Tuesday, July 5, 2022

ಕೆಂಪು ಸೇಬಿಗಿಂತ‌ ಹಸಿರು ಆ್ಯಪಲ್ ಬೆಸ್ಟ್

Follow Us

ಹಸಿರು ಸೇಬಿನ ಸೇವನೆಯಿಂದ ಉತ್ಕರ್ಷಣ ನಿರೋಧಕ ಶಕ್ತಿ ಹೆಚ್ಚುತ್ತದೆ. ಯಕೃತ್ ಹಾಗೂ ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯವಾಗಿರಿಸುತ್ತದೆ. ಮಹಿಳೆಯರನ್ನು ಕಾಡುವ ಟೈಪ್ -2 ಮಧುಮೇಹದಿಂದ ಆರೋಗ್ಯವಾಗಿರಲು ಹಸಿರು ಸೇಬು ಸೇವನೆ ಅತ್ಯುತ್ತಮ.

• ಡಾ.ಅಹಲ್ಯಾ
newsics.com@gmail.com

“An Apple a day, Keeps the Doctor away” ಎಂಬ ಮಾತಿದೆ. ಹಲವು ಪೋಷಕಾಂಶಗಳನ್ನು ಹೊಂದಿರುವ ಸೇಬು ಹಣ್ಣು ತಿನ್ನುವುದರಿಂದ ಆರೋಗ್ಯಕ್ಕೆ ಒಳ್ಳೆಯದು. ಆದರೆ ಮುಖ್ಯವಾದ ವಿಚಾರವೆಂದರೆ ಕೆಂಪು ಸೇಬಿಗಿಂತಲೂ ಹಸಿರು ಸೇಬು ಹಣ್ಣು ಮತ್ತೂ ಒಳ್ಳೆಯದು. ಪ್ರೊಟೀನ್, ವಿಟಮಿನ್, ನಾರಿನಂಶ ಅಧಿಕವಾಗಿರುವ ಈ ಹಸಿರು ಸೇಬು ಸೇವನೆಯಿಂದ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ.
ಸವಿಯಲು ರುಚಿಯಾಗಿರುವ ಹಸಿರು ಸೇಬು ವೃದ್ಧಾಪ್ಯದಲ್ಲಿ ಕಾಡುವ ಅಲ್ಜೈಮರ್ ಖಾಯಿಲೆಯನ್ನು ತಡೆಯುತ್ತದೆ. ಇನ್ನು ಹಸಿರು ಸೇಬಿನಲ್ಲಿರುವ ಕ್ಯಾಲ್ಸಿಯಂ ಪೊಟಾಷ್ಯಿಯಂ, ವಿಟಮಿನ್ ಕೆ ಅಧಿಕವಾಗಿದ್ದು ಮೂಳೆಗಳಿಗೆ ಬಲ ನೀಡುತ್ತದೆ.

