Thursday, May 26, 2022

ಬೇಸಿಗೆ ಧಗೆಯಿಂದ ಬಲು ಬಾಯಾರಿಕೆ

Follow Us

ಹಳ್ಳಿ ಮನೆಗಳು ತಂಪು ಎನ್ನುವುದು ಸಾರ್ವಕಾಲಿಕ ಸತ್ಯ. ಯಾಕೆಂದರೆ ಸಾಮಾನ್ಯವಾಗಿ ಪರಿಸರದ ತಪ್ಪಲಿನಲ್ಲಿ ಹಸಿರಿನ ನಡುವೆ ಇರುವ ಕಾರಣ, ನೆರಳು, ತಂಗಾಳಿ ಜತೆಗೆ ನೀರಿನ ಆಸರೆ ಸಮೃದ್ಧವಾಗಿರುತ್ತದೆ. ಅಷ್ಟೇ ಅಲ್ಲ, ಹಳ್ಳಿಗರು, ಹಿರಿಯರು ಈ ಬೇಸಿಗೆಯ ಪುಟ್ಟ ಕಿರಿಕಿರಿಯನ್ನು ಹೋಗಲಾಡಿಸಲು ತಮ್ಮದೇ ಶೈಲಿಯಲ್ಲಿ ಪರಿಹಾರಗಳನ್ನು ಕಂಡುಕೊಂಡಿದ್ದಾರೆ. ಅದು ಈಗ ಹಳ್ಳಿ ಸಂಸ್ಕೃತಿಯಾಗಿ ಬದಲಾಗಿದೆ.

