Saturday, January 23, 2021

ನಿಮಗೆ ಕೊರೋನಾ ಲಸಿಕೆ ಬೇಕೋ ಬೇಡವೋ?

ಕೊರೋನಾ ಲಸಿಕೆ ಯಾವಾಗ ಬರುವುದೋ ಎಂದು ಎಲ್ಲರೂ ಕಾಯುತ್ತಿದ್ದಾರೆ. ಆದರೆ, ಹುಷಾರು. ಲಸಿಕೆ ತೆಗೆದುಕೊಳ್ಳುವ ಮುನ್ನ ಕೆಲವು ಅಂಶಗಳ ಬಗ್ಗೆ ಗಮನವಿರಲಿ. ಕೊರೋನಾ ಲಸಿಕೆಗೂ ಕೆಲವು ಅಡ್ಡ ಪರಿಣಾಮಗಳು ಇರುವ ಸಾಧ್ಯತೆ ಅಧಿಕವಾಗಿದೆ. ಲಸಿಕೆಯನ್ನು ವಿರೋಧಿಸುವ ಗುಂಪುಗಳು ಫೇಸ್ ಬುಕ್ ನಂಥ ಜಾಲತಾಣಗಳಲ್ಲಿ ಈಗ ಹೆಚ್ಚು ಸಕ್ರಿಯವಾಗಿವೆ.

  ಕೊರೋನಾ ಲಸಿಕೆಯ ಪರಿಣಾಮವೇನಿರಬಹುದು?!  


