Saturday, April 17, 2021

ಧೂಮಪಾನ ತ್ಯಜಿಸಿ ಉತ್ತಮ ಜೀವನ ನಡೆಸಿ

ಇಂದು (ಮಾರ್ಚ್ ಎರಡನೇ ಬುಧವಾರ) ಧೂಮಪಾನ ವಿರೋಧಿ ದಿನ. ಧೂಮಪಾನದ ಅಪಾಯ ಗೊತ್ತಿದ್ದರೂ ಮೋಜಿಗಾಗಿ ಸೇದುತ್ತ, ಹವ್ಯಾಸ ರೂಢಿಸಿಕೊಂಡು, ಚಟವಾಗಿ ಬಲಿಯಾಗುತ್ತಿರುವ ಯುವಜನತೆ ಕೇವಲ ತಮ್ಮ ಅಮೂಲ್ಯ ಸಮಯ, ಸಾಮರ್ಥ್ಯವನ್ನಷ್ಟೇ ಅಲ್ಲ, ದೇಶದ ಒಟ್ಟಾರೆ ಉತ್ಪಾದಕ ಶಕ್ತಿಯ ಕೊರತೆಯೂ ಕಾರಣವಾಗುತ್ತಾರೆ. ಧೂಮಪಾನದ ಹಾನಿಯನ್ನರಿತು ಅದರಿಂದ ದೂರವಿರಬೇಕಾದುದು ಪ್ರತಿಯೊಬ್ಬರ ಜವಾಬ್ದಾರಿ. ವ್ಯಸನಿಗಳನ್ನು ಅದರಿಂದ ಮುಕ್ತರಾಗುವಂತೆ ಮಾಡುವ ಜವಾಬ್ದಾರಿಯೂ ಇತರರದ್ದು.


