Thursday, May 26, 2022

ಬಿಂದಿಯಿಂದ ಆರೋಗ್ಯಭಾಗ್ಯ

Follow Us

ಬಿಂದಿಯಿಂದ ನರಗಳು ಹಾಗೂ ರಕ್ತಕಣಗಳು ಸಕ್ರಿಯಗೊಂಡು ತಲೆನೋವು ಶಮನವಾಗುತ್ತದೆ. ಒತ್ತಡ ನಿವಾರಿಸಲು ಹಾಗೂ ನಿದ್ರಾಹೀನತೆಯನ್ನು ಪರಿಹರಿಸಲು ಸಹಕಾರಿ. ಹುಬ್ಬುಗಳ ನಡುವಿನ ನೆರಿಗೆಗಳನ್ನು ಬಿಂದಿ ನಿವಾರಿಸುತ್ತದೆ. ನೆರಿಗೆ ರಹಿತ ಮುಖಕ್ಕಾಗಿ ಬಿಂದಿ ಹಚ್ಚುವ ಸ್ಥಳದಲ್ಲಿ ಹುಬ್ಬುಗಳ ನಡುವೆ ಮಸಾಜ್ ಮಾಡುವುದರಿಂದ ಆ ಭಾಗದ ಸ್ನಾಯುಗಳು ಬಲಗೊಳ್ಳುತ್ತವೆ.

• ಅನಿತಾ ಬನಾರಿ
newsics.com@gmail.com

ಭಾರತೀಯ ಸಂಸ್ಕೃತಿಯಲ್ಲಿ ‘ಬಿಂದಿ’ಗೆ ಅದರದೇ ಆದ ಮಹತ್ವವಿದೆ. ಹಣೆ ಬೊಟ್ಟು ಹೆಣ್ಣಿಗೆ ಶೋಭೆ ತರುವುದಲ್ಲದೇ ವೈಜ್ಞಾನಿಕವಾಗಿಯೂ ಇದು ಉತ್ತಮ ಎಂಬುದು ಸಾಬೀತಾಗಿದೆ. ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿಯಾಗಿದೆ.
ಹಣೆಯ ಮೇಲೆ ಬೊಟ್ಟು ಇರಿಸಿಕೊಳ್ಳುವುದರಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನ ತಂದುಕೊಡುತ್ತದೆ. ಹುಬ್ಬುಗಳ ನಡುವಿನ ಸ್ಥಳ, ದೇಹದ ಪ್ರಮುಖ ನರಗಳು ಸಂಧಿಸುವ ಸ್ಥಳವಾಗಿದೆ. ಹಣೆಯ ಮಧ್ಯಭಾಗ ಆರನೇಯ ಅತಿಮುಖ್ಯ ಚಕ್ರದ ಸ್ಥಳವಾಗಿದೆ. ಈ ಚಕ್ರವನ್ನು ಆಜ್ಞಾ ಚಕ್ರ ಎಂದು ಕರೆಯುತ್ತಾರೆ. ಈ ಭಾಗ ಜಾಗೃತಿಯ ಅಥವಾ ಎಚ್ಚರದ ಬಿಂದು ಎಂದು ಕರೆಯಲ್ಪಟ್ಟಿದೆ.
ಹಣೆಯ ಬೊಟ್ಟು ಅಥವಾ ಬಿಂದಿ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿ. ಬಿಂದಿ ಹಚ್ಚುವುದರಿಂದ ನರದ ಮೇಲೆ ಮೃದುವಾದ ಒತ್ತಡ ಉಂಟು ಮಾಡುತ್ತದೆ. ಆಜ್ಞಾ ಚಕ್ರದ ಮೇಲೆ ಬೀಳುವ ಮೃದು ಒತ್ತಡ ಮಾನಸಿಕ ಶಾಂತಿ ಹಾಗೂ ನರಗಳ ಚಿಕಿತ್ಸೆಗೆ ಸಹಕಾರಿ. ಈ ಪ್ರದೇಶದ ಸ್ನಾಯುಗಳು, ನರಗಳ ವಿಶ್ರಾಂತಿಗೆ ಸಹಾಯಕವಾಗಿದೆ.

