ಜೇನುತುಪ್ಪವನ್ನು ತೂಕ ಕಡಿಮೆ ಮಾಡಿಕೊಳ್ಳಲು, ಮಾಯಿಶ್ಚರೈಸರ್ ನಂತೆ ಬಳಕೆ ಮಾಡಬಹುದು. ಇತ್ತೀಚಿನ ದಿನಗಳಲ್ಲಂತೂ ಜೇನನ್ನು ಸೌಂದರ್ಯವರ್ಧಕವಾಗಿ ಬಳಕೆ ಮಾಡುವುದು ಹೆಚ್ಚಾಗಿದೆ. ಇದರೊಂದಿಗೆ, ಕೆಮ್ಮು, ನೆಗಡಿ ನಿವಾರಣೆಗೂ ಶುದ್ಧ ಜೇನು ಪರಿಣಾಮಕಾರಿ.
ಆರೋಗ್ಯ
♦ ಡಾ. ಸುಮನ್
newsics.com@gmail.com
ಜೇ ನುತುಪ್ಪ ಎಷ್ಟು ವರ್ಷವಾದರೂ ಕೆಡುವುದಿಲ್ಲ ಎನ್ನುವ ಮಾತನ್ನು ಕೇಳಿರಬಹುದು. ಹೌದು, ಶುದ್ಧ ಜೇನು ಎಷ್ಟು ವರ್ಷವಾದರೂ ಕೆಡುವುದಿಲ್ಲ. ಅಷ್ಟೇ ಅಲ್ಲ, ಶುದ್ಧ ಜೇನು ಮನುಷ್ಯನ ಆರೋಗ್ಯಕ್ಕೆ ಅಷ್ಟೇ ಅದ್ಭುತ ಚೈತನ್ಯ ನೀಡುವಂಥ ಗುಣ ಹೊಂದಿರುವ ಔಷಧೀಯ ಆಹಾರ.
ಎಲ್ಲರಿಗೂ ಗೊತ್ತಿರುವಂತೆ, ಜೇನು ತೂಕ ಕಡಿಮೆ ಮಾಡಲು ಸಹಕಾರಿ. ಆದರೆ, ನೆನಪಿಡಿ. ಮಾರುಕಟ್ಟೆಗಳಲ್ಲಿ ಸಿಗುವ ಜೇನಿನಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಅದರಿಂದ ಹಾನಿಯೇ ಹೊರತು ಪ್ರಯೋಜನ ಖಂಡಿತವಾಗಿ ಆಗುವುದಿಲ್ಲ. ಜೇನು ಬೆಳೆಗಾರರಿಂದ ನೇರವಾಗಿ ಪಡೆಯುವ ಶುದ್ಧ ಜೇನು ಮಾತ್ರವೇ ಪ್ರಯೋಜನಕಾರಿ.
ತೂಕ ಕಡಿಮೆಯಾಗುತ್ತದೆ
ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಗ್ಲಾಸ್ ನೀರಿಗೆ ಎರಡು ಚಮಚ ಜೇನು, ಅರ್ಧ ಹೋಳು ಲಿಂಬೆ ರಸ ಸೇರಿಸಿ ಕುಡಿದರೆ ತೂಕ ಇಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಒಂದೆರಡು ತಿಂಗಳಲ್ಲಿ ಆಗದೇ ಇರಬಹುದು. ನಿರಂತರವಾಗಿ ಮಾಡುತ್ತಿದ್ದರೆ ವರ್ಷದ ಹೊತ್ತಿಗೆ ಖಂಡಿತವಾಗಿ ತೂಕ ಇಳಿದಿರುತ್ತದೆ.
