Friday, September 30, 2022

ಶಂಖಪುಷ್ಪದಿಂದ ಹತ್ತಾರು ಆರೋಗ್ಯ ಭಾಗ್ಯ

Follow Us

ಶಂಖಪುಷ್ಪ ಹೂವು ಹಸಿವು ಜೀರ್ಣಕಾರಿ ಉತ್ತೇಜಕಗಳ ಗುಣಲಕ್ಷಣಗಳನ್ನು ಹೊಂದಿದೆ. ಮೆದುಳು ಹಾಗೂ ಮನಸ್ಸನ್ನು ಬೆಂಬಲಿಸುವ ಹಾಗೂ ಉತ್ತೇಜಿಸುವ ಮೂಲಕ ನರಗಳ ಆರೋಗ್ಯ ಕಾಪಾಡುತ್ತದೆ. ಮೆದುಳಿನ ಶಕ್ತಿ ಹೆಚ್ಚಿಸುವುದಲ್ಲದೆ ನೆನಪಿನ ಶಕ್ತಿ ಹಾಗೂ ಏಕಾಗ್ರತೆಯನ್ನು ಸುಧಾರಿಸುತ್ತದೆ. ಇನ್ನು ಖಿನ್ನತೆಗೆ ಇದು ರಾಮಬಾಣ.

• ಡಾ.ಅಹಲ್ಯಾ
newsics.com@gmail.com

ಮ್ಮಲ್ಲಿ ಸಿಗುವ ಗಿಡ ಮೂಲಿಕೆಗಳು, ಎಲೆ, ಬೇರು, ಹೂವು ಪ್ರತಿಯೊಂದು ಕೂಡ ಒಂದಲ್ಲ ಒಂದು ಕಾರಣದಿಂದ ಪ್ರಾಮುಖ್ಯತೆ ಹೊಂದಿದೆ. ಇವುಗಳು ಒಂದೊಂದು ಕಾಯಿಲೆಗಳನ್ನು ಪರಿಹರಿಸಲು ಪ್ರಯೋಜನಕಾರಿಯಾಗಿದೆ. ಶಂಖಪುಷ್ಪ ಹೂವು ಕೂಡ ಇದರಲ್ಲಿ ಒಂದಾಗಿದೆ.
ಬಳ್ಳಿ ರೂಪದಲ್ಲಿ ಬೆಳೆದು ಹೂ ಬಿಡುವ ಶಂಖಪುಷ್ಪ ಶಿವನ ಪ್ರಿಯ ಹೂಗಳಲ್ಲಿ ಒಂದು. ಸಂಸ್ಕೃತದಲ್ಲಿ ಗಿರಿಕರ್ಣಿಕ ಎಂದು ಕರೆಯಲ್ಪಡುವ ಈ ಹೂವು ಶಂಖದ ರೂಪದಲ್ಲಿರುತ್ತದೆ.
ಹಸಿವಿನ ಹೆಚ್ಚಳಕ್ಕೆ ಶಂಖಪುಷ್ಪ ಸಹಾಯಕವಾಗಿದೆ. ಈ ಹೂವು ಹಸಿವು ಜೀರ್ಣಕಾರಿ ಉತ್ತೇಜಕಗಳ ಗುಣಲಕ್ಷಣಗಳನ್ನು ಹೊಂದಿದೆ.

ಮೆದುಳು ಹಾಗೂ ಮನಸ್ಸನ್ನು ಬೆಂಬಲಿಸುವ ಹಾಗೂ ಉತ್ತೇಜಿಸುವ ಮೂಲಕ ನರಗಳ ಆರೋಗ್ಯ ಕಾಪಾಡುತ್ತದೆ. ಮೆದುಳಿನ ಶಕ್ತಿ ಹೆಚ್ಚಿಸುವುದಲ್ಲದೇ ನೆನಪಿನ ಶಕ್ತಿ ಹಾಗೂ ಏಕಾಗ್ರತೆಯನ್ನು ಸುಧಾರಿಸುತ್ತದೆ. ಇನ್ನು ಖಿನ್ನತೆಗೆ ಇದು ರಾಮಬಾಣವಾಗಿದೆ.
ಶಂಖಪುಷ್ಪ ಹೂವು, ಎಲೆ, ಬೇರುಗಳಿಂದ ತಯಾರಿಸಿದ ಹುಡಿ ಸೇವಿಸುವುದರಿಂದ ಬುದ್ಧಿಶಕ್ತಿ ಹೆಚ್ಚುತ್ತದೆ. ಇದರಲ್ಲಿರುವ ಜೀರ್ಣಕಾರಿ ಗುಣಗಳು ಜೀರ್ಣಕ್ರಿಯೆ ಹೆಚ್ಚಿಸುವಲ್ಲಿ ಸಹಕಾರಿ.
ಒಂದು ಲೋಟ ನೀರಿನೊಂದಿಗೆ ಪ್ರತಿದಿನ ಶಂಖಪುಷ್ಪ ಹೂವನ್ನು ತೆಗೆದುಕೊಳ್ಳುವುದರಿಂದ ಅಧಿಕ ರಕ್ತದೊತ್ತಡ ಸಮಸ್ಯೆ ನಿವಾರಣೆ ಆಗುತ್ತದೆ. ರಕ್ತಪರಿಚಲನೆಯನ್ನು ಸರಿಪಡಿಸುತ್ತದೆ. ಅರೆ ತಲೆನೋವಿಗೆ ಶಂಖಪುಷ್ಪದ ಬೇರನ್ನು ತೇಯ್ದು ಕಾಡಿಗೆಯ ಹಾಗೆ ಕಣ್ಣಿಗೆ ಸವರಬೇಕು.
ಶಂಖಪುಷ್ಪದ ಗಿಡಮೂಲಿಕೆಗಳ ಸಾರವನ್ನು ವೀರ್ಯದ ದುರ್ಬಲತೆಯ ಸಮಸ್ಯೆಗೆ ಚಿಕಿತ್ಸೆ ನೀಡಲು ಬಳಸುತ್ತಾರೆ. ಮೂತ್ರಕೋಶದ ಕಾಯಿಲೆಗಳಿಗೂ ಚಿಕಿತ್ಸೆ ನೀಡಲು ಬಳಸುತ್ತಾರೆ. ತೂಕ ಇಳಿಕೆಗೆ ಸಹಕಾರಿ.

