Sunday, May 22, 2022

ಡಾಕ್೯ ಚಾಕ್ಲೇಟ್‌ನಲ್ಲಿದೆ ಆರೋಗ್ಯ!

Follow Us

ಹೃದಯಾಘಾತ ತಡೆಗಟ್ಟುವಲ್ಲಿ ಡಾಕ್೯ ಚಾಕ್ಲೇಟ್ ಪರಿಣಾಮಕಾರಿ. ದಶಕಗಳ ಕಾಲ ನಡೆದ ಅಧ್ಯಯನದಲ್ಲಿ ಈ ವಿಚಾರ ತಿಳಿದುಬಂದಿದೆ. ಗರ್ಭಿಣಿಯರಿಗೂ ಉತ್ತಮ. ಇದು ಭ್ರೂಣದ ಬೆಳವಣಿಗೆಗೆ ಸಹಾಯ ಮಾಡುತ್ತದೆ.

• ಅನಿತಾ ಬನಾರಿ
newsics.com@gmail.com

ಚಾಕೋಲೇಟ್‌ ಸಣ್ಣವರಿಂದ ತೊಡಗಿ, ದೊಡ್ಡವರವರೆಗೆ ಎಲ್ಲರಿಗೂ ಇಷ್ಟ. ಸಕ್ಕರೆಮಿಶ್ರಿತ ಚಾಕೋಲೇಟ್‌ಗಳು ದೇಹಕ್ಕೆ ಹಾನಿಯುಂಟುಮಾಡಬಲ್ಲದು‌. ಆದರೆ, ಡಾಕ್೯ ಚಾಕೋಲೇಟ್‌ಗಳು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಇಂದು ಮಾರುಕಟ್ಟೆಯಲ್ಲಿ ವಿವಿಧ ಬ್ರಾಂಡ್‌ ಹಾಗೂ ಹೆಸರಿನಲ್ಲಿ ಡಾಕ್೯ ಚಾಕ್ಲೇಟ್‌ಗಳು ಲಭ್ಯವಿದ್ದು, ಅದನ್ನೇ ಉದ್ಯಮವಾಗಿಸಿಕೊಂಡು ಯಶಸ್ಸು ಗಳಿಸಿದವರೂ ಇದ್ದಾರೆ. ಮನೆಯಲ್ಲೇ ಡಾಕ್೯ ಚಾಕ್ಲೇಟ್ ತಯಾರಿಸಿ ಸೇವಿಸಬಹುದು. ಸಾಮಾನ್ಯವಾಗಿ ಕಹಿ- ಸಿಹಿಯನ್ನು ಹೊಂದಿರುವ ರುಚಿ ಡಾಕ್೯ ಚಾಕ್ಲೇಟ್‌ಗಳದ್ದಾಗಿರುತ್ತದೆ. ಸಂಸ್ಕರಿಸಿದ ಡಾಕ್೯ ಚಾಕ್ಲೇಟ್‌ಗಳಲ್ಲಿ ಪೋಷಕಾಂಶಗಳು ನಾಶವಾಗಿ, ಅದರ ಸತ್ವದ ನಷ್ಟವಾಗುತ್ತದೆ. ಹಾಗಾಗಿ ಹೋಂಮೇಡ್ ಚಾಕ್ಲೇಟ್‌ಗಳಿಗೆ ಒತ್ತನ್ನು ನೀಡುವುದು ಬಹಳ ಒಳ್ಳೆಯದು. ಇದರಲ್ಲಿ ಸಕ್ಕರೆಯ ಅಂಶ ಕೂಡಾ ಕಡಿಮೆ ಇರುತ್ತದೆ.
ಡಾಕ್೯ ಚಾಕ್ಲೇಟ್‌ಗಳ ಸೇವನೆಯಿಂದ ಆರೋಗ್ಯಕ್ಕೆ ಉಂಟಾಗುವ ಕೆಲವು ಲಾಭಗಳು ಇಲ್ಲಿವೆ.

