Wednesday, November 29, 2023

ನಿದ್ರೆ ಮಾಡಲು ಬಿಡುತ್ತಿಲ್ಲ ಕೋವಿಡ್ ಸೋಮ್ನಿಯಾ!

Follow Us

    ನಿದ್ರಾಹೀನತೆಯ ಮತ್ತೊಂದು ಮಗ್ಗಲು    


ಕೊರೋನಾ ಸಮಯದಲ್ಲಿ ಬಹುತೇಕರ ಎಲ್ಲರ ನಿದ್ರಾ ಸೈಕಲ್’ನಲ್ಲೂ ವ್ಯತ್ಯಾಸವಾಗಿದೆ. ಆದರೆ, ಕೆಲವರು ನಿದ್ರೆಯೇ ಬಾರದೆ ಸಮಸ್ಯೆ ಎದುರಿಸುತ್ತಿದ್ದಾರೆ. ಯುವ ಸಮುದಾಯದಲ್ಲೇ ನಿದ್ರಾಹೀನತೆಯ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತಿದ್ದು, ಇದನ್ನು ತಜ್ಞರು ಈಗ ಕೋವಿಡ್-ಸೋಮ್ನಿಯಾ ಎಂದು ಕರೆದಿದ್ದಾರೆ.

newsics.com Feature Desk

 ಳೆದ ನಾಲ್ಕೈದು ತಿಂಗಳಿಂದ ಕಿಶೋರ್’ಗೆ ನಿದ್ದೆ ಸರಿಯಾಗಿ ಬರುತ್ತಿರಲಿಲ್ಲ. ಕಚೇರಿಗೆ ಹೋಗಿ ಮೊದಲಿನಂತೆ ದಣಿದು ಬಂದರೂ ರಾತ್ರಿ 12 ಆದರೂ ನಿದ್ದೆ ಸುಳಿಯುತ್ತಿರಲಿಲ್ಲ. ನಿದ್ದೆ ಬರಲಿಲ್ಲವೆಂದು ಟಿವಿ ನೋಡುವ ಸಮಯ ಹೆಚ್ಚಾಯಿತು. ಒಮ್ಮೊಮ್ಮೆ ರಾತ್ರಿ 2-3 ಗಂಟೆಯವರೆಗೂ ನಿದ್ದೆ ಬಾರದೆ ಎದ್ದು ಓಡಾಡಿ, ನೀರು ಕುಡಿದರೂ ಪ್ರಯೋಜನವಾಗುತ್ತಿರಲಿಲ್ಲ. ಕಣ್ಣು ಮುಚ್ಚಿ ಮಲಗಿದರೂ ಮನಸ್ಸು ಏಕಾಗ್ರವಾಗದೆ ಏನೇನೋ ವಿಚಾರಗಳಲ್ಲಿ ಮುಳುಗಿದ್ದು ಗಜಿಬಿಜಿ ಎನಿಸುತ್ತಿತ್ತು. ಮೂರ್ನಾಲ್ಕು ತಿಂಗಳ ಕಾಲ ಇದೇ ನಡೆದಾಗ ಬೇಸತ್ತು ಹೋಗಿ ವೈದ್ಯರನ್ನು ಭೇಟಿ ಮಾಡಿದರು.
ಕೊರೋನಾ ಲಾಕ್ ಡೌನ್ ಸಮಯದಲ್ಲಿ ಇಡೀ ದೇಶವೇ ಎಂದೂ ಕಂಡು ಕೇಳರಿಯದ ವಿಚಿತ್ರ ಸನ್ನಿವೇಶದಲ್ಲಿದ್ದಾಗ ಆರಂಭವಾದ ಸಮಸ್ಯೆ ಈಗಲೂ ಮುಂದುವರಿದಿರುವುದಾಗಿ ವೈದ್ಯರಲ್ಲಿ ಹೇಳಿಕೊಂಡರು. ಆಗ ಅವರು ಗುರುತಿಸಿದ ಸಮಸ್ಯೆ ಕೋವಿಡ್-ಸೋಮ್ನಿಯಾ.
ಕೊರೋನಾ ಭಯ ಕಾರಣ…
