ಗೋವಾ ರಾಜ್ಯದಲ್ಲಿ ಕೆಲಸ ಮಾಡುವ ಶೇ.31 ರಷ್ಟು ಐಟಿ ಉದ್ಯೋಗಿಗಳು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ. ಶೇ.40 ಕ್ಕೂ ಅಧಿಕ ಜನರು ಬೊಜ್ಜಿನ ಸಮಸ್ಯೆಯಿಂದ ನರಳುತ್ತಿದ್ದಾರೆ.
ಕರಾವಳಿ ರಾಜ್ಯದಲ್ಲಿ ಕೆಲಸ ಮಾಡುವ ಐಟಿ ವೃತ್ತಿಪರರ ಅಧ್ಯಯನದಿಂದ ಈ ಮಾಹಿತಿ ಬಹಿರಂಗವಾಗಿದೆ. ಅಧ್ಯಯನ ವೇಳೆ
118 ಉದ್ಯೋಗಿಗಳನ್ನು ಸಂದರ್ಶಿಸಿದ್ದು, 63 ಜನ ಸಾಮಾನ್ಯ ದೇಹ ತೂಕ, 40 ಜನ ಅಧಿಕ ತೂಕ, ಏಳು ಜನ ಕಡಿಮೆ ತೂಕ, 6 ಜನ ಕ್ಲಾಸ್ ಒನ್ ಒಬೆಸಿಟಿ, ಇಬ್ಫ್ಬು ಬೊಜ್ಜಿನ ಸಮಸ್ಯೆಯಿಂದ ನರಳುತ್ತಿದ್ದುದು ಗೊತ್ತಾಗಿದೆ.
ಮೂವತ್ತೇಳು ಮಂದಿ ಅಧಿಕ ರಕ್ತದೊತ್ತಡ ಹೊಂದಿದ್ದರೆ, 50 ಮಂದಿ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರು. 13 ಜನ ಮಧುಮೇಹ ಮೆಲ್ಲಿಟಸ್ ಮತ್ತು ಮೂವರು ಮಧುಮೇಹ ಪೂರ್ವದಲ್ಲಿ ಹೊಂದಿದ್ದರು ಎಂಬುದನ್ನು ಅಧ್ಯಯನದಲ್ಲಿ ಗಮನಿಸಲಾಗಿದೆ.
ಗೋವಾದ ನಾಲ್ಕು ಉನ್ನತ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 118 ಐಟಿ ವೃತ್ತಿಪರರ ಆರೋಗ್ಯ ದಾಖಲೆಗಳಿಂದ ಅಧ್ಯಯನದ ಡೇಟಾವನ್ನು ಸಂಗ್ರಹಿಸಲಾಗಿದೆ.
ಗೋವಾ ಐಟಿ ಮಂದಿಗೆ ಹೈ ಬಿಪಿ, ಬೊಜ್ಜಿನ ಸಮಸ್ಯೆ
Follow Us