ಮತ್ತಷ್ಟು ಸುದ್ದಿಗಳು

vertical

Latest News

ಉಕ್ರೇನ್‌ನ 4 ಪ್ರದೇಶಗಳು ರಷ್ಯಾ ವಶ- ಒಪ್ಪಂದಕ್ಕೆ ಸಹಿ ಹಾಕಿದ ಪುಟಿನ್‌!

newsics.com ರಷ್ಯಾ: ಉಕ್ರೇನ್‌ನ ನಾಲ್ಕು ರಾಜ್ಯಗಳನ್ನು ಅಧಿಕೃತವಾಗಿ ರಷ್ಯಾ ಸುಪರ್ದಿಗೆ ತೆಗೆದುಕೊಂಡಿದೆ. ರಷ್ಯಾ ಇಂದು ಉಕ್ರೇನ್‌ನ 4 ರಾಜ್ಯಗಳನ್ನು ತನ್ನ ಭೂಪ್ರದೇಶದಲ್ಲಿ ಸೇರಿಸಿದೆ. ಈ ಪ್ರದೇಶಗಳು ಡೊನೆಟ್ಸ್ಕ್,...

ವಂದೇ ಭಾರತ್ ಪ್ರಯಾಣ ಮಾಡಿದ್ರೆ ವಿಮಾನಕ್ಕಿಂತ ರೈಲಿಗೆ ಆದ್ಯತೆ ನೀಡುತ್ತಾರೆ: ಮೋದಿ

newsics.com ಗಾಂಧಿನಗರ: ಒಮ್ಮೆ ವಂದೇ ಭಾರತ್ ರೈಲಿನಲ್ಲಿ ಪ್ರಯಾಣಿಸಿದರೆ ವಿಮಾನದಲ್ಲಿ ಪ್ರಯಾಣಿಸುವುದನ್ನೇ ಜನರು ನಿಲ್ಲಿಸುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಗಾಂಧಿನಗರದ ರೈಲು ನಿಲ್ದಾಣದಲ್ಲಿ ಹೊಸ ವಂದೇ ಭಾರತ್ ರೈಲಿಗೆ ಚಾಲನೆ ನೀಡಿ ಬಳಿಕ...

ಕಲಾ ವಿಮರ್ಶಕ ಮೈಸೂರು ವಿ. ಸುಬ್ರಹ್ಮಣ್ಯ ಇನ್ನಿಲ್ಲ

newsics.com ಮೈಸೂರು: ಖ್ಯಾತ ಕಲಾ ವಿಮರ್ಶಕ ಮೈಸೂರು ವಿ. ಸುಬ್ರಹ್ಮಣ್ಯ ಶುಕ್ರವಾರ ನಿಧನರಾದರು. ವೀಣೆ ಶೇಷಣ್ಣ ಅವರ ವಂಶದಲ್ಲಿ ಜನಿಸಿದ್ದ ಮೈಸೂರು ವಿ. ಸುಬ್ರಹ್ಮಣ್ಯ ಅವರು ಸಹಜವಾಗಿಯೇ ಸಂಗೀತಾಸಕ್ತಿ ಹೊಂದಿದ್ದರು. ಮೈಸೂರು ವಿ. ಸುಬ್ರಹ್ಮಣ್ಯ ಅವರ...
- Advertisement -
error: Content is protected !!