ಚರ್ಮಕ್ಕೆ ಉತ್ತಮ
ಶುದ್ಧ ಜೇನುತುಪ್ಪ ಚರ್ಮದ ಆರೋಗ್ಯಕ್ಕೆ ತುಂಬ ಪ್ರಯೋಜನಕಾರಿ. ಜೇನಿನಿಂದ ಕಣ್ಣಿನ ಸುತ್ತ ಮಸಾಜ್ ಮಾಡಿಕೊಳ್ಳಬೇಕು. ಹತ್ತು ನಿಮಿಷದ ಬಳಿಕ ತೊಳೆದುಕೊಳ್ಳಬೇಕು. ಇದರಿಂದ ಕಣ್ಣಿನ ಸುತ್ತ ಇರುವ ಕಪ್ಪು ಕಲೆ ಮಾಯವಾಗುತ್ತದೆ. ಜೇನನ್ನು ಫೇಸ್ ವಾಶ್ ಥರ ಬಳಕೆ ಮಾಡಬಹುದು. ಇದರಿಂದ ಚರ್ಮದ ಕಾಂತಿ ಹೆಚ್ಚುತ್ತದೆ. ಜೇನು, ಎಕ್ಟ್ರಾ ವರ್ಜಿನ್ ಆಲಿವ್ ಆಯಿಲ್ ಅಥವಾ ತೆಂಗಿನೆಣ್ಣೆ, ಲಿಂಬೆ ರಸ ಸೇರಿಸಿ ಬಳಕೆ ಮಾಡಿದರೆ ಮಾಯಿಶ್ವರೈಸರ್’ನಂತೆ ಪರಿಣಾಮ ಬೀರುತ್ತದೆ. ಒಣ ಚರ್ಮಕ್ಕೆ ಅನುಕೂಲವಾಗುತ್ತದೆ. ಈ ಪೇಸ್ಟ್ ನಿಂದ ಇಡೀ ದೇಹಕ್ಕೆ ಮಸಾಜ್ ಮಾಡಿಕೊಳ್ಳಬಹುದು. ಮುಖ ಒಣಗುವ ಸಮಸ್ಯೆ ಇರುವವರಿಗೆ ಇದರಿಂದ ಸಾಕಷ್ಟು ಅನುಕೂಲವಾಗುತ್ತದೆ.
ಶುದ್ಧ ಜೇನುತುಪ್ಪವನ್ನು ಸಕ್ಕರೆಗೆ ಬದಲಿಯಾಗಿ ಬಳಕೆ ಮಾಡಬೇಕು. ಸಕ್ಕರೆ ಎಷ್ಟು ಹಾನಿಯೋ, ಜೇನು ಅಷ್ಟೇ ಉತ್ತಮ. ಇನ್ನು ಮಕ್ಕಳಿಗೆ ಕಾಳುಮೆಣಸು, ಹಿಪ್ಪಲಿ ಜತೆಗೆ ಸೇರಿಸಿ ಜೇನನ್ನು ನೀಡಿದರೆ ಕೆಮ್ಮು ನಿವಾರಣೆಯಾಗುತ್ತದೆ. ಹೀಗೆ ಜೇನಿನ ಲಾಭಗಳು ಹಲವಾರು. ಅದನ್ನು ಸರಿಯಾಗಿ ಬಳಕೆ ಮಾಡಿಕೊಳ್ಳುವುದು ನಮಗೆ ತಿಳಿದಿರಬೇಕು ಅಷ್ಟೆ.
