Saturday, December 2, 2023

ಕೊರೋನಾದಿಂದ ಮಿದುಳಿನ ಬೂದು ಭಾಗ ಕುಂಠಿತ…

Follow Us

ಯೋಗ, ಉಸಿರಾಟದ ವ್ಯಾಯಾಮಕ್ಕೆ ಮೊರೆ ಹೋಗುವ ಸಮಯ

ಕೊರೋನಾ ಸೋಂಕಿನಿಂದ ಮಿದುಳಿನ ಬೂದು ಭಾಗ ಕುಗ್ಗುತ್ತದೆ ಎನ್ನುವುದು ಜಾರ್ಜಿಯಾ ವಿಶ್ವವಿದ್ಯಾಲಯದ ಸಂಶೋಧನೆಯಿಂದ ಸಾಬೀತಾಗಿದೆ. ಮಿದುಳಿನ ಕಾರ್ಯಕ್ಷಮತೆ ಹಾಗೂ ಸದೃಢತೆಗೆ ಯೋಗ, ಪ್ರಾಣಾಯಾಮಗಳು ಅತ್ಯಂತ ಸಹಕಾರಿಯಾಗಬಲ್ಲವು.

♦ ಡಾ. ಸುಮನ್
newsics.com@gmail.com

ಕೊರೋನಾ ಸೋಂಕಿನಿಂದ ಗುಣಮುಖರಾಗಿದ್ದರೂ ನಂತರದ ಪರಿಣಾಮಗಳಿಗೆ ಜನ ಬೇಸತ್ತು ಹೋಗಿದ್ದಾರೆ. ತಿಂಗಳಾದರೂ ಇನ್ನೂ ಗಂಟಲು ಕೆರೆತ ನಿಂತಿಲ್ಲ, ತಲೆ ಭಾರವಾಗುವುದು ಹೋಗಿಲ್ಲ, ಬಾಳೆಹಣ್ಣು, ಮಾವಿನಹಣ್ಣು ಸೇವನೆ ಮಾಡಿದರೂ ಶೀತವಾಗುತ್ತದೆ ಎಂದು ದೂರು ಹೇಳಿಕೊಳ್ಳುವವರು ಅಧಿಕವಾಗಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ, ಪೋಸ್ಟ್ ಕೋವಿಡ್ ರೋಗಿಗಳಲ್ಲಿ ಮಾನಸಿಕ ಸ್ವಾಸ್ಥ್ಯ ಸ್ವಲ್ಪ ಕುಸಿದಿರುವುದು ಸಹ ಕಂಡುಬರುತ್ತಿದೆ.
ನೆನಪಿನ ಶಕ್ತಿ ಅಲ್ಪ ಕುಂಠಿತವಾಗುವುದು, ಏಕಾಗ್ರತೆಯ ಕೊರತೆ, ಖಿನ್ನತೆ, ಉದ್ವೇಗದಂಥ ಸಮಸ್ಯೆಗಳು ಸಾಮಾನ್ಯವಾಗಿವೆ. ಇದರಿಂದಾಗಿ ಬಹುಬೇಗ ಕೋಪ, ಬೇಸರಗಳು ಉಂಟಾಗುತ್ತಿವೆ. ಈ ಭಾವನೆಗಳು ಕೆಲವೇ ಸಮಯವಿದ್ದು  ಮಾಯವಾದರೆ ಯಾರಿಗೂ ಏನೂ ಸಮಸ್ಯೆಯಿಲ್ಲ. ಆದರೆ, ದೀರ್ಘಕಾಲ ಮುಂದುವರಿದರೆ ಮಾನಸಿಕ ಸಮಸ್ಯೆಯಾಗಿ ಪರಿಣಮಿಸುವ ಅಪಾಯವಿರುತ್ತದೆ.
