ದೇಹದಿಂದ ವಿಷವನ್ನು ಹೊರಹಾಕಲು ಬೆವರುವಿಕೆ ಪರಿಣಾಮಕಾರಿ. ಆಲ್ಕೋಹಾಲ್, ಕೊಲೆಸ್ಟ್ರಾಲ್, ಉಪ್ಪಿನ ಪದಾರ್ಥಗಳನ್ನು ಹೊರಹಾಕುತ್ತದೆ. ಬೆವರು ಕಲ್ಮಶಗಳಿಂದ ದೇಹವನ್ನು ಶುದ್ಧೀಕರಿಸುತ್ತದೆ.
• ಡಾ.ಅಹಲ್ಯಾ
newsics.com@gmail.com
ಬೆವರು ಎಂದರೆ ದುರ್ಗಂಧ ಎಂದು ಅಸಹ್ಯಪಡುವವರಿಗೇನೂ ಕಡಿಮೆ ಇಲ್ಲ. ಆದರೆ ಅದೇ ಬೆವರಿನಿಂದ ದೇಹಕ್ಕೆ ಪ್ರಯೋಜನವಿದೆ ಎಂಬ ವಿಚಾರ ಅನೇಕರಿಗೆ ತಿಳಿದಿಲ್ಲ! ನಮ್ಮ ದೇಹ ಉತ್ಪಾದನೆ ಮಾಡುವ 1 ಲೀಟರ್ ಬೆವರು ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ ಹಾಗೂ ಆರೋಗ್ಯಕರ ಕಾಣುವ ಚರ್ಮವನ್ನು ನೀಡುತ್ತದೆ. ಬೆವರುವುದರಿಂದ ದೇಹದಲ್ಲಿ ರಕ್ತ ಸಂಚಾರ . ಬೆವರುವುದು ದೇಹ ಹಾಗೂ ಚರ್ಮ ಬಿಸಿಯಾಗದಂತೆ ರಕ್ಷಿಸುವ ಮಾರ್ಗವಾಗಿದೆ.
ತೀವ್ರ ನಡಿಗೆ ಹಾಗೂ ವ್ಯಾಯಾಮದಿಂದ ಬೆವರು ಉಂಟಾಗುತ್ತದೆ. ದೈಹಿಕ ಚಟುವಟಿಕೆ ಸಮಯದಲ್ಲಿ ಬಿಡುಗಡೆ ಆಗುವ ಬೆವರು ಎಂಡಾರ್ಫಿನ್ ಹಾರ್ಮೋನುಗಳ ಮಟ್ಟ ಹೆಚ್ಚಿಸುತ್ತದೆ. ಇದು ಸಂತೋಷದ ಹಾರ್ಮೋನ್ ಆಗಿದೆ.
ದೇಹದಿಂದ ವಿಷವನ್ನು ಹೊರಹಾಕಲು ಬೆವರುವಿಕೆ ಪರಿಣಾಮಕಾರಿ. ಆಲ್ಕೋಹಾಲ್, ಕೊಲೆಸ್ಟ್ರಾಲ್, ಉಪ್ಪಿನ ಪದಾರ್ಥಗಳನ್ನು ಹೊರಹಾಕುತ್ತದೆ. ಬೆವರು ಕಲ್ಮಶಗಳಿಂದ ದೇಹವನ್ನು ಶುದ್ಧೀಕರಿಸುತ್ತದೆ. ಈ ಮೂಲಕ ತ್ವಚೆಯ ರಂಧ್ರ ಮುಚ್ಚಿ ಮೊಡವೆಗಳು, ಕಲೆಗಳು ಆಗದಂತೆ ನೋಡಿಕೊಳ್ಳುತ್ತದೆ.
ಬೆವರುವಿಕೆ ಉಪ್ಪಿನಂಶವನ್ನು ಹೊರಹಾಕಿ ಮೂಳೆಗಳ ಕ್ಯಾಲ್ಸಿಯಂನ್ನು ಉಳಿಸಿಕೊಳ್ಳಲು ನೆರವಾಗುತ್ತದೆ. ಹೆಚ್ಚು ಬೆವರುವ ಜನರು ಜಾಸ್ತಿ ನೀರು ಕುಡಿಯುತ್ತಾರೆ. ಇದು ಮೂತ್ರಪಿಂಡದಲ್ಲಿ ಕಲ್ಲುಗಳನ್ನು ತಡೆಗಟ್ಟುವ ವಿಧಾನವಾಗಿದೆ.
ಬೆವರು ಕ್ಷಯರೋಗ ಸೂಕ್ಷ್ಮ ಜೀವಿಗಳಿಂದ , ಇತರ ಅಪಾಯಕಾರಿ ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಬೆವರಿದಾಗ ಚರ್ಮದ ರಂಧ್ರಗಳು ತೆರೆದುಕೊಳ್ಳುತ್ತದೆ.ಇದರಿಂದ ಕೊಳೆಗಳು ಹೊರಹೋಗಿ ತ್ವಚೆ ಶುದ್ಧವಾಗುತ್ತದೆ.