Wednesday, October 28, 2020

ಕೊರೋನಾಗೂ ತುಳಸಿ ಮದ್ದು

ಮನೆಯಂಗಳದಲ್ಲಿರುವ ತುಳಸಿ ಪೂಜೆಗಷ್ಟೇ ಅಲ್ಲ, ಆರೋಗ್ಯಕ್ಕೂ ಅಗತ್ಯ. ತುಳಸಿ ಎಲೆಗಳನ್ನು ಹಾಕಿ ಕುದಿಸಿದ ನೀರಿನ ಆವಿಯನ್ನು ದಿನವೂ ತೆಗೆದುಕೊಳ್ಳುತ್ತ ಬಂದರೆ ಕೊರೋನಾದಂಥ ಸೋಂಕು ಹತ್ತಿರ ಸುಳಿಯುವುದಿಲ್ಲ.
♦ ಡಾ.ಸುಮನ್
newsics.com@gmail.com


 ಪ್ರ ತಿ ಮನೆಯಂಗಳದಲ್ಲಿ ಒಂದಾದರೂ ತುಳಸಿ ಗಿಡವಿದ್ದೇ ಇರುತ್ತದೆ. ಮನೆಯ ಸುತ್ತಮುತ್ತ, ಮನೆಯ ಎದುರು ಸಾಲು ಸಾಲು ತುಳಸಿ ಗಿಡಗಳನ್ನು ಬೆಳೆಸುವವರೂ ಇದ್ದಾರೆ. ಇದರಿಂದ ವಾತಾವರಣ ಶುದ್ಧವಾಗಿರುತ್ತದೆ ಹಾಗೂ ಮನೆಗೆ ಕ್ರಿಮಿ-ಕೀಟಗಳ ಹಾವಳಿ ಕಡಿಮೆಯಾಗುತ್ತದೆ.
ಪೂಜೆಗಷ್ಟೇ ತುಳಸಿ ಪವಿತ್ರವಲ್ಲ, ಅದನ್ನು ಆರೋಗ್ಯದ ಸಂರಕ್ಷಕವನ್ನಾಗಿಯೂ ಪರಿಗಣಿಸಬೇಕಾಗುತ್ತದೆ. ಏಕೆಂದರೆ, ತುಳಸಿಯನ್ನು ದಿನವೂ ಬಳಸುತ್ತ ಬಂದರೆ ಕ್ಯಾನ್ಸರ್’ನಂಥ ರೋಗವನ್ನೂ ದೂರವಿಡಬಹುದು.
ತುಳಸಿ ಎಲೆ ಕಫವನ್ನು ನಾಶ ಮಾಡುವ ಗುಣ ಹೊಂದಿದೆ. ಹೀಗಾಗಿ, ಸಾಮಾನ್ಯವಾಗಿ ನೆಗಡಿ, ಕೆಮ್ಮು ಇರುವವರು ತುಳಸಿಯನ್ನು ಬಳಸುವುದು ಕಂಡುಬರುತ್ತದೆ. ನೀರಿಗೆ ತುಳಸಿ ಎಲೆಗಳನ್ನು ಹಾಕಿ ಕುದಿಸಿ, ಶುಂಠಿ, ಚಿಟಿಕೆ ಅರಿಶಿಣ ಸೇರಿಸಿ ಕುದಿಸಿ, ದಿನಕ್ಕೆ 3-4 ಬಾರಿ ಕುಡಿದರೆ ಕಫ ನಿವಾರಣೆಯಾಗುತ್ತದೆ.
ತುಳಸಿ ಮಹಿಮೆ ಅಪಾರ
• ತುಳಸಿ ಎಲೆಗಳಲ್ಲಿ ವಿಷಮ ಜ್ವರವನ್ನೂ ಶಮನ ಮಾಡುವ ಗುಣವಿದೆ.
• ಮುಖದಲ್ಲಿ ಕಪ್ಪು ಕಲೆಗಳಾಗಿದ್ದರೆ ತುಳಸಿಯನ್ನು ಬಳಸುವುದು ಉತ್ತಮ. ತುಳಸಿ ರಸಕ್ಕೆ ನಿಂಬೆ ರಸ ಸೇರಿಸಿ ದಿನಕ್ಕೆ ಎರಡು ಬಾರಿ ಮುಖಕ್ಕೆ ಲೇಪಿಸಿಕೊಳ್ಳಬೇಕು. ಕ್ರಮೇಣ ಕಪ್ಪುಕಲೆಗಳು ನಿವಾರಣೆಯಾಗುತ್ತವೆ.
