Tuesday, July 5, 2022

ಫ್ಯಾಟ್ ರಿಮೂವಲ್ ಸರ್ಜರಿ ಆರೋಗ್ಯಕ್ಕೆ ಹಾನಿಕಾರಕವೆ?

Follow Us

ಕನ್ನಡ ಕಿರುತೆರೆ ನಟಿ ಚೇತನಾ ರಾಜ್ ಫ್ಯಾಟ್ ಫ್ರೀ ಸರ್ಜರಿ ಮಾಡಿಸಿಕೊಳ್ಳಲು ಹೋಗಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಘಟನೆಯ ನಂತರ ಬಹಳಷ್ಟು ಮಂದಿಯಲ್ಲಿ ಪ್ಲಾಸ್ಟಿಕ್ ಸರ್ಜರಿಯಿಂದ ಪ್ರಾಣಹಾನಿ ಸಂಭವಿಸುತ್ತದೆಯೆ? ಇದು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಉಂಟು ಮಾಡುತ್ತದೆ ಅನ್ನುವ ಹಲವಾರು ಪ್ರಶ್ನೆಗಳು ಹುಟ್ಟಿಕೊಂಡಿವೆ.

newsics.com@gmail.com

ಪ್ಲಾಸ್ಟಿಕ್ ಸರ್ಜರಿಯಲ್ಲಿ ಪ್ಲಾಸ್ಟಿಕ್ ಎಂದರೆ ನಾವು ದಿನಬಳಕೆಯ ಬಳಸುವ ಸಿಂಥೆಟಿಕ್ ಪಾಲಿಮರ್ ಪ್ಲಾಸ್ಟಿಕ್ ಅಲ್ಲ. ಈ ಪ್ಲಾಸ್ಟಿಕ್ ಅನ್ನುವ ಪದ ಗ್ರೀಕ್ ಭಾಷೆಯ ‘ಪ್ಲಾಸ್ಟಿಕೆ’ಯಿಂದ ಬಂದಿದ್ದು, ‘ಮೆದುವಾದ ಮಾಂಸ’ ಅಥವಾ ‘ಮಾಡೆಲಿಂಗ್ ಕಲೆ’ಎನ್ನುವ ಅರ್ಥವನ್ನು ನೀಡುತ್ತದೆ. ಪ್ಲಾಸ್ಟಿಕ್ ಸರ್ಜರಿ ಎಂಬುವುದು ಒಂದು ಮರುನಿರ್ಮಾಣದ ಪ್ರಕ್ರಿಯೆ. ಇದರಲ್ಲಿ ಮುಖ್ಯವಾಗಿ cosmetic ಅಥವಾ ಪ್ರಸಾದನ ಶಸ್ತ್ರ ಚಿಕಿತ್ಸೆ ಹಾಗೂ Reconstructive ಅಥವಾ ಮರುನಿರ್ಮಾಣ ಶಸ್ತ್ರ ಚಿಕಿತ್ಸೆ ಎಂಬ ಎರಡು ವಿಧಗಳಿವೆ.
Reconstructive ಅಥವಾ ಮರುನಿರ್ಮಾಣ ಶಸ್ತ್ರ ಚಿಕಿತ್ಸೆಯನ್ನು ಅಂಗಾಗಗಳನ್ನು ಮರೂಜೋಡಿಸಲು, ಬೇರ್ಪಡಿಸಲು ಬಳಸಲಾಗುತ್ತದೆ. cosmetic ಅಥವಾ ಪ್ರಸಾದನ ಶಸ್ತ್ರ ಚಿಕಿತ್ಸೆಯನ್ನು ಹೆಚ್ಚಾಗಿ ದೇಹದ ಕೊಬ್ಬನ್ನು ಕರಗಿಸಿ, ಸೌಂದರ್ಯವನ್ನು ಹೆಚ್ಚಿಸುವ ಸಲುವಾಗಿ ಬಳಸಲಾಗುತ್ತದೆ.

