Wednesday, February 1, 2023

ಮುಖದ ಅಂದಕ್ಕೆ ಯೋಗ ಮದ್ದು

Follow Us

ದೇಹಕ್ಕೆ ವಯಸ್ಸಾಗಿದೆ ಎನ್ನುವುದಕ್ಕೆ ಮುಖವೇ ಕನ್ನಡಿ. ನೀವು ಎಷ್ಟೇ ದುಬಾರಿ ಕ್ರೀಮ್ ಹಚ್ಚಿದರೂ, ನಾನಾ ರೀತಿಯ ಫೇಷಿಯಲ್ ಮಾಡಿಸಿಕೊಂಡರೂ ಮುಖದ ಮೇಲೆ ಮೂಡಿರುವ ನೆರಿಗೆಗಳನ್ನು ಮುಚ್ಚಿಡುವುದು ಕಷ್ಟ. ವಯಸ್ಸಿನೊಂದಿಗೆ ಸಹಜವಾಗಿ ಬರುವ ನೆರಿಗೆ, ಸುಕ್ಕುಗಳಿಂದ ಮುಖದ ಅಂದ ಹಾಳಾಗುವುದನ್ನು ತಡೆಯಲು ನೀವು ಪ್ರಯತ್ನಿಸುತ್ತಿದ್ದರೆ ಮುಖ ಯೋಗದ ಮೊರೆ ಹೋಗುವುದು ಒಳಿತು. ಅರೇ, ಇದೇನಿದು ಮುಖ ಯೋಗ ಎಂದು ಯೋಚಿಸುತ್ತಿದ್ದೀರಾ? ಇದು ಇತ್ತೀಚಿನ ದಿನಗಳಲ್ಲಿ ಸದ್ದು ಮಾಡುತ್ತಿರುವ ಒಂದು ಯೋಗ ಪ್ರಕಾರ. ಇದು ಮುಖದ ಸ್ನಾಯುಗಳನ್ನು ಬಲಪಡಿಸುವ ಮೂಲಕ ಸುಕ್ಕನ್ನು ತಡೆಗಟ್ಟುತ್ತದೆ.
ಮುಖ ಯೋಗ ಎಂದರೇನು?:
ವಯಸ್ಸಾದರೂ ಯೌವನದ ಕಾಂತಿ ಮುಖದಿಂದ ಮಾಸದಂತೆ ಮಾಡುವಲ್ಲಿ ಯೋಗ ನೆರವು ನೀಡುತ್ತದೆ. ಮುಖದ ಕಾಂತಿ ಹೆಚ್ಚಿಸಲು ಬಳಸುವ ಕ್ರೀಮ್‍ಗಳು ರಾಸಾಯನಿಕಯುಕ್ತವಾಗಿರುತ್ತವೆ. ಇವುಗಳನ್ನು ಬಳಸುವುದರಿಂದ ಪ್ರಾರಂಭಿಕ ಹಂತದಲ್ಲಿ ಸೌಂದರ್ಯ ಹೆಚ್ಚಿದಂತೆ ಕಂಡರೂ ದೀರ್ಘಕಾಲದ ಬಳಕೆಯಿಂದ ಅಡ್ಡಪರಿಣಾಮಗಳೇ ಹೆಚ್ಚು. ಆದರೆ, ಯೋಗ ನೈಸರ್ಗಿಕ ವಿಧಾನವಾಗಿದ್ದು, ಯಾವುದೇ ಅಡ್ಡಪರಿಣಾಮಗಳಿಲ್ಲ. ಮುಖ ಯೋಗವು ಮುಖದಲ್ಲಿನ ಸ್ನಾಯುಗಳನ್ನು ಬಳಸಿಕೊಂಡು ಮಾಡುವ ಯೋಗ ಪ್ರಕಾರವಾಗಿದೆ. ಇದು ಮುಖದ ಸ್ನಾಯುಗಳನ್ನು ಬಲಪಡಿಸುವ ಜತೆಗೆ ತ್ವಚೆಗೆ ಹೊಳಪು, ತಾಜಾತನ ನೀಡುವ ಮೂಲಕ ಕಾಂತಿ ಕಾಪಾಡುತ್ತದೆ. ಈ ಯೋಗದಿಂದ ಮುಖದ ಸ್ನಾಯುಗಳಿಗೆ ಆಮ್ಲಜನಕ ಪೂರೈಕೆಯಾಗಿ, ಚೈತನ್ಯ ಸಿಗುತ್ತದೆ.
ಪ್ರಯೋಜನಗಳು:
1.ವಯಸ್ಸಿನ ಪರಿಣಾಮಗಳನ್ನು ತಗ್ಗಿಸಲು ನೆರವು: ನಿಮಗೆ ವಯಸ್ಸಾಯಿತು ಎನ್ನುವುದಕ್ಕೆ ಮುಖದ ಮೇಲೆ ಎದ್ದೇಳುವ ಗೆರೆಗಳು, ನೆರಿಗೆಗಳೇ ಕುರುವು. ಯೋಗದ ಮೂಲಕ ಮುಖದ ಸ್ನಾಯುಗಳಿಗೆ ವ್ಯಾಯಾಮ ನೀಡಿ, ನೆರಿಗೆಗಳು ಮೂಡದಂತೆ ತಡೆಯಬಹುದಾಗಿದೆ. ಜತೆಗೆ ಬಿಗಿಯಾದ ಹಾಗೂ ಕಾಂತಿಯುತ ತ್ವಚೆ ಪಡೆಯಬಹುದಾಗಿದೆ.