♦ ಡಾ.ಸುಮನ್
newsics.com@gmail.com


 ಗ ಎಲ್ಲೆಲ್ಲೂ ಕೊರೋನಾ ಲಸಿಕೆಯದ್ದೇ ಮಾತು. ಸ್ವತಃ ದೇಶದ ಪ್ರಧಾನಿಯೇ ಲಸಿಕೆ ಅಭಿವೃದ್ಧಿಪಡಿಸುತ್ತಿರುವ ಸಂಸ್ಥೆಗಳಿಗೆ ಭೇಟಿ ನೀಡಿ ಬಂದ ಮೇಲಂತೂ ಲಸಿಕೆ ಎಷ್ಟು ದಿನಗಳಲ್ಲಿ ಬರಬಹುದು, ಯಾರಿಗೆ ಯಾವಾಗ ಸಿಗಬಹುದು ಇತ್ಯಾದಿ ಮಾತುಗಳೇ ಎಲ್ಲೆಡೆ ಕೇಳಿಬರುತ್ತಿವೆ. ಇಡೀ ವಿಶ್ವದ ಆರ್ಥಿಕತೆಯನ್ನು ಪಾತಾಳಕ್ಕೆ ತಳ್ಳಿರುವ ಕೊರೋನಾ ವೈರಸ್’ನಿಂದ ಜನರ ಬದುಕೇ ಬದಲಾಗಿದೆ. ಬೀಡುಬೀಸಾಗಿ ಬದುಕುತ್ತಿದ್ದ ಜನ ಒಂದಿಷ್ಟು ಎಚ್ಚರಿಕೆಗಳನ್ನು ತೆಗೆದುಕೊಳ್ಳುವಂತಾಗಿದೆ. ಬೇರೆ ಬೇರೆ ರೋಗ, ಆರೋಗ್ಯ ತೊಂದರೆಗಳಿಂದ ಬಳಲುತ್ತಿರುವ ಮಂದಿಯಂತೂ ಕೊರೋನಾ ಬಾರದಂತೆ ನೋಡಿಕೊಳ್ಳುವುದು ಹರಸಾಹಸವಾಗಿದೆ. ಎಷ್ಟೋ ಜನ ಇದಕ್ಕೆ ಬಲಿಯಾಗಿದ್ದೂ ಆಗಿದೆ.
ಇಂಥ ಸಮಯದಲ್ಲಿ ಬದುಕು ಯಾವಾಗ ಸಾಮಾನ್ಯ ಸ್ಥಿತಿಗೆ ಬರುವುದೋ ಎಂದು ಎಲ್ಲರೂ ಲಸಿಕೆಯನ್ನೇ ಎದುರು ನೋಡುತ್ತಿದ್ದಾರೆ. ಮಕ್ಕಳು ಬಾಹ್ಯ ಪ್ರಪಂಚಕ್ಕೆ ಹೋಗುವಂತಾಗಲಿ, ಶಾಲೆಗಳು ಆರಂಭವಾಗಲಿ, ಬದುಕು ಎಂದಿನ ಲಯಕ್ಕೆ ಮರಳಲಿ ಎಂದು ಎಲ್ಲರೂ ಹಾರೈಸುತ್ತಿದ್ದಾರೆ. ಹೌದು, ಲಸಿಕೆಯೇ ಕೊರೋನಾ ತಡೆಗೆ ಇರುವ ಏಕೈಕ ಅಂತಿಮ ಪರಿಹಾರ. ಲಸಿಕೆಯ ಪ್ರಯೋಜನಗಗಳು ಏನೇನಾಗಲಿವೆ ಎನ್ನುವ ಅಂದಾಜು ಎಲ್ಲರಿಗೂ ಇದ್ದೇ ಇದೆ. ಆದರೆ, ಯಾವುದೇ ಲಸಿಕೆಗೆ ಇನ್ನೊಂದು ಮುಖವೂ ಇರುತ್ತದೆ. ಆ ಇನ್ನೊಂದು ಮುಖ ಲಸಿಕೆಯ ಅಡ್ಡಪರಿಣಾಮಗಳನ್ನು ಹೇಳಬಲ್ಲದು.
ಅಡ್ಡ ಪರಿಣಾಮದ ಬಗೆಗಿರಲಿ ಎಚ್ಚರ
ಹೌದು, ಯಾವುದೇ ಲಸಿಕೆಗೆ ಇರುವಂತೆ ಕೊರೋನಾ ಲಸಿಕೆಗೂ ಕೆಲವು ಅಡ್ಡ ಪರಿಣಾಮಗಳು ಇರುವ ಸಾಧ್ಯತೆ ಅಧಿಕವಾಗಿದೆ. ಲಸಿಕೆಯನ್ನು ವಿರೋಧಿಸುವ ಗುಂಪುಗಳು ಫೇಸ್ ಬುಕ್ ನಂಥ ಜಾಲತಾಣಗಳಲ್ಲಿ ಈಗ ಹೆಚ್ಚು ಸಕ್ರಿಯವಾಗುತ್ತಿವೆ. ವಿಶ್ವದಲ್ಲಿ ಇಂಥ ಅನೇಕ ಗುಂಪುಗಳಿವೆ. ಕೆಲವು ಗುಂಪುಗಳನ್ನು ಸ್ವತಃ ವೈದ್ಯರೇ ನಡೆಸುತ್ತಿದ್ದಾರೆ ಎನ್ನುವುದು ಸತ್ಯ. ಅವರು ಲಸಿಕೆಯ ಅಡ್ಡ ಪರಿಣಾಮಗಳನ್ನು ಕಣ್ಣಾರೆ ಕಂಡಿದ್ದಾರೆ. ಈ ಗುಂಪುಗಳು ಕೊರೋನಾ ಲಸಿಕೆಯನ್ನು ತೆಗೆದುಕೊಳ್ಳುವ ಮುನ್ನ ಜಾಗ್ರತೆ ವಹಿಸಲು ಅಥವಾ ಲಸಿಕೆ ತೆಗೆದುಕೊಳ್ಳದಿರಲು ಜನರಲ್ಲಿ ಅರಿವು ಮೂಡಿಸುವ ಯತ್ನ ಮಾಡುತ್ತಿವೆ ಎಂದರೆ ಅಚ್ಚರಿಯಾಗಬಹುದು.
