Thursday, May 26, 2022

ಮಸಾಲೆ ಟೀ‌ ಕುಡಿದು ಆರೋಗ್ಯವಂತರಾಗಿ

Follow Us

ಮಸಾಲೆ ಚಹಾಕ್ಕೆ ದಾಲ್ಚಿನ್ನಿ , ಏಲಕ್ಕಿ ,ಒಣ ಶುಂಠಿಯಂತಹ ಮಸಾಲೆಗಳು ಹಾಗೂ ಗಿಡಮೂಲಿಕೆಗಳನ್ನು ಸೇರಿಸುವುದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಜ್ವರ, ಅಲರ್ಜಿಯನ್ನು ತೆಗೆದು ಹಾಕುತ್ತದೆ.
ಚಹಾಕ್ಕೆ ಮಸಾಲೆಗಳನ್ನು ಸೇರಿಸುವುದರಿಂದ ಇದು ಪರಿಮಳ ನೀಡುವುದಲ್ಲದೇ ಶಕ್ತಿಯನ್ನು ಪಡೆಯಲು ಸಹಕಾರಿ.

• ಡಾ.ಬಿ. ಅಹಲ್ಯಾ
newsics.com@gmail.com

ಬೆಳಗ್ಗೆ ಒಂದು ಕಪ್ ಬಿಸಿ ಮಸಾಲೆಯುಕ್ತ ಚಹಾ ಕುಡಿಯುವುದು ದೇಹಕ್ಕೆ ಬೇಕಾದ ಉಷ್ಣತೆಯನ್ನು ನೀಡುತ್ತದೆ. ದಾಲ್ಚಿನ್ನಿ , ಏಲಕ್ಕಿ , ಲವಂಗ, ಜಾಯಿಕಾಯಿ, ಕೇಸರಿ, ಶುಂಠಿ ಮಸಾಲೆಗಳು ದೇಹಕ್ಕೆ ಶಾಖವನ್ನು ನೀಡುತ್ತದೆ. ಜೀರ್ಣಕ್ರಿಯೆಗೆ ಸಹಕರಿಸುತ್ತದೆ. ಇದನ್ನು ಅತಿಯಾಗಿ ಕುಡಿಯುವುದು ಕೂಡ ಉತ್ತಮವಲ್ಲ.
ಚಹಾಕ್ಕೆ ಪೆನ್ನೆಲ್, ಕೇರಂ ಬೀಜಗಳನ್ನು ಸೇರಿಸುವುದರಿಂದ ಜೀರ್ಣಾಂಗ ವ್ಯವಸ್ಥೆ ಆರೋಗ್ಯವಾಗಿರುತ್ತದೆ. ದೇಹದಿಂದ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ.
ಮಸಾಲೆ ಚಹಾಕ್ಕೆ ದಾಲ್ಚಿನ್ನಿ , ಏಲಕ್ಕಿ ,ಒಣ ಶುಂಠಿಯಂತಹ ಮಸಾಲೆಗಳು ಹಾಗೂ ಗಿಡಮೂಲಿಕೆಗಳನ್ನು ಸೇರಿಸುವುದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಜ್ವರ, ಅಲರ್ಜಿಯನ್ನು ತೆಗೆದು ಹಾಕುತ್ತದೆ.
ಚಹಾಕ್ಕೆ ಮಸಾಲೆಗಳನ್ನು ಸೇರಿಸುವುದರಿಂದ ಇದು ಪರಿಮಳ ನೀಡುವುದಲ್ಲದೇ ಶಕ್ತಿಯನ್ನು ಪಡೆಯಲು ಸಹಕಾರಿ. ಜೀರ್ಣಕ್ರಿಯೆಗೆ ಪ್ರಯೋಜನಕಾರಿ.ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ.