2. ಒತ್ತಡ ನಿವಾರಣೆಗೆ ನೆರವು: ವಯಸ್ಸು ಮಾತ್ರವಲ್ಲ, ಅತಿಯಾದ ಒತ್ತಡ ಕೂಡ ಮುಖದ ಸೌಂದರ್ಯ ಕುಂದಿಸಬಲ್ಲದು. ಯೋಗ ಮನಸ್ಸನ್ನು ಶಾಂತವಾಗಿಸುವ ಮೂಲಕ ಒತ್ತಡವನ್ನು ತಗ್ಗಿಸುತ್ತದೆ. ಅಷ್ಟೇ ಅಲ್ಲ, ಕಚೇರಿಯಲ್ಲಿ 8 -10 ಗಂಟೆಗಳ ಕಾಲ ಕಂಪ್ಯೂಟರ್ ಮುಂದೆ ಕುಳಿತು ಕಾರ್ಯನಿರ್ವಹಿಸುವ ಪರಿಣಾಮ ಬೆನ್ನೆಲುಬು, ಕುತ್ತಿಗೆ ಹಾಗೂ ಸುತ್ತಮುತ್ತಲಿನ ಪ್ರಮುಖ ಸ್ನಾಯುಗಳ ಮೇಲೆ ಅತಿಯಾದ ಒತ್ತಡ ಬೀಳುತ್ತದೆ. ಮುಖ ಯೋಗವು ಈ ಭಾಗಗಳಲ್ಲಿನ ಒತ್ತಡವನ್ನು ತಗ್ಗಿಸಲು ನೆರವು ನೀಡುವ ಮೂಲಕ ಆರಾಮ ಒದಗಿಸುತ್ತದೆ.
3.ಎರಡು ಗಲ್ಲದ ಸಮಸ್ಯೆಗೆ ಮುಕ್ತಿ: ಅತಿಯಾದ ಕೊಬ್ಬು ಶೇಖರಣೆಯಿಂದ ಮುಖದ ಮೇಲೆ ಎರಡು ಗಲ್ಲವಿರುವಂತೆ ಕಾಣಿಸಿದರೆ, ಮುಖ ಯೋಗದ ಮೂಲಕ ಪರಿಹಾರ ಕಂಡುಕೊಳ್ಳಬಹುದು. ಕುತ್ತಿಗೆಗೆ ಸಂಬಂಧಿಸಿದ ಕೆಲವೊಂದು ವ್ಯಾಯಾಮಗಳನ್ನು ಮಾಡುವ ಮೂಲಕ ಈ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.
ಮುಖ ಯೋಗ ಮಾಡೋದು ಹೇಗೆ?: ಮುಖ ಯೋಗಕ್ಕೆ ಸಂಬಂಧಿಸಿದ ಕೆಲವು ವ್ಯಾಯಾಮಗಳು ಹೀಗಿವೆ:
1. ಮೊದಲಿಗೆ ತುಟಿ ಅರಳಿಸಿ ನಕ್ಕುಬಿಡಿ. ಬಳಿಕ ಮೀನಿನ ಮುಖ ಹೋಲುವಂತೆ ನಿಮ್ಮ ಕೆನ್ನೆಗಳನ್ನು ಒಳಗೆಳೆದುಕೊಳ್ಳಿ. ಈ ರೀತಿ ಮಾಡುವುದರಿಂದ ಕೆನ್ನೆಯ ಸ್ನಾಯುಗಳು ಬಲಗೊಳ್ಳುತ್ತವೆ.
2. ಈಗ ಮನೆಯ ಛಾವಣಿಯನ್ನು ನೋಡುತ್ತ ಅದಕ್ಕೆ ಮುತ್ತು ನೀಡುವ ಭಂಗಿಯಲ್ಲಿ 5 ನಿಮಿಷಗಳ ಕಾಲ ನಿಲ್ಲಿ. ಈ ವ್ಯಾಯಾಮವನ್ನು 4-5 ಬಾರಿ ಪುನರಾವರ್ತಿಸಿ. ಇದು ಕುತ್ತಿಗೆಯ ಸ್ನಾಯುಗಳನ್ನು ಬಲಪಡಿಸುತ್ತದೆ.
3. ಬಾಯಿ ಮೂಲಕ ದೀರ್ಘವಾಗಿ ಉಸಿರೆಳೆದುಕೊಳ್ಳಿ. ಬಳಿಕ ಆ ಗಾಳಿಯನ್ನು ಬಾಯಿಯೊಳಗೆ ಹಿಡಿದಿಟ್ಟುಕೊಂಡು ಒಂದು ಬದಿಯಿಂದ ಇನ್ನೊಂದು ಬದಿಗೆ ತಳ್ಳುವಂತಹ ಚಲನೆ ಮಾಡಿ. ಇದು ಕೆನ್ನೆಯ ಸ್ನಾಯುಗಳನ್ನು ಬಲಗೊಳಿಸುವ ಜತೆಗೆ ಅವು ತೆಳ್ಳಗಾಗದಂತೆ ತಡೆಯುತ್ತದೆ.
4. ಕಣ್ಣಿನ ಕೆಳಭಾಗದಲ್ಲಿ ಮೂಡುವ ನೆರಿಗೆಗಳನ್ನು ಹೋಗಲಾಡಿಸಲು ಕಣ್ಣುಗಳನ್ನು ಅಗಲವಾಗಿ ತೆರೆಯಬೇಕು (ಆಶ್ಚರ್ಯವಾದಾಗ ಮಾಡುತ್ತೀರಲ್ಲ ಹಾಗೇ). ಈ ಸಂದರ್ಭದಲ್ಲಿ ಕೈಗಳಿಂದ ಕಣ್ಣಿನ ಕೆಳಭಾಗದಲ್ಲಿರುವ ಚರ್ಮವನ್ನು ಹಿಂದಕ್ಕೆ ಎಳೆಯಬೇಕು.
5. ನಾಲಿಗೆಯನ್ನು ಬಾಯಿ ಮೇಲ್ಭಾಗಕ್ಕೆ ತಾಗಿಸಿ ಹಿಡಿದಿಟ್ಟುಕೊಳ್ಳಿ. ಬಳಿಕ ನಗು ಮೊಗದೊಂದಿಗೆ ಛಾವಣಿ ನೋಡಿ. ಈ ವ್ಯಾಯಾಮ ಗಲ್ಲ ಕುತ್ತಿಗೆಗೆ ಅಂಟಿಕೊಂಡಂತೆ ಕಾಣುವುದನ್ನು ತಡೆಯಲು ನೆರವು ನೀಡುತ್ತದೆ.

