ಯೋಗೇನ ಚಿತ್ತಸ್ಯ ಪದೇನ ವಾಚಾಂ ಮಲಂ ಶರೀರಸ್ಯ ಚ ವೈದ್ಯಕೇನ| ಯೋಪಾಕರೋತ್ತಂ ಪ್ರವರಂ ಮುನೀನಾಂ ಪತಂಜಲಿಂ ಪ್ರಾಂಜಲಿಂರಾನತೋಸ್ಮಿ||
ಯೋಗೇನ ಚಿತ್ತಸ್ಯ ಪದೇನ ವಾಚಾಂ ಮಲಂ ಶರೀರಸ್ಯ ಚ ವೈದ್ಯಕೇನ| ಯೋಪಾಕರೋತ್ತಂ ಪ್ರವರಂ ಮುನೀನಾಂ ಪತಂಜಲಿಂ ಪ್ರಾಂಜಲಿಂರಾನತೋಸ್ಮಿ||
newsics.com
ಪತಂಜಲಿ ಕಾಲದಿಂದಲೂ ಯೋಗ ರೂಢಿಯಲ್ಲಿದೆ. ಪತಂಜಲಿ ಯೋಗ ಸೂತ್ರಗಳಲ್ಲಿ ಯೋಗದ ಬಗ್ಗೆ ಉಲ್ಲೇಖವಿದೆ. ಸ್ವ ಅವಲೋಕನ, ಹುಟ್ಟಿನ ಉದ್ದೇಶ ಅರಿಯುವ ನಿಟ್ಟಿನಲ್ಲಿ ಯೋಗವನ್ನು ಅಭ್ಯಾಸ ಮಾಡಲಾಗುತ್ತಿತ್ತು. ಆದರೆ ದಿನಕಳೆದಂತೆ ಯೋಗ ಆರೋಗ್ಯವನ್ನು ಉತ್ತಮಗೊಳಿಸುವಲ್ಲಿ ಸಹಕರಿಸುತ್ತದೆ ಎಂದು ಹೆಚ್ಚು ಪ್ರಚಲಿತವಾಯಿತು.
ಯೋಗದಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಒತ್ತಡದ ಬದುಕಿನಲ್ಲಿ ಒಂದಷ್ಟು ತಾಳ್ಮೆ, ಕಾಡುವ ನಾನಾ ರೀತಿಯ ರೋಗಗಳಿಂದ ಮುಕ್ತವಾಗಿರಲು ಯೋಗ ಸಹಾಯಕವಾಗಿದೆ.
ಮಧುಮೇಹ, ಹೃದಯಕ್ಕೆ ಸಂಬಂಧಿಸಿದ ಸಮಸ್ಯೆ, ಮಹಿಳೆಯರ ಆರೋಗ್ಯ ಸಮಸ್ಯೆ ಸೇರಿದಂತೆ ಮೆದುಳು, ಕೈ ಕಾಲುಗಳು ಸ್ವಾಸ್ಥ್ಯಕ್ಕೂ ಯೋಗ ನೆರವಾಗುತ್ತದೆ.
ಇಂದು 8ನೇ ಅಂತಾರಾಷ್ಟ್ರೀಯ ಯೋಗ ದಿನ. 2015 ದಿಲ್ಲಿ ಮೊದಲ ಬಾರಿಗೆ ಯೋಗವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಚರಣೆ ಮಾಡುವಂತೆ ಮಾಡಿದವರು ಭಾರತದ ಪ್ರಧಾನ ನರೇಂದ್ರ ಮೋದಿ ಅವರು. ಈ ಬಾರಿ ಮಾನವೀಯತೆಗಾಗಿ ಯೋಗ ಎನ್ನುವ ಥೀಮ್ನಡಿ ಯೋಗ ದಿನ ಆಚರಣೆ ಮಾಡಲಾಗುತ್ತಿದೆ.
ಯೋಗ ಕೇವಲ ವ್ಯಾಯಾಮವಲ್ಲ, ಇದು ವಿಶ್ವ ಮತ್ತು ಪ್ರಕೃತಿಯೊಂದಿಗೆ ನಮ್ಮತನವನ್ನು ಒಂದಾಗಿಸುವ ವಿದ್ಯೆ. ಯೋಗವು ಬದುಕನ್ನು ಬದಲಿಸುವ, ಆತ್ಮಸಾಕ್ಷಿಯ ಸೃಷ್ಟಿ.
ಶ್ಲೋಕದಿಂದ ಆರಂಭವಾಗುವ ಯೋಗವು ಧ್ಯಾನ, ಅಷ್ಟಾಂಗ ಯೋಗ, ವಿನ್ಯಾಸ ಯೋಗ, ನಿದ್ರಾಯೋಗ, ಮುದ್ರಾಯೋಗ, ಆಸನಗಳು,ಹಠಯೋಗ ಹೀಗೆ ಹಲವು ರೀತಿಯ ಯೋಗ ಪ್ರಕಾರಗಳಿವೆ. ಯೋಗ ರೋಗದಿಂದ ದೂರವಿರುವಂತೆ ಮಾಡುತ್ತದೆ. ಹೀಗಾಗಿ ದಿನ ಯೋಗಾಭ್ಯಾಸದಿಂದ ಆರಂಭವಾದರೆ ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳಬಹುದು.