Thursday, December 9, 2021

ಕೊರೋನಾ: ಮಧುಮೇಹಿಗಳೇ, ಎಚ್ಚರದಿಂದಿರಿ, ಭಯ ಬೇಡ

Follow Us

ಕೊರೋನಾ ವೈರಸ್ ಮಧುಮೇಹಿಗಳಿಗೆ ಅಪಾಯಕಾರಿಯೇ? ರೋಗವೇ ಅಲ್ಲದ ಸಮಸ್ಯೆಯಾಗಿರುವ ಮಧಮೇಹವಿದ್ದಾಗ ಕೊರೋನಾ ಏನು ಮಾಡಬಲ್ಲದು? ಮಧುಮೇಹಿಗಳು ಏನು ಮಾಡಬೇಕು?

response@134.209.153.225
newsics.com@gmail.com

ಕೊರೋನಾ ವೈರಸ್ ದಿನೇ ದಿನೆ ವ್ಯಾಪಕವಾಗಿ ಹರಡುತ್ತ ಎಲ್ಲೆಡೆ ಕಳವಳ ಮೂಡಿಸುತ್ತಿದೆ. ಬಹುತೇಕ ವಿಶ್ವದ ಎಲ್ಲೆಡೆ ಕಂಡುಬಂದಿರುವ ಕೊರೋನಾ ವೈರಸ್ ಗೆ ಜಾಗತಿಕ ಆರ್ಥಿಕತೆಯೇ ಕುಸಿತದ ಭೀತಿಯಲ್ಲಿದೆ. ಅಷ್ಟಕ್ಕೂ ಎಲ್ಲೋ ದೂರದಲ್ಲಿದ್ದ ವೈರಸ್ ಒಂದು ಈಗ ಮನೆಯಂಗಳಕ್ಕೇ ಬರುವಂತಾಗಿದ್ದು ಹೇಗೆ? ಈಗ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳೇನು? ಎಲ್ಲಕ್ಕಿಂತ ಮುಖ್ಯವಾಗಿ, ಮಧುಮೇಹದಂಥ ರೋಗವಲ್ಲದ ಸಮಸ್ಯೆಯೊಂದಿಗೆ ದಿನವೂ ಹೆಣಗಾಡುವವರು ಏನು ಮಾಡಬೇಕು? ವಿಶ್ವ ಆರೋಗ್ಯ ಸಂಸ್ಥೆಯ ಮಾಹಿತಿ ಪ್ರಕಾರ ಇಲ್ಲಿ ಒಂದಷ್ಟು ಮಾಹಿತಿ.
ಅಸಲಿಗೆ ಏನಿದು ಕೊರೋನಾ?
ಅಮೆರಿಕದ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಆಂಡ್ ಪ್ರಿವೆನ್ಷನ್ (ಸಿಡಿಸಿ) ಮಾಹಿತಿ ಪ್ರಕಾರ, ಕೊರೋನಾ ವೈರಸ್ ಗಳ ಬಹುದೊಡ್ಡ ಕುಟುಂಬ
ಕೊ ಪ್ರಾಣಿಗಳಲ್ಲಿ ಸಾಮಾನ್ಯ. ಅಪರೂಪದ ಪ್ರಕರಣಗಳಲ್ಲಿ ಮಾತ್ರವೇ ಮನುಷ್ಯರಿಗೆ ಹರಡುತ್ತದೆ. ಈಗ ಆಗಿರುವುದೂ ಅದೇ. ಕೋವಿಡ್-19 ವೈರಸ್ ಕಳೆದ ಡಿಸೆಂಬರ್ ನಲ್ಲಿ ಚೀನಾದ ಅತಿದೊಡ್ಡ ಸಮುದ್ರ ಹಾಗೂ ಪ್ರಾಣಿಗಳ ಮಾರುಕಟ್ಟೆಯಾಗಿರುವ ವುಹಾನ್ ನಲ್ಲಿ ಕಾಣಿಸಿಕೊಂಡು ಈಗ ವಿಶ್ವಕ್ಕೇ ಹರಡಿದೆ.
ಸೋಂಕು ಹರಡುವಲ್ಲಿ ಮುಂದಿನ ಕೆಲವು ದಿನಗಳು ಬಹಳ ಸೂಕ್ಷ್ಮ ಅವಧಿಯಾಗಿದೆ. ಒಂದೊಮ್ಮೆ ಮಧುಮೇಹಿಗಳಿಗೆ ಸೋಂಕು ಬಂದಲ್ಲಿ ಏನು ಮಾಡಬೇಕು ಎಂದು ಆತಂಕ ಪಡುವವರಿದ್ದಾರೆ. ಈ ಸೋಂಕು ಹೆಚ್ಚಿನ ತೀವ್ರತೆ ಹೊಂದಿಲ್ಲವಾದರೂ ಮಧುಮೇಹಿಗಳಿಗೆ ಹೆಚ್ಚಿನ ಅಪಾಯ ತರಬಹುದು ಎಂದು ಅಮೆರಿಕದ ಡಯಾಬಿಟೀಸ್ ಅಸೋಸಿಯೇಷನ್ ಹೇಳಿದೆ.