ಜನರು ಮನೆಯಲ್ಲೇ ದಿನವಿಡೀ ಸಮಯ ಕಳೆಯಬೇಕಾಗಿ ಬಂದಂದಿನಿಂದ ಆರಂಭವಾಗಿರುವ ಸಮಸ್ಯೆ ಇದು. ಇದರ ಮೂಲ ಇನ್ ಸೋಮ್ನಿಯಾ ಆಗಿದ್ದರೂ ಹೊಸ ರೀತಿಯ ಸನ್ನಿವೇಶ ಉದ್ಭವವಾದಂದಿನಿಂದ ಹೆಚ್ಚಾಗಿ ಕಂಡುಬರುತ್ತಿದೆ. ಕೊರೋನಾ ಸೋಂಕು ಹಾಗೂ ಅದರ ಕುರಿತಾದ ಭಯ ಸತತವಾಗಿ ನಿದ್ದೆ ಬಾರದೆ ಒದ್ದಾಡುವ ರಾತ್ರಿಗಳನ್ನು ಸೃಷ್ಟಿಸಿದೆ. ಹೀಗಾಗಿ, ನಿದ್ರಾ ತಜ್ಞರು ಇದಕ್ಕೆ ಇಟ್ಟಿರುವ ಹೆಸರು ಕೋವಿಡ್- ಸೋಮ್ನಿಯಾ. ಕೊರೋನಾ ಸೋಂಕಿನೊಂದಿಗೆ ನೇರವಾಗಿ ಜೋಡಣೆಯಾಗಿರುವ ಸಮಸ್ಯೆ ಇದು.
“ಕೊರೋನಾ ಸಮಯದಲ್ಲಿ ನಿದ್ರಾ ಸಮಸ್ಯೆಗಳು ಹೆಚ್ಚಾಗಿವೆ. ನಿದ್ರೆ ಕಡಿಮೆಯಾಗಿರುವುದು (ಇನ್ ಸೋಮ್ನಿಯಾ), ಅತಿಯಾದ ನಿದ್ರೆ (ಹೈಪರ್ ಸೋಮ್ನಿಯಾ) ಸಮಸ್ಯೆಗಳು ಅಧಿಕವಾಗಿವೆ’ ಎಂದಿದ್ದಾರೆ ತಜ್ಞರು.
ವರ್ಕ್ ಫ್ರಮ್ ಹೋಮ್ ಸಮಸ್ಯೆ…
ನಮ್ಮ ದೇಹದ ಗಡಿಯಾರ ರಾತ್ರಿ, ಹಗಲಿಗೆ ನಿರ್ದಿಷ್ಟ ಸೈಕಲ್ ಅನ್ನು ಅಭ್ಯಾಸ ಮಾಡಿಕೊಂಡಿರುತ್ತದೆ. ಹಗಲಿನಲ್ಲಿ ಕೆಲಸಕ್ಕಾಗಿ ಹೊರಗೆ ಹೋಗುವುದು, ಶಾಲೆ, ಕಾಲೇಜುಗಳಿಗೆ ಹೋಗುವುದು, ಸಾಮಾಜಿಕ ಚಟುವಟಿಕೆಗಳು, ಕಾರ್ಯಗಳು, ದೈಹಿಕ ಚಟುವಟಿಕೆಗಳನ್ನು ನಡೆಸುವುದಕ್ಕೆ ಹೊಂದಿಕೊಂಡಿರುತ್ತದೆ. ಆದರೆ, ಇದ್ಯಾವುದೂ ಸಾಧ್ಯವಾಗದ ಸಮಯದಲ್ಲಿ ದೇಹದ ಗಡಿಯಾರ ವ್ಯತ್ಯಾಸವಾಗಲು ಶುರುವಾಗುತ್ತದೆ.
“ವರ್ಕ್ ಫ್ರಮ್ ಹೋಮ್ ವ್ಯವಸ್ಥೆಯೂ ಈ ಸಮಯದಲ್ಲಿ ಹೆಚ್ಚಾಗಿ ಸೋಷಿಯಲ್ ಬದುಕೇ ಇಲ್ಲದಂತಾಯಿತು. ಇದೂ ಸಹ ನಿದ್ರಾ ವ್ಯವಸ್ಥೆಯಲ್ಲಿ ಏರುಪೇರುಗಳು ಹೆಚ್ಚಾಗಲು ಕಾರಣವಾಗಿವೆ’ ಎಂದು ಇಂಡಿಯನ್ ಸ್ಲೀಪ್ ಡಿಸಾರ್ಡರ್ಸ್ ಅಸೋಸಿಯೇಷನ್ ನ ತಜ್ಞರೊಬ್ಬರು ಹೇಳಿದ್ದಾರೆ.
