ಇಮ್ಯುನಿಟಿ ಬೂಸ್ಟರ್ ರೆಸಿಪಿ 6
ಪವಿತ್ರಾ ಜಿಗಳೇಮನೆ
newsics.com@gmail.com
ಅನಾದಿ ಕಾಲದಿಂದಲೂ ತರಕಾರಿ ಗಡ್ಡೆಗಳು ಬಳಕೆಯಲ್ಲಿದೆ. ದೇಹವನ್ನು ಸದೃಢಗೊಳಿಸುವಲ್ಲಿ ಭೂಮಿಯೊಳಗೆ ಬೆಳೆಯುವ ತರಕಾರಿಗಳು ಮಹತ್ವದ ಪಾತ್ರ ವಹಿಸುತ್ತವೆ. ದೇಹದ ಆರೋಗ್ಯ ಕಾಪಾಡುವ ತರಕಾರಿಗಳಲ್ಲಿ ಬೀಟ್ರೂಟ್ ಕೂಡ ಒಂದು. ಬೀಟ್ರೂಟ್ಲ್ಲಿ ಕಬ್ಬಿಣದಂಶ ಹೆಚ್ಚಿದ್ದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ನಿಯಮಿತ ಸೇವನೆಯಿಂದ ಕ್ಯಾನ್ಸರ್ ಬರದಂತೆ ತಡೆಯುತ್ತದೆ.
ಇದರಲ್ಲಿ ಫೋಲಿಕ್ ಆ್ಯಸಿಡ್ ಇದ್ದು ಹೊಸ ರಕ್ತಕಣಗಳ ಉತ್ಪಾದನೆಗೆ ನೆರವಾಗುತ್ತದೆ. ಬೀಟ್ ರೂಟ್ ತಿನ್ನುವುದರಿಂದ ಹೃದಯಸಂಬಂಧಿ ಖಾಯಿಲೆಗಳಾದ ಶ್ವಾಸ ನಾಳಗಳಲ್ಲಿ ತಡೆಯುಂಟಾಗುವಿಕೆ ಮತ್ತು ಹೃದಯಾಘಾತವನ್ನು ತಡೆಗಟ್ಟಬಹುದು.
ಚರ್ಮದ ಕಾಂತಿ ಹೆಚ್ಚಿಸಲು ಕೂಡ ಬೀಟ್ರೂಟ್ ನೆರವಾಗುತ್ತದೆ.
ಬೀಟ್ರೂಟ್ ನಲ್ಲಿ ನೈಸರ್ಗಿಕ ರಾಸಾಯನಿಕವಾದ ನೈಟ್ರೇಟ್ ಇದೆ. ಇದು ಪ್ರತಿಕ್ರಿಯೆಗೆ ಒಳಗಾದ ಬಳಿಕ ನೈಟ್ರಿಕ್ ಆಕ್ಸೈಡ್ ಆಗಿ ಬದಲಾಗಿ ರಕ್ತ ಸಂಚಾರವನ್ನು ಸುಗಮಗೊಳಿಸುತ್ತದೆ.
ಬೀಟ್ರೂಟ್ ಪರೋಟಾ
ಹಸಿ ಬೀಟ್ರೂಟ್’ಅನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ನುಣ್ಣಗೆ ರುಬ್ಬಿಕೊಳ್ಳಿ.
ಬಳಿಕ ಗೋದಿ ಹಿಟ್ಟಿಗೆ ರುಬ್ಬಿದ ಬೀಟ್ರೂಟ್ ರಸ ಸೇರಿಸಿ ಅದಕ್ಕೆ ಉಪ್ಪು, 1 ಟೀ ಸ್ಪೂನ್ ಬೆಣ್ಣೆ ಸೇರಿಸಿ ರೊಟ್ಟಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಿ. 15 ನಿಮಿಷ ನೆನೆಯಲು ಬಿಡಿ.
ನಂತರ ರೊಟ್ಟಿಯಂತೆ ಲಟ್ಟಿಸಿ ಕಾವಲಿಯಲ್ಲಿ ಬೇಯಿಸಿ.
ಎಣ್ಣೆ ಹಾಕಿಯೂ ಬೇಯಿಸಬಹುದು ಹಾಗೆಯೂ ಬೇಯಿಸಬಹುದು.
ಕಾಯಿ ಚಟ್ನಿ ಅಥವಾ ಬೆಣ್ಣೆಯೊಂದಿಗೆ ಬೀಟ್ರೂಟ್ ಪರೋಟವನ್ನು ಸವಿಯಬಹುದು.
ಬೀಟ್ರೂಟ್ ಬಳಕೆಯ ಸರಳ ವಿಧಾನವೆಂದರೆ ಅದು ಬೀಟ್ರೂಟ್ ಜ್ಯೂಸ್.
ಬೀಟ್ರೂಟ್ ಗಡ್ಡೆಯನ್ನು ಕತ್ತರಿಸಿ ರುಬ್ಬಿಕೊಂಡು ಸೇವಿಸಿದರೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಬೀಟ್ರೂಟ್ ಜ್ಯೂಸ್ ಕುಡಿಯಬಹುದು.