ಸಿಹಿಗುಂಬಳದ ಬೀಜಗಳು ಫೈಬರ್ ಅಂಶವನ್ನು ಹೊಂದಿದ್ದು ಹೃದಯದ ಕಾಯಿಲೆಗಳನ್ನು ಕಡಿಮೆ ಮಾಡುತ್ತವೆ. ಜತೆಗೆ ಮಧುಮೇಹ ಹಾಗೂ ಬೊಜ್ಜಿನ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಹೊಟ್ಟೆ, ಸ್ತನ, ಶ್ವಾಸಕೋಶದ ಕ್ಯಾನ್ಸರ್ ಅಪಾಯವನ್ನು ತಗ್ಗಿಸುತ್ತದೆ. ವೀರ್ಯದ ಗುಣಮಟ್ಟವನ್ನೂ ಹೆಚ್ಚಿಸುತ್ತದೆ.
• ಅನಿತಾ ಬನಾರಿ
newsics.com@gmail.com
ಕೆಲವು ತರಕಾರಿಗಳು ತಿನ್ನಲು ರುಚಿಕರ ಮಾತ್ರವಲ್ಲ ಆರೋಗ್ಯದ ದೃಷ್ಟಿಯಿಂದಲೂ ಉತ್ತಮವಾಗಿವೆ. ಅಂತಹ ತರಕಾರಿಗಳಲ್ಲಿ ಚೀನೀ ಕಾಯಿ ಅಥವಾ ಸಿಹಿಗುಂಬಳವೂ ಒಂದು. ಸಿಹಿಗುಂಬಳದ ಬೀಜಗಳು ಫೈಬರ್ ಅಂಶವನ್ನು ಹೊಂದಿದ್ದು ಹೃದಯದ ಕಾಯಿಲೆಗಳನ್ನು ಕಡಿಮೆ ಮಾಡುತ್ತವೆ. ಜತೆಗೆ ಮಧುಮೇಹ ಹಾಗೂ ಬೊಜ್ಜಿನ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.
ಚೀನೀ ಕಾಯಿಯಲ್ಲಿರುವ ವಿಟಮಿನ್ ಹಾಗೂ ಮಿನರಲ್ಗಳು ಆರೋಗ್ಯಕ್ಕೆ ಒಳ್ಳೆಯದು. ಇವು ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿಯಾಗಿವೆ. ಇದರ ಬೀಜಗಳಲ್ಲಿರುವ ಪೋಷಕಾಂಶಗಳು ಕಾಯಿಲೆಗಳ ವಿರುದ್ಧ ಹೋರಾಡುತ್ತವೆ. ಇದು ಒಳ್ಳೆಯ ಕೊಲೆಸ್ಟ್ರಾಲ್ ಹಾಗೂ ಉತ್ತಮ ಗುಣಮಟ್ಟದ ಪ್ರೊಟೀನ್ ಹೊಂದಿದೆ.
ಹೊಟ್ಟೆ, ಸ್ತನ, ಶ್ವಾಸಕೋಶದ ಕ್ಯಾನ್ಸರ್ ಅಪಾಯವನ್ನು ತಗ್ಗಿಸುತ್ತದೆ. ಜೀರ್ಣಕ್ರಿಯೆಯನ್ನು ವೃದ್ಧಿಸುವುದಲ್ಲದೇ ಇದರಲ್ಲಿರುವ ಆ್ಯಂಟಿ ಆ್ಯಕ್ಸಿಡೆಂಟ್ ಹಾಗೂ ಇತರ ಪೋಷಕಾಂಶಗಳು ಆರೋಗ್ಯಕರ ಟೆಸ್ಟೋಸ್ಟೆರಾನ್ ಮಟ್ಟವನ್ನು ಹೆಚ್ಚಿಸುತ್ತವೆ. ಇದರಲ್ಲಿರುವ ಝಿಂಕ್ ವೀರ್ಯದ ಗುಣಮಟ್ಟವನ್ನು ಹೆಚ್ಚಿಸುತ್ತದೆ.
ಸಿಹಿಗುಂಬಳದಲ್ಲಿರುವ ಅಮಿನೋ ಆ್ಯಸಿಡ್ ನಿದ್ರಾಹೀನತೆಯನ್ನು ನಿವಾರಿಸುತ್ತದೆ. ಟೈಪ್ -2 ಮಧುಮೇಹ ಉಳ್ಳವರು ಚೀನೀ ಕಾಯಿ ಜ್ಯೂಸ್ ಅಥವಾ ಇದರ ಬೀಜದ ಪೌಡರ್ ಸೇವಿಸುವುದರಿಂದ ರಕ್ತದಲ್ಲಿರುವ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ.
ಇದರ ಬೀಜಗಳಲ್ಲಿರುವ ಮೆಗ್ನೀಷಿಯಂ, ಝಿಂಕ್ ಅಂಶಗಳು ಅಧಿಕ ರಕ್ತದೊತ್ತಡ, ರಕ್ತದಲ್ಲಿರುವ ಹೆಚ್ಚಿನ ಸಕ್ಕರೆ ಮಟ್ಟ ಹಾಗೂ ಹೃದಯದ ಕಾಯಿಲೆಗಳನ್ನು ಕಡಿಮೆ ಮಾಡುತ್ತದೆ.