ನಿದ್ರಾಹೀನತೆ ಶೇ.15ರಷ್ಟು ಹೆಚ್ಚಳ!
ನಿದ್ರೆಗೆ ಸಂಬಂಧಿಸಿದ ಸಮಸ್ಯೆಗಳು ಶೇ.15ರಷ್ಟು ಹೆಚ್ಚಳವಾಗಿರುವುದನ್ನು ಅಸೋಸಿಯೇಷನ್ ಗುರುತಿಸಿದೆ. ಶೇ.40ರಷ್ಟು ಪ್ರಕರಣಗಳಲ್ಲಿ ಉದ್ವೇಗ, ಒತ್ತಡ, ಭಯ, ಸಾಮಾಜಿಕ ಒಂಟಿತನ, ಹಣಕಾಸಿನ ಅಭದ್ರತೆ, ದೈಹಿಕ ಚಟುವಟಿಕೆ ಇಲ್ಲವಾಗಿರುವುದು, ಬ್ರೇಕಿಂಗ್ ನ್ಯೂಸ್’ಗಳನ್ನು ಸತತವಾಗಿ ನೋಡುತ್ತಿರುವುದು ಸಮಸ್ಯೆಗೆ ಕಾರಣವಾಗಿದೆ ಎನ್ನಲಾಗಿದೆ.
ಯುವಜನರಲ್ಲೇ ಹೆಚ್ಚು!
ಕೋವಿಡ್-ಸೋಮ್ನಿಯಾ ಸಮಸ್ಯೆಗೆ ಒಳಗಾದವರಲ್ಲಿ ವಯಸ್ಕರೇ ಹೆಚ್ಚು ಎನ್ನುವುದು ಸಹ ವಿಶೇಷ. ಹದಿಹರೆಯದವರು, 25ರಿಂದ 45ರ ವಯೋಮಾನದವರು ಇದರಿಂದ ಹೆಚ್ಚು ಬಳಲುತ್ತಿದ್ದಾರೆ. ತಮ್ಮದೇ ರಿಲ್ಯಾಕ್ಸ್ಡ್ ಜೀವನಶೈಲಿಯನ್ನು ಹೊಂದಿದ್ದ ಹಿರಿಯರಿಗೆ ಹೆಚ್ಚೇನೂ ಬಾಧೆಯಾಗಿಲ್ಲ. ಆದರೆ, ವಿದ್ಯಾರ್ಥಿಗಳು ಮತ್ತು ವಯಸ್ಕರು ಕೊರೋನಾ ಲಾಕ್ ಡೌನ್ ಸಮಯದಲ್ಲಿ ತೀವ್ರವಾಗಿ ಸಮಸ್ಯೆಗೆ ತುತ್ತಾಗಿದ್ದರು. ಹೀಗಾಗಿ, ಸುಲಭವಾಗಿ ಗ್ಯಾಜೆಟ್ ಗಳಿಗೆ ಅಂಟಿಕೊಂಡರು. ಇದು ಸಹ ನಿದ್ರಾ ಸಮಸ್ಯೆಗೆ ಕಾರಣವಾಗಿದೆ ಎನ್ನಲಾಗಿದೆ.
ಪುಣೆಯಲ್ಲಿರುವ ಅಂತಾರಾಷ್ಟ್ರೀಯ ನಿದ್ರಾವಿಜ್ಞಾನ ಸಂಸ್ಥೆ(ಐಐಎಸ್ ಎಸ್) ಯು ಕಳೆದ ಮಾರ್ಚ್-ಏಪ್ರಿಲ್ ಅವಧಿಯಲ್ಲಿ ಜನರ ನಿದ್ರಾ ಸೈಕಲ್ ಮೇಲೆ ಅಧ್ಯಯನ ನಡೆಸಿತ್ತು. ಅದರಲ್ಲಿ ಶೇ.25-30 ಮಂದಿ ಸುಖವಾದ ನಿದ್ರೆಯಿಂದ ವಂಚಿತರಾಗಿದ್ದುದು ಕಂಡುಬಂದಿದೆ. ಅಂದರೆ, 8 ಗಂಟೆ ನಿದ್ರೆ ಮಾಡಿ ಎದ್ದ ಬಳಿಕವೂ ಮನಸ್ಸು-ದೇಹ ಉಲ್ಲಸಿತವಾಗಿರದೆ ಇರುವ ಸ್ಥಿತಿ ಇವರಲ್ಲಿ ಕಂಡುಬಂದಿತ್ತು. ಈ ಪ್ರಮಾಣ ಈಗ ಇನ್ನಷ್ಟು ಹೆಚ್ಚಾಗಿದೆ ಎಂದು ಸಂಸ್ಥೆಯ ಸಂಶೋಧನಾ ವೈದ್ಯೆ ನುಶಾಫ್ರೀನ್ ಇರಾನಿ ಎನ್ನುವವರು ಹೇಳಿದ್ದಾರೆ. ನಿದ್ರೆಯ ಕುರಿತು ಮೊದಲೇ ಸಮಸ್ಯೆ ಇರುವವರಿಗಂತೂ ಈ ಸಮಯ ಇನ್ನಷ್ಟು ತೊಂದರೆದಾಯಕವಾಗಿದೆ ಎಂದಿದ್ದಾರೆ.