ಬೊಟ್ಟು ಇಡುವುದರಿಂದ ರಕ್ತದ ಹರಿವು ವೇಗವಾಗುತ್ತದೆ. ಕಿವಿಯ ಆರೋಗ್ಯಕ್ಕೆ ಹಾಗೂ ಶ್ರವಣ ಶಕ್ತಿಯನ್ನು ಹೆಚ್ಚಿಸುವಲ್ಲಿ ನೆರವಾಗುತ್ತದೆ. ಬಿಂದಿ ಹಚ್ಚುವುದರಿಂದ ತಲೆನೋವು ಶಮನವಾಗುತ್ತದೆ.
ಹಣೆಯ ಮಧ್ಯದಲ್ಲಿ ಬಿಂದಿ ಇಡುವುದರಿಂದ ಏಕಾಗ್ರತೆ ಬರುತ್ತದೆ. ಹಣೆಯ ಮಧ್ಯದಲ್ಲಿ ಪೀನಲ್ ಗ್ರಂಥಿ ಇದೆ. ಬಿಂದಿ ಹಚ್ಚುವುದರಿಂದ ಗ್ರಂಥಿ ವೇಗವಾಗಿ ಕೆಲಸ ನಿರ್ವಹಿಸುತ್ತದೆ. ಇದರಿಂದ ಮನಸ್ಸು ಶಾಂತವಾಗುತ್ತದೆ. ಏಕಾಗ್ರತೆ ಹೆಚ್ಚುತ್ತದೆ. ಕೋಪ ನಿಗ್ರಹಿಸಲು ಸಾಧ್ಯವಾಗುತ್ತದೆ.
ಆಕ್ಯುಪ್ರೆಷರ್ ವಿಧಾನದಿಂದ ಬಿಂದಿ ಇಡುವ ಭಾಗದಲ್ಲಿ ನರಗಳು ಹಾಗೂ ರಕ್ತಕಣಗಳು ಸಕ್ರಿಯಗೊಂಡು ತಲೆನೋವು ಶಮನವಾಗುತ್ತದೆ. ಒತ್ತಡ ನಿವಾರಿಸಲು ಹಾಗೂ ನಿದ್ರಾಹೀನತೆಯನ್ನು ಪರಿಹರಿಸಲು ಸಹಕಾರಿ.
ಹುಬ್ಬುಗಳ ನಡುವಿನ ನೆರಿಗೆಗಳನ್ನು ಬಿಂದಿ ನಿವಾರಿಸುತ್ತದೆ. ನೆರಿಗೆ ರಹಿತ ಮುಖಕ್ಕಾಗಿ ಬಿಂದಿ ಹಚ್ಚುವ ಸ್ಥಳದಲ್ಲಿ ಹುಬ್ಬುಗಳ ನಡುವೆ ಮಸಾಜ್ ಮಾಡುವುದರಿಂದ ಆ ಭಾಗದ ಸ್ನಾಯುಗಳು ಬಲಗೊಳ್ಳುತ್ತವೆ. ತ್ವಚೆಗೆ ರಕ್ತ ಸಂಚಾರ ಹೆಚ್ಚುತ್ತದೆ. ನರಗಳನ್ನು ಪ್ರಚೋದಿಸುತ್ತದೆ. ಸೈನಸ್ ಸಮಸ್ಯೆ ನಿವಾರಣೆಗೂ ಸಹಕಾರಿ.

ಮತ್ತಷ್ಟು ಸುದ್ದಿಗಳು

Latest News

ಪಾಟಿದಾರ್ ಶತಕದಾಟ: ಕ್ವಾಲಿಫೈಯರ್ 2 ತಲುಪಿದ ಫಾಫ್ ಪಡೆ

newsics.com ಕೋಲ್ಕತ್ತಾ: ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಐಪಿಎಲ್ 2022 ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 14ರನ್‌ಗಳ ಗೆಲುವು ಸಾಧಿಸಿದೆ. ಮಳೆಯ ಕಾರಣದಿಂದಾಗಿ ಕೊಂಚ ತಡವಾಗಿ...

ಉಗ್ರರ ಗುಂಡಿಗೆ ಟಿವಿ‌ ಕಲಾವಿದೆ ಬಲಿ

newsics.com ಶ್ರೀನಗರ: ಉಗ್ರರ ಗುಂಡಿಗೆ ಟಿವಿ ಕಲಾವಿದೆಯೊಬ್ಬರು ಬಲಿಯಾಗಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಬದ್ಗಾಮ್‌ ಜಿಲ್ಲೆಯಲ್ಲಿ ಬುಧವಾರ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತ ಮಹಿಳೆಯನ್ನು ಕಲಾವಿದೆ ಅಮ್ರೀನ್‌ ಭಟ್‌ ಎಂದು ಗುರುತಿಸಲಾಗಿದೆ. ಅಮ್ರೀನ್...

ಪೆಟ್ರೋಲಿಲ್ಲ, ಎಟಿಎಂನಲ್ಲಿ ಹಣವಿಲ್ಲ: ಪಾಕ್ ಸರ್ಕಾರದ ವಿರುದ್ಧ ಹಫೀಜ್ ವಾಗ್ದಾಳಿ

newsics.com ಇಸ್ಲಾಮಾಬಾದ್: ಪಾಕಿಸ್ತಾನದ ಸ್ಥಿತಿಗತಿಗಳ ಬಗೆಗೆ ಮಾಜಿ ಕ್ರಿಕೆಟಿಗ ಮೊಹಮ್ಮದ್ ಹಫೀಜ್ ಅವರು ಕಿಡಿಕಾರಿದ್ದಾರೆ. ಲಾಹೋರ್ ನಲ್ಲಿ ಜನ ಸಾಮಾನ್ಯರಿಗೆ ಪೆಟ್ರೋಲ್ ಸಿಗುತ್ತಿಲ್ಲ. ಎಟಿಎಂನಲ್ಲಿ ಹಣವಿಲ್ಲ ಎಂದು ಹೇಳಿದ್ದಾರೆ. ಯಾವುದೇ ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್...
- Advertisement -
error: Content is protected !!