    ಇಂದು ಧೂಮಪಾನ ವಿರೋಧಿ ದಿನ  


♦ ಚಿನ್ಮಯಿ
newsics.com@gmail.com


 ಒಂ ದು ಸಿಗರೇಟು ನಮ್ಮ ಬದುಕನ್ನು 11 ನಿಮಿಷಗಳಷ್ಟು ಕಡಿಮೆ ಮಾಡುತ್ತದೆ. ಹೌದು, ಅಮೆರಿಕದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಅಧ್ಯಯನದ ಪ್ರಕಾರ, ದಿನಕ್ಕೆ ಒಂದು ಸಿಗರೇಟ್ ಸೇದುವುದು ಸಹ ಅಪಾಯಕಾರಿ. ಅದರಿಂದ ಹನ್ನೊಂದು ನಿಮಿಷಗಳಷ್ಟು ಆಯುಷ್ಯ ಕರಗಿ ಹೋಗುತ್ತದೆ. ಇನ್ನು, ಪ್ಯಾಕುಗಟ್ಟಲೆ ಸಿಗರೇಟ್ ಸೇದುವುದರಿಂದ ದೇಹಕ್ಕೆ ಅದೆಷ್ಟು ಹಾನಿಯಾಗಬಹುದು ಎಂದು ಊಹಿಸಬಹುದು.
ಪ್ರತಿವರ್ಷ ಮಾರ್ಚ್ ಎರಡನೇ ಬುಧವಾರ ವಿಶ್ವ ಧೂಮಪಾನ ವಿರೋಧಿ ದಿನವನ್ನು ಆಚರಿಸಲಾಗುತ್ತದೆ. ಇಂಗ್ಲೆಂಡ್ ನಲ್ಲಿ 1984ರಿಂದ ಧೂಮಪಾನದಿಂದ ಆರೋಗ್ಯಕ್ಕಾಗುವ ಹಾನಿಯ ಬಗ್ಗೆ ಅರಿವು ಮೂಡಿಸಲೆಂದು ಆರಂಭವಾದ ಈ ದಿನವನ್ನು ಇಂದು ವಿಶ್ವಾದ್ಯಂತ ಆಚರಿಸಲಾಗುತ್ತದೆ.
ಧೂಮಪಾನ ಬಿಡುವುದರಿಂದ ದೇಹಕ್ಕೆ ಎಷ್ಟು ಉತ್ತಮ ಎನ್ನುವುದನ್ನು ಅರಿತರೆ ಅದರಿಂದಾಗುವ ಹಾನಿಯ ಅಂದಾಜಾಗಬಹುದು. ಮುಖ್ಯವಾಗಿ ಐದು ಅಂಶಗಳನ್ನು ಇಲ್ಲಿ ಉಲ್ಲೇಖಿಸಬಹುದು.
• ಧೂಮಪಾನ ತ್ಯಜಿಸಿದರೆ ಹೃದಯದ ಆರೋಗ್ಯ ಉತ್ತಮವಾಗುತ್ತದೆ. ಹೃದಯಾಘಾತ ಸಂಭವಿಸುವ ಸಾಧ್ಯತೆ ಕಡಿಮೆಯಾಗುತ್ತದೆ. ಧೂಮಪಾನಿಗಳಲ್ಲಿ ಹೃದಯಾಘಾತ ಸಂಭವಿಸುವ ಸಾಧ್ಯತೆ ಅತಿ ಹೆಚ್ಚು.
• ಕ್ಯಾನ್ಸರ್ ಅಪಾಯ ಕಡಿಮೆಯಾಗುತ್ತದೆ. ಸಿಗರೇಟು ಒಳಸೇರುವ ಒಂದೊಂದು ಉಸಿರೂ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತಲೇ ಇರುತ್ತದೆ.
• ರಕ್ತದೊತ್ತಡ ಕಡಿಮೆಯಾಗುತ್ತದೆ. ಧೂಮಪಾನಿಗಳಲ್ಲಿ ರಕ್ತದೊತ್ತಡದ ಸಮಸ್ಯೆ ಹೆಚ್ಚು. ಸಿಗರೇಟು ಬಿಟ್ಟರೆ ರಕ್ತನಾಳಗಳು ಸಂಕುಚನಗೊಂಡು ಆಗುವ ಅಪಾಯವೂ ಕಡಿಮೆಯಾಗುತ್ತದೆ. ಸಿಗರೇಟು ಸೇದುವಾಗ ಹಾಗೂ ಸೇದಿದ ನಂತರ, ಸೇದಿದ ಕೆಲವು ಸಮಯದಲ್ಲಿ ರಕ್ತದೊತ್ತಡ ಪ್ರಮಾಣ ಅಳೆದು ಮಾಡಲಾದ ಅಧ್ಯಯನದಿಂದ ಸಾಬೀತಾದ ಅಂಶವೆಂದರೆ, ಸಿಗರೇಟು ಸೇದಿದ ಬಳಿಕ ರಕ್ತದೊತ್ತಡ ಸಾಮಾನ್ಯ ಸ್ಥಿತಿಗೆ ಬರಲು ೨೦ ನಿಮಿಷಗಳ ಕಾಲ ಸಮಯ ಬೇಕು.
• ಧೂಮಪಾನಿಗಳಿಗೆ ಶ್ವಾಸಕೋಶದ ಸಮಸ್ಯೆ ಯಾವಾಗಲೂ ಅಧಿಕ. ಉಸಿರಾಟದ ಸಮಸ್ಯೆ ಹೆಚ್ಚು. ೮ ಗಂಟೆಗಳ ಕಾಲ ಸಿಗರೇಟು ಸೇದದೆ ಇದ್ದರೆ ಶ್ವಾಸಕೋಶ ಸಾಮಾನ್ಯ ಸ್ಥಿತಿಗೆ ಮರಳಿ ಉಸಿರಾಟ ಸರಾಗವಾಗುವುದು ಕಂಡುಬಂದಿದೆ. ಧೂಮಪಾನಿಗಳು ಖಂಡಿತವಾಗಿ ಈ ಅನುಭವವನ್ನು ಒಮ್ಮೆಯಾದರೂ ಅನುಭವಿಸಿರುತ್ತಾರೆ. ಸಿಗರೇಟು ಸೇದುವಾಗ, ಸೇದಿದ ಸ್ವಲ್ಪ ಸಮಯದ ಬಳಿಕ ಹಾಗೂ ಸೇದಿದ ನಾಲ್ಕಾರು ಗಂಟೆಗಳ ಬಳಿಕದ ಉಸಿರಾಟ ಭಿನ್ನವಾಗಿರುತ್ತದೆ.
• ಧೂಮಪಾನ ಹಲ್ಲು ಮತ್ತು ಕೂದಲಿನ ಆರೋಗ್ಯವನ್ನೂ ಅತಿಯಾಗಿ ಹಾನಿಗೀಡುಮಾಡುತ್ತದೆ. ಕೂದಲು ಸತ್ವ ಕಳೆದುಕೊಂಡು ಬಿರುಸಾಗಿ, ಹರಿದು ಬರುವಂತಾದರೆ, ಹಲ್ಲುಗಳು ಎಂದಿಗೂ ಸರಿಮಾಡಲು ಸಾಧ್ಯವಾಗದಂತೆ ಹಳದಿ ಬಣ್ಣಕ್ಕೆ ತಿರುಗುತ್ತವೆ. ಇದರಿಂದ ದೇಹದ ಸೌಂದರ್ಯಕ್ಕೂ ಧಕ್ಕೆಯಾಗುತ್ತದೆ.

