Thursday, December 2, 2021

ಕೊರೋನಾ ಟೈಮಲ್ಲಿ ರುಚಿ ಜತೆ ಆರೋಗ್ಯದ ಅಡುಗೆ

Follow Us

ಗೃಹಿಣಿಯರು ಸ್ವಲ್ಪ ಬೇಸರ ಪಕ್ಕಕ್ಕಿಟ್ಟು ಯತ್ನಿಸಿದರೆ ಮನೆಯ ಆಹಾರದ ಮಹತ್ವವನ್ನು ಮಕ್ಕಳಿಗೆ ತಿಳಿಸಲು ಇದು ಸುಸಮಯ. ಮನೆಯಲ್ಲೇ ಮಾಡುವ ತಂಬುಳಿ, ಪಾನಕ, ಕಷಾಯಗಳೆಲ್ಲ ಆರೋಗ್ಯಕ್ಕೆ ಹೇಗೆ ಅನುಕೂಲ ಎನ್ನುವುದನ್ನು ತಿಳಿಸುವ ಪ್ರಯತ್ನ ಮಾಡಬಹುದು.

===

ಣ್ಣಿಗೆ ಕಾಣದ ಕೊರೋನಾ ಸೂಕ್ಷ್ಮಾಣು ಅಕ್ಷರಶಃ ಎಲ್ಲರನ್ನೂ ಮನೆಯಲ್ಲೇ ಕೂಡಿಹಾಕಿದೆ. ಅನೇಕರು ಈಗಾಗಲೇ ಸಾಕಷ್ಟು ಸಿನಿಮಾ ನೋಡಿದ್ದಾರೆ. ಪುಸ್ತಕಗಳನ್ನು ಓದಿದ್ದಾರೆ. ಮಕ್ಕಳು ಮೊಬೈಲ್ ನಲ್ಲಿ ಇನ್ನಷ್ಟು ಮುಳುಗಿದ್ದಾರೆ. ಎಲ್ಲ ಸರಿ… ಆದರೆ, ಮನೆಯಾಕೆಗೆ ಮಾತ್ರ ದಿನಬೆಳಗಾದರೆ ಚಿಂತೆ ತಪ್ಪಿದ್ದಲ್ಲ. ಸಾಮಾನ್ಯ ದಿನಗಳಲ್ಲೇ ಮಕ್ಕಳು, ಮನೆಯವರಿಗೆ ಬೇಕಾದ ತಿಂಡಿ, ಊಟಗಳನ್ನು ಮಾಡಿ ಹೈರಾಣಾಗುತ್ತಿದ್ದ ಆಕೆಯ ಸ್ಥಿತಿ ಈಗ ಇನ್ನಷ್ಟು ಬಿಗಡಾಯಿಸಿದೆ. ಕಾರಣ, ಕೊರೋನಾ. ಮನೆಯಲ್ಲೇ ಇರುವ ಮಕ್ಕಳು ಏನಾದರೊಂದು ಕುರುಕಲು ಕೇಳುತ್ತಲೇ ಇರುತ್ತಾರೆ. ಬಾಯಾಡಿಸುತ್ತಲೇ ಸಮಯ ಕಳೆಯುತ್ತಾರೆ. ಇಂಥ ಸಮಯದಲ್ಲಿ ಏನು ಮಾಡಿ ಹಾಕುವುದು ಎನ್ನುವ ಆಕೆಯ ಚಿಂತೆ ಸಾಮಾನ್ಯವಾದುದಲ್ಲ.
ಹಾಗಿದ್ದರೆ ಏನೆಲ್ಲ ಮಾಡಬಹುದು?
• ಪುಟ್ಟ ಪುಟ್ಟ ಚಕ್ಕುಲಿ, ಕೋಡುಬಳೆಗಳನ್ನು ಮಾಡಿಟ್ಟುಕೊಂಡರೆ ನಾಲ್ಕಾರು ದಿನಗಳನ್ನು ಸುಲಭವಾಗಿ ಕಳೆಯಬಹುದು. ಹಾಗೆಂದು ಕೆಮ್ಮು ಉಂಟಾಗದಂತೆ ನೋಡಿಕೊಳ್ಳುವ ಜವಾಬ್ದಾರಿಯೂ ನಿಮ್ಮದೇ. ಕರಿದ ತಿಂಡಿಗಳನ್ನು ಹೆಚ್ಚು ತಿನ್ನದಂತೆ ನೋಡಿಕೊಳ್ಳಬೇಕಿರುವುದರಿಂದ ದಿನಕ್ಕೆ ಒಂದೆರಡು ಪುಟಾಣಿ ಚಕ್ಕುಲಿ ನೀಡಿದರೆ ಸಾಕು.
• ಅವಲಕ್ಕಿ ಒಗ್ಗರಣೆಯನ್ನೂ ಮಾಡಿಟ್ಟುಕೊಳ್ಳಬಹುದು.
