Saturday, November 26, 2022

ತಾಕತ್ತು ಹೆಚ್ಚಿಸುವ ಟೊಮೆಟೋ ಸೂಪ್

Follow Us

ಇಮ್ಯುನಿಟಿ ಬೂಸ್ಟರ್ ರೆಸಿಪಿ- 3

ಪವಿತ್ರಾ ಜಿಗಳೇಮನೆ
newsics.com@gmail.com

ನ್ನೇನು ಮಳೆಗಾಲ ಆರಂಭವಾಗುತ್ತಿದೆ. ಹೀಗಾಗಿ ದೇಹವನ್ನು ಬೆಚ್ಚಗೆ ಇರಿಸಿಕೊಳ್ಳುವುದು ಅತೀ ಅಗತ್ಯ. ಶೀತ, ಕೆಮ್ಮು, ಜ್ವರದಂತಹ ಕಾಯಿಲೆಗಳಿಂದ ದೂರ ಉಳಿಯಲು ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಕಾಳಜಿ ವಹಿಸುವುದು ಮಳೆಗಾಲದ ಆರಂಭದಲ್ಲಿ ಸವಾಲಿನ ಕೆಲಸವೇ ಸರಿ.
ಈ ಸಮಯದಲ್ಲಿ ದೇಹವನ್ನು ಬೆಚ್ಚಗಿರಿಸುವ ಬೆಳ್ಳುಳ್ಳಿ, ಅರಿಶಿಣ, ಕಾಳುಮೆಣಸಿನಂತಹ ಪದಾರ್ಥಗಳನ್ನು ಬಳಸುವುದು ಉತ್ತಮ. ಆಹಾರದಲ್ಲಿ ಬೆಳ್ಳುಳ್ಳಿ ಬಳಸುವುದರಿಂದ ನೆಗಡಿಯಂತಹ ಕಾಯಿಲೆ ಹರಡುವುದನ್ನು ತಪ್ಪಿಸಬಹುದು.
ಮಳೆಗಾಲದಲ್ಲಿ ಬಿಸಿಬಿಸಿಯಾದ ಟೊಮೆಟೋ ಸೂಪ್ ತಯಾರಿಸಿ ಅನ್ನದ ಜತೆ ಊಟ ಮಾಡಬಹದು ಅಥವಾ ಹಾಗಯೇ ಸೇವಿಸಬಹುದು. ಇದರಿಂದ ದೇಹ ಬೆಚ್ಚಗಿದ್ದು, ಮಳೆಗಾಲದಲ್ಲಿ ಕಾಡುವ ಅನಾರೋಗ್ಯದ ಸಮಸ್ಯೆಯಿಂದ ದೂರ ಉಳಿಯಬಹದು.
ಟೊಮೆಟೋ ಸೂಪ್
ಬೇಕಾಗುವ ಸಾಮಗ್ರಿ
ಹುರಿದ ಕೆಂಪು ಮೆಣಸು- 2
ಕಾಳುಮೆಣಸು-3
ಜೀರಿಗೆ- 1 ಚಮಚ
ಬೆಳ್ಳುಳ್ಳಿ- 2
ಕರಿಬೇವಿನ ಎಲೆ- 5,6
ಕತ್ತರಿಸಿದ ಟೊಮೆಟೊ- 1 ಕಪ್
ಹುಣಸೆಹಣ್ಣಿನ ತಿರುಳು-1 ಕಪ್
ಹುರಿದ ಕೆಂಪು ಮೆಣಸು, ಕಾಳುಮೆಣಸು, ಜೀರಿಗೆ, ಬೆಳ್ಳುಳ್ಳಿ. ಕರಿಬೇವಿನ ಸೊಪ್ಪು ಸೇರಿಸಿ ಪುಡಿ ಮಾಡಿಕೊಳ್ಳಬೇಕು.
ಬಳಿಕ ಪಾತ್ರೆಗೆ ಎಣ್ಣೆ ಹಾಕಿ ಬಿಸಿ ಮಾಡಿ ಅದಕ್ಕೆ ಕತ್ತರಿಸಿದ ಟೊಮೆಟೋ ಕರಿಬೇವಿನ ಎಲೆ, ಅರಿಶಿಣ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ 3-4 ನಿಮಿಷ ಬೇಯಿಸಿ. ನಂತರ ಪುಡಿ ಮಾಡಿಟ್ಟ ಮಸಾಲೆಯನ್ನು ಅದಕ್ಕೆ ಬೆರೆಸಿ. ಹುಣಸೆಹಣ್ಣಿನ ತಿರುಳಿಗೆ 1 ಕಪ್ ನೀರು ಹಾಕಿ ಟೊಮೆಟೋ ಮಿಶ್ರಣಕ್ಕೆ ಸೇರಿಸಿ 10 ನಿಮಿಷಗಳ ಕಾಲ ಬೇಯಿಸಿ.
ಈಗ ಒಗ್ಗರಣೆಯ ಸರದಿ. ಬಾಣಲೆಗೆ ಎಣ್ಣೆ, 1 ಕೆಂಪು ಮೆಣಸಿನ ಕಾಯಿ, ಚಿಟಿಕೆ ಇಂಗು ಸೇರಿಸಿ ಬೇಯಿಸಿದ ಟೊಮೆಟೊ ಮಿಶ್ರಣಕ್ಕೆ ಸೇರಿಸಿ. ಬಳಿಕ ಕೊತ್ತಂಬರಿ ಎಲೆಗಳನ್ನು ಉದುರಿಸಿದರೆ ಸ್ಪೈಸಿ ಟೊಮೆಟೋ ಸೂಪ್ ಸವಿಯಲು ಸಿದ್ಧ.