ಮಧುಮೇಹಿಗಳಿಗೆ ಯಾವುದೇ ರೀತಿಯ ಫ್ಲೂ ಬರುವ ಸಾಧ್ಯತೆ ಅಧಿಕವಾಗಿರುತ್ತದೆ. ನ್ಯೂಮೋನಿಯಾ ಕೂಡ ಅಧಿಕ. ಹೀಗಾಗಿ, ಕೋವಿಡ್-19 ಬರುವ ಸಾಧ್ಯತೆಯನ್ನೂ ಅಲ್ಲಗಳೆಯಾಗದು. ಏಕೆಂದರೆ, ಮಧುಮೇಹಿಗಳಲ್ಲಿ ಸಾಮಾನ್ಯವಾಗಿ ಗ್ಲುಕೋಸ್ ಮಟ್ಟ ನಿರಂತರವಾಗಿ ಏರುಪೇರಾಗುತ್ತಿರುತ್ತದೆ. ಆದರೆ, ಮಧುಮೇಹಿಗಳಿಗೆ ಕೋವಿಡ್-19 ವೈರಸ್ ಸೋಂಕು ಬಂದರೆ ಮೃತರಾಗುತ್ತಾರೆ ಎನ್ನುವುದಕ್ಕೆ ಯಾವುದೇ ಪುರಾವೆಗಳಿಲ್ಲ.
ಅಮೆರಿಕದ ಮೆಡಿಕಲ್ ಅಸೋಸಿಯೇಷನ್ ಪ್ರಕಾರ, ಕೆಲವು ಸಮಸ್ಯೆ ಉಳ್ಳವರಲ್ಲಿ ಸಾವಿನ ಪ್ರಮಾಣ ಹೆಚ್ಚಾಗಬಹುದು. ಅವುಗಳೆಂದರೆ,
• ಹೃದಯ ಸಮಸ್ಯೆ ಉಳ್ಳವರಲ್ಲಿ ಶೇ.10.5ರಷ್ಟು
• ಮಧುಮೇಹಿಗಳಲ್ಲಿ ಶೇ.7.3
• ಉಸಿರಾಟದ ತೊಂದರೆ ಉಳ್ಳವರಲ್ಲಿ ಶೇ.6.3ರಷ್ಟು
• ಹೈಪರ್ ಟೆನ್ಷನ್ ಉಳ್ಳವರಲ್ಲಿ ಶೇ.6.0ರಷ್ಟು
• ಕ್ಯಾನ್ಸರ್ ಬಾಧಿತರಲ್ಲಿ ಶೇ.5.6ರಷ್ಟು.
ಪ್ರತಿಯೊಬ್ಬರೂ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು: 
. ಯಾರೊಂದಿಗೂ ನಿಕಟ ಸಂಪರ್ಕ ಬೇಡ. ತೀರ ಅಗತ್ಯವಾದಲ್ಲಿ ಕನಿಷ್ಠ ಪಕ್ಷ ಎರಡು ಮೀಟರ್ ಅಂತರ ಕಾಯ್ದುಕೊಳ್ಳಿ.
. ಆಗಾಗ ಮುಖ ಮುಟ್ಟಿಕೊಳ್ಳುವ ಅಭ್ಯಾಸವನ್ನು ಕೈಬಿಡಿ.
. ಹಸ್ತಲಾಘವ ಮಾಡುವುದರಿಂದ ದೂರವಿರಿ. ಸೋಪು ಮತ್ತು ನೀರಿನಿಂದ ಪದೇ ಪದೆ ಕೈಗಳನ್ನು ತೊಳೆದುಕೊಳ್ಳಿ. ಒಂದೊಮ್ಮೆ ಸೋಪು ಮತ್ತು ನೀರು ಲಭ್ಯವಿಲ್ಲವಾದರೆ ಮಾರುಕಟ್ಟೆಯಲ್ಲಿ ಸಿಗುವ ಕೈಗಳನ್ನು ಉಜ್ಜಬಹುದಾದ ರಬ್ಗಳಿಂದ ಸ್ವಚ್ಛ ಮಾಡಿಕೊಳ್ಳಿ.
. ಸಾಕಷ್ಟು ದ್ರವಾಹಾರ ತೆಗೆದುಕೊಳ್ಳಿ.
. ಕೆಮ್ಮುವಾಗ ಬಾಯಿ ಮತ್ತು ಮೂಗನ್ನು ಟಿಶ್ಯೂ/ ಕರವಸ್ತ್ರದಿಂದ ಮುಚ್ಚಿಕೊಳ್ಳಿ. ಅಕಸ್ಮಾತ್ ಟಿಶ್ಯೂ, ಕರವಸ್ತ್ರ ಲಭ್ಯವಿಲ್ಲವಾದರೆ ನಿಮ್ಮದೇ ತೋಳನ್ನು ಅಡ್ಡ ಹಿಡಿದುಕೊಳ್ಳಿ. ಕೆಮ್ಮುವಾಗ, ಕೈಗಳಿಗೆ ನೇರವಾಗಿ ಸೀನುವುದಾಗಲೀ ಕೆಮ್ಮುವುದಾಗಲೀ ಮಾಡಬಾರದು.
. ಕೆಮ್ಮುವಾಗ ಅಥವಾ ಸೀನುವಾಗ ಇತರರಿಂದ ಪಕ್ಕಕ್ಕೆ ತಿರುಗಿ.
. ಅಲ್ಲಲ್ಲಿ ಮೂಗಿನಿಂದ ಸಿಂಬಳ ತೆಗೆದು ಹಾಕುವುದು, ಉಗುಳುವುದು ಮಾಡಬೇಡಿ. ಮೂಗಿನಿಂದ ನೀರು ಅಥವಾ ಸಿಂಬಳ ಬರುತ್ತಿದ್ದರೆ ಕರವಸ್ತ್ರ ಬಳಸಿ, ಇಲ್ಲವೇ ನೀರಿನಿಂದ ಕೂಡಿರುವ ಹೀರುವ ಟಿಶ್ಯೂ ಬಳಸಿ.
. ಸೋಂಕಿತರು ಮನೆಯಲ್ಲೇ ಇರಿ. ಮುಖ್ಯವಾಗಿ ಎಲ್ಲರಿಂದ ಆತ/ಆಕೆ ಪ್ರತ್ಯೇಕವಾಗಿರಬೇಕು. ಉತ್ತಮವಾಗಿ ಗಾಳಿ-ಬೆಳಕು ಇರುವ ಕೋಣೆಯಲ್ಲಿರಬೇಕು. ಮನೆಯ ಇತರ ಸದಸ್ಯರು ಪದೇ ಪದೆ ಬಳಕೆ ಮಾಡುವಂಥ ಸ್ಥಳವಾಗಿರಬಾರದು.

