Wednesday, July 6, 2022

‘ಮನೆ ವೈದ್ಯ’ ನೋಡಾ ನಿಮುಡಾ

Follow Us

ಬಿಸಿನೀರು- ಲಿಂಬೆರಸದ ಮೋಡಿಯ ಬಗ್ಗೆ 2 ವಾರಗಳ ಹಿಂದೆ ಇದೇ ಅಂಕಣದಲ್ಲಿ ಬರೆಯಲಾಗಿತ್ತು. ಲಿಂಬೆಯ ಮತ್ತಷ್ಟು ಬಳಕೆಯ ವಿವರ ಇಲ್ಲಿದೆ. ಲೋ ಬಿ.ಪಿ. ಸಮಸ್ಯೆಗೆ, ಕ್ಯಾನ್ಸರ್ ತಡೆಗೆ ಲಿಂಬೆಹಣ್ಣು ಅತ್ಯುತ್ತಮ. ಲಿಂಬೆಹಣ್ಣಿನ ಸಿಪ್ಪೆಯಲ್ಲಿ ಮೂರು ಪಟ್ಟು ಅಧಿಕ ಪೋಷಕಾಂಶವಿದೆ.

 

♦ ಡಾ. ಸುಮನ್
newsics.com@gamil.com


 ರಿತು ಬಳಸಿದರೆ ಲಿಂಬೆಹಣ್ಣು ಮನೆಯಲ್ಲೇ ಇರುವ ವೈದ್ಯನಂತೆ. ವಿಟಮಿನ್ ಸಿ, ವಿಟಮಿನ್ ಬಿ, ಫೋಲಿಕ್ ಆಮ್ಲ, ಫಾಸ್ಫರಸ್, ಮೆಗ್ನೇಷಿಯಂ, ಕ್ಯಾಲ್ಶಿಯಂ ಅನ್ನು ಹೇರಳವಾಗಿ ಹೊಂದಿರುವ ಲಿಂಬೆಹಣ್ಣನ್ನು ಸೀಮಿತವಾಗಿ ಬಳಕೆ ಮಾಡುವವರೇ ಹೆಚ್ಚು. ಲಿಂಬೆಹಣ್ಣನ್ನು ಬಹಳಷ್ಟು ರೀತಿಯಲ್ಲಿ ಬಳಕೆ ಮಾಡಬಹುದು. ಸಾಮಾನ್ಯ ದಿನಗಳಲ್ಲೂ ನಿಯಮಿತವಾಗಿ ಬಳಸಿದರೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
ನಿಮಗೆ ಗೊತ್ತೇ? ಲಿಂಬೆಹಣ್ಣಿನ ರಸಕ್ಕಿಂತ ಅದರ ಸಿಪ್ಪೆಯಲ್ಲಿ ಮೂರು ಪಟ್ಟು ಅಧಿಕ ಪೋಷಕಾಂಶವಿದೆ. ಹೀಗಾಗಿ, ಲಿಂಬೆಯನ್ನು ಬಳಸುವಾಗ ಅದರ ಸಿಪ್ಪೆಯನ್ನೂ ಬಳಸಿದರೆ ಹೆಚ್ಚು ಅನುಕೂಲ. ಮುಖ್ಯವಾಗಿ ಪಾನಕ ಮಾಡುವಾಗ ಸಿಪ್ಪೆಯನ್ನೂ ಬಳಸಲು ಯತ್ನಿಸಬಹುದು.
ಲಿಂಬೆಯ ಪ್ರಯೋಜನ ಬಹಳಷ್ಟು
• ಕಡಿಮೆ ರಕ್ತದೊತ್ತಡ (ಲೋ ಬಿ.ಪಿ) ಸಮಸ್ಯೆ ಕಂಡುಬಂದಲ್ಲಿ ತಕ್ಷಣದ ಚೇತರಿಕೆಗೆ ಲಿಂಬೆಹಣ್ಣು ಅತ್ಯುತ್ತಮ ಪರಿಹಾರ. ಲಿಂಬೆರಸಕ್ಕೆ ನೀರು, ಸ್ವಲ್ಪ ಉಪ್ಪು ಸೇರಿಸಿ ಕುಡಿದರೆ ಬಿಪಿ ತಕ್ಷಣ ಸರಿಯಾಗುತ್ತದೆ. ತಲೆಸುತ್ತುವುದು ನಿಂತುಹೋಗುತ್ತದೆ. ಲಿಂಬೆ ಸಿಪ್ಪೆಯ ಒಗರನ್ನೂ ಸೇರಿಸುವುದು ಉತ್ತಮ.
• ಸಣ್ಣಗೆ ಕುದಿಯುತ್ತಿರುವ ನೀರಿಗೆ 10-12 ಲಿಂಬೆ ಎಲೆಗಳನ್ನು ಹಾಕಿ ಇಳಿಸಿಕೊಂಡು ಮುಖಕ್ಕೆ ಹಬೆ ತೆಗೆದುಕೊಳ್ಳುವುದರಿಂದ ಸೈನಸ್ ತಲೆನೋವು ಶೀಘ್ರ ಕಡಿಮೆಯಾಗುತ್ತದೆ. ಶೀತ, ನೆಗಡಿ ಆಗಿದ್ದಲ್ಲಿ ನಿವಾರಣೆಯಾಗುತ್ತದೆ.
• ಒಂದು ಲೋಟ ನೀರಿಗೆ ಅರ್ಧ ಲಿಂಬೆಹಣ್ಣನ್ನು ಹಿಂಡಿಕೊಂಡು, ಅದಕ್ಕೆ ನಾಲ್ಕೈದು ಹನಿ ಹಸಿಶುಂಠಿ ರಸ ಹಾಗೂ ಕಾಲು ಚಮಚ ಜೀರಿಗೆ ಪುಡಿ ಸೇರಿಸಿ ಚೆನ್ನಾಗಿ ಕಲಕಿ ಜ್ಯೂಸ್ ನಂತೆ ಮಾಡಿಕೊಂಡು ಸೇವಿಸುವುದರಿಂದ ಹೊಟ್ಟೆಯುಬ್ಬರ ಇಳಿಯುತ್ತದೆ. ಅಜೀರ್ಣ ಮಾಯವಾಗುತ್ತದೆ.