• ಹಲ್ಲು ನೋವಿಗೆ ತುಳಸಿ ಪರಿಹಾರ ನೀಡುತ್ತದೆ. ತುಳಸಿ ಎಲೆಗಳನ್ನು ಒಣಗಿಸಿ ಪುಡಿ ಮಾಡಿಕೊಂಡು, ಚಿಟಿಕೆಯಷ್ಟು ಪುಡಿಯನ್ನು ಸಾಸಿವೆ ಎಣ್ಣೆ ಜತೆ ಸೇರಿಸಿ ಕಲಸಿ ನೋವಿರುವ ಹಲ್ಲಿನ ಮಧ್ಯೆ ಇಟ್ಟುಕೊಳ್ಳಬೇಕು.
• ಹುಳುಕಡ್ಡಿ ಅಥವಾ ರಿಂಗ್ ವರ್ಮ್ ಆಗಿದ್ದರೆ ತುಳಸಿ ರಸದೊಂದಿಗೆ ಉಪ್ಪು ಸೇರಿಸಿ ಹಚ್ಚದರೆ ಬೇಗ ಕಡಿಮೆಯಾಗುತ್ತದೆ.
• ತುಳಸಿ ಎಲೆಗಳು ಹಾಗೂ ಲವಂಗದ ಪುಡಿ ಸೇರಿಸಿ ಒಂದು ಲೋಟ ನೀರಿಗೆ ಹಾಕಿ ಕುದಿಸಬೇಕು. ಈ ಕಷಾಯದಿಂದ ಪ್ರತಿದಿನ ಬಾಯಿ ಮುಕ್ಕಳಿಸಿದರೆ ಬಾಯಿ ವಾಸನೆ ಸಮಸ್ಯೆ ಕಡಿಮೆಯಾಗುತ್ತದೆ.
• ಪ್ರತಿದಿನ ಬೆಳಗ್ಗೆ 6-8 ತುಳಸಿ ಎಲೆಗಳನ್ನು ತಿನ್ನುವುದರಿಂದ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಅಲ್ಲದೆ, ಒತ್ತಡ ನಿವಾರಣೆಯಾಗುತ್ತದೆ.
• ಚರ್ಮದ ಸಮಸ್ಯೆಗಳಿಗೆ ತುಳಸಿ ರಸವನ್ನು ಬಳಸಿದರೆ ಅತ್ಯುತ್ತಮ ಪರಿಹಾರ ಪಡೆದುಕೊಳ್ಳಬಹುದು.
• ತುಳಸಿಯ ಎಲೆ, ಬೇರು, ಬೀಜಗಳೆಲ್ಲವೂ ಔಷಧದ ಗುಣವನ್ನು ಹೊಂದಿವೆ. ಇತ್ತೀಚಿನ ಸಂಶೋಧನೆಗಳ ಪ್ರಕಾರ, ತುಳಸಿ ಎಲೆಯಲ್ಲಿ ಆವಿಯಾಗುವ ತೈಲದ ಅಂಶವಿದೆ. ಇದೇ ಕ್ರಿಮಿಗಳನ್ನು ದೂರವಿರಿಸುವಲ್ಲಿ ನೆರವಾಗುತ್ತದೆ.
• ತುಳಸಿ ಒಂದು ನೈಸರ್ಗಿಕ ಆ್ಯಂಟಿ ಬಯಾಟಿಕ್ ಹಾಗೂ ಸೋಂಕು ನಿವಾರಕ.
• ತುಳಸಿ ಅಸ್ತಮಾ, ಶ್ವಾಸಕೋಶದ ಅಲರ್ಜಿಯನ್ನು ದೂರವಿರಿಸುವುದು ಎಂದಿನಿಂದಲೂ ಸಾಬೀತಾಗಿರುವ ಸಂಗತಿ. ಈ ಕೊರೋನಾ ಸಂಕಷ್ಟದ ಸಮಯದಲ್ಲಿಯೂ ತುಳಸಿ ಎಲೆಗಳನ್ನು ಹಾಕಿ ಕುದಿಸಿದ ನೀರಿನಲ್ಲಿ ಮುಖಕ್ಕೆ ಶಾಖ ತೆಗೆದುಕೊಳ್ಳುವುದು ಉತ್ತಮ. ಇದರಿಂದ ಸೋಂಕು ಹತ್ತಿರ ಸುಳಿಯದು.