ಹೌದು, ಕೆಲ ಜನರಿಗೆ ಲಸಿಕೆಗಳು ಅಡ್ಡ ತೊಂದರೆಗಳನ್ನು ಹೆಚ್ಚಾಗಿ ನೀಡುತ್ತವೆ. ಅಂಥವರು ಸಾವಿರ ಜನರಲ್ಲಿ ಒಬ್ಬರು ಇರಬಹುದಷ್ಟೆ. ಆದರೆ, ಲಸಿಕೆ ದೇಹಕ್ಕೆ ಒಗ್ಗದವರು ಕೊರೋನಾ ಬಿಡಿ, ಯಾವುದೇ ಲಸಿಕೆಯನ್ನೂ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ ಎನ್ನುವುದು ವಿಚಿತ್ರ ಸತ್ಯ.
ಡಾ. ನಂದಿತಾ ಶಾ ಎನ್ನುವವರು ಈ ಬಗ್ಗೆ ವಿಸ್ತೃತವಾಗಿ ಒಂದಿಷ್ಟು ನೋಟಗಳನ್ನು ನೀಡುತ್ತಾರೆ. ಅವರ ಪ್ರಕಾರ, ಯಾವುದೇ ಲಸಿಕೆ ಇರಲಿ, ಅದು ಅನೈಸರ್ಗಿಕ. ನಿಸರ್ಗಕ್ಕೆ ಬಂದಿರುವ ವೈರಸ್ ನಮ್ಮ ದೇಹಕ್ಕೆ ಬಾರದಂತೆ ಮಾಡಲು ಕೃತ್ರಿಮವಾಗಿ ಮಾಡಿಕೊಂಡ ಪರಿಹಾರ.
ಲಸಿಕೆ ಯಾಕೆ ಬೇಡ?
ಡಾ.ನಂದಿತಾ ಶಾ ಅವರು ಲಸಿಕೆ ಯಾಕೆ ಬೇಡ ಎನ್ನುವ ನಿಟ್ಟಿನಲ್ಲಿ ಕೆಲವು ಅಂಶಗಳನ್ನು ಪಟ್ಟಿ ಮಾಡುತ್ತಾರೆ. ಅವುಗಳೆಂದರೆ,
• ರಕ್ತನಾಳಗಳಿಗೆ ನೇರವಾಗಿ ಪ್ರತಿಜನಕಗಳನ್ನು ಸೇರಿಸಲಾಗುತ್ತದೆ. ಇದು ನೈಸರ್ಗಿಕ ಮಾರ್ಗವಲ್ಲ. ಇದರಿಂದ ದೇಹಕ್ಕೆ ಆಘಾತವಾಗುತ್ತದೆ.
• ಲಸಿಕೆಗಳು ಬಾಹ್ಯ ಪ್ರೊಟೀನ್ ಅಂಶಗಳನ್ನು ಹೊಂದಿರುತ್ತವೆ. ಇದರಿಂದ ಆಟೊಇಮ್ಯೂನ್ ರೋಗಗಳು ಉಂಟಾಗಬಹುದು. ಆಟೊಇಮ್ಯೂನ್ ರೋಗಗಳು ಎಂದರೆ, ನಮ್ಮ ರೋಗ ನಿರೋಧಕ ವ್ಯವಸ್ಥೆಯೇ ನಮ್ಮ ದೇಹದ ಮೇಲೆ ದಾಳಿ ಮಾಡುವ ಸ್ಥಿತಿ. ಇಂಥ ಆಟೊಇಮ್ಯೂನ್ ರೋಗಗಳು ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿವೆ. ಇಂಥ 100ಕ್ಕೂ ಅಧಿಕ ರೋಗಗಳನ್ನು ಗುರುತಿಸಲಾಗಿದೆ! ಇವುಗಳನ್ನು ನಿಯಂತ್ರಿಸುವುದು ಕಷ್ಟ. ಸಮಸ್ಯೆಯನ್ನು ಗುರುತಿಸಲೇ ವರ್ಷಾನುಗಟ್ಟಲೆ ಬೇಕಾಗುತ್ತದೆ.
• ಲಸಿಕೆಗಳು ಪಾದರಸ, ಅಲ್ಯುಮಿನಿಯಂ ಅಂಶಗಳು ಹಾಗೂ ಇತರ ಪ್ರಿಸರ್ವೇಟಿವ್ ಗಳನ್ನು ಹೊಂದಿರುತ್ತವೆ. ಇವು ದೇಹಕ್ಕೆ ಹಾನಿ ಮಾಡಬಲ್ಲವು. ಅಲ್ಯುಮಿನಿಯಂ ಅಂಶವು ಅಲ್ಜೀಮರ್ ಗೆ ಕಾರಣವಾಗುತ್ತದೆ. ಇನ್ನು, ಪಾದರಸದ ಅಂಶ ಮಕ್ಕಳ ಮಿದುಳಿಗೆ ಹಾನಿಯುಂಟು ಮಾಡುತ್ತದೆ.