ಇದರಲ್ಲಿ ಬಳಸುವ ಅರಿಶಿಣ, ಕರಿಮೆಣಸಿನ ಕಾಳು, ಬೆಳ್ಳುಳ್ಳಿ ಎಲ್ಲವೂ ದೇಹವನ್ನು ಆರೋಗ್ಯವಾಗಿರಿಸಲು ನೆರವಾಗುತ್ತದೆ. ರೋಗನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ.

ಮತ್ತಷ್ಟು ಸುದ್ದಿಗಳು

vertical

Latest News

ಚರ್ಮ ಕ್ಯಾನ್ಸರ್ ಬಗ್ಗೆ ಜನ ಜಾಗೃತಿ: ನಗ್ನರಾಗಿ ಪೋಸ್ ನೀಡಿದ 2500 ಮಂದಿ

newsics.com ಸಿಡ್ನಿ: ಹೆಚ್ಚುತ್ತಿರುವ ಚರ್ಮ ಕ್ಯಾನ್ಸರ್ ಬಗ್ಗೆ ಜನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಫೋಟೋ ಶೂಟ್ ಗೆ 2500 ಮಂದಿ ನಗ್ನರಾಗಿ ಪೋಸ್ ನೀಡಿದ್ದಾರೆ. ಸಿಡ್ನಿಯ ಬೋಂಡಿ...

ಜಲಪಾತದಲ್ಲಿ ಸೆಲ್ಫಿ ತೆಗೆದುಕೊಳ್ಳುವಾಗ ದುರಂತ: ನಾಲ್ವರು ಯುವತಿಯರ ಸಾವು

newsics.com ಬೆಳಗಾವಿ: ಕರ್ನಾಟಕ- ಮಹಾರಾಷ್ಟ್ರ ಗಡಿಯಲ್ಲಿ ಇರುವ ಕಿತವಾಡ ಜಲಪಾತದ ಬಳಿ ಭಾರೀ ದುರಂತ ಸಂಭವಿಸಿದೆ. ಸೆಲ್ಫಿ ತೆಗೆಯುವ ವೇಳೆ ನಾಲ್ವರು ಯುವತಿಯರು ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ. ಓರ್ವ ಯುವತಿ ಗಂಭೀರವಾಗಿ ಗಾಯಗೊಂಡಿದ್ದಾರೆ....

ಪೊಲೀಸರಿಂದ ಶಂಕಿತ ಭಯೋತ್ಪಾದಕ ಶಾರೀಕ್ ಗೆಳತಿಯ ವಿಚಾರಣೆ

newsics.com ಬೆಂಗಳೂರು: ಶಂಕಿತ ಭಯೋತ್ಪಾದಕ ಶಾರೀಕ್ ನ ಮೊಬೈಲ್ ನಲ್ಲಿ ಸ್ಫೋಟಕ ಮಾಹಿತಿ ದೊರೆತಿದೆ. ಶಾರೀಕ್  ಬೆಂಗಳೂರಿನಲ್ಲಿ ಗರ್ಲ್ ಫ್ರೆಂಡ್ ಜತೆ ಸುತ್ತಾಡುತ್ತಿದ್ದ ಎಂಬ ಅಂಶ ಬಯಲಾಗಿದೆ. ಶಾಪಿಂಗ್ ಹೆಸರಿನಲ್ಲಿ ಯುವತಿಯನ್ನು ಹೊರಗಡೆ ಕರೆದುಕೊಂಡು ಹೋಗುತ್ತಿದ್ದ...
- Advertisement -
error: Content is protected !!