ಇತ್ತೀಚೆಗಷ್ಟೇ ಜಾರ್ಜಿಯಾ ವಿಶ್ವವಿದ್ಯಾಲಯದ ತಜ್ಞರು ನಡೆಸಿದ್ದ ಅಧ್ಯಯನವೊಂದು ಮಿದುಳಿನ ಮೇಲೆ ಕೊರೋನಾ ಸೋಂಕು ಮಾಡುವ ಪರಿಣಾಮಗಳ ಬಗ್ಗೆ ಬೆಳಕು ಚೆಲ್ಲಿದೆ. ತೀವ್ರವಾಗಿ ಸೋಂಕಿತರಾದವರು, ಮೆಡಿಕಲ್ ಆಕ್ಸಿಜನ್ ಬಳಕೆ ಮಾಡಿದವರಲ್ಲಿ ಮಿದುಳಿನ ಗ್ರೇ ಮ್ಯಾಟರ್  ಅಥವಾ ಬೂದು ಭಾಗ ಕುಂಠಿತವಾಗಿರುವುದು ಕಂಡುಬಂದಿದೆ. ಈ ಕುರಿತ ತಜ್ಞರ ವರದಿ ನ್ಯೂರೋಬಯಾಲಜಿ ಆಫ್ ಸ್ಟ್ರೆಸ್ ಎನ್ನುವ ನಿಯತಕಾಲಿಕದಲ್ಲಿ ಪ್ರಕಟವಾಗಿದೆ.
ದೀರ್ಘಕಾಲ ಆಮ್ಲಜನಕ, ವೆಂಟಿಲೇಟರ್ ಬೆಂಬಲ ಬೇಕಾದ ಕೋವಿಡ್ ರೋಗಿಗಳಲ್ಲಿ ಈ ಅಪಾಯ ಹೆಚ್ಚಾಗಿದೆ ಎಂದು ಅಲ್ಲಿನ ತಜ್ಞರು ಹೇಳಿದ್ದಾರೆ.
ಬೂದು ಭಾಗ ಕುಗ್ಗುವುದೇಕೆ?
ಮಿದುಳಿನ ಬೂದು ಭಾಗ ಕೇಂದ್ರ ನರಮಂಡಲ ವ್ಯವಸ್ಥೆಯಲ್ಲಿ ಹರಡಿಕೊಂಡಿದ್ದು, ವ್ಯಕ್ತಿಯ ಚಲನೆ, ಸ್ಮರಣೆ, ಭಾವನೆಗಳನ್ನು ನಿಯಂತ್ರಿಸುತ್ತದೆ. ನರಗಳ ಕೋಶಗಳನ್ನು ಒಳಗೊಂಡಿರುವ ಬೂದು ಭಾಗ ನಿಜವಾಗಿ ತೆಳು ಗುಲಾಬಿ ಬಣ್ಣದಲ್ಲಿರುತ್ತದೆ. ಮಾಂಸಖಂಡಗಳ ನಿಯಂತ್ರಣ, ಕೇಳುವುದು, ಮಾತು, ನಿರ್ಧಾರ ಕೈಗೊಳ್ಳುವ ಹಾಗೂ ಸ್ವಯಂ ನಿಯಂತ್ರಣದಂಥ ಬಹುಮುಖ್ಯ ವ್ಯವಸ್ಥೆಗಳನ್ನು ಬೂದು ಭಾಗ ಒಳಗೊಂಡಿದೆ.

