Saturday, January 23, 2021

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಹಣ್ಣು ತಿನ್ನದಿರಿ

ಬೆಳಗ್ಗೆ ಎದ್ದಾಕ್ಷಣ ಏನನ್ನಾದರೂ ತಿನ್ನಬೇಕೆನ್ನುವ ಹಂಬಲ ಹಲವರಿಗೆ ಉಂಟಾಗುತ್ತದೆ. ಆಗ ಸುಲಭವಾಗಿ ಕೈಗೆ ಸಿಗುವ ಹಣ್ಣುಗಳನ್ನು ಸೇವಿಸುತ್ತಾರೆ. ಆದರೆ, ಬಾಳೆಹಣ್ಣು ಸೇರಿದಂತೆ ಅನೇಕ ಹಣ್ಣುಗಳನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಎಂದಿಗೂ ಸೇವಿಸಬಾರದು.

♦ ಡಾ.ಸುಮನ್
newsics.com@gmail.com


 ಬೆ ಳಗ್ಗೆ ಎದ್ದಾಕ್ಷಣ ಖಾಲಿ ಹೊಟ್ಟೆಗೆ ಎರಡು ಗ್ಲಾಸ್ ಬಿಸಿನೀರನ್ನು ಕುಡಿಯುವುದು ಉತ್ತಮ ಅಭ್ಯಾಸ. ಆದರೆ, ಅನೇಕರು ಯಾವುದಾದರೂ ಹಣ್ಣನ್ನು ತಿನ್ನಬೇಕೆಂದು ಬಯಸುತ್ತಾರೆ. ಮಾವಿನ ಹಣ್ಣಿನ ಕಾಲದಲ್ಲಂತೂ ಮಕ್ಕಳು ಸೇರಿದಂತೆ ದೊಡ್ಡವರು ಸಹ ಬೆಳಗ್ಗೆ ಎದ್ದಾಕ್ಷಣ ಮಾವಿನ ಹಣ್ಣನ್ನು ತಿನ್ನಲು ಬಯಸುತ್ತಾರೆ. ಆದರೆ, ಖಾಲಿ ಹೊಟ್ಟೆಯಲ್ಲಿ ಕೆಲವು ಹಣ್ಣುಗಳನ್ನು ಸೇವಿಸುವುದು ಉತ್ತಮವಲ್ಲ. ಖಾಲಿ ಹೊಟ್ಟೆಯಲ್ಲಿ ಸೇವಿಸಿದಾಗ ಅನೇಕ ಹಣ್ಣುಗಳು ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತವೆ.
ಹಾಗಿದ್ದರೆ ಆ ಹಣ್ಣುಗಳು ಯಾವುವು ಎಂದು ನೋಡೋಣ.
• ಮಾವಿನಹಣ್ಣು: ಮಾವಿನಹಣ್ಣಿನಲ್ಲಿ ಸಕ್ಕರೆ ಪ್ರಮಾಣ ಅಧಿಕವಾಗಿರುತ್ತದೆ. ಬೆಳಗ್ಗೆ ಎದ್ದಾಕ್ಷಣ ಸೇವಿಸಿದರೆ ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗಿ ಮಧುಮೇಹ ಆರಂಭವಾಗುವ ಎಲ್ಲ ಸಾಧ್ಯತೆಗಳೂ ಇರುತ್ತವೆ. ಮಾವಿನ ಹಣ್ಣಿನ ಕಾಲದಲ್ಲೇ ಮಧುಮೇಹದ ಸಮಸ್ಯೆ ಹೆಚ್ಚಾಗಿರುವುದು ಅಂಕಿ ಅಂಶಗಳಿಂದ ವ್ಯಕ್ತವಾಗಿದೆ.
• ಬಾಳೆಹಣ್ಣು: ಬಾಳೆಹಣ್ಣು ಆರೋಗ್ಯಕ್ಕೆ ಉತ್ತಮವೇ. ಆದರೆ, ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದಾಕ್ಷಣ ಕೆಲವರಿಗೆ ಪಿತ್ತದ ಸಮಸ್ಯೆ ಉಂಟಾಗಬಹುದು. ಎದೆಯ ಕೆಳಭಾಗದಲ್ಲಿ ಉರಿ ಆರಂಭವಾಗಬಹುದು. ಇನ್ನು, ಬಾಳೆಹಣ್ಣಿನಲ್ಲಿ ಮ್ಯಾಗ್ನಿಷಿಯಂ ಅಂಶ ಹೆಚ್ಚಾಗಿದೆ. ಇದು ಹೃದಯದ ಆರೋಗ್ಯಕ್ಕೆ ಉತ್ತಮವಲ್ಲ. ಹೀಗಾಗಿ, ಖಾಲಿ ಹೊಟ್ಟೆಯಲ್ಲಿ ಸೇವಿಸಬಾರದು ಎನ್ನಲಾಗುತ್ತದೆ.
• ದ್ರಾಕ್ಷಿ: ದ್ರಾಕ್ಷಿ ಹಣ್ಣಿನಲ್ಲಿ ಸಿಟ್ರಿಕ್ ಆಮ್ಲವಿದೆ. ಹೊಟ್ಟೆ ಖಾಲಿ ಇದ್ದಾಗ ಸೇವಿಸಿದರೆ ಪಿತ್ತದ ಸಮಸ್ಯೆ ಹಾಗೂ ಗ್ಯಾಸ್ ಸಮಸ್ಯೆ ಹೆಚ್ಚಾಗುತ್ತದೆ.
• ಲಿಚ್ಚಿ ಹಣ್ಣು: ಇದನ್ನು ಬೆಳಗ್ಗೆ ಎದ್ದಾಕ್ಷಣ ತಿಂದರೆ ಮಿದುಳಿನಲ್ಲಿ ಸಮಸ್ಯೆ ಉಂಟಾಗುತ್ತದೆ. ಜ್ವರ, ವಾಂತಿ, ವಾಕರಿಕೆಯಂಥ ಅನೇಕ ಸಮಸ್ಯೆಗಳು ಕಂಡುಬರಬಹುದು. 2019ರ ಜನವರಿಯಲ್ಲಿ ಒಂದು ದುರ್ಘಟನೆ ನಡೆದಿತ್ತು. ಬಿಹಾರದಲ್ಲಿ ಸುಮಾರು 100 ಮಕ್ಕಳು ಮಿದುಳು ಜ್ವರದಿಂದ ಸಾವಿಗೀಡಾಗಿದ್ದರು. ಲಿಚ್ಚಿ ಹಣ್ಣೇ ಇದಕ್ಕೆ ಕಾರಣ ಎನ್ನುವುದು ಬಳಿಕ ದೃಢವಾಗಿತ್ತು.
• ಸೀಬೆಹಣ್ಣು: ಪೇರಲೆ ಅಥವಾ ಸೀಬೆ ಹಣ್ಣು ಕೂಡ ಖಾಲಿ ಹೊಟ್ಟೆಯಲ್ಲಿ ಸೇವಿಸುವ ಹಣ್ಣಲ್ಲ. ಇದು ಹೊಟ್ಟೆಯ ಸೂಕ್ಷ್ಮ ಪದರದ ಮೇಲೆ ಪರಿಣಾಮ ಬೀರುವುದರ ಜತೆಗೆ, ಜೀರ್ಣಾಂಗ ವ್ಯವಸ್ಥೆಯನ್ನೂ ಹಾಳು ಮಾಡುತ್ತದೆ. ಅಲ್ಲದೆ, ಇದರಿಂದ ಶೀತವಾಗುವುದು ಕಂಡುಬರುತ್ತದೆ. ಗಂಟಲಿನ ಸಮಸ್ಯೆ ಉಳ್ಳವರು ಈ ಹಣ್ಣನ್ನು ಸೇವಿಸದಿರುವುದು ಒಳ್ಳೆಯದು.

