Saturday, November 26, 2022

ದೇಹದ ಶಕ್ತಿ ಹೆಚ್ಚಿಸುವ ಒಂದೆಲಗ

Follow Us

ಇಮ್ಯುನಿಟಿ ಬೂಸ್ಟರ್ ರೆಸಿಪಿ 10

ಪವಿತ್ರಾ ಜಿಗಳೇಮನೆ
newsics.com@gmail.com

ಸಾಮಾನ್ಯವಾಗಿ ಜೌಗು ಪ್ರದೇಶ ಮತ್ತು ನೈಸರ್ಗಿಕವಾಗಿ ಹರಿಯುವ ನೀರಿನ ಪ್ರದೇಶಗಳಲ್ಲಿ ಬೆಳೆಯುವ ಗಿಡ ಒಂದೆಲಗ. ಬ್ರಾಹ್ಮೀ ಎಂದು ಕರೆಯುವ ಈ ಸಸ್ಯ ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಇದನ್ನು ಪ್ರತಿನಿತ್ಯ ಸೇವಿಸಬಹುದು ಅಥವಾ ಔಷಧಕ್ಕೆ ಗಿಡಮುಲಿಕೆಯಾಗಿಯೂ ಬಳಸಬಹುದು. ಇದರಲ್ಲಿರುವ ಆರೋಗ್ಯ ಗುಣಗಳ ಬಗ್ಗೆ ವಿಜ್ಞಾನಿಗಳೂ ದೃಢಪಡಿಸಿದ್ದಾರೆ. ಈ ಗಿಡಮೂಲಿಕೆ ಸಾಮಾನ್ಯ ಶೀತ, ಮೂತ್ರನಾಳದ ಸೋಂಕು, ಭೇದಿ, ಕಾಲರಾ, ಕ್ಷಯರೋಗಗಳಿಗೆ ಉತ್ತಮ ಮನೆಮದ್ದಾಗಿದೆ.
ಮುಖ್ಯವಾಗಿ ಒಂದೆಲಗ ಸುಸ್ತು ನಿವಾರಿಸಿ ದೇಹದಲ್ಲಿ ಶಕ್ತಿಯನ್ನು ವೃದ್ಧಿಸಲು ಸಹಾಯಕವಾಗಿದೆ. ವೈಜ್ಞಾನಿಕವಾಗಿ ಸೆಂಟೆಲ್ಲಾ ಏಸಿಯಾಟಿಕಾ ಎಂದು ಕರೆಯಲ್ಪಡುವ ಈ ಸಸ್ಯ ಬ್ಯಾಕ್ಟೀರೀಯಾ ವಿರೋಧಿಯಾಗಿದೆ. ಹೀಗಾಗಿ ವೈರಲ್ ಸೋಂಕಿನಿಂದ ಮುಕ್ತವಾಗಲು ಒಂದೆಲಗ ಉತ್ತಮ. ಇದರಲ್ಲಿರುವ ಬೆಕೊಸೈಡ್ ಎ ಮತ್ತು ಬಿ ರಾಸಾಯನಿಕವು ಮಕ್ಕಳಲ್ಲಿ ಏಕಾಗ್ರತೆ ಹೆಚ್ಚಿಸಲು ಸಹಾಯಕವಾಗಿದೆ. ಅಲ್ಲದೆ ಜ್ಞಾಪಕ ಶಕ್ತಿ ಹೆಚ್ಚಿಸಲೂ ಒಂದೆಲಗ ಉತ್ತಮವಾಗಿದೆ. ಒಂದೆಲಗ ಸೊಪ್ಪನ್ನು ಚೆನ್ನಾಗಿ ಅರೆದು ತಲೆಗೆ ಹಚ್ಚಿ ಎರಡು ಗಂಟೆಗಳ ಬಳಿಕ ಸ್ನಾನ ಮಾಡಿದರೆ ತಲೆಹೊಟ್ಟು ಕಡಿಮೆಯಾಗುತ್ತದೆ. ಕರಾವಳಿ, ಮಲೆನಾಡಿನಲ್ಲಿ ಹೆಚ್ಚಾಗಿ ಕಂಡುಬರುವ ಈ ಸಸ್ಯವನ್ನು ಹಸಿಯಾಗಿಯೇ ತಿನ್ನುವುದು ವಾಡಿಕೆ. ಆದರೂ ಇದರ ಚಟ್ನಿ, ತಂಬುಳಿಯಂತಹ ಪದಾರ್ಥಗಳೇ ಹೆಚ್ಚು ಜನಪ್ರಿಯ.