• ಇನ್ನು, ಕರಿದ ತಿಂಡಿಗಳಿಗಿಂತ ದಿನ ಬಿಟ್ಟು ದಿನ ಪುಲಾವ್, ರೈಸ್ ಬಾತ್ ಇಂಥವುಗಳನ್ನು ಮಾಡಿಕೊಂಡು ಸೇವಿಸುವುದು ಕ್ಷೇಮ. ಹೆಚ್ಚು ತುಪ್ಪ, ಎಣ್ಣೆ ಬಳಸದೇ ಇದ್ದರೆ ಜಾಣತನ. ಏಕೆಂದರೆ, ಈ ಸಮಯದಲ್ಲಿ ಸುರಕ್ಷಿತರಾಗಿರುವುದು ಎಲ್ಲಕ್ಕಿಂತ ಹೆಚ್ಚು ಮುಖ್ಯ.
• ಒಮ್ಮೆಲೆ ನಾಲ್ಕಾರು ದಿನಗಳಿಗೆ ಆಗುವಷ್ಟು ತಿಂಡಿಗಳನ್ನು ಮಾಡಿಟ್ಟುಕೊಳ್ಳಲು ಯತ್ನಿಸುವ ಬದಲು ದಿನವೂ ಫ್ರೆಶ್ ಆಗಿ ಮಾಡಿಕೊಡುವುದು ಉತ್ತಮ. ಸಂಜೆಯ ಸಮಯದಲ್ಲಿ ಒಗ್ಗರಣೆ ಹಾಕಿದ ಅವಲಕ್ಕಿಯನ್ನೇ ಮೂರು, ನಾಲ್ಕು ವಿಧಗಳಲ್ಲಿ ಮಾಡಬಹುದು. ಒಗ್ಗರಣೆ ಹಾಕದೆಯೂ ಮಾಡಬಹುದು. ದೋಸೆಗಳಲ್ಲೂ ಹಲವಾರು ನಮೂನೆಗಳನ್ನು ಮಾಡಿ ಮಕ್ಕಳಿಂದ ಹೊಗಳಿಸಿಕೊಳ್ಳಬಹುದು.
• ಸಂಜೆಯ ಸಮಯದಲ್ಲಿ ಬೆಲ್ಲದ ಪಾನಕ ಮಾಡಬಹುದು. ಅದರೊಂದಿಗೆ, ಕಾಳುಮೆಣಸು, ಸಣ್ಣ ಶುಂಠಿ ಚೂರು, ಲಿಂಬೆ ಹಾಕಿ ಕುಡಿದರೆ ದೇಹದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.
• ನಗರದಲ್ಲೂ ಕಿರು ಕೈತೋಟ ಮಾಡಿಕೊಂಡವರ ಸಂಖ್ಯೆ ಸಾಕಷ್ಟಿದೆ. ಅಂಥವರು ಒಂದೆಲಗ, ಬ್ರಾಹ್ಮಿ,ಎಳೆಯ ನುಗ್ಗೆ, ಸಾಂಬಾರು (ದೊಡ್ಡ) ಪತ್ರೆ ಸೇರಿದಂತೆ ಬೇರೆ ಬೇರೆ ಕುಡಿಗಳನ್ನು ಸೇರಿಸಿ ತಂಬುಳಿ ಮಾಡುವ ಅಭ್ಯಾಸ ಮಾಡಿದರೆ ಹೊಟ್ಟೆಗೂ ಹಿತ, ದೇಹಕ್ಕೂ ಆರಾಮ. ಬೇಸಿಗೆಗೂ ಇದು ಹೇಳಿ ಮಾಡಿಸಿದ ಆಹಾರ.
• ಬೇಳೆಯ ದಪ್ಪ ಸಾಂಬಾರು ಈ ಸಮಯದಲ್ಲಿ ಅಗತ್ಯವಿಲ್ಲ. ಮಕ್ಕಳಿಗಂತೂ ಅದು ಇಷ್ಟವಾಗುವುದು ಕಡಿಮೆಯೇ. ಹೀಗಾಗಿ, ದಿನವೂ ಒಂದೊಂದು ಬಗೆಯ ರಸಂ ಮಾಡಬಹುದು. ಒಂದು ದಿನ ಬೀಟ್ ರೂಟ್, ಇನ್ನೊಂದು ದಿನ ಕ್ಯಾರೆಟ್, ಮತ್ತೊಂದು ದಿನ ಟೊಮ್ಯಾಟೊ ಹೀಗೆ ರಸಂ ಮಾಡಿದರೆ ಚಪ್ಪರಿಸಿಕೊಂಡು ಉಣ್ಣುತ್ತಾರೆ.

