Saturday, January 23, 2021

ಸುಡುವ ಬಿಸಿ ನೀರು ಕುಡಿಯದಿರಿ

ಕೊರೋನಾ ಸಮಯದಲ್ಲಿ ಬಿಸಿ ನೀರಿನ ಸೇವನೆ ಅಧಿಕವಾಗಿದೆ. ಕೆಲವರಂತೂ ದಿನಪೂರ್ತಿ ಆಗಾಗ ಬಿಸಿನೀರನ್ನು ಕುಡಿಯುತ್ತಿರುತ್ತಾರೆ. ಹಲವರು ಸುಡು ಸುಡು ನೀರನ್ನೇ ಕುಡಿಯುತ್ತಾರೆ. ಆದರೆ, ಇದು ಉತ್ತಮವಲ್ಲ. ಹದವಾದ, ಉಗುರು ಬೆಚ್ಚಗಿನ ಬಿಸಿನೀರನ್ನು ಮಾತ್ರವೇ ಸೇವನೆ ಮಾಡಬೇಕು.

     ಆರೋಗ್ಯ     

♦ ವಿಧಾತ್ರಿ
newsics.com@gmail.com


 ಕೊ ರೋನಾ ಕಲಿಸಿದ ಪಾಠಗಳಲ್ಲಿ ಬಿಸಿ ನೀರು ಕುಡಿಯುವುದೂ ಒಂದು. ಈಗಂತೂ ಎಲ್ಲಿ ಹೋದರೂ ಬಿಸಿ ನೀರಿಗೇ ಡಿಮಾಂಡ್. ಹೋಟೆಲ್’ಗಳಲ್ಲಿ, ಯಾವುದೇ ಸಮಾರಂಭಗಳಲ್ಲಿ ಬಿಸಿನೀರನ್ನೇ ಕುಡಿಯಲು ಕೊಡುತ್ತಾರೆ. ಇತ್ತೀಚೆಗೆ ಎಲ್ಲರೂ ಬಿಸಿನೀರನ್ನು ಹೆಚ್ಚು ಸೇವಿಸಲು ಆರಂಭಿಸಿದ್ದಾರೆ. ಹಲವು ವಿಧಗಳಲ್ಲಿ ಬಿಸಿನೀರು ಸೇವನೆ ತುಂಬ ಒಳ್ಳೆಯದು, ಅದರಲ್ಲಿ ಎರಡು ಮಾತಿಲ್ಲ. ಆದರೆ ಸುಡುವ ಬಿಸಿನೀರು ಸೇವನೆಯಿಂದ ಹಾನಿಯಾಗುವ ಅಪಾಯವೂ ಇದೆ.
ಹೌದು, ಸುಡು ಬಿಸಿ ನೀರಿನಿಂದ ಹಾನಿಯಾಗುತ್ತದೆ ಎಂದರೆ ಅಚ್ಚರಿಯಾಗಬಹುದು. ಬಿಸಿ ನೀರನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಮಾತ್ರ ಕುಡಿಯಬೇಕು. ದಿನದ ಇತರ ಸಮಯದಲ್ಲಿ ಬಿಸಿ ನೀರನ್ನು ಹೆಚ್ಚು ಕುಡಿಯಬಾರದು.
ನಮ್ಮ ದೇಹದಲ್ಲಿ ಮೂತ್ರಪಿಂಡಗಳ ಕಾರ್ಯ ವಿಶಿಷ್ಟವಾದದ್ದು. ದೇಹದ ಮಲಿನವನ್ನು ಹೊರಹಾಕುವ ಮೂಲಕ ಶುದ್ಧೀಕರಣ ಮಾಡುವ ಕಾರ್ಯ ನಿಭಾಯಿಸುತ್ತದೆ. ಹೆಚ್ಚು ಬಿಸಿ ನೀರನ್ನು ಕುಡಿದರೆ ಕಿಡ್ನಿಯ ಕೆಲಸಕ್ಕೆ ಅನುಕೂಲವಾಗುತ್ತದೆ ಎಂದು ಭಾವಿಸುವುದು ಸಾಮಾನ್ಯ. ಆದರೆ, ದಿನಪೂರ್ತಿ ಸುಡುವ ಬಿಸಿ ನೀರನ್ನೇ ಕುಡಿಯುವುದು ಉತ್ತಮವಲ್ಲ. ಮೂತ್ರಪಿಂಡದಲ್ಲಿ ಕಲ್ಲಿನ ಸಮಸ್ಯೆ ಉಳ್ಳವರು ಬಿಸಿ ನೀರನ್ನು ಕುಡಿಯಬಾರದು ಎಂದು ಹೇಳಲಾಗುತ್ತದೆ. ಆದರೆ, ಅಂಥ ಸಮಸ್ಯೆಯೇನೂ ಖಂಡಿತವಾಗಿ ಆಗುವುದಿಲ್ಲ.
ಇನ್ನು, ಹೆಚ್ಚು ಬಿಸಿ ನೀರು ಕುಡಿಯುವುದರಿಂದ ರಕ್ತದ ಹರಿವು ಹೆಚ್ಚುತ್ತದೆ. ಇದರಿಂದ ಹೃದಯ ಮತ್ತು ರಕ್ತನಾಳಗಳ ಮೇಲೆ ಒತ್ತಡ ಸೃಷ್ಟಿಯಾಗಬಹುದು ಎನ್ನಲಾಗುತ್ತದೆ. ಆದರೆ ಇದು ಸಹ ಸತ್ಯವಲ್ಲ. ರಕ್ತದೊತ್ತಡಕ್ಕೂ ಬಿಸಿನೀರು ಕುಡಿಯುವುದಕ್ಕೂ ಸಂಬಂಧವಿಲ್ಲ ಎನ್ನುತ್ತಾರೆ, ಡಾ. ಬಾಲಮುರಳೀಕೃಷ್ಣ.
ಬಿಸಿ ನೀರನ್ನು ಕುಡಿಯುವುದರಿಂದ ಹೆಚ್ಚು ಸೆಕೆಯಾಗುತ್ತದೆ ಎನ್ನುವುದು ಅನುಭವಕ್ಕೆ ಬರುವ ಸತ್ಯ.
ಉಗುರು ಬೆಚ್ಚಗಿನ ನೀರು ಸಾಕು
ಬಿಸಿ ನೀರು ಆರೋಗ್ಯಕ್ಕೆ ಉತ್ತಮವೇನೋ ನಿಜ. ಆದರೆ, ಜ್ವರ ಇದ್ದಾಗ, ಕೆಮ್ಮು, ನೆಗಡಿಯಂಥ ಸಮಸ್ಯೆ ಇದ್ದಾಗ ಮಾತ್ರ ಹೆಚ್ಚು ಬಿಸಿ ನೀರನ್ನು ಸೇವಿಸುವುದು ಉತ್ತಮ. ಉಳಿದ ದಿನಗಳಲ್ಲಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಮಾತ್ರ ಬಿಸಿ ನೀರು ಸೇವನೆ ಮಾಡಬೇಕು. ಅಲ್ಲದೆ, ಸುಡು ಸುಡು ನೀರನ್ನು ಖಂಡಿತವಾಗಿ ಸೇವನೆ ಮಾಡಬಾರದು. ಇದರಿಂದ ಬಾಯಿ, ಗಂಟಲು, ಅನ್ನನಾಳ, ಹೊಟ್ಟೆಯ ಪದರಗಳಿಗೆ ತೊಂದರೆಯಾಗುತ್ತದೆ. ಹದವಾದ, ಉಗುರು ಬೆಚ್ಚಗಿನ ನೀರಿನ ಸೇವನೆ ಯಾವತ್ತೂ ಆರೋಗ್ಯಕರ.

