Wednesday, November 30, 2022

ಕಾಯಿಲೆಗಳಿಂದ ದೂರವಿರಲು ಕೊತ್ತಂಬರಿ‌ ಕಷಾಯ

Follow Us

ಇಮ್ಯುನಿಟಿ ಬೂಸ್ಟರ್ ರೆಸಿಪಿ 14

ಪವಿತ್ರಾ ಜಿಗಳೇಮನೆ
newsics.com@gmail.com

ಕೊತ್ತಂಬರಿ ಬೀಜ ಅಥವಾ ಧನಿಯಾ ಎಲ್ಲರ ಮನೆಯ ಅಡುಗೆಯಲ್ಲಿರುವ ಸಾಂಬಾರು ಪದಾರ್ಥ.
ಈ ಕೊತ್ತಂಬರಿ ಬೀಜದಿಂದ ರೋಗ ದೇಹವನ್ನು ಸ್ವಾಸ್ಥ್ಯವಾಗಿರಿಸಬಹುದು. ಇದು ದೇಹವನ್ನು ತಂಪಾಗಿರಿಸಲು, ಒಳಜ್ವರ ನಿವಾರಣೆಗೆ ಸಹಾಯಕವಾಗಿದೆ. ಹೀಗಾಗಿ ಈಗ ಕೊರೋನಾ ಗುಣಮುಖರಲ್ಲಿ ಕಾಣಿಸಿಕೊಳ್ಳುವ ಅತಿಯಾದ ದೇಹದ ಉಷ್ಣತೆಯನ್ನು ನಿಯಂತ್ರಿಸುವಲ್ಲಿ ಕೊತ್ತಂಬರಿ ಮಹತ್ವದ ಪಾತ್ರ ವಹಿಸುತ್ತದೆ.
ಇದು ಪೊಟಾಷಿಯಂ, ಕ್ಯಾಲ್ಸಿಯಂ, ವಿಟಮಿನ್ ಸಿ, ಮೆಗ್ನೇಷಿಯಂ ಸೇರಿದಂತೆ ಅನೇಕ ಪೋಷಕಾಂಶವನ್ನು ಕೊತ್ತಂಬರಿ ನೀರು ಹೊಂದಿದೆ. ಹೀಗಾಗಿ ರೋಗದಿಂದ ದೂರವಿರಲು ಇದು ನೆರವಾಗುತ್ತದೆ.
ನ್ಯಾಷನಲ್ ಲೈಬ್ರರಿ ಆಫ್ ಸೈನ್ಸ್ ನ ಸಂಶೋಧನೆ, ಕೊತ್ತಂಬರಿಯು ಆ್ಯಂಟಿ ಆ್ಯಕ್ಸಿಡೆಂಟ್ ಆಗಿದ್ದು ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ ಎಂದು ತಿಳಿಸಿದೆ.
ಹೆಣ್ಣುಮಕ್ಕಳಲ್ಲಿ ಅನಿಯಮಿತ ಮುಟ್ಟು ಆಗುತ್ತಿದ್ದರೆ, ಮುಟ್ಟಿನ ಸಂದರ್ಭದಲ್ಲಿ ವಿಪರೀತ ಹೊಟ್ಟೆ ನೋವು ಬರುತ್ತಿದ್ದರೆ, ಒಂದು ವಾರ ಮುಂಚೆ ಪ್ರತಿದಿನ ಕೊತ್ತಂಬರಿ ಕಷಾಯ ಕುಡಿದರೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