* ತಡಾರ್ಕ್ ಚಾಕೊಲೇಟ್ ಖಿನ್ನತೆಯನ್ನು ತಡೆಯಲು ಸಹಾಯ ಮಾಡುತ್ತದೆ.‌ ಡಾರ್ಕ್ ಚಾಕೊಲೇಟ್‌ನಲ್ಲಿ ಕಂಡುಬರುವ ಥಿಯೋಬ್ರೊಮಿನ್ ಅಂಶ ಇದಕ್ಕೆ ಸಹಕಾರಿಯಾಗುತ್ತದೆ.
* ಹೃದಯ ಸಂಬಂಧಿ ತೊಂದರೆಗಳನ್ನು ತಡೆಗಟ್ಟಲೂ ಡಾಕ್೯ ಚಾಕ್ಲೇಟ್ ನೆರವಾಗುತ್ತದೆ. ಕೋಕೋ ಅನೇಕ ಹೃದಯ ಸಂಬಂಧಿ ಅಪಾಯಗಳನ್ನು ತಡೆಗಟ್ಟುತ್ತದೆ ಎಂದು ಅಧ್ಯಯನಗಳ ಮೂಲಕ ತಿಳಿದುಬಂದಿದೆ.
* ಮಧುಮೇಹವನ್ನು ನಿಯಂತ್ರಿಸುವಲ್ಲಿಯೂ ಡಾಕ್೯ ಚಾಕ್ಲೇಟ್‌ಗಳು ಸಹಕಾರಿ. ಆದರೆ ಲೋ ಶುಗರ್ ಇರುವ ಡಾಕ್೯ ಚಾಕ್ಲೇಟ್‌ಗಳನ್ನು ಸೇವಿಸುವುದರ ಕುರಿತು ಗಮನಹರಿಸಬೇಕಾಗಿರುವುದು ಅತ್ಯವಶ್ಯಕ.
* ಹೃದಯಾಘಾತ ತಡೆಗಟ್ಟುವಲ್ಲಿಯೂ ಡಾಕ್೯ ಚಾಕ್ಲೇಟ್ ಪರಿಣಾಮಕಾರಿ. ದಶಕಗಳ ಕಾಲ ನಡೆದ ಅಧ್ಯಯನದಲ್ಲಿ ಈ ವಿಚಾರ ತಿಳಿದುಬಂದಿದೆ.
* ಡಾಕ್೯ ಚಾಕ್ಲೇಟಿನ ಸೇವನೆ ಕೆಟ್ಟ ಕೊಲೆಸ್ಟ್ರಾಲ್‌‌ನ್ನು ನಿಯಂತ್ರಿಸಿ, ಉತ್ತಮ ಕೊಲೆಸ್ಟ್ರಾಲ್‌ಗಳ ಶೇಖರಣೆಗೆ ಸಹಾಯ ಮಾಡುತ್ತದೆ.
* ರಕ್ತದೊತ್ತಡವನ್ನು ನಿಭಾಯಿಸುವಲ್ಲಿಯೂ ಸಹಕಾರಿ. ಅಧಿಕ ರಕ್ತದೊತ್ತಡವನ್ನು ಕಡಿಮೆಗೊಳಿಸಿ ಹೃದಯ ಮತ್ತು ದೇಹದ ಆರೋಗ್ಯವನ್ನು ಸುಸ್ಥಿತಿಯಲ್ಲಿರಿಸುತ್ತದೆ. ಹಾಗಾಗಿ ಇದು ಸರಳ ಹಾಗೂ ಲಾಭದಾಯಕ ವಿಧಾನ.
* ಅತಿಯಾದ ಕಫಕ್ಕೂ ಡಾಕ್೯ ಚಾಕ್ಲೇಟ್ ಸೇವನೆಯು ಒಳ್ಳೆಯ ಮದ್ದು. ಕೋಕೋದಲ್ಲಿರುವ ಥಿಯೋಬ್ರೋಮಿನ್ ಎಂಬ ಅಂಶ ಇದಕ್ಕೆ ಸಹಕಾರಿಯಾಗಿದೆ.
* ಡಾಕ್೯ ಚಾಕ್ಲೇಟ್ ಸೇವನೆ ಗರ್ಭಿಣಿಯರಿಗೂ ಉತ್ತಮ. ಇದು ಭ್ರೂಣದ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಅವರಲ್ಲಿ ರಕ್ತದೊತ್ತಡ ಅಧಿಕವಾಗುವುದರಿಂದ ಉಂಟಾಗುವ ತೊಂದರೆಗಳನ್ನು ಇದರಿಂದಾಗಿ ತಡೆಗಟ್ಟಬಹುದು.
* ಮೆದುಳಿನ ಕಾರ್ಯಕ್ಷಮತೆಯನ್ನು ಉತ್ತೇಜಿಸುತ್ತದೆ. ಅರಿವಿನ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಮಾನಸಿಕ ಆರೋಗ್ಯಕ್ಕೂ ಉತ್ತಮ ಎನ್ನುವುದು ಅಧ್ಯಯನಗಳಿಂದ ತಿಳಿದುಬಂದಿದೆ.
* ಸೂರ್ಯನಿಂದ ಹೊರಬರುವ ಅತಿನೇರಳೆ ಕಿರಣಗಳಿಂದ ನಮ್ಮ ಚರ್ಮವನ್ನು ರಕ್ಷಿಸಿಕೊಳ್ಳಲೂ ಡಾಕ್೯ ಚಾಕ್ಲೇಟ್‌ಗಳು ಸಹಕಾರಿ.
ಅನೇಕ ಪೋಷಕಾಂಶಗಳ ಆಗರವಾಗಿರುವ ಡಾಕ್೯ ಚಾಕ್ಲೇಟ್‌ಗಳು ಆರೋಗ್ಯದ ಖನಿ. ನಾವು ಅನೇಕ ಬಾರಿ ಒತ್ತಡ ಅಥವಾ ಖಿನ್ನತೆಗೊಳಗಾಗಿರುವಾಗ ಡಾಕ್೯ ಚಾಕ್ಲೇಟನ್ನು ಬಾಯಲ್ಲಿಟ್ಟು ಚೀಪುತ್ತಾ ಇದ್ದರೆ ಮಾನಸಿಕ ತುಮುಲಗಳು ಕಡಿಮೆಯಾಗಿ ನೆಮ್ಮದಿಯೆನಿಸುತ್ತದೆ. ಹಾಗಾಗಿ ಕಡಿಮೆ ಸಕ್ಕರೆ ಅಂಶವನ್ನು ಹೊಂದಿರುವ ಡಾಕ್೯ ಚಾಕ್ಲೇಟ್ ಸೇವಿಸಿ ಆರೋಗ್ಯವಂತರಾಗಿರಿ.

