Wednesday, August 4, 2021

ಲೈಫ್ ಸ್ಟೈಲ್ ಬದಲಿಸಿಕೊಳ್ಳಿ; ದೂರವಿಡಿ ಪಿಸಿಒಡಿ

Follow Us

ಇಂದಿನ ಹರೆಯದ ಹುಡುಗಿಯರಲ್ಲಿ ಹೆಚ್ಚುತ್ತಿರುವ ಸಮಸ್ಯೆ ಪಿಸಿಒಡಿ. ಆರಂಭದಲ್ಲಿ ಗಂಭೀರವಾದ ಆರೋಗ್ಯ ಸಮಸ್ಯೆ ನೀಡದಿದ್ದರೂ ಕ್ರಮೇಣ ಬಂಜೆತನ ಸೇರಿ ಹಲವು ರೋಗಗಳಿಗೆ ಕಾರಣವಾಗುವ ಪಿಸಿಒಡಿಯನ್ನು ಬಹಳ ಬೇಗ ಗುರುತಿಸುವುದು ಮುಖ್ಯ. ವಿಚಿತ್ರವೆಂದರೆ, ಇದು ಒಮ್ಮೆ ಬಂತು, ನಿವಾರಣೆಯಾಯಿತು ಎನ್ನುವ ಸಮಸ್ಯೆಯಲ್ಲ. ನಿರಂತರವಾಗಿ ಜೀವನಶೈಲಿಯಲ್ಲಿ ಬದಲಾವಣೆ ತಂದುಕೊಳ್ಳುವ ಅಗತ್ಯವಿರುತ್ತದೆ. ಹಾಗಾದಲ್ಲಿ ಮಾತ್ರವೇ ಪಿಸಿಒಡಿಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು.
♦ ಡಾ. ಸುಮನ್
newsics.com@gmail.com

 