• ಗರ್ಭ ಧರಿಸಿದ ಹಸುವಿನ ರಕ್ತಸಾರ (ಎಫ್ ಬಿಎಸ್)ವನ್ನು ಲಸಿಕೆಗೆ ಬಳಸಲಾಗುತ್ತದೆ. ಇದರಿಂದ ಹಸುಗಳಲ್ಲಿರುವ ಕೆಲವು ಜಾತಿಯ ವೈರಸ್ ಅಥವಾ ಸೋಂಕುಕಾರಕ ಅಂಶ ನಮ್ಮ ದೇಹವನ್ನೂ ಪ್ರವೇಶಿಸಬಹುದು.
• ಕೋವಿಡ್-19 ಲಸಿಕೆ ಹೊಸ ತಂತ್ರಜ್ಞಾನವನ್ನು ಹೊಂದಿರುತ್ತದೆ. ಜೆನೆಟಿಕ್ ಅಂಶದ ಮೇಲೆ ಇದು ನೇರವಾಗಿ ಮಧ್ಯಪ್ರವೇಶಿಸುತ್ತದೆ. ಇದು ವ್ಯಕ್ತಿಯ ಜೆನೆಟಿಕ್ ಅಂಶವನ್ನು ಬದಲಾಯಿಸುವ ಜತೆಗೆ, ಕೆರಳಿಸಬಲ್ಲದು.
• ಯಾವುದೇ ಲಸಿಕೆಗಳು ಆಟಿಸಂ ಸಮಸ್ಯೆಗೆ ಕಾರಣವಾಗಬಲ್ಲವು.
• ಕೋವಿಡ್-19 ಲಸಿಕೆಯ ದೀರ್ಘಾವಧಿ ಪರಿಣಾಮಗಳ ಬಗ್ಗೆ ನಮಗಿನ್ನೂ ತಿಳಿದಿಲ್ಲ. ಲಸಿಕೆಯ ಪರಿಣಾಮ ಮುಂದಿನ 10 ವರ್ಷಗಳವರೆಗೆ ನಮಗೆ ತಿಳಿದುಬರುವುದಿಲ್ಲ.
• ವೈರಸ್ ಗಳು ರೂಪಾಂತರ ಹೊಂದುತ್ತವೆ. ಇನ್ ಫ್ಲುಯೆಂಜಾ ವೈರಸ್ ಗೆ ಕೆಲವರು ಪ್ರತಿ ವರ್ಷ ಲಸಿಕೆ ತೆಗೆದುಕೊಳ್ಳುತ್ತಾರೆ. ಹೀಗಾಗಿ, ಲಸಿಕೆ ಅಲ್ಪಾವಧಿ ರಕ್ಷಣೆ ನೀಡಿ, ದೀರ್ಘಾವಧಿ ಪರಿಣಾಮಗಳನ್ನು ನೀಡಬಹುದು.
• ಲಸಿಕೆ ತೆಗೆದುಕೊಂಡರೂ ಆ ನಿರ್ದಿಷ್ಟ ರೋಗ ಕೆಲವರಿಗೆ ಬಂದೇ ಬರುತ್ತದೆ.
• ಸಾಮಾನ್ಯವಾಗಿ ಲಸಿಕೆಗೆ ಶಾರ್ಕ್ ಗಳ ಯಕೃತ್ತಿನ ತೈಲವನ್ನು ಬಳಸಲಾಗುತ್ತದೆ. ಶಾರ್ಕ್ ಗಳು ಈಗಾಗಲೇ ಅಪಾಯದ ಅಂಚಿನಲ್ಲಿರುವ ಪ್ರಾಣಿವರ್ಗ ಎನ್ನುವುದು ನೆನಪಿನಲ್ಲಿರಲಿ.
ಅರಿವಿರಲಿ
ಹಾಗೆಂದು ಅವರು ಲಸಿಕೆಯನ್ನು ತಿರಸ್ಕರಿಸಿ ಎಂದು ಸಲಹೆ ಮಾಡುವುದಿಲ್ಲ. ಜನರಿಗೆ ಬೇಡ ಅನ್ನಿಸಿದರೆ ತಿರಸ್ಕರಿಸುವ ಆಯ್ಕೆ ಇದ್ದೇ ಇದೆ ಎಂದು ಹೇಳುತ್ತಾರೆ. ಆದರೆ, ಅವುಗಳ ಬಗ್ಗೆ ತಿಳಿದಿರುವುದು ಅಗತ್ಯ. ಯಾವುದೇ ಲಸಿಕೆಯಲ್ಲಿ ಎಂಆರ್ ಸಿ-5 ಅಂಶವಿದ್ದರೆ ತಿರಸ್ಕರಿಸುವ ಆಯ್ಕೆ ಜನರಿಗೆ ಇರುತ್ತದೆ. ಎಂಆರ್ ಸಿ-5 ಎಂದರೆ ಗರ್ಭಪಾತವಾಗಿರುವ ಭ್ರೂಣದ ಕೋಶ. ಇನ್ನೊಂದು ಮಾರ್ಗವೆಂದರೆ, ಇಂಟ್ರಾಜೆನಿಕ್ ಅಂಶವಿದೆಯೇ ಎಂದು ಖಾತ್ರಿಪಡಿಸಿಕೊಳ್ಳುವುದು. ಅಂದರೆ, ಪರಸ್ಪರ ಸಂವಾದಿಸುವ ಬೇರೆ ಬೇರೆ ಸಂಯುಕ್ತಗಳನ್ನು ಹೊಂದಿರುವ ಅಂಶ ಎಂದರ್ಥ. ಈ ಅಂಶವಿದ್ದರೂ ಯಾವುದೇ ವ್ಯಕ್ತಿ ಲಸಿಕೆಯನ್ನು ಬೇಡ ಎಂದು ಹೇಳುವ ಅಧಿಕಾರ ಹೊಂದಿರುತ್ತಾರೆ.