ಬಿಸಿನೀರು, ಲಿಂಬೆ ಜೋಡಿ ಮಾಡತ್ತೆ ಮೋಡಿ

• ಕೆಲವೊಮ್ಮೆ ಆಯಾಸದಿಂದ ತಲೆನೋವು ಬರುತ್ತದೆ. ಆ ಸಮಯದಲ್ಲಿ ಲಿಂಬೆಯ ಸಿಪ್ಪೆ ಹಾಗೂ ಎಲೆಗಳನ್ನು ರುಬ್ಬಿ ಪೇಸ್ಟ್ ಮಾಡಿ ಹಣೆಗೆ ಹಚ್ಚುವುದರಿಂದ ಅರ್ಧಗಂಟೆಯಲ್ಲಿ ತಲೆನೋವು ಮಾಯವಾಗುತ್ತದೆ.
• ಗಂಟಲು ನೋವು ಕಂಡುಬಂದಾಗ ಸ್ವಲ್ಪ ನೀರಿಗೆ ಲಿಂಬೆ ಎಲೆಗಳನ್ನು ಹಾಕಿ ಕುದಿಸಬೇಕು. ಅದಕ್ಕೆ ಸ್ವಲ್ಪ ಅರಿಶಿಣ ಹಾಕಿ ಬಸಿದುಕೊಂಡು ಗಾರ್ಗಲ್ ಮಾಡುವುದರಿಂದ ಟಾನ್ಸಿಲೈಟಿಸ್ ಸಮಸ್ಯೆ ಕಡಿಮೆಯಾಗುತ್ತದೆ.
• ಲಿಂಬೆಯನ್ನು ಕತ್ತರಿಸಿ ಚರ್ಮದ ಮೇಲೆ ಸವರುವುದರಿಂದ ಸೊಳ್ಳೆ ಕಡಿಯುವುದಿಲ್ಲ ಎನ್ನುವ ಸಂಗತಿ ಬಹುತೇಕರಿಗೆ ತಿಳಿದಿರಲಿಕ್ಕಿಲ್ಲ. ಪ್ರಯತ್ನಿಸಿ ನೋಡಿ.
• ಸೌಂದರ್ಯವರ್ಧಕವಾಗಿಯೂ ಲಿಂಬೆಯನ್ನು ಬಳಸಬಹುದು. ಲಿಂಬೆರಸ, ಕಸ್ತೂರಿ ಅರಿಶಿಣ, ಜೇನುತುಪ್ಪವನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಮುಖಕ್ಕೆ ಫೇಸ್‌ಪ್ಯಾಕ್ ನಂತೆ ಹಚ್ಚಿಕೊಂಡರೆ, ಮುಖದಲ್ಲಿನ ಕಪ್ಪುಕಲೆ, ಮೊಡವೆ ಮಾಯವಾಗಿ, ಕಾಂತಿ ಹೆಚ್ಚುತ್ತದೆ.
• ಸೊಳ್ಳೆ ಅಥವಾ ಯಾವುದೇ ಚಿಕ್ಕಪುಟ್ಟ ಕೀಟಗಳು ಕಚ್ಚಿ ಉರಿಯಾಗುತ್ತಿದ್ದರೆ ಲಿಂಬೆರಸವನ್ನು ಸವರಬೇಕು. ಒಂದು ಕ್ಷಣ ಉರಿ ಹೆಚ್ಚಾದಂತೆ ಕಂಡರೂ ಬಳಿಕ ತಕ್ಷಣಕ್ಕೆ ನಿಂತೇ ಹೋಗುತ್ತದೆ.
• ಲಿಂಬೆರಸವನ್ನು ನೀರಿಗೆ ಹಾಕಿ, ಜೇನುತುಪ್ಪದೊಂದಿಗೆ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಬೊಜ್ಜು ಇಳಿಯುತ್ತದೆ. ಲಿವರ್‌ನಲ್ಲಿ ಸಂಗ್ರಹವಾಗುವ ಕೊಬ್ಬು ಕರಗುತ್ತದೆ.
• ಲಿಂಬೆಯಲ್ಲಿರುವಂತಹ ಸೆಲ್ವೆಸ್ಟ್ರೋಲ್ ಮತ್ತು ಲೆಮನೋನ್ ಅಂಶಗಳು ತುಂಬ ಉಪಯುಕ್ತವಾಗಿವೆ. ಇವು ಕ್ಯಾನ್ಸರ್ ಕೋಶಗಳು ವೃದ್ಧಿಯಾಗುವ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತವೆ.
• ಲಿಂಬೆಯನ್ನು ಕತ್ತರಿಸಿ ಕೂದಲಿನ ಬುಡಕ್ಕೆ ತಿಕ್ಕುವುದರಿಂದ ತಲೆಹೊಟ್ಟು ನಿವಾರಣೆಯಾಗುತ್ತದೆ.

