Wednesday, May 25, 2022

ಭಯ ಬಿಡಿ, ಮಾವಿನಹಣ್ಣು ತಿಂದ್ಬಿಡಿ…

Follow Us

ಇದು ಮಾವಿನಹಣ್ಣಿನ ಸೀಸನ್. ಮಾವಿನಹಣ್ಣಿನ ಕುರಿತಾದ ಹತ್ತಾರು ಊಹಾಪೋಹಗಳನ್ನು ಬದಿಗಿಟ್ಟು, ಮಾವಿನ ಸ್ವಾದವನ್ನು ಆಸ್ವಾದಿಸಿ.

• ಡಾ.ಪಿ. ಅಸೀಮಾ
newsics.com@gmail.com

ಣ್ಣುಗಳ ರಾಜ ಮಾವಿನ ಹಣ್ಣಿನಲ್ಲಿ ವಿಟಮಿನ್ ಎ ಹಾಗೂ ಸಿ ಜತೆಗೆ ದೇಹಕ್ಕೆ ಬೇಕಾಗುವ ಅನೇಕ
ಉತ್ಕರ್ಷಣ ನಿರೋಧಕಗಳು ಅಂದರೆ antioxidant ಅಂಶಗಳು ಹೆಚ್ಚಾಗಿವೆ.
ಭಾರತ ಪ್ರಪಂಚದಲ್ಲೇ ಅತಿಹೆಚ್ಚು ಮಾವಿನ ಹಣ್ಣುಗಳನ್ನು ಬೆಳೆಯುವ ದೇಶವಾಗಿದೆ. ಇಲ್ಲಿ ವೈವಿಧ್ಯಮಯ ಮಾವಿನ ತಳಿಗಳು ಕೂಡ ಲಭ್ಯ. ಈ ರುಚಿಕರ ಮಾವಿನ ಹಣ್ಣಿನ ಸೇವನೆಯು ಕೆಲವು ರೋಗಗಳಿಗೆ ಕಾರಣವಾಗುತ್ತದೆ ಎಂದು ಅದನ್ನು ನಿರ್ಲಕ್ಷಿಸಲಾಗುತ್ತಿದೆ. ಮುಖ್ಯವಾಗಿ ಮಧುಮೇಹ, ತೂಕದ ಹೆಚ್ಚಳ, ಮೊಡವೆಗಳಿಗೆ ಈ ಮಾವು ಕಾರಣವಾಗುತ್ತದೆ ಎನ್ನುವ ಆರೋಪಗಳಿವೆ.

ಮಾವಿನ ಹಣ್ಣಿನಲ್ಲಿ ಫೈಟಿಕ್ (phytic) ಆ್ಯಸಿಡ್ ಇದೆ. ಇದು ದೇಹದ ಉಷ್ಣಾಂಶ ಹೆಚ್ಚಾಗಲು ಕಾರಣವಾಗುತ್ತದೆ. ಇದು ಮೊಡವೆಗಳಿಗೂ ಕಾರಣವಾಗಬಹುದು.

ಮಾವಿನಹಣ್ಣನ್ನು ತಿನ್ನುವ ಮೊದಲು ಮೂರು ಗಂಟೆ ನೀರಿನಲ್ಲಿ ನೆನೆಸಿಡುವುದರಿಂದ ಈ ಅಂಶ ಕಡಿಮೆಯಾಗುತ್ತದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

