Sunday, May 22, 2022

ಅತಿಯಾದ ವ್ಯಾಯಾಮ, ಡಯಟ್‌ನಿಂದ ಮುಟ್ಟಿನ ಸಮಸ್ಯೆ

Follow Us

ಮಹಿಳೆಯರನ್ನು ಎಚ್ಚರಿಸಿದ ಅಧ್ಯಯನ‌ ವರದಿ

ಹೈಪೋಥಾಲಾಮಿಕ್ ಅಮೆನೋರಿಯಾ ಎನ್ನುವುದು ಹೈಪೋಥಾಲಮಸ್‌ಗೆ ಸಂಬಂಧಿಸಿದ ಸಮಸ್ಯೆಯಾಗಿದ್ದು ಇದರಿಂದಾಗಿ ಹಲವು ತಿಂಗಳುಗಳ ಕಾಲ ಋತುಚಕ್ರ ನಿಲ್ಲುತ್ತದೆ. ಮೆದುಳಿನ ಮಧ್ಯ ಭಾಗದಲ್ಲಿರುವ ಹೈಪೋಥಾಲಮಸ್ ಸಂತಾನೋತ್ಪತ್ತಿಯನ್ನು ನಿಯಂತ್ರಿಸುವುದಲ್ಲದೆ ಗೊನಾಡೋಟ್ರೋಪಿನ್ – ಬಿಡುಗಡೆ ಮಾಡುವ ಹಾರ್ಮೋನ್‌ನ್ನು ಉತ್ಪಾದಿಸುತ್ತದೆ. ತೂಕ ಇಳಿಸಿಕೊಳ್ಳಲು ಮಾಡುವಂತಹ ಡಯಟ್ ಹಾಗೂ ವ್ಯಾಯಾಮ ಇದರ ಮೇಲೆ ಕೆಟ್ಟ ಪರಿಣಾಮ ಬೀರಲೂಬಹುದು.

• ಅನಿತಾ ಬನಾರಿ
newsics.com@gmail.com

ಇಂದಿನ ಆಧುನಿಕ ಮಹಿಳೆಯರು ತಮ್ಮ ಫಿಟ್ನೆಸ್ ಕಾಪಾಡಿಕೊಳ್ಳಲು ಜಿಮ್, ಡಯಟ್ ಮೊರೆಹೋಗುತ್ತಿರುವುದು ಹೊಸದೇನಲ್ಲ. ಇವು ಆರೋಗ್ಯ ಕಾಪಾಡಿಕೊಳ್ಳಲು ನೆರವಾಗುತ್ತವೆ ಸರಿ. ಆದರೆ ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಋತುಚಕ್ರದ ಮೇಲೆ ಈ ವ್ಯಾಯಾಮ ಹಾಗೂ ಡಯಟ್‌ಗಳು ಪರಿಣಾಮ ಬೀರುತ್ತಿವೆ. ಅಷ್ಟೇ ಅಲ್ಲ, ಜಗತ್ತಿನ ಹಲವು ಮಹಿಳೆಯರು ಅನಿಯಮಿತ ಮುಟ್ಟಿನ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಅಧ್ಯಯನವೊಂದು ತಿಳಿಸಿದೆ.
ಈ ಬಗ್ಗೆ ಯುಕೆಯ ಪೌಷ್ಟಿಕ ತಜ್ಞರು ಈಗಾಗಲೇ ಎಚ್ಚರಿಕೆಯನ್ನೂ ನೀಡಿದ್ದಾರೆ. ಮಾತ್ರವಲ್ಲ, ಇತ್ತೀಚೆಗೆ ಹೆಚ್ಚಾಗುತ್ತಿರುವ ಹೈಪೋಥಾಲಾಮಿಕ್ ಅಮೆನೋರಿಯಾದ ಬಗ್ಗೆ ತಜ್ಞರು ಇದರಲ್ಲಿ ಪ್ರಸ್ತಾಪ ಮಾಡಿದ್ದಾರೆ. ಹೈಪೋಥಾಲಾಮಿಕ್ ಅಮೆನೋರಿಯಾ ಎನ್ನುವುದು ಹೈಪೋಥಾಲಮಸ್‌ಗೆ ಸಂಬಂಧಿಸಿದ ಸಮಸ್ಯೆಯಾಗಿದ್ದು ಇದರಿಂದಾಗಿ ಹಲವು ತಿಂಗಳುಗಳ ಕಾಲ ಋತುಚಕ್ರ ನಿಲ್ಲುತ್ತದೆ. ಮೆದುಳಿನ ಮಧ್ಯ ಭಾಗದಲ್ಲಿರುವ ಹೈಪೋಥಾಲಮಸ್ ಸಂತಾನೋತ್ಪತ್ತಿಯನ್ನು ನಿಯಂತ್ರಿಸುವುದಲ್ಲದೆ ಗೊನಾಡೋಟ್ರೋಪಿನ್ – ಬಿಡುಗಡೆ ಮಾಡುವ ಹಾರ್ಮೋನ್‌ನ್ನು ಉತ್ಪಾದಿಸುತ್ತದೆ. ತೂಕ ಇಳಿಸಿಕೊಳ್ಳಲು ಮಾಡುವಂತಹ ಡಯಟ್ ಹಾಗೂ ವ್ಯಾಯಾಮ ಇದರ ಮೇಲೆ ಕೆಟ್ಟ ಪರಿಣಾಮ ಬೀರಲೂಬಹುದು.