ಮತ್ತಷ್ಟು ಸುದ್ದಿಗಳು

Latest News

ಆಮ್ಲಜನಕ‌ ಕೊರತೆ: ಐಸಿಯುನಲ್ಲಿದ್ದ ಮೂವರು ಕೊರೋನಾ ಸೋಂಕಿತರು ಸಾವು

newsics.com ಲಖನೌ (ಉತ್ತರ ಪ್ರದೇಶ): ಆಮ್ಲಜನಕದ ಕೊರತೆಯಿಂದಾಗಿ ಮೂವರು ಕೋವಿಡ್ ರೋಗಿಗಳು ಶನಿವಾರ ಸಾವನ್ನಪ್ಪಿದ್ದಾರೆ. ಮೃತರು ಗೋಮ್ಟಿನಗರದ ಡಾ. ರಾಮ್ ಮನೋಹರ್ ಲೋಹಿಯಾ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಐಸಿಯುಗೆ...

ಆಸ್ಪತ್ರೆಗೆ ನುಗ್ಗಿ 850 ರೆಮಿಡಿಸಿವರ್ ಇಂಜೆಕ್ಷನ್ ಕಳ್ಳತನ

newsics.com ಭೋಪಾಲ್(ಮಧ್ಯಪ್ರದೇಶ): ಇಲ್ಲಿನ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ನುಗ್ಗಿದ ದುಷ್ಕರ್ಮಿಗಳು 850 ರೆಮಿಡಿಸಿವರ್ ಇಂಜೆಕ್ಷನ್ ಗಳನ್ನು ಕಳ್ಳತನ ಮಾಡಿದ್ದಾರೆ. ದೇಶದಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿರುವ ನಡುವೆ ಕಾಳಸಂತೆಯಲ್ಲಿ ಔಷಧ ಮಾರಾಟದ ಬೇಡಿಕೆ ಕೂಡ ಹೆಚ್ಚಾಗುತ್ತಿದೆ. ಈ...

ಕೇಂದ್ರ ಸಚಿವ ಕಿರೆನ್ ರಿಜಿಜುಗೆ ಕೊರೋನಾ ಸೋಂಕು

newsics.com ನವದೆಹಲಿ: ಕೇಂದ್ರ ಸಚಿವ ಕಿರೆನ್ ರಿಜಿಜು ಅವರಿಗೆ ಶನಿವಾರ ಕೊರೋನಾ ಸೋಂಕು ತಗುಲಿದೆ. ಈ ವಿಷಯವನ್ನು ಸ್ವತಃ ಸಚಿವ ಕಿರೆನ್ ರಿಜಿಜು ಅವರೇ ತಿಳಿಸಿದ್ದಾರೆ. ಟ್ವಿಟರ್ ನಲ್ಲಿ ಈ‌ ಮಾಹಿತಿ ಹಂಚಿಕೊಂಡಿರುವ ರಿಜಿಜು,...
- Advertisement -
error: Content is protected !!