ಹಾಗೆಯೇ ಮಧುಮೇಹಿಗಳು ಈ ಮಾವಿನಹಣ್ಣನ್ನು ಒಂದು ಸಿಹಿತಿಂಡಿಯ ರೂಪದಲ್ಲಿ ಸೇವಿಸುವುದಕ್ಕಿಂತ ಸ್ನ್ಯಾಕ್ಸ್ ರೂಪದಲ್ಲಿ, ನಿಯಮಿತವಾಗಿ ತಿನ್ನುವುದರಿಂದ ಶುಗರ್ ಲೆವೆಲ್ ಮೇಲೆ ಪರಿಣಾಮ ಬೀರದು ಎಂದು ಹೇಳುತ್ತಾರೆ.
ಮಾವಿನ ಹಣ್ಣನ್ನು ತಿನ್ನುವುದರಿಂದ ತೂಕ ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ. ಆದರೆ ವೈದ್ಯರ ಪ್ರಕಾರ ಮಾವಿನ ಹಣ್ಣು ಕಡಿಮೆ ಕೊಬ್ಬಿನ ಅಂಶಗಳನ್ನು ಹೊಂದಿದೆ. ಪೌಷ್ಠಿಕಾಂಶಯುಕ್ತ ಈ ಹಣ್ಣಿನ ಸೇವನೆಯಿಂದ ತೂಕ ಹೆಚ್ಚಿಸಿಕೊಳ್ಳುವ ಭಯ ಬೇಡ ಎಂದಿದ್ದಾರೆ.

ಮತ್ತಷ್ಟು ಸುದ್ದಿಗಳು

Latest News

ಉಗ್ರರ ಗುಂಡಿಗೆ ಟಿವಿ‌ ಕಲಾವಿದೆ ಬಲಿ

newsics.com ಶ್ರೀನಗರ: ಉಗ್ರರ ಗುಂಡಿಗೆ ಟಿವಿ ಕಲಾವಿದೆಯೊಬ್ಬರು ಬಲಿಯಾಗಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಬದ್ಗಾಮ್‌ ಜಿಲ್ಲೆಯಲ್ಲಿ ಬುಧವಾರ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತ ಮಹಿಳೆಯನ್ನು...

ಪೆಟ್ರೋಲಿಲ್ಲ, ಎಟಿಎಂನಲ್ಲಿ ಹಣವಿಲ್ಲ: ಪಾಕ್ ಸರ್ಕಾರದ ವಿರುದ್ಧ ಹಫೀಜ್ ವಾಗ್ದಾಳಿ

newsics.com ಇಸ್ಲಾಮಾಬಾದ್: ಪಾಕಿಸ್ತಾನದ ಸ್ಥಿತಿಗತಿಗಳ ಬಗೆಗೆ ಮಾಜಿ ಕ್ರಿಕೆಟಿಗ ಮೊಹಮ್ಮದ್ ಹಫೀಜ್ ಅವರು ಕಿಡಿಕಾರಿದ್ದಾರೆ. ಲಾಹೋರ್ ನಲ್ಲಿ ಜನ ಸಾಮಾನ್ಯರಿಗೆ ಪೆಟ್ರೋಲ್ ಸಿಗುತ್ತಿಲ್ಲ. ಎಟಿಎಂನಲ್ಲಿ ಹಣವಿಲ್ಲ ಎಂದು ಹೇಳಿದ್ದಾರೆ. ಯಾವುದೇ ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್...

ಮಗನ ಪಬ್ ಜಿ ಆಟಕ್ಕೆ ತಾಯಿ ಬಲಿ

newsics.com ಚಿಕ್ಕಮಗಳೂರು: ಮಗನ ಪಬ್ ಜಿ ಆಟಕ್ಕೆ, ತಾಯಿ ಬಲಿಯಾಗಿರುವ ಘಟನೆ ಚಿಕ್ಕಮಗಳೂರಿನ ಗಿರಿಶ್ರೇಣಿಯ ಅಗಲಖಾನ್ ಎಸ್ಟೇಟ್ ನಲ್ಲಿ ನಡೆದಿದೆ. ಇಮ್ತಿಯಾಜ್ ಮತ್ತು ಮೈಮುನ್ನಾ ದಂಪತಿ ಕುಟುಂಬ ಎರಡು ವರ್ಷದಿಂದ ಎಸ್ಟೇಟ್ ನ ಕೂಲಿ ಲೈನ್...
- Advertisement -
error: Content is protected !!