Fat-free ಸರ್ಜರಿ ಅನ್ನುವುದು ಒಂದು ಕಾಸ್ಮೆಟಿಕ್ ಸರ್ಜರಿ. ಇದರಲ್ಲಿ ಬಾರಿಯಾಟ್ರಿಕ್ ಫ್ಯಾಟ್ ರಿಮೂವಲ್ ಸರ್ಜರಿ ಹಾಗೂ ಲಿಪೊಸಕ್ಷನ್ ಎನ್ನುವ ಎರಡು ಪ್ರಮುಖ ವಿಧಗಳಿವೆ.
ಸಾಮಾನ್ಯವಾಗಿ ವೈದ್ಯರು ತೂಕವನ್ನು ಕಡಿಮೆ ಮಾಡಲು ಲಭ್ಯವಿರುವ ಎಲ್ಲಾ ಕ್ರಮಗಳು ವಿಫಲವಾದಾಗ ಮಾತ್ರ ಬಾರಿಯಾಟ್ರಿಕ್ ಫ್ಯಾಟ್ ರಿಮೂವಲ್ ಸರ್ಜರಿಯನ್ನು ಸೂಚಿಸುತ್ತಾರೆ. ಈ ಸರ್ಜರಿಯನ್ನು ಮುಖ್ಯವಾಗಿ ಆಪರೇಶನ್ ಮೂಲಕ ಹೊಟ್ಟೆಯ ಭಾಗವನ್ನು ಚಿಕ್ಕದು ಮಾಡಲು ಬಳಸಲಾಗುತ್ತದೆ.
ಲಿಪೋಸಕ್ಷನ್ ಸರ್ಜರಿಯನ್ನು ಕುತ್ತಿಗೆ, ತೋಳು, ತೊಡೆ, ಪೃಷ್ಠ, ಸೊಂಟ ಇತ್ಯಾದಿ. ದೇಹದ ಯಾವ ಭಾಗದಿಂದ ಕೊಬ್ಬಿನ ಅಂಶವನ್ನು ತೆಗೆಯಬೇಕು ಆ ಭಾಗಕ್ಕೆ ಮಾಡಲಾಗುತ್ತದೆ. ಇದರಲ್ಲಿ ಹಲವಾರು ವಿಧಗಳಿವೆ ಹಾಗೂ ಹಲವು ರೀತಿಯಲ್ಲಿ ಲಿಪೋಸಕ್ಷನ್ ಸರ್ಜರಿ ಮಾಡಲಾಗುತ್ತದೆ. ಇದರಲ್ಲಿ ಸರ್ಜರಿಯ ಪ್ರಮಾಣಕ್ಕೆ ತಕ್ಕ ಹಾಗೆ ಸ್ಥಳೀಯ ಹಾಗೂ ಜನರಲ್ ಅನಸ್ತೇಶಿಯಾವನ್ನು ಬಳಸಲಾಗುತ್ತದೆ. ಹೀಗಾಗಿ ಅನಸ್ತೇಶಿಯಾ ಸಾಮಾನ್ಯವಾಗಿ ಉಂಟು ಮಾಡುವ ಅಪಾಯಗಳು, ಈ ಶಸ್ತ್ರ ಚಿಕಿತ್ಸೆಗಳಿಗೂ ಅನ್ವಯಿಸುತ್ತದೆ.

ಹಾಗೆಯೇ ಈ ಫ್ಯಾಟ್ ರಿಮೂವಲ್ ಸರ್ಜರಿಯ ನಂತರದಲ್ಲಿ ತುಂಬಾ ಆರೋಗ್ಯದ ಕುರಿತಾಗಿ ಎಚ್ಚರ ವಹಿಸಬೇಕು. ವ್ಯಾಯಮ, ಆಹಾರ ಪಥ್ಯ ಕಡ್ಡಾಯ. ಸಿಗರೇಟ್ ಸೇವನೆ ಒಳ್ಳೆಯದಲ್ಲ. ಹಾಗೆಯೇ ವೈದ್ಯರು ಹೇಳಿದ ಎಚ್ಚರಿಕೆಗಳನ್ನು ಸರಿಯಾಗಿ ಪಾಲಿಸಬೇಕು. ಇಲ್ಲದೆ ಹೋದಲ್ಲಿ ಮತ್ತೊಮ್ಮೆ ಶಸ್ತ್ರ ಚಿಕಿತ್ಸೆಗೆ ಒಳಗಾಗಬೇಕಾಗಬಹುದು ಅಥವಾ ಪ್ರಾಣಕ್ಕೆ ಅಪಯವಾಗಬಹುದು.