ಚಹಾದಲ್ಲಿ ಮಸಾಲೆ ಬೆರೆಸಿ ಮತ್ತು ಬೆಳಿಗ್ಗೆ ಕುಡಿಯುವುದರಿಂದ ತೂಕ ಇಳಿಕೆಗೆ ನೆರವಾಗುತ್ತದೆ. ಲವಂಗ , ದಾಲ್ಚಿನ್ನಿ ಮತ್ತು ಜಾಯಿಕಾಯಿಯಂತಹ ಮಸಾಲೆಗಳು ತೂಕ ನಷ್ಟ ಪ್ರಕ್ರಿಯೆ ವೇಗವಾಗಿ ಸಾಗಲು ಸಹಾಯ ಮಾಡುತ್ತದೆ. ಈ ಮಸಾಲೆಗಳು ಕೊಬ್ಬನ್ನು ಸುಡಲು ಹಾಗೂ ಹಸಿವನ್ನು ಕಡಿಮೆ ಮಾಡಲು ನೆರವಾಗುತ್ತದೆ. ಇವು ಹೃದಯದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಅರಿಶಿನ ಹಾಗೂ ಲವಂಗದಂತಹ ಮಸಾಲೆಗಳು ಉರಿಯೂತದ ವಿರುದ್ಧ ಹೋರಾಡುತ್ತದೆ.ನೋವು ಹಾಗೂ ಗಾಯಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ.
ಇವುಗಳಿಂದ ಅನುಕೂಲವೂ ಇದೆ. ಅನಾನುಕೂಲವೂ ಇದೆ. ಮಸಾಲಾ ಟೀ ಸೇವನೆಯಿಂದ ಹೊಟ್ಟೆ ನೋವು , ಮಲಬದ್ಧತೆ ,ಅತಿಸಾರದಂತಹ ತೊಂದರೆ ಉಂಟಾಗಬಹುದು. ಇದರಲ್ಲಿ ಕೆಫೀನ್ ಇರುತ್ತದೆ.ಒತ್ತಡ ಹಾಗೂ ಆತಂಕದಿಂದ ಬಳಲುವವರಿಗೆ ಇದು ಒಳ್ಳೆಯದಲ್ಲ. ಯಾವುದೇ ನಿರ್ದಿಷ್ಟ ಮಸಾಲೆಯ ಅಲರ್ಜಿ ಇದ್ದರೆ ಮಸಾಲೆ ಟೀ ಸೇವಿಸಬೇಡಿ. ಬಿಪಿ ಸಮಸ್ಯೆ ಇದ್ದರೂ ಸೇವಿಸಬೇಡಿ.
ಮಸಾಲೆ ಟೀ ಕುಡಿಯಲು ಇಷ್ಟ ಪಡುತ್ತಿದ್ದರೆ ಒಂದು ಕಪ್ ಕುಡಿಯಬಹುದು ಎಂಬುದನ್ನು ನೆನಪಿಡಿ. ಮನೆಯಲ್ಲಿ ಇರುವ ಮಸಾಲೆಗಳಿಂದ ಟೀ ತಯಾರಿಸಿ. ಇದರಿಂದ ಹಾನಿಯಾಗದು.

ಮತ್ತಷ್ಟು ಸುದ್ದಿಗಳು

Latest News

ಪಾಟಿದಾರ್ ಶತಕದಾಟ: ಕ್ವಾಲಿಫೈಯರ್ 2 ತಲುಪಿದ ಫಾಫ್ ಪಡೆ

newsics.com ಕೋಲ್ಕತ್ತಾ: ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಐಪಿಎಲ್ 2022 ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 14ರನ್‌ಗಳ ಗೆಲುವು ಸಾಧಿಸಿದೆ. ಮಳೆಯ ಕಾರಣದಿಂದಾಗಿ ಕೊಂಚ ತಡವಾಗಿ...

ಉಗ್ರರ ಗುಂಡಿಗೆ ಟಿವಿ‌ ಕಲಾವಿದೆ ಬಲಿ

newsics.com ಶ್ರೀನಗರ: ಉಗ್ರರ ಗುಂಡಿಗೆ ಟಿವಿ ಕಲಾವಿದೆಯೊಬ್ಬರು ಬಲಿಯಾಗಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಬದ್ಗಾಮ್‌ ಜಿಲ್ಲೆಯಲ್ಲಿ ಬುಧವಾರ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತ ಮಹಿಳೆಯನ್ನು ಕಲಾವಿದೆ ಅಮ್ರೀನ್‌ ಭಟ್‌ ಎಂದು ಗುರುತಿಸಲಾಗಿದೆ. ಅಮ್ರೀನ್...

ಪೆಟ್ರೋಲಿಲ್ಲ, ಎಟಿಎಂನಲ್ಲಿ ಹಣವಿಲ್ಲ: ಪಾಕ್ ಸರ್ಕಾರದ ವಿರುದ್ಧ ಹಫೀಜ್ ವಾಗ್ದಾಳಿ

newsics.com ಇಸ್ಲಾಮಾಬಾದ್: ಪಾಕಿಸ್ತಾನದ ಸ್ಥಿತಿಗತಿಗಳ ಬಗೆಗೆ ಮಾಜಿ ಕ್ರಿಕೆಟಿಗ ಮೊಹಮ್ಮದ್ ಹಫೀಜ್ ಅವರು ಕಿಡಿಕಾರಿದ್ದಾರೆ. ಲಾಹೋರ್ ನಲ್ಲಿ ಜನ ಸಾಮಾನ್ಯರಿಗೆ ಪೆಟ್ರೋಲ್ ಸಿಗುತ್ತಿಲ್ಲ. ಎಟಿಎಂನಲ್ಲಿ ಹಣವಿಲ್ಲ ಎಂದು ಹೇಳಿದ್ದಾರೆ. ಯಾವುದೇ ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್...
- Advertisement -
error: Content is protected !!