ಮತ್ತಷ್ಟು ಸುದ್ದಿಗಳು

vertical

Latest News

ಬಾಂಬೆ ಸಿಸ್ಟರ್ಸ್ ಖ್ಯಾತಿಯ ವಿದುಷಿ ಸಿ. ಲಲಿತ ಇನ್ನಿಲ್ಲ

newsics.com ಮುಂಬೈ: ಸುಶ್ರಾವ್ಯ ಕರ್ನಾಟಕ ಸಂಗೀತಕ್ಕೆ ಹೆಸರಾದ ಬಾಂಬೆ ಸಹೋದರಿಯರು ಖ್ಯಾತಿಯ ಸಿ. ಸರೋಜಾ - ಸಿ. ಲಲಿತಾ ಜೋಡಿಯಲ್ಲಿ ಕಿರಿಯರಾದ ಸಿ. ಲಲಿತಾ (85) ಮಂಗಳವಾರ...

ಕಾನೂನು ತಜ್ಞ, ಮಾಜಿ ಸಚಿವ ಶಾಂತಿ ಭೂಷಣ್ ನಿಧನ

newsics.com ನವದೆಹಲಿ: ಹಿರಿಯ ವಕೀಲ ಹಾಗೂ ಮಾಜಿ ಕಾನೂನು ಸಚಿವ ಶಾಂತಿ ಭೂಷಣ್ (97) ಮಂಗಳವಾರ ನಿಧನರಾದರು. ಇಂದು ಸಂಜೆ...

ಕನ್ಹಾ ಅಭಯಾರಣ್ಯದಲ್ಲಿ 5 ಮರಿಗಳಿಗೆ ಜನ್ಮ ನೀಡಿದ ಹುಲಿ

Newsics.Com ಮಧ್ಯಪ್ರದೇಶ: ಕನ್ಹಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ (ಕೆಟಿಆರ್‌) ಹುಲಿಯೊಂದು ಐದು ಮರಿಗಳಿಗೆ ಜನ್ಮ ನೀಡಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
- Advertisement -
error: Content is protected !!