Wednesday, November 30, 2022

ಮನೆಮಂದಿಯ‌ ನೆಚ್ಚಿನ‌ ನೆಲನೆಲ್ಲಿ

Follow Us

ಇಮ್ಯುನಿಟಿ ಬೂಸ್ಟರ್ ರೆಸಿಪಿ 8

♦ ಪವಿತ್ರಾ ಜಿಗಳೇಮನೆ
newsics.com@gmail.com

ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಮಾತಿದೆ. ಅದಕ್ಕೆ ತಕ್ಕಂತೆ ನೆಲನೆಲ್ಲಿ ಕೂಡ ನೋಡಲು ಚಿಕ್ಕದಾಗಿದ್ದರೂ ಇದರ ಉಪಯೋಗ ಮಾತ್ರ ಬಹಳ. ಈ ನೆಲನೆಲ್ಲಿಯು ಬೆಟ್ಟದ ನೆಲ್ಲಿಯ ಎಲೆಗಳನ್ನೇ ಹೋಲುವುದರ ಜತೆಗೆ ಸಾಸಿವೆ ಗಾತ್ರದ ಕಾಯಿಗಳೂ ಬಿಡುತ್ತವೆ. ನೆಲನೆಲ್ಲಿಯ ಬಳಕೆಯಿಂದ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಉತ್ತಮ ಮನೆಮದ್ದಾಗಿದೆ. ಮಳೆಗಾಲದ ಸಮಯದಲ್ಲಿ ಇದು ಹೆಚ್ಚಾಗಿ ಬೆಳೆಯುತ್ತದೆ. ಇದು ಏಕ ವಾರ್ಷಿಕ ಸಸ್ಯ. ಇದರ ಗಿಡ ಸುಮಾರು ಒಂದು ಅಡಿ ಎತ್ತರವಿದ್ದು ಕೆಂಪುಮಿಶ್ರಿತ ಹಸಿರು ಬಣ್ಣದಿಂದ ಕೂಡಿರುತ್ತದೆ. ವೈದ್ಯ ಪದ್ಧತಿಯಲ್ಲಿ ಹಲವು ಕಾಲದಿಂದ ನೆಲನೆಲ್ಲಿ ಔಷಧವಾಗಿ ಬಳಕೆಯಲ್ಲಿದೆ.

ಜ್ವರ, ಶೀತ, ನೆಗಡಿಯಂತಹ ಕಾಯಿಲೆಗಳಿಗೆ ನೆಲನೆಲ್ಲಿಯ ಸೇವನೆ ರಾಮಬಾಣವಿದ್ದಂತೆ. ಕೊರೋನಾ ಕಾಲದಲ್ಲಂತೂ ನೆಲನೆಲ್ಲಿ ಬಳಕೆ ಹೆಚ್ಚಿದೆ. ಸರ್ಪಸುತ್ತು, ಏಡ್ಸ್, ನ್ಯುಮೋನಿಯಾ, ಚಿಕೂನ್ ಗುನ್ಯಾ ಕಾಯಿಲೆಗಳ ವೈರಸ್ ನಾಶಪಡಿಸುವ ಗುಣ ಈ ನೆಲನೆಲ್ಲಿಗಿದೆ. ಇದರ ಇನ್ನೊಂದು ಮುಖ್ಯ ಗುಣವೆಂದರೆ ಮಹಿಳೆಯರು ಋತುಚಕ್ರದ ಸಮಯದಲ್ಲಿ ಅಧಿಕ ರಕ್ತಸ್ರಾವವಾದರೆ ನೆಲನೆಲ್ಲಿ ಕಷಾಯ ಅಥವಾ ತಂಬುಳಿಯನ್ನು ಸೇವಿಸುವುದರಿಂದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ.