 ಮು ಖದ ಮೇಲೆ ಹೆಚ್ಚುತ್ತಿರುವ ಕೂದಲು, ನಿಯಮಿತವಾಗಿ ಮುಟ್ಟಾಗದೆ ಇರುವುದು, ಕೂದಲು ಉದುರುವಿಕೆ… ಇಂಥ ಸಮಸ್ಯೆಗಳು ಕಂಡುಬಂದರೆ ಎಲ್ಲ ಹೆಣ್ಣುಮಕ್ಕಳಿಗೂ ತಲೆಬಿಸಿಯಾಗುವುದು ನಿಶ್ಚಿತ. ವೈದ್ಯರ ಬಳಿ ಹೋದಾಗ ಕೇಳಿಬರುವ ಮಾತು- ಪಿಸಿಒಡಿ ಸಮಸ್ಯೆ ಎಂದು. ಇದು ಇಂದಿನ ಆಧುನಿಕ ಯುವತಿಯರಲ್ಲಿ ಅತಿ ಸಾಮಾನ್ಯವಾಗಿ ಕಂಡುಬರುತ್ತಿರುವ ಸಮಸ್ಯೆ.
ಹೌದು, ಗುರುತರವಾದ ಆರೋಗ್ಯ ಸಮಸ್ಯೆಯಲ್ಲದ ತೊಂದರೆ ಪಿಸಿಒಡಿ. ಉಪೇಕ್ಷೆ ಮಾಡಿದರೆ ಹಲವು ರೋಗ ಹಾಗೂ ಬಂಜೆತನಕ್ಕೆ ಕಾರಣವಾಗುವ ಪಿಸಿಒಡಿಯನ್ನು ಆರಂಭದಲ್ಲಿಯೇ ಗುರುತಿಸಿ ಸೂಕ್ತ ಪರಿಹಾರ ಕಂಡುಕೊಳ್ಳುವುದು ಮುಖ್ಯ.
ಪಿಸಿಒಡಿ ಎಂದರೆ ಪಾಲಿಸಿಸ್ಟಿಕ್ ಒವೇರಿಯನ್ ಡಿಸೀಸ್. ಇಂದು ಐವರು ಸ್ತ್ರೀಯರಲ್ಲಿ ಒಬ್ಬರಿಗೆ ಪಿಸಿಒಡಿ ಸಾಮಾನ್ಯ. ಅಂದರೆ, ನೂರರಲ್ಲಿ ಸುಮಾರು 20ರಷ್ಟು ಮಹಿಳೆಯರಲ್ಲಿ ಪಿಸಿಒಡಿ ಕಂಡುಬರುತ್ತಿದೆ. ಈ ಸಮಸ್ಯೆ ಕಂಡುಬರುವ 10 ಮಹಿಳೆಯರಲ್ಲಿ 6 ಮಂದಿ ಹದಿಹರೆಯದ ಹುಡುಗಿಯರಾಗಿರುತ್ತಾರೆ.
ಹೆಣ್ಣಿನ ದೇಹದಲ್ಲಿ ಹಾರ್ಮೋನುಗಳ ಪ್ರಭಾವ ಹೆಚ್ಚು. ಮುಟ್ಟಾಗಲು ಆರಂಭವಾದಂದಿನಿಂದ ವೃದ್ಧಾಪ್ಯದವರೆಗೂ ಹಾರ್ಮೋನುಗಳು ಹೆಣ್ಣಿನ ಆರೋಗ್ಯದ ಮೇಲೆ ಬಹುಮುಖ್ಯವಾದ ಪ್ರಭಾವ ಬೀರುತ್ತವೆ. ಪಿಸಿಒಡಿ ಸಹ ಹಾರ್ಮೋನುಗಳ ಅಸಮತೋಲನದಿಂದ ಕಾಣಿಸಿಕೊಳ್ಳುತ್ತದೆ ಎನ್ನಲಾಗಿದೆ. ಅಸಲಿಗೆ, ವೈದ್ಯಲೋಕ ಇಂದು ಇಷ್ಟು ಮುಂದುವರಿದಿದ್ದರೂ ಪಿಸಿಒಡಿಗೆ ಶಾಶ್ವತ ಪರಿಹಾರ ಎಂಬುದಿಲ್ಲ. ಕೆಲವು ಕ್ರಮಗಳ ಮೂಲಕ ನಿಯಂತ್ರಣದಲ್ಲಿ ಇರಿಸಿಕೊಳ್ಳಬಹುದಷ್ಟೆ.
ಮುಟ್ಟಾದ 11ನೇ ದಿನದಿಂದ 14ನೇ ದಿನಗಳ ಮಧ್ಯೆ ಅಂಡಕೋಶದಿಂದ ಅಂಡಾಣು ಬಿಡುಗಡೆಯಾಗುತ್ತದೆ. ಬಲ ಅಥವಾ ಎಡ ಯಾವುದಾದರೂ ಅಂಡಕೋಶದಿಂದ ಅಂಡಾಣು ಬಿಡುಗಡೆಯಾಗಿ ಗರ್ಭ ಧರಿಸಲು ಸಿದ್ಧವಾಗಿರುತ್ತದೆ. ಗರ್ಭ ಧರಿಸದೇ ಇದ್ದಾಗ ತಿಂಗಳ ಮುಟ್ಟಿನಂತೆ ಹೊರಹೋಗುತ್ತದೆ. ಆದರೆ, ಪಿಸಿಒಡಿ ಸಮಸ್ಯೆಯಲ್ಲಿ ಅಪರಿಪಕ್ವವಾದ ಅಂಡಾಣುಗಳು ಉತ್ಪತ್ತಿಯಾಗುತ್ತವೆ ಹಾಗೂ ಅವು ನೀರಿನ ಗುಳ್ಳೆಗಳಂತೆ ಅಂಡಕೋಶದ ಒಳಪದರದ ಮೇಲೆ ಉಳಿಯುತ್ತವೆ. ಇದರಿಂದ ಮುಟ್ಟು ಅನಿಯಮಿತವಾಗುತ್ತದೆ. ಹೀಗಾದಾಗ ಗರ್ಭ ಧರಿಸುವ ಸಾಧ್ಯತೆ ಕಡಿಮೆಯಾಗುತ್ತದೆ. ಆದರೆ, ಪಿಸಿಒಡಿ ಸಮಸ್ಯೆ ಇದ್ದಾಕ್ಷಣ ಮಕ್ಕಳಾಗುವುದಿಲ್ಲ ಎಂದುಕೊಳ್ಳಬಾರದು. ನಿರ್ಲಕ್ಷಿಸಿದರೆ ಮಾತ್ರ ಸಮಸ್ಯೆಯುಂಟಾಗುತ್ತದೆ.
ಸಾಮಾನ್ಯ ಲಕ್ಷಣ…
• ಮುಟ್ಟಿನಲ್ಲಿ ಏರುಪೇರು ಉಂಟಾಗುವುದು, ಪ್ರತಿ ತಿಂಗಳು ಸರಿಯಾಗಿ ಮುಟ್ಟಾಗದಿರುವುದು
• ಹೆಚ್ಚು ದಿನಗಳ ಕಾಲ ರಕ್ತಸ್ರಾವ ಇರಬಹುದು
• ಎರಡು ಮುಟ್ಟಿನ ನಡುವೆ ಮತ್ತೆ ರಕ್ತಸ್ರಾವ ಕಾಣಿಸಿಕೊಳ್ಳಬಹುದು
• ಮುಟ್ಟಾದಾಗ ಅತಿಯಾದ ನೋವು
• ಅತಿಯಾದ ಕೂದಲು ಉದುರುವಿಕೆ
• ತೂಕ ಹೆಚ್ಚುವುದು
• ದೇಹದಲ್ಲಿ ಕೂದಲು ಕಾಣಿಸಿಕೊಳ್ಳುವುದು
• ಬಂಜೆತನ
ಕಾರಣಗಳು ಹತ್ತಾರು…
ಪಿಸಿಒಡಿ ಸಮಸ್ಯೆಗೆ ನೇರವಾಗಿ ಹೆಣ್ಣುಮಕ್ಕಳು ಕಾರಣರಾಗಿರುವುದಿಲ್ಲ. ಜೀವನಶೈಲಿಯಿಂದ ಈ ಸಮಸ್ಯೆ ಉಲ್ಬಣವಾಗಬಹುದು. ಅಧಿಕ ಒತ್ತಡ, ವ್ಯಾಯಾಮವಿಲ್ಲದೆ ಸೋಮಾರಿಯಾಗಿರುವುದು, ಕೊಬ್ಬಿನ ಪದಾರ್ಥಗಳ ಅಧಿಕ ಸೇವನೆಯೂ ಇದಕ್ಕೆ ಕಾರಣವಾಗಬಹುದು. ಇನ್ನೂ ಮುಖ್ಯವಾಗಿ, ಆನುವಂಶೀಯತೆಯೂ ಕಾರಣವಾಗಬಹುದು.
ತೆಗೆದುಕೊಳ್ಳಬಹುದಾದ ಎಚ್ಚರಿಕೆ…
• ಪಿಸಿಒಡಿ ಸಮಸ್ಯೆ ಇರುವ ಮಹಿಳೆಯರು ಡೈರಿ ಉತ್ಪನ್ನಗಳನ್ನು ಹೆಚ್ಚು ಸೇವಿಸಬಾರದು. ಕ್ರೀಮ್, ಚೀಸ್, ಚಾಕೋಲೇಟ್ ಗಳು, ಕರಿದ ತಿಂಡಿಗಳು, ಬೇಕರಿ ತಿನಿಸು ಬೇಡ. ಇವುಗಳಿಂದ ಈಸ್ಟ್ರೋಜೆನ್ ಹಾರ್ಮೋನ್ ಸ್ರವಿಕೆ ಹೆಚ್ಚಾಗುತ್ತದೆ. ಇದರಿಂದ ಪಿಸಿಒಡಿ ಇನ್ನಷ್ಟು ಹೆಚ್ಚುತ್ತದೆ.

