ಲಂಡನ್: ದಿನಕ್ಕೆ ಆರೇಳು ಗಂಟೆಯಾದ್ರೂ ನಿದ್ದೆ ಮಾಡಿದ್ರೆ ಮಾತ್ರ ನಿಮ್ಮ ಸಂಸಾರ ಚೆನ್ನಾಗಿರುತ್ತದೆ. ಇಲ್ಲವಾದರೆ ಸಂಶಯ ಹೆಚ್ಚಾಗಿ ಸಂಸಾರ ಹಳ್ಳ ಹಿಡಿಯಬಹುದು.
ನಿದ್ದೆ ಕಡಿಮೆಯಾದಷ್ಟೂ ಸಂಶಯ ಹೆಚ್ಚುತ್ತದೆ ಎಂದು ಸಂಶೋಧನೆಯೊಂದು ಸ್ಪಷ್ಟಪಡಿಸಿದೆ. ನೀವಾಗಲೀ, ನಿಮ್ಮ ಸಂಗಾತಿಯಾಗಲೀ ಪರಸ್ಪರ ಸಂಶಯದಿಂದ ನೋಡಿದರೆ ಅಪಾಯ ಜಾಸ್ತಿ. ಅನಗತ್ಯವಾಗಿ ಅಪಾಯ ತಂದುಕೊಳ್ಳುವುದಕ್ಕಿಂತ ಸಮರ್ಪಕ ನಿದ್ದೆ ಮಾಡೋದೇ ವಾಸಿ.
ನಿದ್ದೆ ಕಡಿಮೆಯಾದಷ್ಟೂ ಸಂಶಯ ಹೆಚ್ಚುತ್ತದೆ ಎಂದು ಸಂಶೋಧನೆಯೊಂದು ಸ್ಪಷ್ಟಪಡಿಸಿದೆ. ನೀವಾಗಲೀ, ನಿಮ್ಮ ಸಂಗಾತಿಯಾಗಲೀ ಪರಸ್ಪರ ಸಂಶಯದಿಂದ ನೋಡಿದರೆ ಅಪಾಯ ಜಾಸ್ತಿ. ಅನಗತ್ಯವಾಗಿ ಅಪಾಯ ತಂದುಕೊಳ್ಳುವುದಕ್ಕಿಂತ ಸಮರ್ಪಕ ನಿದ್ದೆ ಮಾಡೋದೇ ವಾಸಿ.
ನಿಮ್ಮ ದಿನನಿತ್ಯದ ಕೆಲಸದಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಳ್ಳಿ. ಸಾಧ್ಯವಾದಷ್ಟೂ ಸುಖ ನಿದ್ರೆ ಮಾಡಿ, ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ.
ನಿದ್ರೆ ಸರಿಯಾಗಿಲ್ಲವೆಂದಾದಲ್ಲಿ ಸಂಶಯ ಜಾಸ್ತಿಯಾಗುತ್ತದೆ ಎಂದು ಲಂಡನ್ ನ ಕಿಂಗ್ಸ್ ಕಾಲೇಜು ನಡೆಸಿದ ಸಂಶೋಧನೆ ಹೇಳಿದೆ. ನಿದ್ರೆ ಕಡಿಮೆಯಾದ್ರೆ ಸಂಶಯಪಡುವ ಪ್ರವೃತ್ತಿಯಲ್ಲಿ ವೃದ್ಧಿಯಾಗುತ್ತದೆಯಂತೆ.
ನಿದ್ರಾಹೀನತೆ ನಮ್ಮ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ನಿದ್ರೆ ಕಡಿಮೆಯಾದರೆ ಒತ್ತಡ, ಸಿಟ್ಟು ಹೆಚ್ಚಾಗುತ್ತದೆ. ನಿದ್ರೆ ನಮ್ಮ ಮಾನಸಿಕ ಆರೋಗ್ಯದ ಮೇಲೆ ಮಹತ್ವದ ಪರಿಣಾಮ ಬೀರುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಸಂಶೋಧಕರು 300 ಕ್ಕೂ ಹೆಚ್ಚು ಮಂದಿ ಮೇಲೆ ಅಧ್ಯಯನ ನಡೆಸಿದ್ದಾರೆ. ಅವರ ನಿದ್ರೆ ಮಾಡುವ ಸಮಯವನ್ನು ಅಧ್ಯಯನಕ್ಕೆ ಪರಿಗಣಿಸಲಾಗಿದೆ. ನಿದ್ರಾಹೀನತೆಗೊಳಗಾಗಿದ್ದ ಶೇ.50ರಷ್ಟು ಮಂದಿಗೆ ಅಸುರಕ್ಷತೆ ಕಾಡ್ತಾ ಇತ್ತು ಎಂದು ಸಂಶೋಧಕರು ತಿಳಿಸಿದ್ದಾರೆ.
ಸಖತ್ ನಿದ್ದೆ ಮಾಡಿ, ಸಂಶಯದಿಂದ ಪಾರಾಗಿ!
Follow Us