ಮುಟ್ಟಿನ ದಿನಗಳಲ್ಲಿ ಅತಿ ಹೆಚ್ಚು ಮಹಿಳೆಯರು ಸ್ಯಾನಿಟರಿ ಪ್ಯಾಡ್‌ಗಳನ್ನೇ ಬಳಸುತ್ತಾರೆ. ಆದರೆ ಅದು ಎಷ್ಟು ಸುರಕ್ಷಿತ ಎನ್ನುವುದು ಪ್ರಶ್ನೆಯಾಗಿದೆ. ಇತ್ತೀಚೆಗೆ ನಡೆದ ಅಧ್ಯಯನವೊಂದು ಸ್ಯಾನಿಟರಿ ಪ್ಯಾಡ್‌ಗಳ ಬಳಕೆ ಮಹಿಳೆಯರಲ್ಲಿ ಬಂಜೆತನ ಮತ್ತು ಕ್ಯಾನ್ಸರ್‌ಗೆ ಕಾರಣವಾಗುತ್ತದೆ ಎಂದು ಹೇಳಿದೆ.
newsics.com
ಪ್ರತೀ ಹೆಣ್ಣು ಮಾಸಿಕ ದಿನಗಳನ್ನು ಎದುರಿಸುತ್ತಾಳೆ. ಮುಂದುವರೆದ ತಂತ್ರಜ್ಞಾನಗಳು ಮುಟ್ಟಿನ ದಿನಗಳ ರಕ್ತಸ್ರಾವವನ್ನು ತಡೆಯಲು ಸ್ಯಾನಿಟರಿ ಪ್ಯಾಡ್, ಟಾಂಪೂನ್, ಮುಟ್ಟಿನ ಕಪ್ ಹೀಗೆ ನಾನಾ ಬಗೆಯನ್ನು ಪರಿಚಯಿಸಿದೆ. ಆದರೆ ಅತಿ ಹೆಚ್ಚು ಮಹಿಳೆಯರು ಬಳಸುವುದು ಸ್ಯಾನಿಟರಿ ಪ್ಯಾಡ್‌ಗಳನ್ನೇ ಆಗಿದೆ.
ಆದರೆ ಇದು ಆರೋಗ್ಯದ ದೃಷ್ಟಿಯಿಂದ ಎಷ್ಟು ಸುರಕ್ಷಿತ ಎನ್ನುವ ಪ್ರಶ್ನೆ ಇದೀಗ ಎದುರಾಗಿದೆ. ಇತ್ತಿಚೆಗೆ ಎನ್‌ಜಿಒ ಒಂದು ನಡೆಸಿದ ಅಧ್ಯಯನದಲ್ಲಿ ಸ್ಯಾನಿಟರಿ ಪ್ಯಾಡ್‌ಗಳನ್ನು ಬಳಕೆ ಮಾಡುವುದರಿಂದ ಅದರಲ್ಲಿರುವ ಹಾನಿಕಾರಕ ರಾಸಾಯನಿಕಗಳು ಕ್ಯಾನ್ಸರ್ ಮತ್ತು ಬಂಜೆತನಕ್ಕೆ ಕಾರಣವಾಗುತ್ತಿದೆ ಎನ್ನುವುದನ್ನು ಪತ್ತೆ ಮಾಡಿದೆ.
ಎಲ್ಲಾ ಮಾದರಿಯ ಸ್ಯಾನಿಟರಿ ಪ್ಯಾಡ್‌ಗಳಲ್ಲಿ ವಿಷಕಾರಿ ರಾಸಾಯನಿಕಗಳಾದ ಕಾರ್ಸಿನೋಜೆನ್‌ಗಳು, ಸಂತಾನೋತ್ಪತ್ತಿಗೆ ಅಡ್ಡಿಪಡಿಸುವ ವಿಷಕಾರಿ ಅಂಶ, ಎಂಡೋಕ್ರೈನ್ ಎನ್ನುವ ಹಾನಿಕಾರಕ ಅಂಶ ಮತ್ತು ಅಲರ್ಜಿನ್‌ಗಳು ಇವೆ. ಇದು ಆರೋಗ್ಯಕ್ಕೆ ಅತ್ಯಂತ ಹಾನಿಕಾರಕ ಎಂದು ಹೇಳಲಾಗಿದೆ.
ಮುಟ್ಟಿನ ದಿನಗಳಲ್ಲಿ ಇಡೀ ದಿನ ಪ್ಯಾಡ್‌ಗಳು ಯೋನಿಯ ಸಂಪರ್ಕದಲ್ಲಿರುವುದರಿಂದ ದೇಹವು ರಾಸಾಯನಿಕಗಳನ್ನು ಹೀರಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಲಾಗಿದೆ.
ಭಾರತದಲ್ಲಿ ನಾಲ್ವರಲ್ಲಿ ಮೂವರು ಮಹಿಳೆಯರು ಎಂದಿಗೂ ಸ್ಯಾನಿಟರಿ ಪ್ಯಾಡ್‌ಗಳನ್ನೇ ಬಳಸುತ್ತಿದ್ದಾರೆ ಎಂದು ಇತ್ತೀಚೆಗೆ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ಹೇಳಿದೆ. ಅಲ್ಲದೆ ಈಗಾಗಲೇ ಹಲವಾರು ಪರಿಸರ ಸಂಸ್ಥೆಗಳು ಸ್ಯಾನಿಟರಿ ಪ್ಯಾಡ್‌ಗಳನ್ನು ಬಳಸದಂತೆಯೂ ಕರೆ ನೀಡಿದೆ.
ಸ್ಯಾನಿಟರಿ ಪ್ಯಾಡ್‌ಗಳ ಬದಲಿ ಆಯ್ಕೆ ಏನು?
- ತಜ್ಞರು ಹೇಳುವ ಪ್ರಕಾರ ಮುಟ್ಟಿನ ದಿನಗಳ ಸುರಕ್ಷತೆಗೆ ಸ್ಯಾನಿಟರಿ ಪ್ಯಾಡ್‌ಗಳೊಂದೇ ಮಾರ್ಗವಲ್ಲ. ವೈದ್ಯರ ಸಲಹೆಯ ಮೇರೆಗೆ ಟಾಂಪೂನ್ ಅಥವಾ ಮುಟ್ಟಿನ ಕಪ್‌ಗಳನ್ನು ಬಳಸಬಹುದು.
- ಆದಷ್ಟು ಮನೆಯಲ್ಲಿಯೇ ಶುದ್ಧವಾದ ಹತ್ತಿಬಟ್ಟೆಯಿಂದ ಪ್ಯಾಡ್‌ಗಳನ್ನು ತಯಾರಿಸಿಕೊಳ್ಳಿ. ಸ್ವಚ್ಛತೆಯನ್ನು ಕಾಪಾಡಿಕೊಳ್ಳಿ.