ಇದರ ಹೊರತಾಗಿ ಗಾಯಗಳಿಂದ ರಕ್ತ ಸ್ರಾವ, ಹೃದಯಾಘಾತ, ಗಾಯಗಳು ಬೇಗ ಮಾಗದೆ ಇರುವುದು, ರಕ್ತ ಹೆಪ್ಪುಗಟ್ಟಿ ಹೃದಯ ಹಾಗೂ ಶ್ವಾಸಕೋಶಕ್ಕೆ ಹರಿಯುವುದು, ಚರ್ಮ ಸಂಬಂಧಿ ಕಾಯಿಲೆಗಳು, ಮೊದಲಾದ ಆರೋಗ್ಯ ಸಮಸ್ಯೆಗಳ ಜೊತೆ ಲಿಪೋಸಕ್ಷನ್ ನ ಕೆಲವು ವಿಧಾನಗಳಲ್ಲಿ ದೇಹಕ್ಕೆ ದ್ರವವನ್ನು ಹೆಚ್ಚಿನ ಪ್ರಮಾಣದಲ್ಲಿ ನೀಡಲಾಗುತ್ತದೆ. ಅವು ಶ್ವಾಸಕೋಶದಲ್ಲಿ ತುಂಬಿಕೊಂಡು ಪ್ರಾಣಕ್ಕೆ ಅಪಾಯವಾಗುವ ಸಂಭವ ಕೂಡ ಇದೆ. ಅಷ್ಟೇ ಅಲ್ಲದೆ ಮಾನಸಿಕ ರೋಗಗಳಿಗೆ ತುತ್ತಾಗುವ ಸಾಧ್ಯತೆಗಳು ಇವೆ.

ಹೀಗೆ ದೇಹದ ತೂಕವನ್ನು ಇಳಿಸಿಕೊಳ್ಳಲು ಸರ್ಜರಿ ಮೊರೆ ಹೋಗುವ ಬದಲು, ಉತ್ತಮ ವೈದ್ಯರನ್ನು ಸಂಪರ್ಕಿಸಿ, ಉತ್ತಮ ಜೀವನಕ್ರಮ, ವ್ಯಾಯಾಮ, ಆಹಾರ ಪಥ್ಯ ಮೊದಲಾದ ನೈಸರ್ಗಿಕ ವಿಧಾನಗಳ ಮೂಲಕ ತೂಕ ಇಳಿಸಿಕೊಂಡು ಆರೋಗ್ಯ ಉಳಿಸಿಕೊಳ್ಳುವುದು ಉತ್ತಮ.

ಮತ್ತಷ್ಟು ಸುದ್ದಿಗಳು

vertical

Latest News

ಫ್ಲ್ಯಾಟ್​ ವಾಪಸ್ ಕೊಡಿ ಎಂದಿದ್ದಕ್ಕೆ ಗುರೂಜಿ ಹತ್ಯೆ..?

newsics.com ಹುಬ್ಬಳ್ಳಿ : ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ್​ ಗುರೂಜಿ ಬರ್ಬರವಾಗಿ ಕೊಲೆಯಾಗಿದ್ದಾರೆ. ಇದೀಗ ಕೊಲೆಗಾರರು ಯಾರು ಎಂಬುದೂ ಸಹ ಬಯಲಾಗಿದೆ. ಗುರೂಜಿಗಳ ಆಪ್ತರೇ ಆಗಿದ್ದ ಮಹಂತೇಶ್​...

ಆಗಸ್ಟ್ 6ರಂದು ಉಪ ರಾಷ್ಟ್ರಪತಿ ಚುನಾವಣೆ

newsics.com ನವದೆಹಲಿ: ಉಪ ರಾಷ್ಟ್ರಪತಿ ಚುನಾವಣೆ ಸಂಬಂಧ ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಿದೆ. ಆಗಸ್ಟ್ 6 ರಂದು  ಮತದಾನ ನಡೆಯಲಿದೆ. ಪ್ರಸಕ್ತ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವಧಿ ಪೂರ್ಣಗೊಳಿಸುತ್ತಿರುವ ಕಾರಣ ನೂತನ ಉಪ ರಾಷ್ಟ್ರಪತಿ...

ಚಂದ್ರಶೇಖರ್ ಗುರೂಜಿ ಸಾವಿನ ಹಿಂದೆ ಹೆಣ್ಣಿನ ಕರಿನೆರಳು..?

newsics.com ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಸರಳ ವಾಸ್ತು ತಜ್ಞ ಚಂದ್ರಶೇಖರ್ ಕೊಲೆ ಸಾಕಷ್ಟು ಆಯಾಮಗಳನ್ನು ಪಡೆದುಕೊಳ್ತಿದೆ. ಗುರೂಜಿಗಳ ಸಾವಿನ ಹಿಂದೆ ಭಕ್ತರು ಇದ್ದಾರಾ ಅಥವಾ ಆಪ್ತರೇ ಚಂದ್ರ ಶೇಖರ್ರನ್ನು ಕೊಲೆ ಮಾಡಿದ್ದಾರಾ ಎಂಬ ಅನುಮಾನಗಳು ಮೂಡಿವೆ. ಈ...
- Advertisement -
error: Content is protected !!