ಕೊತ್ತಂಬರಿ ಬೀಜದ ಕಷಾಯ
ಬೇಕಾಗುವ ಸಾಮಗ್ರಿ

ಕೊತ್ತಂಬರಿ- 2 ಚಮಚ
ಜೀರಿಗೆ -1/2 ಚಮಚ
ಕೆಂಪು ಕಲ್ಲುಸಕ್ಕರೆ- 2 ಪೀಸ್
ಕಾಳುಮೆಣಸಿನ ಪುಡಿ- ಸ್ವಲ್ಪ
ನಿಂಬು ರಸ -1 ಚಮಚ
ಮಾಡುವ ವಿಧಾನ
2 ಲೋಟ ನೀರಿಗೆ ಕೊತ್ತಂಬರಿ, ಜೀರಿಗೆ, ಕೆಂಪು ಕಲ್ಲುಸಕ್ಕರೆ, ಕಾಳುಮೆಣಸಿನ ಪುಡಿ ಸೇರಿಸಿ 1 ಲೋಟ ನೀರು ಆಗುವಷ್ಟು ಕುದಿಸಬೇಕು.
ಬಳಿಕ ಪಾತ್ರೆ ಇಳಿಸಿ ನಿಂಬುರಸ ಸೇರಿಸಿ ಬೆಳಗ್ಗೆ ಮತ್ತು ರಾತ್ರಿ ಸೇವಿಸಿದರೆ ರೋಗ ನಿರೋಧಕ ಶಕ್ತಿ ವೃದ್ಧಿಗೆ ಸಹಕಾರಿ.

ಮತ್ತಷ್ಟು ಸುದ್ದಿಗಳು

vertical

Latest News

KSRTC ಬಸ್‌ಗಳಿಗೆ ಹೆಸರು, ಬ್ರ್ಯಾಂಡ್‌ ಸೂಚಿಸಿ ಬಹುಮಾನ ಗೆಲ್ಲಿ

newsics.com ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ನೂತನವಾಗಿ ಬಸ್‌ಗಳಿಗೆ ಹೆಸರು, ಬ್ರ್ಯಾಂಡ್‌ ಸೂಚಿಸಿ  ಬಹುಮಾನ ಗೆಲ್ಲ  ಬಹುದಾಗಿದೆ. ಮಲ್ಟಿ ಆ್ಯಕ್ಸೆಲ್ ಸ್ಲೀಪರ್ ಹಾಗೂ ವಿದ್ಯುತ್ ಚಾಲಿತ...

ವಿಚಿತ್ರ ಹಬ್ಬದ ಆಚರಣೆ- ಕಲ್ಲಿನ ಬಂಡೆಗೆ ಡಿಕ್ಕಿ ಹೊಡೆದು ದೇವರಿಗೆ ನಮಸ್ಕಾರ

newsics.com ವಿಜಯಪುರ: ಜಿಲ್ಲೆಯ ನಿಡಗುಂದಿ ತಾಲೂಕಿನ ಗಣಿ ಗ್ರಾಮದ ಸೋಮೇಶ್ವರ ದೇವರ ಜಾತ್ರೆಯಲ್ಲಿ ಕಲ್ಲಿನ ಬಂಡೆಗೆ ಡಿಕ್ಕಿ ಹೊಡೆದು ದೇವರಿಗೆ ನಮಸ್ಕಾರ ಮಾಡುವ ವಿಶಿಷ್ಟ ಆಚರಣೆ ಕಂಡು ಬರುತ್ತದೆ. ಪ್ರತಿವರ್ಷ ಛಟ್ಟಿ ಅಮವಾಸ್ಯೆಯ ಆಸುಪಾಸು ನಡೆಯುವ...

20ಕ್ಕೂ ಹೆಚ್ಚು ಯುವತಿಯರ ಜತೆ ಅಪ್ತಾಭ್ ಸಂಬಂಧ?

newsics.com ನವದೆಹಲಿ:  ಶ್ರದ್ಧಾ ಹತ್ಯೆ ಪ್ರಕರಣದ ಆರೋಪಿ ಅಪ್ತಾಭ್ 20ಕ್ಕೂ ಹೆಚ್ಚು ಯುವತಿಯರ ಜತೆ ಸಂಬಂಧ ಹೊಂದಿರುವ ಅಂಶ ತನಿಖೆ ವೇಳೆ ಬೆಳಕಿಗೆ ಬಂದಿದೆ ಎಂದು ವರದಿಯಾಗಿದೆ. ಪೊಲೀಸ್ ತನಿಖೆಯಲ್ಲಿ ಈ ಅಂಶ ಬಯಲಾಗಿದೆ. ಕೇವಲ...
- Advertisement -
error: Content is protected !!