ಗ್ಯಾಜೆಟ್’ಗಳ ಬಳಕೆಯಿಂದಲೂ ಹೆಚ್ಚಾಯ್ತು ಪ್ರಾಬ್ಲಮ್…
ಕೋವಿಡ್-ಸೋಮ್ನಿಯಾ ಹೆಚ್ಚಲು ಇಲೆಕ್ಟ್ರಾನಿಕ್ಸ್ ಗ್ಯಾಜೆಟ್’ಗಳೂ ಮತ್ತೊಂದು ಪ್ರಮುಖ ಕಾರಣ ಎಂದು ಗುರುತಿಸಲಾಗಿದೆ. ಸ್ಮಾರ್ಟ್ ಫೋನ್ ಗಳು, ಟ್ಯಾಬ್ ಗಳನ್ನು ಹತ್ತಿರವೇ ಇಟ್ಟುಕೊಂಡು ಮಲಗುವ ಯುವಜನರು ಆಗಾಗ ಎದ್ದು ಮೆಸೇಜ್ ಗಳನ್ನು ಚೆಕ್ ಮಾಡುತ್ತಿರುತ್ತಾರೆ. ಇಲ್ಲವೇ ರಾತ್ರಿ 2-3 ಗಂಟೆಯವರೆಗೆ ನಿರಂತರವಾಗಿ ಮೆಸೇಜ್’ನಲ್ಲೇ ಮುಳುಗಿರುತ್ತಾರೆ. ಇದೂ ಸಹ ಸಮಸ್ಯೆ ಹೆಚ್ಚಾಗಲು ಕಾರಣವಾಗಿದೆ ಎಂದಿದ್ದಾರೆ ಇರಾನಿ.
ಮೊಬೈಲ್’ನಿಂದ ನಿದ್ರೆಯಿಲ್ಲ!
ಚೆನ್ನಾಗಿ ನಿದ್ರೆ ಬರಬೇಕಾದರೆ ಮಲಗುವ ಕನಿಷ್ಠ ಒಂದು ಗಂಟೆ ಮೊದಲು ಫೋನ್, ಗ್ಯಾಜೆಟ್’ಗಳನ್ನು ದೂರವಿಡಬೇಕು ಎಂದು ಅವರು ಸಲಹೆ ನೀಡಿದ್ದಾರೆ. ಹೀಗೆ ಮಾಡುವ ಬದಲು ಜನರು ಟಿವಿ ನೋಡುತ್ತ, ಮೊಬೈಲ್’ನಲ್ಲಿ ಸಮಯ ಕಳೆಯುತ್ತಾರೆ. ಅಲ್ಲಿ ಹೊರಸೂಸುವ ನೀಲಿ ಎಲ್’ಇಡಿ ಬೆಳಕಿನಿಂದ ನಿದ್ರೆಗೆ ಕಾರಣವಾಗುವ ಮೆಲಟೋನಿನ್ ಎನ್ನುವ ನಿದ್ರೆಯ ಹಾರ್ಮೋನ್ ಬಿಡುಗಡೆಯಾಗುವುದಿಲ್ಲ. ಮಿದುಳಿಗೆ ‘ಇದು ಹಗಲು’ ಎಂದು ಭ್ರಮೆಯನ್ನು ಅದು ಸೃಷ್ಟಿಸುತ್ತಿರುತ್ತದೆ. ಹೀಗಾಗಿ, ಮೊಬೈಲ್ ಹಿಡಿದರೆ ನಿದ್ರೆ ಬರುವುದಿಲ್ಲ. ನಿದ್ರೆಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಕಂಡುಬಂದರೂ ಅಲಕ್ಷಿಸದೆ ವೈದ್ಯರನ್ನು ಸಂಪರ್ಕಿಸಬೇಕು ಎನ್ನುವುದು ತಜ್ಞರ ಸಲಹೆ.