ಮತ್ತಷ್ಟು ಸುದ್ದಿಗಳು

Latest News

ತುಪ್ಪದ ಬೆಡಗಿ ರಾಗಿಣಿ ಇಂದು ಪರಪ್ಪನ ಅಗ್ರಹಾರದಿಂದ ಬಿಡುಗಡೆ

Newsics.com ಬೆಂಗಳೂರು: ಮಾದಕ ದ್ರವ್ಯ ಪ್ರಕರಣದಲ್ಲಿ ಬಂಧಿತರಾಗಿರುವ ನಟಿ ರಾಗಿಣಿ ದ್ವಿವೇದಿ ಇಂದು ಪರಪ್ಪನ ಅಗ್ರಹಾರ ಜೈಲ್ಲಿನಿಂದ ಬಿಡುಗಡೆಯಾಗಲಿದ್ದಾರೆ. ಸುಪ್ರೀಂಕೋರ್ಟ್ ಆದೇಶದ ಪ್ರತಿ ಅವರ ವಕೀಲರ ಕೈ ಸೇರಿದ್ದು,...

ಕೊರೋನಾ ಮಾರ್ಗ ಸೂಚಿ ಉಲ್ಲಂಘನೆ: ವಾಟಾಳ್ ವಿರುದ್ದ ಎಫ್ ಐ ಆರ್

Newsics.com ಬೆಂಗಳೂರು: ನಗರದಲ್ಲಿ ಕೊರೋನಾ ಮಾರ್ಗ ಸೂಚಿ ಉಲ್ಲಂಘಿಸಿ ಪ್ರತಿಭಟನೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದಂಡ ಪಾವತಿಸದಿರುವ ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ವಿರುದ್ಧ ಎಫ್ ಐ ಆರ್ ದಾಖಲಿಸಲಾಗಿದೆ. ಡಿಸೆಂಬರ್ 5, 2020ರಂದು ನಗರದ...

ಶಿವಮೊಗ್ಗ ದುರಂತ: ಇಂದು ಮುಖ್ಯಮಂತ್ರಿ ಯಡಿಯೂರಪ್ಪ ಭೇಟಿ

Newsics.com ಬೆಂಗಳೂರು: ದೇಶವನ್ನು ನಡುಗಿಸಿರುವ ಶಿವಮೊಗ್ಗ ಸಮೀಪದ  ಹುಣಸೋಡು ಸ್ಫೋಟ ಸಂಭವಿಸಿದ ಪ್ರದೇಶಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಇಂದು ಭೇಟಿ ನೀಡಲಿದ್ದಾರೆ. ದುರಂತದಲ್ಲಿ ಐದು ಮಂದಿ ಮೃತಪಟ್ಟಿರುವುದನ್ನು ಅಧಿಕೃತವಾಗಿ ದೃಢೀಕರಿಸಲಾಗಿದೆ. ಶಿವಮೊಗ್ಗ ನಗರದಿಂದ ಕೇವಲ ಎಂಟು ಕಿಲೋ...
- Advertisement -
error: Content is protected !!