳನ್ನು ತಿನ್ನುವುದರಿಂದ ಯಾವುದೇ ಸಮಸ್ಯೆಯಾಗುವುದಿಲ್ಲ. ಆದರೆ, ದಿನಕ್ಕೆ 50 ಗ್ರಾಂ ಕಾರ್ಬೋಹೈಡ್ರೇಟ್ ಮಾತ್ರ ಸೇವಿಸಬೇಕು ಎಂಬ ಅನಿವಾರ್ಯತೆ ಹೊಂದಿರುವವರು ಕೆಲವು ಹಣ್ಣುಗಳಿಂದ ತುಸು ದೂರ ಉಳಿಯುವುದು ಒಳ್ಳೆಯದು. ಕಾರ್ಬೋಹೈಡ್ರೇಟ್ ಕಡಿಮೆ ಪ್ರಮಾಣದಲ್ಲಿರುವ ಡಯಟ್ ಅನುಸರಿಸಲು ಅನೇಕ ಕಾರಣಗಳಿರುತ್ತವೆ. ಬೊಜ್ಜು, ಮಧುಮೇಹ, ಅಪಸ್ಮಾರ ಮುಂತಾದ ಕಾಯಿಲೆಗಳಿಂದ ಬಳಲುವವರು ಇಂಥ ಪಥ್ಯಕ್ಕೆ ಅಂಟಿಕೊಳ್ಳುವುದು ಅನಿವಾರ್ಯ.

ಅದೇನೇ ಇರಲಿ, ಹಣ್ಣುಗಳಲ್ಲಿ ಜೀವಸತ್ವಗಳು, ಲವಣಾಂಶಗಳು ಹಾಗೂ ನಾರಿನಂಶ ಅಧಿಕ ಪ್ರಮಾಣದಲ್ಲಿರುವುದಂತೂ ನಿಜ. ಸಂಸ್ಕರಿಸಿದ ಆಹಾರಗಳಿಗಿಂತ ಕಾರ್ಬೋಹೈಡ್ರೇಟ್ ಹೆಚ್ಚಿರುವ ಆಹಾರಗಳೇ ಹೆಚ್ಚು ಉತ್ತಮ. ಇನ್ನು ಕೆಲವರಿಗೆ ಹಣ್ಣಿಗಿಂತ ಹಣ್ಣಿನ ಜ್ಯೂಸ್ ಎಂದರೆ ಇಷ್ಟ. ಇಂಥವರು ಗಮನಿಸಲೇಬೇಕಾದ ವಿಷಯವೇನೆಂದರೆ, ಹಣ್ಣಿನ ಜ್ಯೂಸ್‍ನಲ್ಲಿ ನಾರಿನಂಶ ಇರುವುದಿಲ್ಲ, ಕೆಲವೊಂದು ಜೀವಸತ್ವಗಳು ಕೂಡ ನಾಶವಾಗಿರುತ್ತವೆ. ಇನ್ನು ಸಕ್ಕರೆ ಪ್ರಮಾಣ ಸಾಫ್ಟ್ ಡಿಂಕ್ಸ್‍ಗಳಲ್ಲಿರುವಷ್ಟೇ ಇರುತ್ತದೆ. ಆದ್ದರಿಂದ ಹಣ್ಣಿನ ಜ್ಯೂಸ್ ಬದಲು ತಾಜಾ ಹಣ್ಣನ್ನು ಸೇವಿಸುವುದೇ ಉತ್ತಮ. ಕೆಲವೊಂದು ಹಣ್ಣುಗಳಲ್ಲಿ ಕಾರ್ಬೋಹೈಡ್ರೇಟ್ ಪ್ರಮಾಣ ತುಂಬಾ ಕಡಿಮೆಯಿದೆ. ಉದಾಹರಣೆಗೆ ಟೊಮ್ಯಾಟೋ, ಕಲ್ಲಂಗಡಿ ಹಣ್ಣು, ಬೆಣ್ಣೆಹಣ್ಣು, ಸ್ಟ್ರಾಬೆರಿ. ಹೀಗಾಗಿ ಕಡಿಮೆ ಪ್ರಮಾಣದ ಕಾರ್ಬೋಹೈಡ್ರೇಟ್ ತಿನ್ನಬೇಕು ಎಂಬ ಅನಿವಾರ್ಯತೆ ಹೊಂದಿರುವವರು ಈ ಹಣ್ಣುಗಳನ್ನು ಧಾರಾಳವಾಗಿ ತಿನ್ನಬಹುದು.

ಮತ್ತಷ್ಟು ಸುದ್ದಿಗಳು

vertical

Latest News

ವಿದ್ಯುತ್ ಲೈನ್ ತಗುಲಿ 5 ಜಾನುವಾರು ಸ್ಥಳದಲ್ಲಿಯೇ ಸಾವು

newsics.com ಕೊಡಗು: ವಿದ್ಯುತ್ ಲೈನ್ ತುಂಡಾಗಿ ಬಿದ್ದ ಹಿನ್ನೆಲೆ ಐದು ಜಾನುವಾರುಗಳು ಸ್ಥಳದಲ್ಲಿಯೇ ಸಾವನ್ನಪ್ಪಿದೆ. ದಾರುಣ ಘಟನೆ ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲ್ಲೂಕಿನ ಮತ್ತೂರಿನಲ್ಲಿ ನಡೆದಿದೆ. ಮತ್ತೂರು ಗ್ರಾಮದ...

Asian Games; ಭಾರತಕ್ಕೆ ಒಂದೇ ದಿನ 15 ಪದಕ

newsics.com ಹ್ಯಾಂಗ್‌ಝೌ: ಏಷ್ಯನ್‌ ಗೇಮ್ಸ್‌ನಲ್ಲಿ ಭಾರತ 8ನೇ ದಿನವಾದ ಭಾನುವಾರ ಒಂದೇ ದಿನ 15 ಪದಕ ಬಾಚಿಕೊಂಡಿದೆ. 7ನೇ ದಿನವಾದ ಶನಿವಾರ 10 ಚಿನ್ನ, 14 ಬೆಳ್ಳಿ ಮತ್ತು 14 ಕಂಚಿನೊಂದಿಗೆ 38 ಪದಕಗಳನ್ನು ಭಾರತ...

ಬೆಂಗಳೂರು ಕಂಬಳ: ಕೋಣಗಳಿಗೆ ಮಂಗಳೂರಿಂದಲೇ ಬರುತ್ತೆ ಕುಡಿಯುವ ನೀರು!

newsics.com ಬೆಂಗಳೂರು: ನವೆಂಬರ್ ತಿಂಗಳ 25 ಮತ್ತು 26ನೇ ತಾರೀಕಿನಂದು ಮೊದಲ ಬಾರಿಗೆ ತುಳುನಾಡಿನ ಗಡಿಯನ್ನು ದಾಟಿ ಬೆಂಗಳೂರಿನಲ್ಲಿ ಕರಾವಳಿಯ ಸಾಂಸ್ಕೃತಿಕ ಕ್ರೀಡೆ ಕಂಬಳ ನಡೆಯುತ್ತಿದೆ. ಪುತ್ತೂರು ಶಾಸಕ ಅಶೋಕ್‌ ಕುಮಾರ್ ರೈ ನೇತೃತ್ವದಲ್ಲಿ ಕಂಬಳ...
- Advertisement -
error: Content is protected !!