ಮಧುಮೇಹಿಗಳು ಏನು ಮಾಡಬೇಕು?
• ಪದೇ ಪದೆ ಕೈಗಳನ್ನು ಸ್ವಚ್ಛ ಮಾಡಿಕೊಳ್ಳಬೇಕು.
• ಜ್ವರ, ಕೆಮ್ಮು, ಉಸಿರಾಟದ ತೊಂದರೆ ಕಂಡುಬಂದರೆ ತಕ್ಷಣ ವೈದ್ಯರನ್ನು ಕಾಣುವುದು.
• ಉಸಿರಾಟದ ತೊಂದರೆಯುಳ್ಳವರಿಂದ ದೂರವಿರುವುದು.
• ಸಾಧ್ಯವಾದಷ್ಟು ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡದಿರುವುದು.
• ಕೆಮ್ಮುವಾಗ, ಸೀನುವಾಗ ಬೇರೆಯವರಿಂದ ಅಂತರ ಕಾಯ್ದುಕೊಳ್ಳುವುದು.
• ಮಧುಮೇಹದ ಮಾತ್ರೆಗಳನ್ನು ನಿಯಮಿತವಾಗಿ ತೆಗೆದುಕೊಂಡು ಸಕ್ಕರೆ ಮಟ್ಟ ಕಾಯ್ದುಕೊಳ್ಳುವುದು. ಇನ್ಸುಲಿನ್ ತೆಗೆದುಕೊಳ್ಳುವವರಾಗಿದ್ದರೆ ನಾಲ್ಕಾರು ದಿನಗಳ ಮಟ್ಟಿಗಾದರೂ ಸಂಗ್ರಹ ಇರಿಸಿಕೊಳ್ಳುವುದು ಉತ್ತಮ.
• ದಿನವೂ ದೈಹಿಕ ಚಟುವಟಿಕೆ ಮಾಡುವುದು, ಉತ್ತಮ ಆಹಾರ ಸೇವಿಸುವುದು.

