ಮನಸ್ಸಿಗೆ ಹಿತವಾದ ಮುದ ನೀಡುವ ಲಿಂಬೆ ದೇಹದ ಆರೋಗ್ಯಕ್ಕೂ ಸಾಕಷ್ಟು ಕೊಡುಗೆ ನೀಡುತ್ತದೆ. ಬಿಸಿನೀರಿನೊಂದಿಗೆ ಲಿಂಬೆರಸ ಸೇರಿಸಿಕೊಂಡು ಕುಡಿಯುವುದರಿಂದ ಆರೋಗ್ಯದಲ್ಲಿ ಚಮತ್ಕಾರವನ್ನೇ ಕಾಣಬಹುದು. ಕೊರೋನಾ ಟೈಮಲ್ಲಿ ಎಲ್ಲೆಲ್ಲೂ ಲಿಂಬುವಿನದೇ ಮಾತು.
−−−−−−
♦ ಡಾ. ಸುಮನ್
response@newsics.com
newsics.com@gmail.com
ನಾ ವೆಲ್ಲ ಚಿಕ್ಕವರಿರುವಾಗ ವಾಂತಿಯಾಗುವ ಸೂಚನೆ ಕಂಡಾಗಲೆಲ್ಲ ಅಥವಾ ಹೊಟ್ಟೆ ತೊಳೆಸಲು ಆರಂಭವಾದಾಗ ಒಂದು ಲಿಂಬೆ ಹಣ್ಣನ್ನು ಕೈಗೆ ಹಿಡಿಸಿಬಿಡುತ್ತಿದ್ದರು. ಅದರ ಪರಿಮಳ ಆಘ್ರಾಣಿಸುತ್ತ ಕೂತರೆ ಅದ್ಯಾವುದೋ ಕ್ಷಣದಲ್ಲಿ ವಾಂತಿಯಾಗುವ ಸೂಚನೆಗಳು ಮಾಯವಾಗಿ ಸಮಾಧಾನವಾಗುತ್ತಿತ್ತು. ಅಷ್ಟೇ ಅಲ್ಲ, ಒಂದೊಮ್ಮೆ ಹೊಟ್ಟೆ ಕೆಟ್ಟಿದ್ದರೆ ಸ್ವಲ್ಪ ಬಿಸಿನೀರಿಗೆ ಉಪ್ಪು, ಲಿಂಬು ರಸ ಬೆರೆಸಿ ಕುಡಿಸುತ್ತಿದ್ದರು. ಇಂಥವೇ ಚಿಕ್ಕಪುಟ್ಟ ಮಾರ್ಗಗಳ ಮೂಲಕ ದೇಹಾರೋಗ್ಯವನ್ನು ಕಾಪಾಡಿಕೊಳ್ಳುವ ಕಲೆ ಜನಸಾಮಾನ್ಯರೆಲ್ಲರಿಗೂ ತಿಳಿದಿತ್ತು. ಈಗಲೂ ಜೀವನಶೈಲಿಯಿಂದಲೇ ಆರೋಗ್ಯವನ್ನು ರಕ್ಷಿಸಿಕೊಳ್ಳಲು ಬಯಸುವವರು ಇಂಥ ಮಾರ್ಗಗಳನ್ನು ಅನುಸರಿಸುತ್ತಾರೆ. ಆದರೆ, ಗಡಿಬಿಡಿಯ ಬದುಕಿಗೆ ಬಿದ್ದವರು ಮಾತ್ರ ಸಿಕ್ಕಸಿಕ್ಕ ಮಾತ್ರೆಗಳನ್ನು ನುಂಗುತ್ತ ಆರೋಗ್ಯವನ್ನು ಇನ್ನಷ್ಟು ಅಪಾಯಕ್ಕೆ ದೂಡಿಕೊಳ್ಳುತ್ತಿದ್ದಾರೆ.
ಕೊರೋನಾ ತಡೆಗೆ ತೆಂಗಿನೆಣ್ಣೆ ಮದ್ದು!