• ಸೀಮಾ
newsics.com@gmail.com

ಮಾರ್ಚ್- ಏಪ್ರಿಲ್ ತಿಂಗಳು ಬೇಸಿಗೆಯ ತಿಂಗಳುಗಳೆಂದೇ ಹೆಸರುವಾಸಿ. ನಿಲ್ಲದ ಸೆಕೆ, ಬಾಯಾರಿಕೆ… ಒಂದು ಕ್ಷಣ ಕರೆಂಟ್ ಹೋದರೂ ಪೇಚಾಡುವ ಪರಿಸ್ಥಿತಿ. ಎಸಿ, ಫ್ಯಾನ್ ಇಲ್ಲದೆ ಜೀವನವೇ ದುಸ್ತರ ಎನ್ನುವ ಭಾವನೆ ಸಾಮಾನ್ಯವಾಗಿ ಎಲ್ಲರನ್ನೂ ಕಾಡುತ್ತಿರುತ್ತದೆ.
ಸೆಕೆಗೆ ಸುರಿಯುವ ಬೆವರು, ಜತೆಗೆ ಎಷ್ಟು ದ್ರವಾಹಾರ (liquid food) ಸೇವಿಸಿದರೂ ಮರುಕ್ಷಣವೇ ಕಾಣಿಸಿಕೊಳ್ಳುವ ಬಾಯಾರಿಕೆ. ಒಮ್ಮೆ ಬೇಸಿಗೆ ಮುಗಿದು ಹೋದರೆ ಸಾಕಪ್ಪಾ ಎನ್ನುವ ಮನಸ್ಥಿತಿಗೆ ಬಂದಿರುತ್ತೇವೆ.
ಹಳ್ಳಿ ಮನೆಗಳು ತಂಪು ಎನ್ನುವುದು ಸಾರ್ವಕಾಲಿಕ ಸತ್ಯ. ಯಾಕೆಂದರೆ ಸಾಮಾನ್ಯವಾಗಿ ಪರಿಸರದ ತಪ್ಪಲಿನಲ್ಲಿ ಹಸಿರಿನ ನಡುವೆ ಇರುವ ಕಾರಣ, ನೆರಳು, ತಂಗಾಳಿ ಜತೆಗೆ ನೀರಿನ ಆಸರೆ ಸಮೃದ್ಧವಾಗಿರುತ್ತದೆ. ಅಷ್ಟೇ ಅಲ್ಲ, ಹಳ್ಳಿಗರು, ಹಿರಿಯರು ಈ ಬೇಸಿಗೆಯ ಪುಟ್ಟ ಕಿರಿಕಿರಿಯನ್ನು ಹೋಗಲಾಡಿಸಲು ತಮ್ಮದೇ ಶೈಲಿಯಲ್ಲಿ ಪರಿಹಾರಗಳನ್ನು ಕಂಡುಕೊಂಡಿದ್ದಾರೆ. ಅದು ಈಗ ಹಳ್ಳಿ ಸಂಸ್ಕೃತಿಯಾಗಿ ಬದಲಾಗಿದೆ.
ಬೆಲ್ಲ ಮತ್ತು ನೀರು…
ಹಳ್ಳಿಗಳಲ್ಲಿ ಮನೆಗೆ ಯಾರೇ ಬಂದರೂ ಮೊದಲು ಬೆಲ್ಲ ಮತ್ತು ನೀರನ್ನು ಮುಂದಿಡುತ್ತಾರೆ. ಅದಕ್ಕೂ ಮುನ್ನ ಕೈಕಾಲು ತೊಳೆದುಕೊಳ್ಳಲು ನೀರು ನೀಡುತ್ತಾರೆ. ಇವೆಲ್ಲವೂ ಆಯಾಸವನ್ನು ಕಡಿಮೆ ಮಾಡಿಕೊಳ್ಳಲು ಅವರು ಕಂಡುಕೊಂಡ ಹಾದಿ. ಬೆಲ್ಲ ಮತ್ತು ನೀರು ಸೇವನೆ ಬಾಯಾರಿಕೆಯನ್ನು ನೀಗಿಸುತ್ತದೆ.
ಹೂಜಿ ಅಥವಾ ಮಡಿಕೆ ನೀರು…
ನೀರನ್ನು ತಂಪಾಗಿಸಲು ಹಳ್ಳಿಗರು ಮಣ್ಣಿನ ಪಾತ್ರೆಗಳ ಮೊರೆ ಹೋಗುತ್ತಾರೆ. ಹೆಚ್ಚಾಗಿ ನೆರಳಿನಲ್ಲಿರುವ ಬಾವಿ ಅಥವಾ ಕೆರೆ ಇಲ್ಲವೇ ಯಾವುದೇ ನೀರಿನ ಆಸರೆಗಳಲ್ಲಿ (ಬಿಸಿ ನೀರ ಬುಗ್ಗೆಯನ್ನು ಹೊರತುಪಡಿಸಿ) ನೀರು ತಂಪಾಗಿರುತ್ತದೆ. ಯಾಕೆಂದರೆ ಅದು ಮಣ್ಣಿನ ಸಂಪರ್ಕದಲ್ಲಿರುತ್ತದೆ. ಇದೇ ಉಪಾಯವನ್ನು ಅನುಸರಿಸಿಕೊಂಡು ತಂಪಾದ ನೀರಿಗಾಗಿ ಪರಿಸರಸ್ನೇಹಿ ರೆಫ್ರಿಜರೇಟರ್ ಮಣ್ಣಿನ ಪಾತ್ರೆಗಳನ್ನು ಬಳಸಲಾಗುತ್ತದೆ.
ಮಜ್ಜಿಗೆ…
ಹಳ್ಳಿಗಳ ಕಡೆ ಬಿಸಿಲಿನಲ್ಲಿ ದಣಿದು ಬಂದವರಿಗೆ ಹೆಚ್ಚಾಗಿ ಮಜ್ಜಿಗೆ ನೀಡುತ್ತಾರೆ. ಅದು ನೀರು ಮಜ್ಜಿಗೆ, ಮಸಾಲೆ ಮಜ್ಜಿಗೆ ಅಥವಾ ಲಸ್ಸಿಯೇ ಆಗಿರಬಹುದು. ಮಜ್ಜಿಗೆ ಸಾಮಾನ್ಯವಾಗಿ ತಂಪು ಎನ್ನಲಾಗುತ್ತದೆ.
ಎಳನೀರು…
ಎಲ್ಲ ಕಡೆಗಳಲ್ಲಿ ಬೇಸಿಗೆಯಲ್ಲಿ ಎಳನೀರು ಸಾಮಾನ್ಯವಾಗಿ ಬಳಕೆಯಲ್ಲಿದೆ. ದೇಹಕ್ಕೆ ತಂಪು ಎನ್ನುವ ಉದ್ದೇಶದಿಂದ.
ಇವುಗಳು ಸಾಮಾನ್ಯವಾಗಿ ಬೇಸಿಗೆ ಕಾಲದಲ್ಲಿ ಹಳ್ಳಿಗಳಲ್ಲಿ ಧಗೆಯನ್ನು, ಬಾಯಾರಿಕೆಯನ್ನು ತಣಿಸಿಕೊಳ್ಳಲು ಕಂಡುಕೊಂಡ ಮಾರ್ಗಗಳು. ಇದರೊಂದಿಗೆ ಬೇಸಿಗೆ ಕಾಲದಲ್ಲಿ ಸಿಗುವ ಹಣ್ಣುಗಳಿಂದ ಶರಬತ್ತನ್ನು ತಯಾರಿಸುತ್ತಾರೆ.
ಇವುಗಳ ಜತೆ ಕೃಷಿ ಅಥವಾ ಕಾಡುಜನ್ಯ ವಸ್ತುಗಳಾದ ಅಡಕೆ ಮರದ ಹಾಳೆ, ಪಕ್ಷಿಗಳ ಗರಿ, ತಾಳೆ ಗರಿ ಮುಂತಾದವುಗಳನ್ನು ಬಳಸಿಕೊಂಡು ನೈಸರ್ಗಿಕ ಫ್ಯಾನ್ ಅಂದರೆ ಬೀಸಣಿಗೆಯನ್ನು ಮಾಡುತ್ತಾರೆ. ಇವು ಪಟ್ಟಣದಲ್ಲಿ ಸಿಗುವ ಪ್ಲಾಸ್ಟಿಕ್ ಬೀಸಣಿಕೆಗಿಂತ ಹೆಚ್ಚು ಉತ್ತಮ ಎನ್ನಲಾಗುತ್ತದೆ. ಮನೆಯನ್ನು ತಂಪಾಗಿಸಲು ಕೆಲವರು ತೆಂಗಿನ ಅಥವಾ ಅಡಕೆ ಗರಿ ಅಥವಾ ಹುಲ್ಲನ್ನು ಚಾವಣಿಗೆ ಬಳಸುತ್ತಾರೆ. ಇಲ್ಲವೇ ಈ ಗರಿಗಳಿಂದ ಪರಿಸರದ ನಡುವೆ ಕೃತಕ ಶೆಡ್‌ಗಳನ್ನು ನಿರ್ಮಿಸಿಕೊಂಡು ಬೇಸಿಗೆ ಕಳೆಯುತ್ತಾರೆ. ಎಲ್ಲಕ್ಕಿಂತ ಹೆಚ್ಚಾಗಿ ನೆಲದ ಜತೆಗಿನ ನೇರ ಸಂಪರ್ಕ ಸೆಕೆಯನ್ನು ಕಡಿಮೆ ಮಾಡುತ್ತದೆ.