ಮತ್ತಷ್ಟು ಸುದ್ದಿಗಳು

Latest News

ತುಪ್ಪದ ಬೆಡಗಿ ರಾಗಿಣಿ ಇಂದು ಪರಪ್ಪನ ಅಗ್ರಹಾರದಿಂದ ಬಿಡುಗಡೆ

Newsics.com ಬೆಂಗಳೂರು: ಮಾದಕ ದ್ರವ್ಯ ಪ್ರಕರಣದಲ್ಲಿ ಬಂಧಿತರಾಗಿರುವ ನಟಿ ರಾಗಿಣಿ ದ್ವಿವೇದಿ ಇಂದು ಪರಪ್ಪನ ಅಗ್ರಹಾರ ಜೈಲ್ಲಿನಿಂದ ಬಿಡುಗಡೆಯಾಗಲಿದ್ದಾರೆ. ಸುಪ್ರೀಂಕೋರ್ಟ್ ಆದೇಶದ ಪ್ರತಿ ಅವರ ವಕೀಲರ ಕೈ ಸೇರಿದ್ದು,...

ಕೊರೋನಾ ಮಾರ್ಗ ಸೂಚಿ ಉಲ್ಲಂಘನೆ: ವಾಟಾಳ್ ವಿರುದ್ದ ಎಫ್ ಐ ಆರ್

Newsics.com ಬೆಂಗಳೂರು: ನಗರದಲ್ಲಿ ಕೊರೋನಾ ಮಾರ್ಗ ಸೂಚಿ ಉಲ್ಲಂಘಿಸಿ ಪ್ರತಿಭಟನೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದಂಡ ಪಾವತಿಸದಿರುವ ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ವಿರುದ್ಧ ಎಫ್ ಐ ಆರ್ ದಾಖಲಿಸಲಾಗಿದೆ. ಡಿಸೆಂಬರ್ 5, 2020ರಂದು ನಗರದ...

ಶಿವಮೊಗ್ಗ ದುರಂತ: ಇಂದು ಮುಖ್ಯಮಂತ್ರಿ ಯಡಿಯೂರಪ್ಪ ಭೇಟಿ

Newsics.com ಬೆಂಗಳೂರು: ದೇಶವನ್ನು ನಡುಗಿಸಿರುವ ಶಿವಮೊಗ್ಗ ಸಮೀಪದ  ಹುಣಸೋಡು ಸ್ಫೋಟ ಸಂಭವಿಸಿದ ಪ್ರದೇಶಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಇಂದು ಭೇಟಿ ನೀಡಲಿದ್ದಾರೆ. ದುರಂತದಲ್ಲಿ ಐದು ಮಂದಿ ಮೃತಪಟ್ಟಿರುವುದನ್ನು ಅಧಿಕೃತವಾಗಿ ದೃಢೀಕರಿಸಲಾಗಿದೆ. ಶಿವಮೊಗ್ಗ ನಗರದಿಂದ ಕೇವಲ ಎಂಟು ಕಿಲೋ...
- Advertisement -
error: Content is protected !!