ಜೇನಿಂದ ಎಲ್ಲ ಶುದ್ಧ ಜೇನಿಂದ…

ನಿಮಗೆ ಕೊರೋನಾ ಲಸಿಕೆ ಬೇಕೋ ಬೇಡವೋ?

ನೀಳಕೇಶಕ್ಕೆ ಸಿಂಪಲ್ ಸೂತ್ರ

ಸುಡುವ ಬಿಸಿ ನೀರು ಕುಡಿಯದಿರಿ

ಮತ್ತಷ್ಟು ಸುದ್ದಿಗಳು

Latest News

ಪ್ರತಿಭಟನಾ ನಿರತ ರೈತರ ಹತ್ಯೆಗೆ ಸಂಚು: ಆರೋಪಿ ಬಂಧನ

Newsics.com ನವದೆಹಲಿ: ಕೇಂದ್ರದ ಕೃಷಿ ನೀತಿ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತ ಮುಖಂಡರ ಮೇಲೆ ಗುಂಡಿನ ದಾಳಿ ನಡೆಸಿ ರಕ್ತಪಾತ ಹರಿಸಲು ಸಂಚು ಹೂಡಿದ್ದ ಆರೋಪಿಯನ್ನು ರೈತರು...

ಮನೆಗೆ ನುಗ್ಗಿ 15 ವರ್ಷದ ಬಾಲಕಿಯ ಬರ್ಬರ ಹತ್ಯೆ

Newsics.com ಪಾಟ್ನ: ಬಿಹಾರದ ರಾಜಧಾನಿ ಪಾಟ್ನಾದಲ್ಲಿ ಅತ್ಯಂತ ದಾರುಣ ಕೃತ್ಯ ನಡೆದಿದೆ. ಮನೆಯೊಂದಕ್ಕೆ ದಾಳಿ ನಡೆಸಿದ ದುಷ್ಕರ್ಮಿಗಳು 15 ವರ್ಷದ ಬಾಲಕಿಯನ್ನು ಹತ್ಯೆ ಮಾಡಿದ್ದಾರೆ. ಕತ್ತಿಯಿಂದ ಕಡಿದು ಈ ಹತ್ಯೆ ಮಾಡಲಾಗಿದೆ. ಮೃತಪಟ್ಟ ಬಾಲಕಿಯನ್ನು  ಅಂಶು...

ಲಂಡನ್ ನಲ್ಲಿ ಆಶ್ರಯ ಕೋರಿ ವಿಜಯ ಮಲ್ಯ ಅರ್ಜಿ

Newsics.com ಲಂಡನ್: ಭಾರತಕ್ಕೆ ಗಡೀಪಾರು ಭೀತಿ ಎದುರಿಸುತ್ತಿರುವ ದಿವಾಳಿ ಉದ್ಯಮಿ ವಿಜಯ ಮಲ್ಯ ಆಶ್ರಯ ಕೋರಿ ಬ್ರಿಟನ್ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಮಲ್ಯ ಪರ ವಕೀಲ ಫಿಲಿಪ್ ಮೈಕಲ್ ಈ ಮಾಹಿತಿ ಬಹಿರಂಗಪಡಿಸಿದ್ದಾರೆ. ಭಾರತದ ಬ್ಯಾಂಕ್...
- Advertisement -
error: Content is protected !!