Wednesday, November 30, 2022

ರೋಗ ನಿರೋಧಕ ಶಕ್ತಿ ವೃದ್ಧಿಗೆ ಅಣಬೆ ಫ್ರೈ

Follow Us

 ಇಮ್ಯುನಿಟಿ ಬೂಸ್ಟರ್ ರೆಸಿಪಿ 4 

ಪವಿತ್ರಾ ಜಿಗಳೇಮನೆ
newsics.com@gmail.com

ತಿಹಾಸದ ಕಾಲದಿಂದಲೂ ಅಣಬೆ (ಮಶ್ರೂಮ್) ದೇಹವನ್ನು ಆರೋಗ್ಯವನ್ನಾಗಿರಿಸುವ ನೈಸರ್ಗಿಕ ಆಹಾರ ಎಂದೇ ಖ್ಯಾತಿ. ಪ್ರಾಚೀನ ಕಾಲದಿಂದಲೂ ಪೌಷ್ಠಿಕ ಆಹಾರದ ಪಟ್ಟಿಗೆ ಅಣಬೆಗಳು ಸೇರಿವೆ. ಈಗ ಆಧುನಿಕ ವಿಜ್ಞಾನ ಬೆಳೆಯುತ್ತಿದ್ದಂತೆ ಅಣಬೆಯನ್ನು ಉತ್ಕಷ್ಟ ಆಹಾರವೆಂದು ವಿಜ್ಞಾನಿಗಳೂ ಹೇಳಿದ್ದಾರೆ. ಹೀಗಾಗಿ ಆಹಾರದಲ್ಲಿ ನಾವು ಅಣಬೆಯನ್ನು ಬಳಸುವುದರಿಂದ ದೇಹದಲ್ಲಿನ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬಹುದು ಜತೆಗೆ ಆರೋಗ್ಯಯುತವಾಗಿಯೂ ಇರಬಹುದು ಎಂಬುದು ತಜ್ಞರ ಅಭಿಮತ.
ಅಣಬೆಯಲ್ಲಿರುವ ಕೆಲವೊಂದು ನೈಸರ್ಗಿಕ ಆ್ಯಂಟಿಬಯಾಟಿಕ್‍ಗಳು ಸೂಕ್ಷ್ಮಾಣು ಜೀವಿ ಹಾಗೂ ಶಿಲೀಂಧ್ರಗಳ ಸೋಂಕನ್ನು ತಡೆಗಟ್ಟುತ್ತವೆ. ಇದರಲ್ಲಿನ ವಿಟಮಿನ್ ಎ, ಬಿ ಹಾಗೂ ಸಿ ಗಳು ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ.
ಅಣಬೆಗಳು ಕೊಬ್ಬು ಹಾಗೂ ಕೊಲೆಸ್ಟ್ರಾಲ್ ಮುಕ್ತವಾಗಿರುತ್ತವೆ. ಹೀಗಾಗಿ ಇದರ ಪ್ರೊಟೀನ್‍ಅನ್ನು ‘ಲೀನ್ ಪ್ರೊಟೀನ್’ ಎಂದು ಕರೆಯುತ್ತಾರೆ. ಅಣಬೆಯಲ್ಲಿನ ನಿಯಾಸಿನ್ ಹಾಗೂ ರೈಬೊಫ್ಲೆವಿನ್ ಎಂಬ ವಿಟಮಿನ್ ಬಿ ನಿಂದ ದೇಹದಲ್ಲಿ ಆಯಾಸವಾಗುವಿಕೆ ಹಾಗೂ ಮೆದುಳಿನ ಒತ್ತಡವನ್ನೂ ಕಡಿಮೆ ಮಾಡುತ್ತವೆ. ಅಲ್ಲದೇ ಯಥೇಚ್ಛವಾಗಿರುವ ಪ್ರೊಟೀನುಗಳು ದೇಹದ ಸ್ನಾಯುಗಳ ಬೆಳವಣಿಗೆಯನ್ನೂ ಮಾಡುತ್ತವೆ.
ಬಹುತೇಕರು ಇಷ್ಟಪಡುವ ಈ ಅಣಬೆಗಳು ವಿಶೇಷವಾದ ರುಚಿ ಹಾಗೂ ಪರಿಮಳ ಹೊಂದಿರುತ್ತವೆ. ಮಶ್ರೂಮ್ ಸೂಪ್, ಸಲಾಡ್, ಫ್ರೈ, ಪಲ್ಯ ಮಾಡಿ ಸವಿಯಬಹದು. ಈ ಅಣಬೆಗಳು ಬೇಯಿಸುವುದರಿಂದ ಇವುಗಳ ಪರಿಮಳ, ಸ್ವಾದ ಇನ್ನಷ್ಟು ಹೆಚ್ಚುತ್ತದೆ.