ಇದಂತೂ ಕೊರೋನಾ ಸಂಕಷ್ಟದ ಸಮಯ. ಆರೋಗ್ಯದ ಬಗ್ಗೆ ಎಷ್ಟೇ ಎಚ್ಚರಿಕೆ ವಹಿಸಿದರೂ ಸಾಲದು. ಇಂಥ ಸಮಯದಲ್ಲಿ ಲಿಂಬೆ ನಮ್ಮ ಆರೋಗ್ಯವನ್ನು ಸುಸ್ಥಿತಿಯಲ್ಲಿಡುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಹೌದು, ಈ ದಿನಗಳಲ್ಲಿ ಬಹುತೇಕ ಜನರು ವಿವಿಧ ಕಷಾಯ ಮಾಡಿಕೊಂಡು ಕುಡಿಯುತ್ತಿರುವುದು ತಿಳಿದೇ ಇದೆ. ಇದಕ್ಕೆ ಲಿಂಬೆಯನ್ನೂ ಸೇರಿಸಿಕೊಂಡು ಇನ್ನಷ್ಟು ರುಚಿಕರವನ್ನಾಗಿ ಮಾಡಿಕೊಳ್ಳುತ್ತಿರುವುದು ಮಾತ್ರವಲ್ಲ, ರೋಗನಿರೋಧಕ ಶಕ್ತಿಯನ್ನೂ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಲಿಂಬೆಯಲ್ಲಿ ಅಂಥದ್ದೊಂದು ಮಾಂತ್ರಿಕ ಶಕ್ತಿಯಿದೆ.
ವಿಟಮಿನ್ ಸಿ, ಪೊಟ್ಯಾಸಿಯಂ, ಫೊಲೇಟ್ ಅಂಶಗಳನ್ನು ಧಾರಾಳವಾಗಿ ಹೊಂದಿರುವ ಲಿಂಬೆ ದೇಹದ ಪ್ರತಿರೋಧ ಶಕ್ತಿಯನ್ನು ಹೆಚ್ಚಿಸುತ್ತದೆ. ಲಿಂಬೆಯನ್ನು ಬಳಸುತ್ತಿರುವವರಿಗೆ ನೆಗಡಿ, ಸೈನಸ್’ನಂಥ ಸಮಸ್ಯೆಗಳು ಬಾಧಿಸುವುದು ಅತಿ ಕಡಿಮೆ.
ಕೊರೋನಾದಿಂದ ಮಕ್ಕಳಲ್ಲೂ ಬೊಜ್ಜು!
ಬಿಸಿನೀರಿನೊಂದಿಗೆ ಲಿಂಬೆರಸ
ಬಿಸಿನೀರಿನೊಂದಿಗೆ ಲಿಂಬೆರಸ ಸೇರಿಸಿಕೊಂಡು ಕುಡಿದರೆ ದೇಹದ ಮೇಲೆ ಅತ್ಯದ್ಭುತ ಪ್ರಭಾವವನ್ನು ಕಾಣಬಹುದು. ಬಿಸಿನೀರಿನೊಂದಿಗೆ ಸೇರಿದ ಲಿಂಬೆರಸ ಕ್ಷಾರೀಯ ಪರಿಣಾಮ ಬೀರುತ್ತದೆ. ಕ್ಷಾರೀಯ ವಾತಾವರಣದಲ್ಲಿ ಕ್ಯಾನ್ಸರ್ ಕೋಶಗಳು ಕೂಡ ಬದುಕಲಾರವು ಎನ್ನುವ ಸಂಗತಿ ಬಹುತೇಕರಿಗೆ ತಿಳಿದಿಲ್ಲ. ಹೀಗಾಗಿ, ಬಿಸಿನೀರಿನೊಂದಿಗೆ ಲಿಂಬೆರಸ ಸೇರಿಸಿ ಕುಡಿದರೆ ಕ್ಯಾನ್ಸರ್ ಹತ್ತಿರ ಸುಳಿಯುವುದಿಲ್ಲ. ಇನ್ನು, ಕ್ಯಾನ್ಸರ್ ಬಂದವರೂ ಸಹ ಇದನ್ನು ನಿತ್ಯವೂ ಕುಡಿಯುತ್ತ ಆರೋಗ್ಯ ಸುಧಾರಿಸಿಕೊಳ್ಳಬಹುದು. ಏನೆಲ್ಲ ಪ್ರಯೋಜನ?