ಅಸಲಿಗೆ, ಮಿದುಳಿನ ಬೂದು ಭಾಗ ಅನೇಕ ಕಾರಣಗಳಿಂದ ಕುಗ್ಗುತ್ತದೆ. ದೇಹಕ್ಕೆ ಬೇಕಾದಷ್ಟು ಪ್ರಮಾಣದ ನೀರು ಸೇವನೆ ಮಾಡದಿದ್ದರೂ ಬೂದು ಪ್ರದೇಶ ಕುಗ್ಗುತ್ತದೆ ಎನ್ನುವುದು ಸಂಶೋಧನೆಗಳಿಂದ ತಿಳಿದುಬಂದಿದೆ. ಧೂಮಪಾನ, ಮದ್ಯಪಾನಗಳಿಂದಲೂ ಕುಂಠಿತವಾಗುತ್ತದೆ.
ಇದೀಗ, ಕೋವಿಡ್-19 ಸೋಂಕು ಸಹ ಮಿದುಳಿನ ಬೂದು ಭಾಗವನ್ನು ಕುಗ್ಗಿಸುತ್ತಿದೆ ಎನ್ನುವುದು ತಿಳಿದುಬಂದಿದೆ.
ಯೋಗದಿಂದ ಬೂದು ಭಾಗ ದೃಢ
ಯೋಗ, ಪ್ರಾಣಾಯಮಗಳು ಈ ನಿಟ್ಟಿನಲ್ಲಿ ಅತ್ಯಂತ ಸಹಕಾರಿಯಾಗಿವೆ. ಯೋಗದ ಕೆಲವು ನಿರ್ದಿಷ್ಟ ಆಸನಗಳು, ಉಸಿರಾಟದ ವ್ಯವಸ್ಥೆಯೊಂದಿಗೆ ಮಿದುಳಿನ ಕಾರ್ಯಕ್ಷಮತೆಯನ್ನೂ ಸಹ ಉದ್ದೀಪನಗೊಳಿಸುತ್ತವೆ. ಯೋಗ ಹಾಗೂ ಹಲವು ಪ್ರಕಾರದ ಪ್ರಾಣಾಯಾಮಗಳು ಮಿದುಳಿನ ಬೂದು ಭಾಗದ ಸಾಂದ್ರತೆ ಹೆಚ್ಚಿಸುತ್ತವೆ. ಅಲ್ಲದೆ, ಹಿಪ್ಪೊಕ್ಯಾಂಪಸ್, ಮುಮ್ಮೆದುಳು ಭಾಗವನ್ನು ಸಕ್ರಿಯಗೊಳಿಸುತ್ತವೆ. ಇವುಗಳೊಂದಿಗೆ ಏಕಾಗ್ರತೆ, ಭಾವನಾತ್ಮಕ ನಿಯಂತ್ರಣ ಸಾಧ್ಯವಾಗುತ್ತದೆ. ದುಡುಕುತನ ಮಾಯವಾಗುತ್ತದೆ. ಸೂಪರ್ ಬ್ರೇನ್ ಯೋಗ ಎಂದೇ ಕರೆಯಲಾಗುವ ಬಸ್ಕಿ ಹೊಡೆಯುವುದರಿಂದಲೂ, ಧ್ಯಾನದಿಂದಲೂ ಮಿದುಳು ಸಕ್ರಿಯವಾಗುತ್ತದೆ.

ಹೀಗಾಗಿಯೇ, ಕೋವಿಡ್ ಸಮಯದಲ್ಲಿ ಉಸಿರಾಟದ ವ್ಯಾಯಾಮಗಳನ್ನು ಮಾಡುವ ಬಗ್ಗೆ ಮೊದಲಿನಿಂದಲೂ ತಜ್ಞರು ಹೇಳುತ್ತಲೇ ಬಂದಿದ್ದಾರೆ. ಕೋವಿಡ್ ಎಂದಲ್ಲ, ಇವುಗಳನ್ನು ನಮ್ಮ ದೈನಂದಿನ ಬದುಕಿನ ಭಾಗವನ್ನಾಗಿ ಮಾಡಿಕೊಂಡರೆ ವಯಸ್ಸಾದಂತೆ ಕಂಡುಬರುವ ಮರೆವು ಸಮಸ್ಯೆಯೂ ದೂರವಾಗಿ, ಇರುವಷ್ಟು ದಿನ ಸಕ್ರಿಯವಾಗಿರಲು ಸಾಧ್ಯವಾಗುತ್ತದೆ.
ಇವು ಭಾವನೆಗಳ ಏರಿಳಿತಕ್ಕೂ ಮದ್ದಾಗಬಲ್ಲವು. ಇನ್ನೂ ಸಮಸ್ಯೆ ಇದ್ದರೆ ಇವುಗಳ ನಿಯಂತ್ರಣಕ್ಕೂ ಹಲವಾರು ಚಿಕಿತ್ಸೆ ಲಭ್ಯ. ತಜ್ಞರನ್ನು ಕಂಡು ಸೂಕ್ತ ಮೇಲ್ವಿಚಾರಣೆಯೊಂದಿಗೆ ಚಿಕಿತ್ಸೆ ಮಾಡಿಕೊಳ್ಳುವುದು ಮುಖ್ಯ.