ನೆಲ್ಲಿಕಾಯಿ ತಿನ್ನಿ, ಕೊರೋನಾಗೆ ಬೈ ಎನ್ನಿ!

ಮತ್ತಷ್ಟು ಸುದ್ದಿಗಳು

vertical

Latest News

ನಡು ರಸ್ತೆಯಲ್ಲಿ ಮುದ್ದಾದ ಮರಿಗೆ ಜನ್ಮ ನೀಡಿದ ಆನೆ: 1 ಗಂಟೆಗಳ ಸಂಚಾರ ಸ್ಥಗಿತ

newsics.com ಕೇರಳ: ತಮಿಳುನಾಡು - ಕೇರಳ ಸಂಪರ್ಕಿಸುವ ಇಡುಕ್ಕಿಯ ಹೈರೇಂಜ್​ ಜಿಲ್ಲೆಯ ಮರಯೂರು ರಾಷ್ಟ್ರೀಯ ಹೆದ್ದಾರಿ ಮಧ್ಯದಲ್ಲೇ ಆನೆಯೊಂದು ಮರಿಗೆ ಜನ್ಮ ನೀಡಿದೆ. ಪರಿಣಾಮ ಸುಮಾರು ಒಂದು...

ವೈಫ್ ಸ್ವ್ಯಾಪಿಂಗ್:ಪತ್ನಿಗೆ ಕಿರುಕುಳ ನೀಡುತ್ತಿದ್ದ ಉದ್ಯಮಿಯ ವಿರುದ್ಧ ಎಫ್ಐಆರ್ ದಾಖಲು

newsics.com ದೆಹಲಿ: ವೈಫ್ ಸ್ವ್ಯಾಪಿಂಗ್ ಪಾರ್ಟಿಗಳಿಗೆ ಹಾಜರಾಗುವಂತೆ ಪತ್ನಿಯನ್ನು  ಬಲವಂತಾಗಿ ಕರೆದೊಯ್ಯುತ್ತಿದ್ದ  ಗುರುಗ್ರಾಮ್ ಉದ್ಯಮಿಯೊಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಉದ್ಯಮಿಯ ಪತ್ನಿ, ತಾನು ನಿರಾಕರಿಸಿದರೆ ತನ್ನ ಪತಿ  ಲೈಂಗಿಕ ಕಿರುಕುಳ ನೀಡುತ್ತಿದ್ದ ಅಲ್ಲದೇ ರಕ್ಷಣೆಗೆ ಗುರುಗ್ರಾಮ್...

ಕೇಂದ್ರ ಸಚಿವರ ರಾಜೀನಾಮೆ: ಸ್ಮೃತಿ ಇರಾನಿ, ಸಿಂಧಿಯಾಗೆ ಹೆಚ್ಚುವರಿ ಖಾತೆಗಳ ಹೊಣೆ

newsics.com ನವದೆಹಲಿ: ಮುಖ್ತಾರ್ ಅಬ್ಬಾಸ್ ನಖ್ವಿ ಅವರ ರಾಜೀನಾಮೆಯ ನಂತರ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರಿಗೆ ಈಗಾಗಲೇ ಇರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆಯ ಜೊತೆಗೆ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ಜವಾಬ್ದಾರಿಯನ್ನು...
- Advertisement -
error: Content is protected !!