response@134.209.153.225
newsics.com@gmail.com

ಮತ್ತಷ್ಟು ಸುದ್ದಿಗಳು

Latest News

ಒಮಿಕ್ರಾನ್ ಸೋಂಕಿತನ ಐವರು ಸಂಪರ್ಕಿತರಿಗೂ ಕೊರೋನಾ ಪಾಸಿಟಿವ್

newsics.com ಬೆಂಗಳೂರು: ರಾಜ್ಯದಲ್ಲಿ ಇಬ್ಬರಲ್ಲಿ ಒಮಿಕ್ರಾನ್ ಸೋಂಕು ಪತ್ತೆಯಾಗಿದ್ದು, ಇವರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರ ಪೈಕಿ ಐವರಲ್ಲಿ ಕೊರೋನಾ ಇರುವುದು ದೃಢಪಟ್ಟಿದೆ. ದಕ್ಷಿಣ ಆಫ್ರಿಕಾದಿಂದ ಬಂದಿರುವ 66...

‘ಮಿರ್ಜಾಪುರ್’ ಖ್ಯಾತಿಯ ನಟ ಬ್ರಹ್ಮ ಮಿಶ್ರಾ ಮೃತದೇಹ ಪತ್ತೆ!

newsics.com ಮುಂಬೈ: 'ಮಿರ್ಜಾಪುರ್' ವೆಬ್ ಸೀರೀಸ್ ನಲ್ಲಿ ಲಲಿತ್ ಪಾತ್ರದ ಮೂಲಕ ಹೆಸರುವಾಸಿಯಾಗಿದ್ದ ನಟ ಬ್ರಹ್ಮ ಮಿಶ್ರಾ ಮುಂಬೈನಲ್ಲಿ ನಿಧನರಾಗಿದ್ದಾರೆ. ಮುಂಬೈನ ವರ್ಸೋವಾದಲ್ಲಿರುವ ಅವರ ಫ್ಲಾಟ್‌ ನಲ್ಲಿ ಅರೆ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದ್ದು, ಮರಣೋತ್ತರ...

ಸಿಲಿಂಡರ್ ಸ್ಫೋಟಗೊಂಡು 4 ತಿಂಗಳ ಮಗು ಸಾವು

newsics.com ಮುಂಬೈ: ಸಿಲಿಂಡರ್ ಸ್ಫೋಟದಿಂದ 4 ತಿಂಗಳ ಮಗು ಸಾವನ್ನಪ್ಪಿದ ಘಟನೆ ಮುಂಬೈನ ವರ್ಲಿಯಲ್ಲಿರುವ ಬಿಡಿಡಿ ಚಾಲ್‌ ನಲ್ಲಿ ಸಂಭವಿಸಿದೆ. ಸಿಲಿಂಡರ್ ಸ್ಫೋಟಗೊಂಡಿದ್ದರಿಂದ ನಾಲ್ಕು ತಿಂಗಳ ಮಗುವಿಗೆ ತೀವ್ರ ಸುಟ್ಟ ಗಾಯಗಳಾಗಿತ್ತು. ಮಗುವನ್ನು ಆಸ್ಪತ್ರೆಗೆ ದಾಖಲಿಸಿತ್ತಾದರೂ,...
- Advertisement -
error: Content is protected !!