ಮತ್ತಷ್ಟು ಸುದ್ದಿಗಳು

vertical

Latest News

ನೀವು ಭಯಗೊಂಡಾಗ ದೇಹದಲ್ಲಿ ಏನಾಗುತ್ತದೆ ಗೊತ್ತಾ?

ಭಯವು ಸಾಮಾನ್ಯ ಭಾವನೆಯಾಗಿದೆ. ಪ್ರತಿಯೊಬ್ಬರೂ ಒಂದಲ್ಲ ಒಂದು ಹಂತದಲ್ಲಿ ಹೆದರುತ್ತಾರೆ. ಆದರೆ ಕೆಲವರು ಸಣ್ಣ ವಿಷಯಗಳಿಗೂ ತುಂಬಾ ಹೆದರುತ್ತಾರೆ. ಅವರು ಯಾಕೆ ಹೆದರುತ್ತಾರೆ ಎಂದು ಅವರಿಗೆ ತಿಳಿದಿಲ್ಲ. ಕೆಲವರು ಹಾರರ್ ಸಿನಿಮಾಗಳನ್ನು...

ಹೂವು ಬಿಡಿಸಲು ಹೋಗಿದ್ದಾಗ ವಿದ್ಯುತ್ ತಂತಿ ತುಳಿದು ಮಹಿಳೆ ಸಾವು

newsics.com ದಾವಣಗೆರೆ: ಪಂಪ್​ಸೆಟ್​​ಗೆ ಅಳವಡಿಸಿದ್ದ ವಿದ್ಯುತ್ ತಂತಿ ತುಳಿದು ಮಹಿಳೆ ಸಾವನ್ನಪ್ಪಿದ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ  ಬಸವರಾಜಪುರದಲ್ಲಿ ನಡೆದಿದೆ. ಅಲಿಬಾಯಿ(62) ಮೃತ ರ್ದುದೈವಿ. ಹೂವು ಬಿಡಿಸಲು ಹೋಗಿದ್ದಾಗ ಈ ದುರ್ಘಟನೆ ನಡೆದಿದೆ. ಸ್ಥಳಕ್ಕೆ ಬಸವಪಟ್ಟಣ...

ಜೈ ಶ್ರೀರಾಮ್‌ ಹೇಳುವಂತೆ ಗಡ್ಡಕ್ಕೆ ಬೆಂಕಿ ಹಚ್ಚಿ ವೃದ್ಧನ ಮೇಲೆ ಹಲ್ಲೆ

newsics.com ಕೊಪ್ಪಳ :  65 ವರ್ಷದ ಅಂಧ ಮುಸ್ಲಿಂ ವೃದ್ಧನಿಗೆ ಇಬ್ಬರು ಅನಾಮಿಕ ವ್ಯಕ್ತಿಗಳು ಗಂಗಾವತಿ ಟೌನ್‌ನಲ್ಲಿ ಕಿರುಕುಳ ನೀಡಿದ ಘಟನೆ ನಡೆದಿದೆ. ಗಂಗಾವತಿಯಲ್ಲಿ ಒಂದು ಕಪ್‌ ಚಹಾ ಕುಡಿದು ಆಟೋರಿಕ್ಷಾಕ್ಕೆ ಕಾಯುತ್ತಿರುವಾಗ ಬೈಕ್‌ನಲ್ಲಿ ಇಬ್ಬರು...
- Advertisement -
error: Content is protected !!