ನೆಲನೆಲ್ಲಿ ಕಷಾಯ

ಎರಡು ಲೋಟ ಕುದಿಯುವ ನೀರಿಗೆ ನೆಲನೆಲ್ಲಿಯ ಗಿಡವನ್ನು ಚೆನ್ನಾಗಿ ತೊಳೆದು ಎಲೆ, ಕೊಂಬೆ, ಕಾಯಿ ಎಲ್ಲವನ್ನೂ ಕತ್ತರಿಸಿ ಹಾಕಿ. ನಂತರ ಅದಕ್ಕೆ ಸ್ವಲ್ಪ ಶುಂಠಿಯನ್ನು ಜಜ್ಜಿ ಹಾಕಿ. ಬಳಿಕ ಕಾಲು ಚಮಚ ಕಾಳುಮೆಣಸಿನ ಪುಡಿ, ಜೀರಿಗೆ ಪುಡಿ ಹಾಕಿ ಮಂದ ಉರಿಯಲ್ಲಿ ಕುದಿಸಿ. ಕಷಾಯ ಒಂದು ಲೋಟ ಆಗುವವರೆಗೆ ಕುದಿಸಿ ನಂತರ ಇಳಿಸುವ ಮುನ್ನ ಚಿಟಿಕೆ ಅರಿಶಿನ, ಚಿಟಿಕೆ ಉಪ್ಪು ಹಾಕಿ ಸೋಸಿದರೆ ಕಷಾಯ ಸಿದ್ಧವಾಗುತ್ತದೆ. ಇದನ್ನು 10- 15 ಎಂ ಎಲ್ ನಷ್ಟನ್ನು ಗಂಟೆಗೊಮ್ಮೆ ಕುಡಿಯುತ್ತ ಬಂದರೆ ಎಲ್ಲ ರೀತಿಯ ಜ್ವರವನ್ನು ಗುಣಪಡಿಸುತ್ತದೆ. ಅಷ್ಟೇ ಅಲ್ಲ, ನೆಲನೆಲ್ಲಿ ಕಷಾಯ ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಕೂಡ ಹೆಚ್ಚಿತ್ತದೆ. ಆಯುರ್ವೇದ ಅಂಗಡಿಗಳಲ್ಲಿ‌ ನೆಲನೆಲ್ಲಿ ಪೌಡರ್ ಕೂಡ ಲಭ್ಯ.

ಮತ್ತಷ್ಟು ಸುದ್ದಿಗಳು

vertical

Latest News

ಹಾಕಿ ಟೆಸ್ಟ್‌- 13 ವರ್ಷದ ಬಳಿಕ ಆಸ್ಟ್ರೇಲಿಯಾ ವಿರುದ್ಧ ಗೆದ್ದ ಭಾರತ

newsics.com ಸಿಡ್ನಿ: ಹಾಕಿ ಟೆಸ್ಟ್‌ ನಲ್ಲಿ ಭಾರತ 13 ವರ್ಷದ ಬಳಿಕ ಆಸ್ಟ್ರೇಲಿಯಾ ವಿರುದ್ಧ ಗೆದ್ದಿದೆ. ಆಸ್ಟ್ರೇಲಿಯಾ ವಿರುದ್ಧದ 5 ಪಂದ್ಯಗಳ ಹಾಕಿ ಸರಣಿಯ ಮೂರನೇ ಪಂದ್ಯದಲ್ಲಿ ಭಾರತ...

ಕುಕ್ಕರ್ ಬಾಂಬರ್‌ ಶಾರೀಕ್ ಖಾತೆಗೆ ಹಣ ವರ್ಗಾವಣೆ

newsics.com ಮಂಗಳೂರು: ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣದ ಆರೋಪಿ ಶಾರೀಕ್‌ಗೆ ಡಾಲರ್‌ಗಳ ಮೂಲಕ ಆತನ ಖಾತೆಗೆ ವರ್ಗಾವಣೆಯಾಗುತ್ತಿದ್ದು ಎನ್ನುವ ಸ್ಪೋಟಕ ಮಾಹಿತಿ ಹೊರ ಬಿದ್ದಿದೆ. ಶಾರೀಕ್‌ ಡಾರ್ಕ್ ವೆಬ್ ಮೂಲಕ ಖಾತೆ ತೆರೆದಿದ್ದು, ಡಾಲರ್‌ಗಳ ಮೂಲಕ...

ನಟಿ ಮಲೈಕಾ ಅರೋರಾ ಪ್ರೆಗ್ನೆಂಟ್!

newsics.com ಮುಂಬೈ: ಬಾಲಿವುಡ್ ನಟಿ ಮಲೈಕಾ ಅರೋರಾ ಪ್ರಿಯತಮ ಅರ್ಜುನ್ ಕಪೂರ್ ಮಗುವಿಗೆ ತಾಯಿ ಆಗ್ತಿದ್ದಾರೆ ಎನ್ನುವ ಸುದ್ದಿ ಕೇಳಿಬಂದಿದೆ. ಮಲೈಕಾ ಮತ್ತೆ ಪ್ರೆಗ್ನೆಂಟ್ ಆಗಿದ್ದಾರೆ ಸಂತಸದ ವಿಚಾರವನ್ನು ಸದ್ಯದಲ್ಲೇ ಶೇರ್ ಮಾಡುತ್ತಾರೆ ಎಂದು ಅವರ...
- Advertisement -
error: Content is protected !!