ಜೇನೆಂದರೆ ಸೂಪರ್ ಫುಡ್
ಜೇನುತುಪ್ಪವನ್ನು ವಿಜ್ಞಾನಿಗಳು ಸೂಪರ್ ಫುಡ್ ಎಂದು ಕರೆದಿದ್ದಾರೆ. ರಕ್ತಹೀನತೆಯನ್ನು ಕಡಿಮೆ ಮಾಡುವ ಚೈತನ್ಯದಾಯಕ ಗುಣ ಜೇನಿನಲ್ಲಿದೆ. ಸ್ವಲ್ಪ ಬೆಚ್ಚಗಿನ ನೀರಿಗೆ ಜೇನನ್ನು ಸೇರಿಸಿ ಕುಡಿದರೆ ಕೆಂಪು ರಕ್ತಕಣಗಳ ಸಂಖ್ಯೆ ಹೆಚ್ಚುತ್ತದೆ. ಹಿಮೋಗ್ಲೋಮಿನ್ ಕೊರತೆ ಇರುವವರು ಜೇನನ್ನು ಸೇವಿಸಬೇಕು. ರಕ್ತದ ಆಮ್ಲಜನಕ ಸಾಗಿಸುವ ಸಾಮರ್ಥ್ಯವನ್ನು ಜೇನುತುಪ್ಪ ಹೆಚ್ಚಿಸುತ್ತದೆ ಎಂದರೆ ಅಚ್ಚರಿಯಾಗಬಹುದು.
ಕ್ಯಾನ್ಸರ್ ರೋಗಿಗಳು ಕಿಮೋಥೆರಪಿ ಪಡೆದುಕೊಳ್ಳುವ ಸಮಯದಲ್ಲಿ ದಿನಕ್ಕೆ ಎರಡು ಚಮಚ ಜೇನತುಪ್ಪ ಸೇವಿಸಿದರೆ ಬಿಳಿಯ ರಕ್ತಕಣಗಳು ಕಡಿಮೆಯಾಗುವ ಸಮಸ್ಯೆ ಶೇ.40ರಷ್ಟು ಇಲ್ಲವಾಗುತ್ತದೆ ಎನ್ನುವುದು ದೃಢಪಟ್ಟಿದೆ.
ಜೇನುತುಪ್ಪದಲ್ಲಿ ಸುಮಾರು ಶೇ. 30 ಗ್ಲೂಕೋಸ್ ಮತ್ತು ಶೇ.40 ಫ್ರಕ್ಟೋಸ್ ಇರುತ್ತದೆ. ಇವು ಸರಳ ಸಕ್ಕರೆಗಳು. ಶೇ. 20ರಷ್ಟು ಸಂಕೀರ್ಣ ಸಕ್ಕರೆಗಳನ್ನು ಹೊಂದಿರುತ್ತದೆ. ಇವುಗಳೊಂದಿಗೆ ಜೇನುತುಪ್ಪದಲ್ಲಿ ಡೆಕ್ಸ್ಟ್ರಿನ್ (dextrin) ಎಂಬ ಪಿಷ್ಟದ ನಾರು ಇರುತ್ತದೆ. ಒಟ್ಟಾರೆ, ಈ ಸಂಯೋಜನೆಯಿಂದ ದೇಹದ ರಕ್ತದಲ್ಲಿನ ಸಕ್ಕರೆಯ ಪ್ರಮಾಣ ನಿಯಂತ್ರಣವಾಗುತ್ತದೆ.
ಬ್ಯಾಕ್ಟೀರಿಯಾ ವಿರೋಧಿ
ಜೇನುತುಪ್ಪದಲ್ಲಿ ಬ್ಯಾಕ್ಟೀರಿಯಾ ನಾಶ ಮಾಡುವ ಅಂಶವಿರುವುದು ಅಧ್ಯಯನದಿಂದ ಸಾಬೀತಾಗಿದೆ. ಗಾಯ ಮತ್ತು ಕಾಲಿನ ಹುಣ್ಣುಗಳ ಮೇಲೆ ಜೇನುತುಪ್ಪ ಸವರಿದಾಗ ಬೇಗ ಗುಣವಾಗುವುದು ಖಾತ್ರಿಯಾಗಿದೆ. ಸೋಂಕಿತ ಗಾಯಗಳು ಕ್ರಿಮಿರಹಿತವಾಗುವುದು ದೃಢಪಟ್ಟಿದೆ.
ಸುಡುವ ಬಿಸಿ ನೀರು ಕುಡಿಯದಿರಿ