Wednesday, July 6, 2022

ಗಾಂಧಾರಿ ಮೆಣಸಿನ ಖಾರದ ಜತೆಗಿದೆ ಹಲವು ಮನೆಮದ್ದು!

Follow Us

ಗಾಂಧಾರಿ ಮೆಣಸು ಜೀರ್ಣಕ್ರಿಯೆಗೆ ಸಹಕಾರಿ. ಹಾಗೆಯೇ ಬೊಜ್ಜು ಕರಗಿಸಲು ಕೂಡ ಸಹಾಯ ಮಾಡುತ್ತದೆ. ಇದು ರೋಗಾಣುಗಳೊಂದಿಗೆ ಹೋರಾಡುವುದರ ಜತೆ ರಕ್ತದೊತ್ತಡವನ್ನು ಹತೋಟಿಯಲ್ಲಿ ಇರಿಸಲು ಸಹಕಾರಿ.

• ಸೀಮಾ
newsics.com@gmail.com

ಇದು ಒಂದು ರೀತಿಯಲ್ಲಿ ಕಾಯಿಮೆಣಸಿನ ಮಿನಿಯೇಚರ್. ಇದನ್ನು ಗಾಂಧಾರಿ ಮೆಣಸು, ಲವಂಗ ಮೆಣಸು, ಸೂಜಿ ಮೆಣಸು, ಜೀರಿಗೆ ಮೆಣಸು ಹೀಗೆ ಹಲವು ಹೆಸರಿನಿಂದ ಕರೆಯಲಾಗುತ್ತದೆ. ಇದರ ಇಂಗ್ಲೀಷ್ ನಾಮಧೇಯ ಬರ್ಡ್ಸ್ ಐ.
ಇದು ಅತ್ಯಂತ ಖಾರದ ಮೆಣಸುಗಳ ಜಾತಿಗೆ ಸೇರುತ್ತದೆ. ಜೊತೆಗೆ ಹಲವು ಔಷಧೀಯ ಗುಣಗಳನ್ನು ಹೊಂದಿದೆ. ಇದನ್ನು ಬೆಳೆಸಲು ಹೆಚ್ಚಿನ ಆರೈಕೆ ಅವಶ್ಯಕತೆ ಇಲ್ಲ. ಹಳ್ಳಿಗಳಲ್ಲಿ ಕೃಷಿ ಭೂಮಿಯಲ್ಲಿ ಇದು ಸಾಮಾನ್ಯವಾಗಿ ತಾನಾಗಿಯೇ ಹುಟ್ಟಿ ಬೆಳೆಯುವ ಗಿಡವಾಗಿದೆ. ಪ್ರಮುಖವಾಗಿ ಹಸಿರು ಹಾಗೂ ಬಿಳಿ ಬಣ್ಣದ ಜೀರಿಗೆ ಮೆಣಸುಗಳನ್ನು ಕಾಣಬಹುದು. ಇವು ಕೂಡ ಹಣ್ಣಾದಾಗ ಕೆಂಪುಬಣ್ಣವನ್ನು ಹೊಂದಿರುತ್ತವೆ.