ಚರ್ಮದ ರಕ್ಷಣೆಗೆ ಅಗತ್ಯವಿರುವ ಪೋಷಕಾಂಶಗಳನ್ನು ಕೂಡಾ ಇದು ಒದಗಿಸುತ್ತದೆ. ವಿಟಮಿನ್ ಎ, ಸಿ ಹಾಗೂ ಆಂಟಿಆಕ್ಸಿಡೆಂಟ್‌ಗಳು ಇದರಲ್ಲಿ ಇರುವುದರಿಂದ ಚರ್ಮ ಸುಕ್ಕಾಗುವುದನ್ನು ತಡೆಯುತ್ತದೆ. ಚರ್ಮದ ಆರೋಗ್ಯ ಕಾಪಾಡುವುದಲ್ಲದೇ ಚರ್ಮದ ಕ್ಯಾನ್ಸರ್ ಬಾರದಂತೆ ಮಾಡುತ್ತದೆ.
ಇದನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಅಸ್ತಮಾದ ಅಪಾಯವನ್ನು ಕಡಿಮೆ ಮಾಡುತ್ತದೆ. ಹಸಿರು ಸೇಬಿನಲ್ಲಿರುವ ಪೋಷಕಾಂಶಗಳು ದೇಹದಲ್ಲಿ ಇರುವ ಅನಗತ್ಯ ಕೊಬ್ಬನ್ನು ಕರಗಿಸಲು ಸಹಾಯಕವಾಗಿವೆ. ಹಸಿರು ಸೇಬಿನ ಸೇವನೆಯಿಂದ ಉತ್ಕರ್ಷಣ ನಿರೋಧಕ ಶಕ್ತಿ ಹೆಚ್ಚುತ್ತದೆ. ಯಕೃತ್ ಹಾಗೂ ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯವಾಗಿರಿಸುತ್ತದೆ.
ಮಹಿಳೆಯರನ್ನು ಕಾಡುವ ಟೈಪ್ -2 ಮಧುಮೇಹದಿಂದ ಆರೋಗ್ಯವಾಗಿರಲು ಹಸಿರು ಸೇಬು ಸೇವನೆ ಮಾಡುವುದು ಉತ್ತಮ.

ಮತ್ತಷ್ಟು ಸುದ್ದಿಗಳು

vertical

Latest News

ಕಾಲಿಗೆ ನಮಸ್ಕಾರ ಮಾಡುವ ನಾಟಕ: ಚಂದ್ರಶೇಖರ್ ಗುರೂಜಿಗೆ 70 ಬಾರಿ ಇರಿದ ದುಷ್ಕರ್ಮಿಗಳು

newsics.com ಹುಬ್ಬಳ್ಳಿ: ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿ ಮೇಲೆ ದುಷ್ಕರ್ಮಿಗಳು 70 ಬಾರಿ ಇರಿದು ಹತ್ಯೆ ಮಾಡಿದ್ದಾರೆ.  ಅತ್ಯಂತ ಭೀಕರವಾಗಿ ಚುಚ್ಚಿ ಚುಚ್ಚಿ ಹತ್ಯೆ ಮಾಡಲಾಗಿದೆ. ಇಬ್ಬರು...

ಕರಾಚಿಯಲ್ಲಿ ತುರ್ತು ಭೂ ಸ್ಪರ್ಶ ಮಾಡಿದ ಸ್ಪೈಸ್ ಜೆಟ್

newsics.com ನವದೆಹಲಿ:  ದೆಹಲಿಯಿಂದ  ದುಬೈಗೆ ಪ್ರಯಾಣಿಸುತ್ತಿದ್ದ ಸ್ಪೈಸ್ ಜೆಟ್ ವಿಮಾನ ತಾಂತ್ರಿಕ ದೋಷದ ಕಾರಣ ಕರಾಚಿಯಲ್ಲಿ ತುರ್ತು ಭೂ ಸ್ಪರ್ಶ  ಮಾಡಿದೆ. ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದ ತಕ್ಷಣ ಪೈಲಟ್ ಕರಾಚಿ ವಿಮಾನ ನಿಲ್ದಾಣ...

ಚಾಕು ಇರಿದು ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿ ಕೊಲೆ

newsics.com ಹುಬ್ಬಳ್ಳಿ: ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ್‌ ಗುರೂಜಿ ಹುಬ್ಬಳ್ಳಿಯ ಖಾಸಗಿ ಹೋಟೆಲ್‌ನಲ್ಲಿ ಕೊಲೆಯಾಗಿದ್ದಾರೆ. ಭಕ್ತರ ಸೋಗಿನಲ್ಲಿ ಬಂದ ದುಷ್ಕರ್ಮಿಗಳು ಚಾಕು ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಸರಳ ವಾಸ್ತು ಸಲಹೆ ನೀಡುವ ಮೂಲಕ ಹಲವರ ಬಾಳಿಗೆ...
- Advertisement -
error: Content is protected !!