ಮತ್ತಷ್ಟು ಸುದ್ದಿಗಳು

vertical

Latest News

ಮೈಸೂರು ವಿವಿ ಪ್ರೊಫೆಸರ್ ವಿರುದ್ಧ ಪಿಎಚ್ಡಿ ವಿದ್ಯಾರ್ಥಿನಿಯಿಂದ ಪೊಲೀಸರಿಗೆ ದೂರು: FIR ದಾಖಲು

newsics.com ಮೈಸೂರು: ಮೈಸೂರು ವಿಶ್ವವಿದ್ಯಾಲಯದ ಪ್ರೊಫೆಸರ್ ಶುಭ ಗೋಪಾಲ್ ವಿರುದ್ಧ ಪಿಎಚ್.ಡಿ. ವಿದ್ಯಾರ್ಥಿನಿಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ. ಮೈಸೂರು ವಿವಿಯ ಮೈಕ್ರೋ ಬಯಾಲಜಿ ವಿಭಾಗದ ಪ್ರೊ.ಶುಭ ಗೋಪಾಲ್ ವಿರುದ್ಧ...

ಮುಂದಿನ ವರ್ಷದಿಂದ 500 ರಿಂದ 600 ಕರ್ನಾಟಕ ಪಬ್ಲಿಕ್ ಸ್ಕೂಲ್ ಆರಂಭ: ಮಧು ಬಂಗಾರಪ್ಪ

newsics.com ಹಾಸನ: ಮುಂದಿನ ಶೈಕ್ಷಣಿಕ ವರ್ಷದಲ್ಲಿ 500 ರಿಂದ 600 ಪಬ್ಲಿಕ್ ಶಾಲೆಗಳನ್ನು ಸ್ಥಾಪನೆ ಮಾಡಲಾಗುವುದು. ಚುನಾವಣೆ ಸಂದರ್ಭದಲ್ಲಿ ನೀಡಿದ 5 ಗ್ಯಾರಂಟಿಗಳನ್ನು ಈಡೇರಿಸಿದ್ದು, ಶಾಲೆಗಳ ಅಭಿವೃದ್ಧಿಗೂ ಹಾಗೂ ಗ್ಯಾರಂಟಿಗೂ ಯಾವ ಸಂಬಂಧವಿಲ್ಲ ಎಂದು...

2024ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿ ಬಿಡುಗಡೆ

newsics.com ಬೆಂಗಳೂರು: 2024ಕ್ಕೆ ಮುಂಜೂರಾದ ಸಾರ್ವತ್ರಿಕ ರಜೆಗಳ ಪಟ್ಟಿಯನ್ನು ಕರ್ನಾಟಕ ಸರ್ಕಾರವು ಬಿಡುಗಡೆ ಮಾಡಿದೆ. ಎಲ್ಲಾ ಎರಡನೇ ಶನಿವಾರ, ನಾಲ್ಕನೇ ಶನಿವಾರ ಮತ್ತು ಭಾನುವಾರಗಳು ಸೇರಿದಂತೆ ಸಾರ್ವತ್ರಿಕ ರಜಾ ದಿನಗಳ ಪಟ್ಟಿ ಹೀಗಿದೆ. ಜನವರಿ 15,...
- Advertisement -
error: Content is protected !!