ಮತ್ತಷ್ಟು ಸುದ್ದಿಗಳು

Latest News

ಹೆಲಿಕಾಪ್ಟರ್ ಪತನದ ಹಿಂದೆ ಚೀನಾ ಕೈವಾಡ: ಸಂಸದ ಸುಬ್ರಮಣಿಯನ್ ಸ್ವಾಮಿ ಶಂಕೆ, ತನಿಖೆಗೆ ಆಗ್ರಹ

newsics.com ನವದೆಹಲಿ: ಸೇನಾ ಹೆಲಿಕಾಪ್ಟರ್ ಪತನದ ಹಿಂದೆ ಚೀನಾ ಕೈವಾಡವಿದೆಯಾ ಎಂಬ ಸಂಶಯವನ್ನು ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ವ್ಯಕ್ತಪಡಿಸಿದ್ದಾರೆ. ಇದೊಂದು ಗಂಭೀರ ದುರಂತವಾಗಿದ್ದು, ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ...

ಪ್ರಧಾನಮಂತ್ರಿ ಆವಾಜ್ ಯೋಜನೆ 3 ವರ್ಷ ವಿಸ್ತರಣೆ: ಕೇಂದ್ರ ನಿರ್ಧಾರ

newsics.com ನವದೆಹಲಿ: ಮೂರು ವರ್ಷ ಕಾಲ ಪ್ರಧಾನಮಂತ್ರಿ ಆವಾಜ್‌ ಯೋಜನೆ (ಗ್ರಾಮೀಣ) ವಿಸ್ತರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ದೇಶದ ಗ್ರಾಮೀಣ ಪ್ರದೇಶದಲ್ಲಿ ಅರ್ಹರಿಗೆ ವಸತಿ ಕಲ್ಪಿಸುವ ಈ ಯೋಜನೆಯನ್ನು ವಿಸ್ತರಿಸಲು ಕೇಂದ್ರ ಸಚಿವ ಸಂಪುಟ ನಿರ್ಧರಿಸಿದೆ. ಪ್ರಧಾನಿ...

ದೆಹಲಿಯಲ್ಲಿ ಶುಕ್ರವಾರ ರಾವತ್ ದಂಪತಿ ಅಂತ್ಯಕ್ರಿಯೆ, ಉತ್ತರಾಖಂಡದಲ್ಲಿ 3 ದಿನ ಶೋಕಾಚರಣೆ

newsics.com ನವದೆಹಲಿ: ತಮಿಳುನಾಡಿನಲ್ಲಿ ನಡೆದಿರುವ ಸೇನಾ ಹೆಲಿಕಾಪ್ಟರ್ ಪತನದಲ್ಲಿ ನಿಧನರಾಗಿರುವ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹಾಗೂ ಅವರ ಪತ್ನಿ ಮಧುಲಿಕಾ ಅವರ ಅಂತ್ಯಕ್ರಿಯೆ ಶುಕ್ರವಾರ(ಡಿ.10) ನಡೆಯಲಿದೆ. ಹೆಲಿಕಾಪ್ಟರ್ ದುರಂತದಲ್ಲಿ ಸಾವಿಗೀಡಾಗಿರುವ ಮೂರು ಸೇನಾ ಪಡೆಗಳ...
- Advertisement -
error: Content is protected !!