ಮಶ್ರೂಮ್  ಫ್ರೈ

ಬೇಕಾಗುವ ಸಾಮಗ್ರಿ
ಎಣ್ಣೆ- 2ಟೀ ಸ್ಪೂನ್
ಬಟನ್ ಅಣಬೆಗಳು – 8,10
ಹಸಿರು ಮೆಣಸಿನ ಕಾಯಿ- 3-4
ಕೆಂಪು ಮೆಣಸಿನಕಾಯಿ – 2
ಜೀರಿಗೆ ಮತ್ತು ಜೀರಿಗೆ ಪುಡಿ – 1/2 ಟೀಸ್ಪೂನ್
ಕೊತ್ತಂಬರಿ ಪುಡಿ – 1/2 ಟೀಸ್ಪೂನ್
ಅರಿಶಿನ ಪುಡಿ – 1/4 ಟೀಸ್ಪೂನ್
ಕರಿಬೇವಿನ ಎಲೆ – 3-4
ಕತ್ತರಿಸಿದ ಈರುಳ್ಳಿ- 1 ಕಪ್
ಬೆಳ್ಳುಳ್ಳಿ ಪೇಸ್ಟ್- 1 ಟೀ ಸ್ಪೂನ್

ಮಾಡುವ ವಿಧಾನ
ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿಮಾಡಿ ಕೆಂಪು ಮೆಣಸಿನಕಾಯಿ, ಜೀರಿಗೆ, ಕರಿಬೇವಿನ ಎಲೆ ಹಾಕಿ ಕೆಲ ಕಾಲ ಹುರಿದು ಅದಕ್ಕೆ ಹಸಿಮೆಣಸಿನ ಕಾಯಿ, ಕತ್ತರಿಸಿದ ಈರುಳ್ಳಿ ಸೇರಿಸಿ ಕಂದು ಬಣ್ಣಬರುವವರೆಗೆ ಬಿಡಿ. ನಂತರ ಅಣಬೆಗಳನ್ನು ಚೆನ್ನಾಗಿ ತೊಳೆದು ಚಿಕ್ಕದಾಗಿ ತುಂಡರಿಸಿ ಅದಕ್ಕೆ ಸೇರಿಸಿ, ಬೆಳ್ಳುಳ್ಳಿ ಪೇಸ್ಟ್ ಬೆರೆಸಿ 5 ನಿಮಿಷ ಬೇಯಲು ಬಿಡಿ. ಬಳಿಕ ಜೀರಿಗೆ ಪುಡಿ, ಕೊತ್ತಂಬರಿ ಪುಡಿ, ಅರಿಶಿನ ಪುಡಿ , ಗರಂ ಮಸಾಲೆ (ಅಗತ್ಯವಿದ್ದರೆ), ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ ಪ್ರೈ ಮಾಡಿ ನಂತರ 1 ಚಮಚ ವಿನೆಗರ್ ಸೇರಿಸಿ, ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಬಾಯಿ ಚಪ್ಪರಿಸುವ ಮಶ್ರೂಮ್ ಫ್ರೈ ತಿನ್ನಲು ಸಿದ್ಧ.