ಮತ್ತಷ್ಟು ಸುದ್ದಿಗಳು

Latest News

ಪಾಟಿದಾರ್ ಶತಕದಾಟ: ಕ್ವಾಲಿಫೈಯರ್ 2 ತಲುಪಿದ ಫಾಫ್ ಪಡೆ

newsics.com ಕೋಲ್ಕತ್ತಾ: ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಐಪಿಎಲ್ 2022 ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 14ರನ್‌ಗಳ ಗೆಲುವು ಸಾಧಿಸಿದೆ. ಮಳೆಯ ಕಾರಣದಿಂದಾಗಿ ಕೊಂಚ ತಡವಾಗಿ...

ಉಗ್ರರ ಗುಂಡಿಗೆ ಟಿವಿ‌ ಕಲಾವಿದೆ ಬಲಿ

newsics.com ಶ್ರೀನಗರ: ಉಗ್ರರ ಗುಂಡಿಗೆ ಟಿವಿ ಕಲಾವಿದೆಯೊಬ್ಬರು ಬಲಿಯಾಗಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಬದ್ಗಾಮ್‌ ಜಿಲ್ಲೆಯಲ್ಲಿ ಬುಧವಾರ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತ ಮಹಿಳೆಯನ್ನು ಕಲಾವಿದೆ ಅಮ್ರೀನ್‌ ಭಟ್‌ ಎಂದು ಗುರುತಿಸಲಾಗಿದೆ. ಅಮ್ರೀನ್...

ಪೆಟ್ರೋಲಿಲ್ಲ, ಎಟಿಎಂನಲ್ಲಿ ಹಣವಿಲ್ಲ: ಪಾಕ್ ಸರ್ಕಾರದ ವಿರುದ್ಧ ಹಫೀಜ್ ವಾಗ್ದಾಳಿ

newsics.com ಇಸ್ಲಾಮಾಬಾದ್: ಪಾಕಿಸ್ತಾನದ ಸ್ಥಿತಿಗತಿಗಳ ಬಗೆಗೆ ಮಾಜಿ ಕ್ರಿಕೆಟಿಗ ಮೊಹಮ್ಮದ್ ಹಫೀಜ್ ಅವರು ಕಿಡಿಕಾರಿದ್ದಾರೆ. ಲಾಹೋರ್ ನಲ್ಲಿ ಜನ ಸಾಮಾನ್ಯರಿಗೆ ಪೆಟ್ರೋಲ್ ಸಿಗುತ್ತಿಲ್ಲ. ಎಟಿಎಂನಲ್ಲಿ ಹಣವಿಲ್ಲ ಎಂದು ಹೇಳಿದ್ದಾರೆ. ಯಾವುದೇ ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್...
- Advertisement -
error: Content is protected !!