ಒಂದೆಲಗದ ಚಟ್ನಿ

ಬೇಕಾಗುವ ಸಾಮಗ್ರಿ

ಬೇರುಸಹಿತ ಒಂದೆಲಗ ಗಿಡ-1 ಕಟ್ಟು
ತೊಗರಿ ಬೇಳೆ -2 ಚಮಚ
ಬೆಲ್ಲ- 1 ಚಮಚ
ಒಣಮೆಣಸಿನ ಕಾಯಿ- 3,4
ಹುಣಸೆಹಣ್ಣು ಸ್ವಲ್ಪ, ರುಚಿಗೆ ತಕ್ಕಷ್ಟು ಉಪ್ಪು,
ತುಪ್ಪ- 1 ಚಮಚ
ಮಾಡುವ ವಿಧಾನ
ಸೊಪ್ಪನ್ನು ಚೆನ್ನಾಗಿ ತೊಳೆದು ಬೇಯಿಸಿಟ್ಟುಕೊಳ್ಳಿ. ನಂತರ ತೊಗರಿಬೇಳೆಯನ್ನು ಹುರಿದುಕೊಳ್ಳಬೇಕು. ಹುರಿದ ತೊಗರಿ, ಬೇಯಿಸಿದ ಒಂದೆಲಗ, ಒಣಮೆಣಸು, ಹುಣಸೆಹಣ್ಣು, ಬೆಲ್ಲ, ಉಪ್ಪು ಸೇರಿಸಿ ರುಬ್ಬಿಕೊಳ್ಳಿ. ಬಳಿಕ ಅದಕ್ಕೆ ಒಗ್ಗರಣೆ ನೀಡಬೇಕು. ತುಪ್ಪವನ್ನು ಕಾಯಿಸಿ ಸಾಸಿವೆ, ಒಂದು ಒಣಮೆಣಸು ಹಾಕಿ ಒಗ್ಗರಣೆ ಹಾಕಿದರೆ ಆರೋಗ್ಯಯುತ ಒಂದೆಲಗ ಚಟ್ನಿ ಸವಿಯಲು ಸಿದ್ಧ.
ಈ ಚಟ್ನಿಗೆ ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಮಜ್ಜಿಗೆ ಬೆರೆಸಿದರೆ ಊಟದಲ್ಲಿ ತಂಬುಳಿಯಾಗಿಯೂ ಬಳಸಬಹುದು.
ಈಗ ಕೆಲವು ಅಂಗಡಿಗಳಲ್ಲೂ ಒಂದೆಲಗದ ಪೌಡರ್ ಲಭ್ಯ. ಆದರೆ, ಹಸಿ ಒಂದೆಲಗದಷ್ಟು ಪರಿಣಾಮಕಾರಿಯಲ್ಲ ಎಂಬ ಮಾತಿದೆ.

ಮತ್ತಷ್ಟು ಸುದ್ದಿಗಳು

vertical

Latest News

ಚರ್ಮ ಕ್ಯಾನ್ಸರ್ ಬಗ್ಗೆ ಜನ ಜಾಗೃತಿ: ನಗ್ನರಾಗಿ ಪೋಸ್ ನೀಡಿದ 2500 ಮಂದಿ

newsics.com ಸಿಡ್ನಿ: ಹೆಚ್ಚುತ್ತಿರುವ ಚರ್ಮ ಕ್ಯಾನ್ಸರ್ ಬಗ್ಗೆ ಜನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಫೋಟೋ ಶೂಟ್ ಗೆ 2500 ಮಂದಿ ನಗ್ನರಾಗಿ ಪೋಸ್ ನೀಡಿದ್ದಾರೆ. ಸಿಡ್ನಿಯ ಬೋಂಡಿ...

ಜಲಪಾತದಲ್ಲಿ ಸೆಲ್ಫಿ ತೆಗೆದುಕೊಳ್ಳುವಾಗ ದುರಂತ: ನಾಲ್ವರು ಯುವತಿಯರ ಸಾವು

newsics.com ಬೆಳಗಾವಿ: ಕರ್ನಾಟಕ- ಮಹಾರಾಷ್ಟ್ರ ಗಡಿಯಲ್ಲಿ ಇರುವ ಕಿತವಾಡ ಜಲಪಾತದ ಬಳಿ ಭಾರೀ ದುರಂತ ಸಂಭವಿಸಿದೆ. ಸೆಲ್ಫಿ ತೆಗೆಯುವ ವೇಳೆ ನಾಲ್ವರು ಯುವತಿಯರು ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ. ಓರ್ವ ಯುವತಿ ಗಂಭೀರವಾಗಿ ಗಾಯಗೊಂಡಿದ್ದಾರೆ....

ಪೊಲೀಸರಿಂದ ಶಂಕಿತ ಭಯೋತ್ಪಾದಕ ಶಾರೀಕ್ ಗೆಳತಿಯ ವಿಚಾರಣೆ

newsics.com ಬೆಂಗಳೂರು: ಶಂಕಿತ ಭಯೋತ್ಪಾದಕ ಶಾರೀಕ್ ನ ಮೊಬೈಲ್ ನಲ್ಲಿ ಸ್ಫೋಟಕ ಮಾಹಿತಿ ದೊರೆತಿದೆ. ಶಾರೀಕ್  ಬೆಂಗಳೂರಿನಲ್ಲಿ ಗರ್ಲ್ ಫ್ರೆಂಡ್ ಜತೆ ಸುತ್ತಾಡುತ್ತಿದ್ದ ಎಂಬ ಅಂಶ ಬಯಲಾಗಿದೆ. ಶಾಪಿಂಗ್ ಹೆಸರಿನಲ್ಲಿ ಯುವತಿಯನ್ನು ಹೊರಗಡೆ ಕರೆದುಕೊಂಡು ಹೋಗುತ್ತಿದ್ದ...
- Advertisement -
error: Content is protected !!