ವಿಶೇಷ ಸೂಚನೆ:
ಕೆಲವೊಂದು ಜಾತಿಯ ಅಣಬೆಗಳು ವಿಷಕಾರಿಯಾಗಿರುತ್ತವೆ. ಹೀಗಾಗಿ ನಿಮಗೆ ಗೊತ್ತಿರದ ಅಣಬೆಗಳನ್ನು ತಿನ್ನಬೇಡಿ. ಸೂಪರ್ ಮಾರ್ಕೆಟ್‍ಗಳಲ್ಲಿ ದೊರೆಯುವ ಸೀಲ್ ಮಾಡಿದ ಅಣಬೆಗಳು ಬಳಕೆಗೆ ಉತ್ತಮ ಎನ್ನಬಹುದು. ಅಪರಿಚಿತ ಮಾರಾಟಗಾರರಿಂದಲೂ ಅಣಬೆಗಳನ್ನು ಕೊಳ್ಳುವುದು ಅಪಾಯಕಾರಿ. ಹೀಗಾಗಿ ರುಚಿಕರವಾದ ಅಣಬೆ ತಿನ್ನುವ ಮೊದಲು ಅದರ ಬಗ್ಗೆ ತಿಳಿದುಕೊಳ್ಳುವುದು ಉತ್ತಮ.

ಮತ್ತಷ್ಟು ಸುದ್ದಿಗಳು

vertical

Latest News

ವಿಚಿತ್ರ ಹಬ್ಬದ ಆಚರಣೆ- ಕಲ್ಲಿನ ಬಂಡೆಗೆ ಡಿಕ್ಕಿ ಹೊಡೆದು ದೇವರಿಗೆ ನಮಸ್ಕಾರ

newsics.com ವಿಜಯಪುರ: ಜಿಲ್ಲೆಯ ನಿಡಗುಂದಿ ತಾಲೂಕಿನ ಗಣಿ ಗ್ರಾಮದ ಸೋಮೇಶ್ವರ ದೇವರ ಜಾತ್ರೆಯಲ್ಲಿ ಕಲ್ಲಿನ ಬಂಡೆಗೆ ಡಿಕ್ಕಿ ಹೊಡೆದು ದೇವರಿಗೆ ನಮಸ್ಕಾರ ಮಾಡುವ ವಿಶಿಷ್ಟ ಆಚರಣೆ ಕಂಡು...

20ಕ್ಕೂ ಹೆಚ್ಚು ಯುವತಿಯರ ಜತೆ ಅಪ್ತಾಭ್ ಸಂಬಂಧ?

newsics.com ನವದೆಹಲಿ:  ಶ್ರದ್ಧಾ ಹತ್ಯೆ ಪ್ರಕರಣದ ಆರೋಪಿ ಅಪ್ತಾಭ್ 20ಕ್ಕೂ ಹೆಚ್ಚು ಯುವತಿಯರ ಜತೆ ಸಂಬಂಧ ಹೊಂದಿರುವ ಅಂಶ ತನಿಖೆ ವೇಳೆ ಬೆಳಕಿಗೆ ಬಂದಿದೆ ಎಂದು ವರದಿಯಾಗಿದೆ. ಪೊಲೀಸ್ ತನಿಖೆಯಲ್ಲಿ ಈ ಅಂಶ ಬಯಲಾಗಿದೆ. ಕೇವಲ...

ಪ್ರಿಯಕರನಿಂದ ಪ್ರೇಯಸಿಯ ಬರ್ಬರ ಹತ್ಯೆ

newsics.com ಬೆಂಗಳೂರು:  ರಾಜಧಾನಿ ಬೆಂಗಳೂರಿನಲ್ಲಿ ಯುವತಿಯೊಬ್ಬಳನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ರಾಮಮೂರ್ತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಟಿ ಸಿ ಪಾಳ್ಯದಲ್ಲಿ ಈ ಪ್ರಕರಣ ವರದಿಯಾಗಿದೆ. ಮೃತಪಟ್ಟ ಮಹಿಳೆಯನ್ನು ನೇಪಾಳ ಮೂಲದ ಕೃಷ್ಣ ಕುಮಾರಿ ಎಂದು...
- Advertisement -
error: Content is protected !!