ಮಹಿಳೆಯರಿಗೆ ಋತುಚಕ್ರ ವರವಾಗಿದ್ದು, ಇದು ದೇಹದ ಆರೋಗ್ಯವನ್ನು ನಿಯಂತ್ರಿಸುತ್ತದೆ. ಆದರೆ ಮುಟ್ಟು ನಿಯಮಿತವಾಗಿ ಆಗದಿದ್ದರೆ ದೇಹದಲ್ಲಿ ಹಲವು ಸಮಸ್ಯೆಗಳು ಉಂಟಾಗುತ್ತವೆ. ಚಿಕ್ಕ ವಯಸ್ಸಿನಲ್ಲಿ ಮುಟ್ಟಿನ ಸಮಸ್ಯೆ ಎದುರಾಗುವುದರಿಂದ ಹೈಪೋಥಾಲಾಮಿಕ್ ಅಮೆನೋರಿಯಾವು ಅಂಡಾಶಯದಿಂದ ಕಡಿಮೆ ಈಸ್ಟ್ರೋಜನ್ ಉತ್ಪಾದನೆ ಮಾಡುತ್ತದೆ. ಈಸ್ಟ್ರೋಜನ್ ಹೃದಯದ ಕಾಯಿಲೆಗಳಿಂದ ರಕ್ಷಿಸುತ್ತದೆ‌. ಆದರೆ ಅನಿಯಮಿತ ಮುಟ್ಟಿನಿಂದ ಈಸ್ಟ್ರೋಜನ್ ಕೊರತೆಯಾಗುವುದಲ್ಲದೆ ಹೃದಯ ಸಂಬಂಧಿ ಕಾಯಿಲೆಗಳಿಗೆ ಇದು ದಾರಿ ಮಾಡಿಕೊಡುತ್ತದೆ. ಹೀಗಾಗಿ ಋತುಚಕ್ರ ನಿಯಮಿತವಾಗಿರುವಂತೆ ನೋಡಿಕೊಳ್ಳುವುದು ಮಹಿಳೆಯರ ಸುರಕ್ಷತೆಯ ದೃಷ್ಟಿಯಿಂದ ಬಹುಮುಖ್ಯವಾಗಿದೆ.

ಮೆಂತ್ಯ ಆರೋಗ್ಯದ ಮಂತ್ರ…

ಮತ್ತಷ್ಟು ಸುದ್ದಿಗಳು

Latest News

ಕುತುಬ್ ಮಿನಾರ್ ಸಂಕೀರ್ಣ ಉತ್ಖನನ: ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದ ಕೇಂದ್ರ ಸಚಿವ

newsics.com ನವದೆಹಲಿ: ಕುತುಬ್ ಮಿನಾರ್ ಸಂಕೀರ್ಣದ ಉತ್ಖನನ ಕುರಿತಂತೆ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಕೇಂದ್ರ ಸಂಸ್ಕೃತಿ ಸಚಿವ ಜಿ.ಕೆ.ರೆಡ್ಡಿ ಹೇಳಿದ್ದಾರೆ. ದೆಹಲಿಯ ಕುತುಬ್ ಮಿನಾರ್ ಸಂಕೀರ್ಣದಲ್ಲಿ...

ನನ್ನ ದೇಹದ ಖಾಸಗಿ ಭಾಗದಲ್ಲಿನ ಮಚ್ಚೆ ಬಗ್ಗೆ ಹೇಳಲಿ: ಲೈಂಗಿಕ ಕಿರುಕುಳ ಆರೋಪಕ್ಕೆ ಎಲಾನ್ ಮಸ್ಕ್ ಓಪನ್ ಚಾಲೆಂಜ್

newsics.com ನ್ಯೂಯಾರ್ಕ್: ಖಾಸಗಿ ಜೆಟ್‌ನಲ್ಲಿ ಫ್ಲೈಟ್ ಅಟೆಂಡೆಂಟ್ ಸ್ನೇಹಿತೆ ಎನ್ನಲಾದ ವ್ಯಕ್ತಿ ಮಾಡಿರುವ ಲೈಂಗಿಕ ಕಿರುಕುಳ ಆರೋಪವನ್ನು ಜಗತ್ತಿನ‌ ನಂಬರ್ ಒನ್ ಶ್ರೀಮಂತ ಬಿಲಿಯನೇರ್ ಎಲಾನ್‌ ಮಸ್ಕ್ ಅಲ್ಲಗಳೆದಿದ್ದಾರೆ. ಒಂದು ವೇಳೆ ಲೈಂಗಿಕ ಕಿರುಕುಳ‌ ನೀಡಿದ್ದೇನೆ...

ಪ್ರಿಯಕರನನ್ನೇ ಮದುವೆಯಾಗುವೆನೆಂದ ವಧು: ತಾಳಿ ಕಟ್ಟುವ ವೇಳೆ ಹೈಡ್ರಾಮಾ

newsics.com ಮೈಸೂರು: ಮದುವೆಯಲ್ಲಿ ತಾಳಿ ಕಟ್ಟುವ ವೇಳೆ ಮದುಮಗಳು ವರನಿಗೆ ಶಾಕ್ ಕೊಟ್ಟಿದ್ದು, ತಾನು ಪ್ರೀತಿಸಿದ ಹುಡುಗನನ್ನೇ ಮದುವೆಯಾಗುವುದಾಗಿ ಹಠ ಹಿಡಿದಿದ್ದಾಳೆ. ಮದುಮಗಳು ಸಿಂಚನ ತನ್ನ ಪಕ್ಕದ ಮನೆಯ ಯುವಕನನ್ನು ಪ್ರೀತಿಸಿದ್ದು, ಆದರೆ ಮನೆಯವರು ಎಚ್.ಡಿ.ಕೋಟೆ...
- Advertisement -
error: Content is protected !!