newsics.com
ಕೇರಳದ ಆಯುರ್ವೇದ ವೈದ್ಯರೊಬ್ಬರು ಚರ್ಮದ ಸಮಸ್ಯೆಗಳಿಗೆ ಕಂಡುಹಿಡಿದ ವಿಶೇಷ ಸಾಬೂನು ಭಾರತ, ಇರಾನ್ ಸೇರಿ ಹಲವು ರಾಷ್ಟ್ರಗಳಲ್ಲಿ ಪ್ರಸಿದ್ಧಿ ಪಡೆದಿದೆ. ಇರಾನ್‌ನಲ್ಲಿ ಈ ಸೋಪು ಬರೋಬ್ಬರಿ 10,000 ರೂ.ಗೆ ಮಾರಾಟವಾಗುತ್ತಿದೆ.
ಈ ವೈದ್ಯರು 10 ವರ್ಷಗಳಿಗೂ ಹೆಚ್ಚು ಕಾಲ ಸಂಶೋಧನೆಯಲ್ಲಿ ತೊಡಗಿದ್ದು, ವಿಶಿಷ್ಟ ಫಾರ್ಮುಲಾದೊಂದಿಗೆ ಕೇಸರಿ ಮತ್ತು ಶುದ್ಧ ಕೆಂಪು ಚಂದನ ಉಪಯೋಗಿಸಿ ಸಾಬೂನು ತಯಾರಿಸಿದ್ದಾರೆ.
ನೈಸರ್ಗಿಕ ಸಾಬೂನುಗಳ ಈ ಫಾರ್ಮುಲಾದ ಸಂಪೂರ್ಣ ಹಕ್ಕನ್ನು ರತಿರಾ ಆಯುರ್ವೇದ ಪಡೆದುಕೊಂಡಿದ್ದು, ಈಗ ‘ರತಿರ ಕೇಸರ್’ ಎಂಬ ಹೆಸರಿನಲ್ಲಿ ಅನೇಕ ಜನರನ್ನು ತಲುಪಿದೆ. ಭಾರತದಲ್ಲಿ 226 ರೂ ಬೆಲೆ ಯಿದ್ದು, ದಿನದಿಂದ ದಿನಕ್ಕೆ ಈ ನೈಸರ್ಗಿಕ ಸೋಪಿನ ಬೇಡಿಕೆ ತುಂಬಾ ಹೆಚ್ಚುತ್ತಿದೆ.
ಚುನಾವಣಾ ಹೊಸ್ತಿಲಲ್ಲೇ ಬದಲಾವಣೆ: ರಾಜ್ಯ ಬಿಜೆಪಿ ಸಂಘಟನಾ ಕಾರ್ಯದರ್ಶಿಯಾಗಿ ರಾಜೇಶ್ ಕುಂತೂರು ನಿಯೋಜನೆ