newsics.com
ವಾಷಿಂಗ್ಟನ್; ಭಾರತದಲ್ಲಿ ಅತಿ ಹೆಚ್ಚು ಸೇವಿಸುವ ಪಾನೀಯವೆಂದರೆ ಅದು ಚಹಾ. ವಿವಿಧ ರೀತಿಯ ಚಹಾ ತಯಾರಿಸಿ ಸೇವನೆ ಮಾಡುತ್ತೇವೆ. ಚಹಾ ಸೇವನೆಯಿಂದ ಸಾವಿನ ಅಪಾಯ ಕಡಿಮೆಯಾಗಲಿದೆ ಎಂದು ಅಧ್ಯಯನವೊಂದು ತಿಳಿಸಿದೆ.
ಯುನೈಟೆಡ್ ಕಿಂಗ್ಡಮ್ನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ನ ಭಾಗವಾದ ನ್ಯಾಷನಲ್ ಕ್ಯಾನ್ಸರ್ ಇನ್ಸ್ಟಿಟ್ಯೂಟ್ನ ಸಂಶೋಧಕರು ಈ ಅಧ್ಯಯನವನ್ನು ನಡೆಸಿದ್ದಾರೆ.
ವರದಿಯಲ್ಲಿ ಪ್ರತಿದಿನ ಎರಡು ಅಥವಾ ಅದಕ್ಕಿಂತ ಹೆಚ್ಚು ಕಪ್ ಚಹಾವನ್ನು ಸೇವಿಸುವ ಜನರು ಚಹಾವನ್ನು ಸೇವಿಸದ ಜನರಿಗಿಂತ ಶೇ. 9 ರಿಂದ ಶೇ. 13 ರಷ್ಟು ಸಾವಿನ ಅಪಾಯದಿಂದ ದೂರವಿದ್ದಾರೆ ಎಂದು ಪತ್ತೆ ಮಾಡಲಾಗಿದೆ.
ಅಲ್ಲದೆ ಹೃದಯರಕ್ತನಾಳದ ಕಾಯಿಲೆ, ರಕ್ತಕೊರತೆಯ ಹೃದಯ ಕಾಯಿಲೆ ಮತ್ತು ಪಾರ್ಶ್ವವಾಯು ಅಪಾಯವನ್ನೂ ಕೂಡ ಕಡಿಮೆ ಮಾಡುತ್ತದೆ ಎನ್ನಲಾಗಿದೆ. ಹೀಗಾಗಿ ಚಹಾ ಸೇವನೆಯಿಂದ ಆಯಸ್ಸು ಹೆಚ್ಚುತ್ತದೆ ಎಂದು ಅಧ್ಯಯನ ತಿಳಿಸಿದೆ.