ಮತ್ತಷ್ಟು ಸುದ್ದಿಗಳು

Latest News

ಪ್ರೊಫೆಸರ್ ಹತ್ಯೆ ಪ್ರಕರಣ: ಖ್ಯಾತ ಗಾಯಕಿ ಅನನ್ಯ ಭಟ್ ತಂದೆ ಬಂಧನ

newsics.com ಮೈಸೂರು: ಸಾಂಸ್ಕೃತಿಕ ನಗರ ಮೈಸೂರನ್ನು ಬೆಚ್ಚಿ ಬೀಳಿಸಿದ್ದ ಪ್ರೊಫೆಸರ್ ಪರಶಿವಮೂರ್ತಿ ಹತ್ಯೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಹತ್ಯೆಗೆ ಸುಫಾರಿ ನೀಡಿದ್ದ ಆರೋಪದ ಹಿನ್ನೆಲೆಯಲ್ಲಿ ಖ್ಯಾತ ಗಾಯಕಿ ಅನನ್ಯ...

ರಾಜ್ಯೋತ್ಸವ ಪ್ರಶಸ್ತಿ ಪ್ರಕಟ: 65 ಸಾಧಕರಿಗೆ ಪ್ರಶಸ್ತಿ ಗೌರವ

Newsics.com ಬೆಂಗಳೂರು: ರಾಜ್ಯದ ಪ್ರತಿಷ್ಠಿತ  2020ರ ರಾಜ್ಯೋತ್ಸವ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಸಂಘ ಸಂಸ್ಥೆಗಳು, ಸಾಧಕರು ಸೇರಿದಂತೆ 65 ಮಂದಿಗೆ ಪ್ರಶಸ್ತಿ ನೀಡಲು ತೀರ್ಮಾನಿಸಲಾಗಿದೆ.  ಬೆಂಗಳೂರಿನಲ್ಲಿ  ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ ಟಿ ರವಿ ...

ಎನ್‌ಐಎನಿಂದ ಬೆಂಗಳೂರಲ್ಲಿ ಇನ್ನಿಬ್ಬರು ಶಂಕಿತ ಉಗ್ರರ ಬಂಧನ

newsics.comಬೆಂಗಳೂರು: ನಗರದಲ್ಲಿ ಶಂಕಿತ ಐಸಿಸ್ ಉಗ್ರರ ಭೇಟೆ ಮುಂದುವರಿಸಿರುವ ಎನ್‌ಐಎ ಅಧಿಕಾರಿಗಳ ತಂಡ, ಇದೀಗ ಇನ್ನಿಬ್ಬರು ಶಂಕಿತರನ್ನು ಬಂಧಿಸಿದೆ.ಬೆಂಗಳೂರಿನ ಥಣಿಸಂದ್ರದಲ್ಲಿರುವ ನಿವಾಸವೊಂದರ ಮೇಲೆ ದಾಳಿ ನಡೆಸಿರುವ ದೆಹಲಿ ಎನ್‌ಐಎ ಟೀಮ್,...
- Advertisement -
- Advertisement -
error: Content is protected !!