ಕಾಯಿಮೆಣಸಿಗೆ ಪರ್ಯಾಯವಾಗಿ ಇದನ್ನು ಬಳಸಲಾಗುತ್ತದೆ. ಇವುಗಳನ್ನು ಒಣಗಿಸಿ, ಇಟ್ಟುಕೊಂಡು ಬೇಕಾದಾಗ ಹುರಿದು ಅನ್ನದ ಅಥವಾ ಇತರ ಊಟದ ಜೊತೆ ತಿನ್ನಬಹುದು. ಜೊತೆಗೆ ಗಾಂಧಾರಿ ಮೆತತ್ವಣಸಿನ ನ್ಯಾಚುರಲ್ ಐಸ್ಕ್ರೀಂ ಕೂಡ ಮಾರುಕಟ್ಟೆಯಲ್ಲಿದೆ. ಗಾಂಧಾರಿ ಮೆಣಸು ರುಚಿಯನ್ನು ಹೊಂದಿರುತ್ತದೆ. ಮೊದಲು ಕಡುಜನ್ಯವೆಂದು ನಿರ್ಲಕ್ಷಿಸಲಾಗಿದ್ದ ಈ ಲವಂಗ ಮೆಣಸಿಗೆ ಈಗ ಮಾರುಕಟ್ಟೆಯಲ್ಲಿ ಒಳ್ಳೆಯ ಬೆಲೆಯಿದೆ. ಅನೇಕ ಮಂದಿ ಇದನ್ನೇ ಒಂದು ಕೃಷಿಯನ್ನಾಗಿ ಸ್ವೀಕರಿಸಿದ್ದಾರೆ.
ಈ ಮೆಣಸು ಜೀರ್ಣಕ್ರಿಯೆಗೆ ಸಹಕಾರಿ. ಹಾಗೆಯೇ ಬೊಜ್ಜು ಕರಗಿಸಲು ಕೂಡ ಸಹಾಯ ಮಾಡುತ್ತದೆ. ಇದು ರೋಗಾಣುಗಳೊಂದಿಗೆ ಹೋರಾಡುವುದರ ಜತೆ ರಕ್ತದೊತ್ತಡವನ್ನು ಹತೋಟಿಯಲ್ಲಿ ಇರಿಸಲು ಸಹಕಾರಿ. ಉರಿಊತಗಳನ್ನು, ಗುಳ್ಳೆಗಳನ್ನು, ಹಳ್ಳು ನೋವು ಹಾಗೂ ಸಂಧಿವಾತ, ಸ್ನಾಯು ಸೆಳೆತವನ್ನು ಕಡಿಮೆ ಮಾಡಲು ಇದನ್ನು ಬಳಸಲಾಗುತ್ತದೆ. ಇದು ಹೃದಯ ಹಾಗೂ ಒಸಡಿನ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಲಾಗುತ್ತದೆ. ಇಷ್ಟೇ ಅಲ್ಲ ಇದರ ಸೇವನೆಯಿಂದ ದೇಹಕ್ಕಾಗುವ ಪ್ರಯೋಜನಗಳು ಅನೇಕ.

ಮತ್ತಷ್ಟು ಸುದ್ದಿಗಳು

vertical

Latest News

ವಿದ್ಯಾರ್ಥಿಗೆ ಲೈಂಗಿಕ ಕಿರುಕುಳ ನೀಡಿದ ಐಎಎಸ್ ಅಧಿಕಾರಿಯ ಬಂಧನ

newsics.com ಜಾರ್ಖಂಡ್‌: ಜಾರ್ಖಂಡ್‌ನಲ್ಲಿ ಐಐಟಿ ವಿದ್ಯಾರ್ಥಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಖುಂಟಿ ಉಪವಿಭಾಗಾಧಿಕಾರಿ ಸಯ್ಯದ್ ರಿಯಾಜ್ ಅಹಮದ್ ಅವರನ್ನು ಸೋಮವಾರ ಬಂಧಿಸಲಾಗಿದೆ ಎಂದು ಪೊಲೀಸರು...

ರಾಜ್ಯದಲ್ಲಿ ಮಳೆಯ ಅಬ್ಬರ, ಚಿಕ್ಕಮಗಳೂರು ಸಹಿತ ಹಲವು ಜಿಲ್ಲೆಗಳಲ್ಲಿ ರಜೆ ಘೋಷಣೆ

newsics.com ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ಮಲೆನಾಡು, ಕರಾವಳಿ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುತ್ತಿದೆ. ಎಡೆಬಿಡದೆ ಸುರಿಯುತ್ತಿರುವ ಮಳೆಯ ಹಿನ್ನೆಲೆಯಲ್ಲಿ ಶಿವಮೊಗ್ಗದ ಮೂರು ತಾಲೂಕುಗಳಲ್ಲಿ ಶಾಲೆಗೆ ರಜೆ ಘೋಷಿಸಲಾಗಿದೆ. ಸಾಗರ, ಹೊಸನಗರ ಮತ್ತು...

ಇಂದು ಚಂದ್ರಶೇಖರ್ ಗುರೂಜಿ ಅಂತ್ಯಕ್ರಿಯೆ

newsics.com ಹುಬ್ಬಳ್ಳಿ:  ದುಷ್ಕರ್ಮಿಗಳ ಚೂರಿ ಇರಿತದಿಂದ ಮೃತಪಟ್ಟಿರುವ ಸರಳ ವಾಸ್ತು ಖ್ಯಾತಿಯ ಚಂದ್ರ ಶೇಖರ್ ಗುರೂಜಿ ಅಂತ್ಯಕ್ರಿಯೆ ಇಂದು ಮಧ್ಯಾಹ್ನ ನಡೆಯಲಿದೆ. ಹುಬ್ಬಳ್ಳಿ ಹೊರವಲಯದಲ್ಲಿರುವ ಅವರ ಜಮೀನಿನಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಸದಸ್ಯರು...
- Advertisement -
error: Content is protected !!