ಮತ್ತಷ್ಟು ಸುದ್ದಿಗಳು

Latest News

ಕುತುಬ್ ಮಿನಾರ್ ಸಂಕೀರ್ಣ ಉತ್ಖನನ: ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದ ಕೇಂದ್ರ ಸಚಿವ

newsics.com ನವದೆಹಲಿ: ಕುತುಬ್ ಮಿನಾರ್ ಸಂಕೀರ್ಣದ ಉತ್ಖನನ ಕುರಿತಂತೆ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಕೇಂದ್ರ ಸಂಸ್ಕೃತಿ ಸಚಿವ ಜಿ.ಕೆ.ರೆಡ್ಡಿ ಹೇಳಿದ್ದಾರೆ. ದೆಹಲಿಯ ಕುತುಬ್ ಮಿನಾರ್ ಸಂಕೀರ್ಣದಲ್ಲಿ...

ನನ್ನ ದೇಹದ ಖಾಸಗಿ ಭಾಗದಲ್ಲಿನ ಮಚ್ಚೆ ಬಗ್ಗೆ ಹೇಳಲಿ: ಲೈಂಗಿಕ ಕಿರುಕುಳ ಆರೋಪಕ್ಕೆ ಎಲಾನ್ ಮಸ್ಕ್ ಓಪನ್ ಚಾಲೆಂಜ್

newsics.com ನ್ಯೂಯಾರ್ಕ್: ಖಾಸಗಿ ಜೆಟ್‌ನಲ್ಲಿ ಫ್ಲೈಟ್ ಅಟೆಂಡೆಂಟ್ ಸ್ನೇಹಿತೆ ಎನ್ನಲಾದ ವ್ಯಕ್ತಿ ಮಾಡಿರುವ ಲೈಂಗಿಕ ಕಿರುಕುಳ ಆರೋಪವನ್ನು ಜಗತ್ತಿನ‌ ನಂಬರ್ ಒನ್ ಶ್ರೀಮಂತ ಬಿಲಿಯನೇರ್ ಎಲಾನ್‌ ಮಸ್ಕ್ ಅಲ್ಲಗಳೆದಿದ್ದಾರೆ. ಒಂದು ವೇಳೆ ಲೈಂಗಿಕ ಕಿರುಕುಳ‌ ನೀಡಿದ್ದೇನೆ...

ಪ್ರಿಯಕರನನ್ನೇ ಮದುವೆಯಾಗುವೆನೆಂದ ವಧು: ತಾಳಿ ಕಟ್ಟುವ ವೇಳೆ ಹೈಡ್ರಾಮಾ

newsics.com ಮೈಸೂರು: ಮದುವೆಯಲ್ಲಿ ತಾಳಿ ಕಟ್ಟುವ ವೇಳೆ ಮದುಮಗಳು ವರನಿಗೆ ಶಾಕ್ ಕೊಟ್ಟಿದ್ದು, ತಾನು ಪ್ರೀತಿಸಿದ ಹುಡುಗನನ್ನೇ ಮದುವೆಯಾಗುವುದಾಗಿ ಹಠ ಹಿಡಿದಿದ್ದಾಳೆ. ಮದುಮಗಳು ಸಿಂಚನ ತನ್ನ ಪಕ್ಕದ ಮನೆಯ ಯುವಕನನ್ನು ಪ್ರೀತಿಸಿದ್ದು, ಆದರೆ ಮನೆಯವರು ಎಚ್.ಡಿ.ಕೋಟೆ...
- Advertisement -
error: Content is protected !!