• ಬೆಳಗ್ಗೆ ಬಿಸಿನೀರಿನೊಂದಿಗೆ 1-2 ಚಮಚ ಲಿಂಬೆರಸ ಸೇರಿಸಿ ಕುಡಿಯುವುದರಿಂದ ಜೀರ್ಣಶಕ್ತಿ ಉತ್ತಮವಾಗುತ್ತದೆ. ಒಂದೊಮ್ಮೆ ಬೆಳಗಿನ ಹೊತ್ತು ಸಾಧ್ಯವಾಗದಿದ್ದರೆ ದಿನದ ಯಾವುದೇ ಸಮಯದಲ್ಲಿ ಸೇವಿಸಬಹುದು.
• ದೇಹದಲ್ಲಿರುವ ಕೆಟ್ಟ ಅಂಶಗಳನ್ನು ನಿವಾರಣೆ ಮಾಡುತ್ತದೆ.
• ಕ್ಯಾಲ್ಸಿಯಂ, ಮಿನರಲ್ ಗಳಿಂದ ಕೂಡಿರುವ ಲಿಂಬೆರಸದಿಂದ ಬಾಯಿ ಸ್ವಚ್ಛವಾಗುತ್ತದೆ. ಹಲ್ಲನ್ನು ಹಾಳುಮಾಡುವ ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ.
• ಕಣ್ಣಿನ ಆರೋಗ್ಯಕ್ಕೆ ಪೂರಕವಾದ ಝೀಕ್ಸಾಂಥಿನ್ ಮತ್ತು ಲ್ಯುಟೇನ್ ಅಂಶಗಳು ಲಿಂಬೆಯಲ್ಲಿವೆ. ಹೀಗಾಗಿ, ಕಣ್ಣಿನ ಆರೋಗ್ಯಕ್ಕೂ ಪೂರಕ.
• ಚರ್ಮವನ್ನು ಚೆನ್ನಾಗಿಡುತ್ತದೆ.
• ಡಿಹೈಡ್ರೇಷನ್ ನಿವಾರಿಸುತ್ತದೆ.
• ದಿನವೂ ಲಿಂಬೆರಸವನ್ನು ಬಿಸಿನೀರಿನೊಂದಿಗೆ ಸೇರಿಸಿಕೊಂಡು ಕುಡಿಯುವುದರಿಂದ ತಲೆಯಲ್ಲಿ ಹೊಸದಾಗಿ ಕೂದಲು ಹುಟ್ಟುವ ಪ್ರಮಾಣ ಹೆಚ್ಚಾಗುವುದು ಅನೇಕರ ಅನುಭವಕ್ಕೆ ಬಂದ ವಿಚಾರ. ತಲೆಕೂದಲು ಚೆನ್ನಾಗಿ ಬೆಳೆಯುತ್ತದೆ ಕೂಡ.
ಕೊರೋನಾ ನಿವಾರಿಸುವ ಮನೆಯಂಗಳದ ಕಷಾಯಗಳು
ಪಿತ್ತದ ಸಮಸ್ಯೆಯಿರುವವರು ಹುಷಾರು
ತೀವ್ರವಾದ ಪಿತ್ತದ ಸಮಸ್ಯೆ ಹೊಂದಿರುವವರು ಲಿಂಬೆರಸ ಸೇವನೆ ಮಾಡಿದರೆ ಸಮಸ್ಯೆ ಉಂಟಾಗುವ ಸಾಧ್ಯತೆ ಇರುತ್ತದೆ. ಅಸಲಿಗೆ, ಬಿಸಿನೀರಿನೊಂದಿಗೆ ಲಿಂಬೆರಸ ಬೆರೆಸಿದಾಗ ಕ್ಷಾರೀಯ ಪರಿಣಾಮ ಉಂಟಾಗುವುದರಿಂದ ಪಿತ್ತಕ್ಕೆ ಅವಕಾಶವಾಗುವುದಿಲ್ಲವೆಂದು ಹೇಳಲಾಗುತ್ತದೆ. ಆದರೂ, ಸಾಕಷ್ಟು ಬಾರಿ ಪಿತ್ತದ ಕಿರಿಕಿರಿ ಹೆಚ್ಚಾಗುವುದು ಕಂಡುಬರುತ್ತದೆ.