ಮತ್ತಷ್ಟು ಸುದ್ದಿಗಳು

Latest News

ಧರ್ಮಸ್ಥಳ, ಕುಕ್ಕೆ ದೇವಾಲಯ, ಕಟೀಲಿನಲ್ಲಿ ಸೇವೆ ಸ್ಥಗಿತ: ವಾರಾಂತ್ಯ ಭಕ್ತರಿಗೂ ನಿರ್ಬಂಧ

newsics.com ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಹೆಚ್ಚುತ್ತಿರುವ ಕಾರಣ ನಾಳೆಯಿಂದ ಆ‌ 15ರವರೆಗೆ ಧರ್ಮಸ್ಥಳ, ಕಟೀಲು, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಗಳಿಗೆ ಶನಿವಾರ, ಭಾನುವಾರ ಭಕ್ತರ...

ಒಲಿಂಪಿಕ್ಸ್: ಸೆಮೀಸ್’ನಲ್ಲಿ ಮಹಿಳೆಯರ ಹಾಕಿ ತಂಡಕ್ಕೆ ಸೋಲು

newsics.com ಟೋಕಿಯೋ: ಒಲಿಂಪಿಕ್ಸ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸೆಮಿ ಫೈನಲ್ ಪ್ರವೇಶಿಸಿದ್ದ ಮಹಿಳಾ ಹಾಕಿ ತಂಡಕ್ಕೆ ನಿರಾಸೆಯಾಗಿದೆ. ತಂಡ ಸೆಮಿಫೈನಲ್ ನಲ್ಲಿ ಅರ್ಜೆಂಟೈನಾ ವಿರುದ್ಧ 1-2 ಗೋಲುಗಳ ಅಂತರದಿಂದ ಸೋಲನ್ನು ಅನುಭವಿಸಿದೆ. ಆದರೆ ಪದಕ...

16 ವರ್ಷದ ಬಾಲಕಿಯ ಮೇಲೆ ಅತ್ಯಾಚಾರಗೈದು ಕೊಲೆ

newsics.com ಕೋಲಾರ : ಮನೆಯಲ್ಲಿ ಯಾರೂ ಇಲ್ಲದ ವೇಳೆ ವಿವಾಹಿತನೊಬ್ಬ 16 ವರ್ಷದ ಬಾಲಕಿಯ ಮೇಲೆ ಅತ್ಯಾಚಾರಗೈದು ಕೊಲೆ‌ಮಾಡಿದ ಘಟನೆ ಕೋಲಾರದ ಮಾಲೂರು ಬಳಿ ನಡೆದಿದೆ. ಬಾಲಕಿ ತಂದೆತಾಯಿ ತಮಿಳುನಾಡಿಗೆ ಹೋದ ವೇಳೆ...
- Advertisement -
error: Content is protected !!